Guddattu shri vinayaka temple: ಕಲ್ಲು ಬಂಡೆಯ ನಡುವೆ ಮೂಡಿಬಂದ ಬಲಮುರಿ ಗಣಪ

(Guddattu shri vinayaka temple) ಉಡುಪಿ ಜಿಲ್ಲೆ ಹಲವು ಪ್ರಸಿದ್ದ ದೇವಾಲಯಗಳಿರುವ ಜಿಲ್ಲೆ. ಪ್ರಸಿದ್ದ ದೇವಾಲಯಗಳಿಗೆ ಉಡುಪಿ ಹೆಸರುವಾಸಿಯಂತಲೇ ಹೇಳಬಹುದು. ಅಪರೂಪದಲ್ಲೇ ಅಪರೂಪವಾದ ಗಣಪತಿ ದೇವಸ್ಥಾನಗಳಲ್ಲಿ ಒಂದಾದ ವಿನಾಯಕನ ದೇವಸ್ಥಾನದ ಪರಿಚಯವನ್ನು ನಾನಿಂದು ನಿಮ್ಮ ಮುಂದಿಡುತ್ತಿದ್ದೇನೆ. ಇಲ್ಲಿ ನಾನು ಪರಿಚಯಿಸಲು ಹೊರಟ ದೇವಸ್ಥಾನ ಎಲ್ಲಾ ದೇವಸ್ಥಾನಗಳಿಗಿಂತಲೂ ಸ್ವಲ್ಪ ಭಿನ್ನ. ಸರಿ ಸುಮಾರು ಏಳುನೂರು ವರ್ಷಗಳ ಇತಿಹಾಸ ಇದಕ್ಕಿದೆ. ಇದು ಕಲ್ಲು ಬಂಡೆಗಳ ನಡುವಲ್ಲಿ ಗುಹೆಯೊಳಗೆ ಮೂಡಿ ಬಂದಂತಹ ವಿನಾಯಕನ ದೇಗುಲ. ಹಲವು ಅಂತಸ್ತಿನ ಬಂಡೆಗಳ ನಡುವೆ ಗುಹೆಯೊಳಗೆ ವಿರಾಜಮಾನವಾಗಿ ನಿಂತ ಈ ಗಣಪ ಹಲವು ಭಕ್ತರಿಗೆ ಪ್ರಿಯವಾದವನು.

