ಸೋಮವಾರ, ಏಪ್ರಿಲ್ 28, 2025
HomeSpecial StoryImmunity Damaging Foods:ನಿಮ್ಮ ರೋಗನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುವ ಈ ಆಹಾರಗಳನ್ನು ಸೇವಿಸಲೇಬೇಡಿ

Immunity Damaging Foods:ನಿಮ್ಮ ರೋಗನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುವ ಈ ಆಹಾರಗಳನ್ನು ಸೇವಿಸಲೇಬೇಡಿ

- Advertisement -

ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಸರಿಯಾದ ರೀತಿಯ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.ಉತ್ತಮ ಆಹಾರವು ರೋಗಗಳನ್ನು ