Hijab Meaning: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಒಂದು ಘಟನೆ-ಪ್ರತಿಭಟನೆ-ಹೋರಾಟ ಇಡೀ ದೇಶವಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಅದೇ ಉಡುಪಿಯಲ್ಲ ಸರ್ಕಾರಿ ಕಾಲೇಜೊಂದರಲ್ಲಿ ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿಗಳು ತರಗತಿಯೊಳಗೂ ಹಿಜಾಬ್ ಧರಿಸಿ ಕೂರುವುದಾಗಿ ಹೇಳಿದ್ದು ಮತ್ತು ಅದಕ್ಕೆ ಆಡಳಿತ ಮಂಡಳಿ ನಿರಾಕರಿಸಿದ್ದು. ಈ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹಿಂದೂ ಸಮುದಾಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಆಗಮಿಸಿದ್ದು ಸದ್ಯದ ಅತ್ಯಂತ ಚರ್ಚಿತ ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ತಿರ್ಪಿಗಾಗಿ ಕಾಯುತ್ತಿರುವ ಘಟನೆ. ಮುಸ್ಲಿಮ ಸಮುದಾಯದ ಮಹಿಳೆಯರು ಧರಿಸುವ ಹಿಜಾಬ್, ಬುರ್ಕಾ ಮತ್ತು ನಿಕಾಬ್ ಕುರಿತು (Hijab Burka Niqab) ಸಾರ್ವಜನಿಕವಾಗಿ ಅಷ್ಟೊಂದು ಮಾಹಿತಿಯಿಲ್ಲ. ಹಿಜಾಬ್, ಬುರ್ಕಾ ಮತ್ತು ನಿಕಾಬ್ ಮೂರು ಸಹ ಪ್ರತ್ಯೇಕ ಉಡುಪುಗಳು. ಹಾಗಾದರೆ ಹಿಜಾಬ್ ಎಂದರೇನು (Hijab Meaning Hijab Dress)? ಹಿಜಾಬ್, ಬುರ್ಕಾ ಮತ್ತು ನಿಕಾಬ್‌ಗಳಲ್ಲಿ ವ್ಯತ್ಯಾಸಗಳೇನು? ಯಾರು ಯಾವ ಉಡುಪನ್ನು ಧರಿಸುತ್ತಾರೆ ಎಂಬ ಸಂಕ್ಷಿಪ್ತ ಮಾಹಿತಿಯನ್ನು ನಿಮ್ಮ ನ್ಯೂಸ್‌ನೆಕ್ಸ್ಟ್‌ಲೈವ್ ಕನ್ನಡ ಸಂಗ್ರಹಿಸಿ ನಿಮಗಾಗಿ ತೆರೆದಿಟ್ಟಿದೆ.

ಹಿಜಾಬ್: ಸದ್ಯ ಭಯಂಕರ ಚರ್ಚೆ ಮತ್ತು ವಿವಾದದ ಸ್ವರೂಪದಲ್ಲಿರುವ ಮುಸ್ಲಿಂ ಮಹಿಳೆಯರು ಧರಿಸುವ ಉಡುಪು ಹಿಜಾಬ್. ಇದು ಹಲವು ಬಣ್ನಗಳಲ್ಲಿರುತ್ತದೆ ಮತ್ತು ವಿವಿಧ ತೆರನಾದ ಬಟ್ಟೆಗಳಿಂದ ರೂಪಿಸಲಾಗುವ ಉಡುಪಾಗಿದೆ. ಹಿಜಾಬ್ ಮಹಿಳೆಯರ ಕೂದಲು ಮತ್ತು ಕುತ್ತಿಗೆಯನ್ನು ಮುಚ್ಚುತ್ತದೆ. ಆದರೆ ಮುಖವನ್ನು ಮುಚ್ಚುವುದಿಲ್ಲ.

ನಿಕಾಬ್: ಮುಸ್ಲಿಂ ಸಮುದಾಯದ ಮಹಿಳೆಯರು ಬಳಸುವ ಈ ದಿರಿಸು ಮುಖದ ಭಾಗವನ್ನು ಸಹ ಮುಚ್ಚುತ್ತದೆ. ನಿಕಾಬ್ ಧರಿಸಿದ ಮಹಿಳೆಯರ ಕೇವಲ ಕಣ್ಣುಗಳು ಮಾತ್ರ ಕಾಣಿಸುತ್ತವೆ. ಜೊತೆಗೆ ನಿಕಾಬ್ ಜೊತೆಗೆ ತಲೆಗೆ ಸ್ಕಾರ್ಫ್‌ ಸುತ್ತಲಾಗುತ್ತದೆ.

ಬುರ್ಖಾ:  ಹಿಜಾಬ್ ಮತ್ತು ನಿಕಾಬ್‌ಗಿಂತ ಬುರ್ಖಾ ಕುರಿತು ಸಾರ್ವಜನಿಕವಾಗಿ ಸ್ವಲ್ಪ ಹೆಚ್ಚಿನ ಅರಿವಿದೆ. ಬುರ್ಖಾ ಇಡೀ ದೇಹವನ್ನು ಆವರಿಸುತ್ತದೆ. ಒಂದೇ ಬಟ್ಟೆಯಿಂದ ಅಥವಾ ಎರಡು ಬಟ್ಟೆಯಿಂದ ಬುರ್ಕಾ ಉಡುಪನ್ನು ತಯಾರಿಸಲಾಗುತ್ತದೆ. ಕೇವಲ ಕಣ್ಣಿನ ಭಾಗವಷ್ಟೇ ಹೊರಜಗತ್ತಿಗೆ ತೆರೆದಿರುತ್ತದೆ.

ಇವಿಷ್ಟೇ ಅಲ್ಲದೇ ಇರಾನ್ ದೇಶದ ಮಹಿಳೆಯರು ಧರಿಸುವ  Chandor, All Aamira, Khimar, Shyla ಮುಂತಾದ ದಿರಿಸುಗಳನ್ನು ಸಹ ಮುಸ್ಲಿಂ ಸಮುದಾಯದ ಮಹಿಳೆಯರು ತಮ್ಮ ದೇಹವನ್ನು ಹೊರಜಗತ್ತಿಗೆ ಕಾಣದಂತೆ ಮುಚ್ಚಲು ಬಳಸುತ್ತಾರೆ.

ಕೆಲ ತಿಂಗಳಿನ ಹಿಂದೆ ಕೇರಳದಲ್ಲಿಯೂ ಹಿಜಾಬ್ ಹಕ್ಕಿಗಾಗಿ ಕೂಗೆತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಅರ್ಜಿಯನ್ನು ಕೇರಳ ಹೈಕೋರ್ಟ್ ನಿರಾಕರಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಸದ್ಯ ಕರ್ನಾಟಕದಲ್ಲಿ ಫೆಬ್ರವರಿ 8ರಮದು ಹಿಜಾಬ್ ವಿವಾದದ ಕುರಿತ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ.

ಇದನ್ನೂ ಓದಿ: Best Smartphones Under 5000: ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್‌; 5 ಸಾವಿರದೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳಿವು

(Hijab Meaning Hijab Dress : what is Hijab Burka Niqab Muslim Women Karnataka’s Row)

Comments are closed.