Rani Abbakka : ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹಾತ್ಮಾ ಗಾಂಧಿ, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಲಾಲಾ ಲಜಪತ್ ರಾಯ್, ತಾಂತ್ಯಾ ಟೋಪೆ, ಬಾಲ್ ಗಂಗಾಧರ ತಿಲಕ್ ಹೀಗೆ ಪುರುಷ ಹೋರಾಟಗಾರರ ಪರಿಶ್ರಮ ಎಷ್ಟಿತ್ತೋ ಮಹಿಳಾ ಹೋರಾಟಗಾರರ ಬಲಿದಾನ ಕೂಡ ಅಷ್ಟೇ ಇದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ .
16ನೇ ಶತಮಾನದಲ್ಲಿ ವೀರ ವನಿತೆಯಾಗಿ ಪೋರ್ಚುಗೀಸರ ಎದುರು ಎದೆ ತಟ್ಟಿ ನಿಂತ ವೀರ ರಾಣಿ ಅಬ್ಬಕ್ಕ ಬಗ್ಗೆ ನಾವಿಂದು ತಿಳಿದುಕೊಳ್ಳಲೇಬೇಕು. ಕರಾವಳಿಯ ಪುತ್ತಿಗೆಯ ಚೌಟ ಮನೆತನದಲ್ಲಿ ಜನಿಸಿದ ವೀರ ರಾಣಿ ಅಬ್ಬಕ್ಕ ಉಲ್ಲಾಳದ ಉಳಿವಿಗಾಗಿ ಪೋರ್ಚುಗೀಸರ ಶಕ್ತಿಯನ್ನೇ ಹುಟ್ಟಡಗಿಸುವಂತೆ ಮಾಡಿದ್ದರು.
ವ್ಯಾಪಾರಕ್ಕೆಂದು ಭಾರತಕ್ಕೆ ಬಂದಿದ್ದ ಪೋರ್ಚುಗೀಸರು ಮೊದಲು ಗೋವಾವನ್ನು ವಶಕ್ಕೆ ಪಡೆದಿದ್ದರು. ಇಂಡಿಯನ್ ಓಶಿಯನ್ನಲ್ಲಿ ಪಾರುಪತ್ಯವನ್ನು ಸಾಧಿಸಬೇಕೆಂದರೆ ಪೋರ್ಚುಗೀಸರು ಉಲ್ಲಾಳವನ್ನು ವಶಕ್ಕೆ ಪಡೆಯಲೇಬೇಕಿತ್ತು. ಆದರೆ ರಾಣಿ ಅಬ್ಬಕ್ಕ ಇದಕ್ಕೆ ಅವಕಾಶ ನೀಡಲಿಲ್ಲ. 1556ರಲ್ಲಿ ಅಡ್ಮಿರಲ್ ಸೆವ್ವೆರಾ ಮುಂದಾಳತ್ವದಲ್ಲಿ ನೌಕಾಪಡೆ ಕಳಿಸಿದ್ದ ಪೋರ್ಚುಗೀಸರನ್ನು ಅಬ್ಬಕ್ಕ ಹಿಮ್ಮೆಟ್ಟಿಸಿದ್ದರು. ಇದಾದ ಬಳಿಕ ಜೆನರಲ್ ಪೆಕ್ಸಿಟೋ ಉಲ್ಲಾಳವನ್ನು ಬಹುತೇಕ ಆಕ್ರಮಿಸುವಲ್ಲಿ ಯಶಸ್ವಿಯಾಗಿದ್ದನು. ಆದರೆ ಈತನನ್ನು ಸೆದೆಬಡಿಯುವಲ್ಲಿ ರಾಣಿ ಅಬ್ಬಕ್ಕ ಯಶಸ್ವಿಯಾದಳು.
ಉಳ್ಳಾಲದ ಮಾಗಣೆಗೆ ಸೇರಿದ್ದ ಶಿಲಾಮಯವಾದ ಸೋಮನಾಥ ದೇವಸ್ಥಾನವು ರಾಣಿ ಅಬ್ಬಕ್ಕನಿಗೆ ಅತ್ಯಂತ ಪ್ರಿಯವಾಗಿತ್ತು. ಇಲ್ಲಿನ ಸೋಮನಾಥ ಚೌಟ ಅರಸರ ಆರಾಧ್ಯ ದೇವರಾಗಿತ್ತು. ಉಳ್ಳಾಲದ ಅಬ್ಬಕ್ಕ ರಾಣಿಯು ಕಾಣಿಕೆಯಾಗಿ ನೀಡಿದ್ದ ಬೆಳ್ಳಿಯ ಜಲದ್ರೋಣಿಯು ಈಗಲೂ ದೇವಸ್ಥಾನದಲ್ಲಿದೆ. ಪೋರ್ಚುಗೀಸರು ಎಂದೋ ಕಣ್ಣು ಹಾಕಿದ್ದ ಕರಾವಳಿಯ ಪ್ರದೇಶವನ್ನು ಅವರ ಕೈಗೆ ಸಿಗಲು ಬಿಡದೇ ಹೋರಾಡಿ ಗೆದ್ದ ವೀರ ವನಿತೆ ರಾಣಿ ಅಬ್ಬಕ್ಕ ಇತಿಹಾಸದ ಪುಟದಲ್ಲಿ ಇಂದಿಗೂ ಅಜಾರಮರವಾಗಿದ್ದಾರೆ. ವಿದೇಶಿ ಶತ್ರುಗಳ ಆಮೀಷಕ್ಕೆ ಜಗ್ಗದೇ ಯಾವ ಪುರುಷರಿಗೂ ತಾನೂ ಕಡಿಮೆಯಿಲ್ಲವೆಂಬುದನ್ನು ಸಾಬೀತುಪಡಿಸಿದ ಈಕೆ ದೇಶ ಕಂಡ ಅತ್ಯಂತ ಮಹಾನ್ ಮಹಿಳೆಯರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ.
ಇದನ್ನು ಓದಿ : masks have been made mandatory : ಕೊರೊನಾ ಆತಂಕ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ
Here is some information about Rani Abbakka