(Guddattu shri vinayaka temple) ಇಲ್ಲಿ ನಡೆಯುತ್ತೆ ಆಯುರಕೊಡ ಎನ್ನುವ ವಿಶೇಷ ಸೇವೆ.
ಬೇರೆಲ್ಲೂ ಇರದ ವಿಶೇಷ ಸೇವೆಯೇ ಈ ಆಯುರಕೊಡ ಸೇವೆ. ಆಯುರಕೊಡ ಎಂದರೆ ಸಾವಿರ ಕೊಡ ಎಂದರ್ಥ. ಅಂದರೆ ಇಲ್ಲಿ ವಿನಾಯಕನಿಗೆ ಪ್ರತಿದಿನ ಸಾವಿರ ಕೊಡದ ನೀರಿನ ಅಭಿಷೇಕ ನಡೆಸಲಾಗುತ್ತದೆ. ಇದನ್ನೇ ಆಯುರಕೊಡ ಸೇವೆ ಎನ್ನುತ್ತಾರೆ. ಈ ಸೇವೆ ನಡೆಸುವಾಗ ನೀರನ್ನು ಯಾವುದೇ ಯಂತ್ರ ಅಥವಾ ಹಗ್ಗದ ಸಹಾಯವಿಲ್ಲದೇ ಒಬ್ಬರು ಬಾವಿಯೊಳಗೆ ಇಳಿದು ನೀರನ್ನು ತುಂಬಿಸಿ ಒಬ್ಬರಿಂದೊಬ್ಬರಿಗೆ ಹಸ್ತಾಂತರಗೊಳಿಸಲಾಗುತ್ತದೆ. ಹೀಗೆ ಹಸ್ತಾಂತರಗೊಂಡ ಸಾವಿರ ಕೊಡದ ನೀರು ಗಣಪನಿಗೆ ಅಭಿಷೇಕವಾಗುತ್ತದೆ. ಮರುದಿನ, ಹಿಂದಿನ ದಿನ ಅಭಿಷೇಕ ಮಾಡಿದ ನೀರನ್ನು ಸ್ವಲ್ಪವೂ ಬಿಡದೇ ಒರೆಸಿದ ನಂತರವಷ್ಟೇ ಆಯುರಕೊಡದ ಹರಕೆಯನ್ನು ಕೈಗೊಳ್ಳಲಾಗುತ್ತದೆ.
ಹರಕೆ ಹೊತ್ತ ಕುಟುಂಬದವರು ಕೂಡ ಈ ಸೇವೆಯನ್ನು ನಡೆಸುತ್ತಾರೆ. ಬೇರೆಲ್ಲೂ ಈ ಸೇವೆ ನಡೆಯದ ಕಾರಣ ಈ ಕ್ಷೇತ್ರದಲ್ಲಿ ಆಯುರಕೊಡ ಸೇವೆಯ ಹರಕೆ ಕೊಡಲೆಂದೇ ಭಕ್ತರು ಕ್ಷೇತ್ರದತ್ತ ಹರಿದು ಬರುತ್ತಾರೆ. ಹಾಗೆಂದ ಮಾತ್ರಕ್ಕೆ ನೀವು ಇಲ್ಲಿಗೆ ಬಂದು ಹರಕೆಗೆ ನಿಮ್ಮ ಹೆಸರನ್ನು ನೊಂದಣಿ ಮಾಡಿಸಿಕೊಂಡ ತಕ್ಷಣಕ್ಕೆ ಹರಕೆ ತೀರಿಸಲು ಸಾಧ್ಯವಿಲ್ಲ. ಹರಕೆ ತೀರಿಸಲೂ ಕಡಿಮೆ ಎಂದರೂ ಐದರಿಂದ ಆರು ವರ್ಷ ಕಾಯಲೇ ಬೇಕು.

Guddattu shri vinayaka temple: Balamuri Ganesha raised between the rocks

ಶ್ರೀ ವಿನಾಯಕ ದೇಗುಲದ ಪೌರಾಣಿಕ ಹಿನ್ನಲೆ:
ಎಲ್ಲಾ ದೇವಾಲಯಗಳಿಗೂ ಒಂದೊಂದು ಪೌರಾಣಿಕ ಹಿನ್ನಲೆ ಎನ್ನುವುದು ಇದ್ದೇ ಇರುತ್ತದೆ. ಹಾಗೇ ಈ ದೇವಾಲಯಕ್ಕೂ ಕೂಡ ಒಂದು ಪೌರಾಣಿಕ ಹಿನ್ನಲೆ ಇದೆ. ಪುರಾಣಗಳ ಪ್ರಕಾರ, ತ್ರಿಪುರಾಸುರನೆಂಬ ರಾಕ್ಷಸನ ವಿರುದ್ಧ ಈಶ್ವರ ಯುದ್ದಕ್ಕೆ ಹೋಗುವಾಗ ಗಣಪತಿಯನ್ನು ನಮಿಸದೇ ಹೋಗುತ್ತಾನೆ. ಇದರ ಪರಿಣಾಮವಾಗಿ ಈಶ್ವರ ಯುದ್ಧದಲ್ಲಿ ಸೋಲುತ್ತಾನೆ. ತಾನು ಸೋಲುವುದಕ್ಕೆ ಗಣಪತಿಯೇ ಕಾರಣವೆಂದು ಕೋಪಗೊಂಡ ಈಶ್ವರ ತನ್ನ ಬಳಿಯಿದ್ದ ತ್ರಿಶೂಲವನ್ನು ಗಣಪತಿಯ ಮೇಲೆ ಎಸೆಯುತ್ತಾನೆ. ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಗಣಪತಿ ಪಕ್ಕದಲ್ಲಿದ್ದ ಜೇನಿನ ಕೊಳಕ್ಕೆ ಬೀಳುತ್ತಾನೆ. ತಾನು ಜೇನು ತಿಂದ ಖುಷಿಗೆ ಶಿವನಿಗೆ ಗೆಲುವಾಗಲಿ ಎಂದು ಗಣೇಶ ಹರಸುತ್ತಾನೆ. ನಂತರ ವಿಪರೀತವಾಗಿ ಜೇನು ತಿಂದ ಗಣಪನಿಗೆ ಪಿತ್ತವೇರಿ ದೇಹದಲ್ಲಿ ಉರಿ ಪ್ರಾರಂಭವಾಗುತ್ತದೆ. ಉರಿಯಿಂದ ಗಣೇಶ ನರಳುತ್ತಿರುವುದನ್ನು ನೋಡಿದ ಶಿವ-ಪಾರ್ವತಿಯು ದೇಹದ ಉರಿ ಶಮನಕ್ಕೆ ಸಲಹೆ ನೀಡಿದಾಗ ಗಣಪತಿ ಇಲ್ಲಿಗೆ ಬಂದು ನೆಲೆಯಾಗುತ್ತಾನೆ ಎಂಬುದು ಪ್ರತೀತಿ.

