Karun Nair Story : ತ್ರಿಶತಕವೀರನ ಕ್ರಿಕೆಟ್ ಬದುಕಿಗೆ ದೊಡ್ಡ ಟರ್ನಿಂಗ್ ಪಾಯಿಂಟ್, ಇಲ್ಲಿಂದ ಬದಲಾಗುತ್ತಾ ಕರುಣ್ ನಾಯರ್ ಕರಿಯರ್

ಬೆಂಗಳೂರು(Karun Nair career changes ) : ಭಾರತ ಪರ ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ 2ನೇ ಆಟಗಾರ, ಮೊದಲ ಕನ್ನಡಿಗ. ತ್ರಿಶತಕವೀರ ಎಂದು ಕರೆಸಿಕೊಂಡಿದ್ದಷ್ಟೇ ಸಾಧನೆ. ಕರುಣ್ ನಾಯರ್ ಈಗಲೂ ರನ್ ಗಳಿಸಲು ಪರದಾಡುತ್ತಿದ್ದಾರೆ. ಆದರೆ ಕರುಣ್ ವೃತ್ತಿಬದುಕಿಗೆ ಈಗ ದೊಡ್ಡ ಟರ್ನಿಂಗ್ ಪಾಯಿಂಟ್ ಒಂದು ಸಿಕ್ಕಿದೆ. ಆ ಟರ್ನಿಂಗ್ ಪಾಯಿಂಟ್ ಕರುಣ್ ಕ್ರಿಕೆಟ್ ಕರಿಯರ್’ಗೆ ಹೊಸ ದಿಕ್ಕು ತೋರಿಸುತ್ತಾ? ಮತ್ತೆ ಭಾರತ ಪರ ಆಡುವ ಕನಸನ್ನು ನನಸು ಮಾಡುತ್ತಾ? ಐಪಿಎಲ್’ನಲ್ಲೂ ಉತ್ತಮ ಅವಕಾಶಗಳಿಗೆ ರಹದಾರಿಯಾಗುತ್ತಾ? ಅಷ್ಟಕ್ಕೂ ಕರುಣ್ ಕರಿಯರ್’ಗೆ ಸಿಕ್ಕಿರುವ ಆ ಟರ್ನಿಂಗ್ ಪಾಯಿಂಟ್ ಯಾವುದು? ಇಲ್ಲಿದೆ ನೋಡಿ ಉತ್ತರ.

ಮೈಸೂರಿನಲ್ಲಿ ನಡೆಯುತ್ತಿರುವ KSCA ಮಹಾರಾಜ ಟ್ರೋಫಿ ಟಿ20 (Maharaja Trophy T20) ಟೂರ್ನಿಯ ಪಂದ್ಯದಲ್ಲಿ ಕರುಣ್ ನಾಯರ್ ಮೈಸೂರು ವಾರಿಯರ್ಸ್ ಪರ ಅಬ್ಬರದ ಅರ್ಧಶತಕವೊಂದನ್ನು ಸಿಡಿಸಿದ್ದಾರೆ. ಮೈಸೂರು ವಾರಿಯರ್ಸ್ ತಂಡದ ನಾಯಕನಾಗಿರುವ ಕರುಣ್, ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಅಜೇಯ 91 ರನ್ ಬಾರಿಸಿದ್ದಾರೆ. ಕರುಣ್ ಇನ್ನಿಂಗ್ಸ್’ನಲ್ಲಿ 11 ಬೌಂಡರಿಗಳು ಮತ್ತು 3 ಸಿಕ್ಸರ್’ಗಳು ಇದ್ದವು.

ಒಂದು ಅರ್ಧಶತಕಕ್ಕೆ ಇಷ್ಟೊಂದು ಮಹತ್ವ ಯಾಕೆ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೂ ಕಾರಣವಿದೆ. ಕಳೆದ 7 ಇನ್ನಿಂಗ್ಸ್’ಗಳಿಂದ ಕರುಣ್ ನಾಯರ್ ಒಂದೇ ಒಂದು ಅರ್ಧಶತಕವನ್ನೂ ಗಳಿಸಿರಲಿಲ್ಲ. ಐಪಿಎಲ್’ನಲ್ಲಿ ವೈಫಲ್ಯ, ಉತ್ತರ ಪ್ರದೇಶ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದ ಎರಡೂ ಇನ್ನಿಂಗ್ಸ್ ಸೇರಿ 39 ರನ್, KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಕೇವಲ 32 ರನ್.. ಹೀಗೆ ಕರುಣ್ ನಾಯರ್ ಭಾರೀ ವೈಫಲ್ಯ ಎದುರಿಸಿದ್ದರು. ಈಗಾಗಲೇ ರಾಜ್ಯ ತಂಡದಲ್ಲಿ ಕಳೆದ 2-3 ವರ್ಷಗಳಿಂದ ವೈಫಲ್ಯ ಎದುರಿಸುತ್ತಿರುವ ಕರುಣ್ ನಾಯರ್ ವಿರುದ್ಧ ಸಾಕಷ್ಟು ಟೀಕೆಗಳೂ ಕೇಳಿ ಬಂದಿದ್ದವು. ಹೀಗಾಗಿ KSCA ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಕರುಣ್’ಗೆ ದೊಡ್ಡ ಇನ್ನಿಂಗ್ಸ್ ಒಂದರ ಅವಶ್ಯಕತೆಯಿತ್ತು. ಆ ಇನ್ನಿಂಗ್ಸ್ ಬುಧವಾರ ನಡೆದ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಬಂದಿದೆ. ಇಲ್ಲಿಂದ ಮುಂದೆ ಕರುಣ್ ನಾಯರ್ ಫಾರ್ಮ್ ಕಂಡುಕೊಂಡರೆ, ಅವರ ಕ್ರಿಕೆಟ್ ಜೀವನಕ್ಕೇ ಒಳ್ಳೆಯದು.

30 ವರ್ಷದ ಕರುಣ್ ನಾಯರ್ ಭಾರತ ಪರ 6 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಂದು ತ್ರಿಶತಕ ಸಹಿತ 374 ರನ್ ಗಳಿಸಿದ್ದಾರೆ. ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ 46 ರನ್ ಕಲೆ ಹಾಕಿದ್ದಾರೆ. 85 ಪ್ರಥಮದರ್ಜೆ ಪಂದ್ಯಗಳಿಂದ 15 ಶತಕಗಳ ಸಹಿತ 5922 ರನ್, 90 ಲಿಸ್ಟ್ ‘ಎ’ ಪಂದ್ಯಗಳಿಂದ 2 ಶತಕ ಸಹಿತ 2119 ರನ್ ಹಾಗೂ 150 ಟಿ20 ಪಂದ್ಯಗಳಿಂದ 2 ಶತಕಗಳೊಂದಿಗೆ 2989 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Mumbai Indians: ಮುಂಬೈ ಇಂಡಿಯನ್ಸ್ ಫ್ಯಾಮಿಲಿಗೆ ಮತ್ತಿಬ್ಬರ ಎಂಟ್ರಿ, ಎಂಐ ಎಮಿರೇಟ್ಸ್, ಎಂಐ ಕೇಪ್ ಟೌನ್ ತಂಡಗಳ ಅನಾವರಣ

ಇದನ್ನೂ ಓದಿ : Jasprit Bumrah meets mother : ತುಂಬಾ ದಿನಗಳ ನಂತರ ತಾಯಿ-ತಂಗಿಯನ್ನು ಭೇಟಿಯಾದ ವೇಗಿ ಜಸ್‌ಪ್ರೀತ್ ಬುಮ್ರಾ

A big turning point for cricket life, Karun Nair career changes from here

Comments are closed.