ಹತ್ತಿರದಲ್ಲಿ ವಾರಾಹಿ ನದಿಯಿಂದ ದೇವಾಲಯದ ಒಳಗಿರುವ ಬಾವಿಗೆ ಬಂದು ಸೇರುವ ನರಸಿಂಹ ತೀರ್ಥ ನೀರನ್ನು ಪ್ರತಿನಿತ್ಯ ಗಣಪತಿಗೆ ಸಾವಿರ ಕೊಡದಂತೆ ಅಭಿಷೇಕ ಮಾಡಲಾಗುತ್ತದೆ. ಈ ಮೂಲಕವಾಗಿ ಗಣಪನ ದೇಹದ ಉರಿ ಶಮನವಾಗುತ್ತದೆ ಎನ್ನುವುದು ಅಲ್ಲಿನ ನಂಬಿಕೆ.

Guddattu shri vinayaka temple: Balamuri Ganesha raised between the rocks

ಕಲ್ಲು ಬಂಡೆಯ ಮೂಲಕ ಗಣಪತಿ ಮೂಡಿ ಬಂದಿರುವುದು ಇಲ್ಲಿನ ವಿಶೇಷ. ಇದು ಬಲಮುರಿ ಗಣಪತಿಯಾಗಿದ್ದು, ಬೇಡಿಬಂದ ಭಕ್ತರ ಆಸೆಗಳನ್ನು ಈಡೇರಿಸುತ್ತಾನೆ ಎನ್ನುವುದು ಭಕ್ತರ ನಂಬಿಕೆ. ಈ ದೇವಸ್ಥಾನದ ಗಣೇಶನ ಮೂಲ ಬಿಂಬವು ವರ್ಷವಿಡಿ ನೀರಿನಲ್ಲೇ ಮುಳುಗಿರುವುದು ಇಲ್ಲಿನ ಇನ್ನೊಂದು ವಿಶೇಷ.

ಗಣಪತಿಯ ಉದ್ಭವ ಮೂರ್ತಿಯು ಕಪ್ಪು ಕಲ್ಲಿನದ್ದಾಗಿದ್ದು, ಕುಳಿತುಕೊಂಡಿರುವ ಭಂಗಿಯಲ್ಲಿ ಮೂರ್ತಿಯನ್ನು ನಾವು ನೋಡಬಹುದು. ಉದ್ಭವ ಮೂರ್ತಿ ಇರುವ ಗುಹೆಯು ಯಾವಾಗಲೂ ನೀರಿನಿಂದ ಆವೃತವಾಗಿರುತ್ತಿದೆ ಮತ್ತು ಕುತ್ತಿಗೆಯ ತನಕ ಗಣಪತಿಯು ನೀರಿನಲ್ಲಿ ಮುಳಿಗಿರುತ್ತಾನೆ. ಈ ಉದ್ಭವ ಮೂರ್ತಿಯನ್ನು ನೈವೇದ್ಯ ಸಮಯದ ಹೊರತಾಗಿ ಬೇರೆ ಎಲ್ಲಾ ಸಮಯಗಳಲ್ಲಿ ದರ್ಶನ ಮಾಡಬಹುದು. ಇನ್ನೂ ಈ ದೇವಸ್ಥಾನದ ಸುತ್ತ ಬಂಡೆಕಲ್ಲುಗಳು ಆವರಿಸಿದ್ದು, ದೇವಾಲಯದ ಎದುರಿನ ಪ್ರಾಂಗಣದಲ್ಲಿ ಪುಣ್ಯ ಕೆರೆಯಿದೆ.

Guddattu shri vinayaka temple: Balamuri Ganesha raised between the rocks

ಹಾಗಿದ್ದರೆ , ಈ ಪೌರಾಣಿಕ ಹಿನ್ನಲೆಯಿರುವ, ಆಯುರಕೊಡ ವಿಶೇಷ ಪೂಜೆ, ಉದ್ಭವ ಮೂರ್ತಿ ಇರುವ ದೇವಸ್ಥಾನ ಯಾವುದು ಎಂದು ಮೇಲಿನ ವಿವರಣೆಗಳನ್ನು ಓದುವಾಗಲೇ ನಿಮಗೆ ತಿಳಿದಿರುತ್ತದೆ. ಈ ದೇವಾಲಯ ಇರುವುದು ಉಡುಪಿ ಜಿಲ್ಲೆಯ ಶಿರಿಯಾರದ ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡಟ್ಟು ಎಂಬಲ್ಲಿ. ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿಯ ಪ್ರಸಿದ್ಧ ಗಣಪತಿ ದೇವಾಲಯ ಎಂದು ಹುಡುಕಿದರೆ ಅಲ್ಲಿ ಬರುವ ದೇವಾಲಯಗಳ ಪಟ್ಟಿಯಲ್ಲಿ ಇದು ಕೂಡ ಒಂದಾಗಿರುತ್ತದೆ. ಇದುವೇ ಉಡುಪಿಯ ಪ್ರಸಿದ್ದ ದೇವಾಲಯ ಶ್ರೀ ವಿನಾಯಕ ದೇವಸ್ಥಾನ ಗುಡ್ಡಟ್ಟು.

ಇದನ್ನೂ ಓದಿ : Sonithapura: ಬಬ್ರುವಾಹನ ಆಳ್ವಿಕೆ ಕಾಲದ ಪರಶುರಾಮ ಸೃಷ್ಟಿಯ ಪುರಾತನ ಕ್ಷೇತ್ರದ ಬಗ್ಗೆ ನಿಮಗೆ ಗೊತ್ತಾ ?

ಇದನ್ನೂ ಓದಿ : History of Barkur: ಒಂದೊಂದು ಕಲ್ಲುಗಳು ಸಾರುತ್ತವೆ ಬಾರ್ಕೂರಿನ ಇತಿಹಾಸ

ಉಡುಪಿಯ ಮೂಲಕ ಇಲ್ಲಿಗೆ ಬರಬೇಕಾದರೇ ಬಾರ್ಕೂರು ಮಾರ್ಗವಾಗಿ ಶಿರಿಯಾರ ತಲುಪಿದ ನಂತರ ಎಡಬದಿಗೆ ಅಡ್ಡದಾರಿಯಲ್ಲಿ ಒಂದು ಕಿ.ಮೀ. ಕ್ರಮಿಸಿದರೆ ಈ ದೇವಾಲಯ ಸಿಗುತ್ತದೆ. ಕುಂದಾಪುರ ಮಾರ್ಗವಾಗಿ ಬರುವುದಾದರೆ, ಹುಣ್ಸೆಮಕ್ಕಿ, ಗುಡ್ಡೆಯಂಗಡಿ ಮಾರ್ಗವಾಗಿ ಇಲ್ಲಿಗೆ ಹೋಗಬಹುದು. ಬಸ್‌ ನಲ್ಲಿ ಬರುವ ಭಕ್ತರಿಗೆ ಶಿರಿಯಾರದ ವರೆಗೆ ಮಾತ್ರ ಬಸ್‌ ವ್ಯವಸ್ಥೆ ಇರುತ್ತದೆ.

(Guddattu shri vinayaka temple) Udupi district is a district with many famous temples. Udupi is famous for its famous temples. I present to you the introduction of Vinayakan Temple, one of the rarest Ganpati temples. The temple that I am going to introduce here is a little different from all other temples.

Comments are closed.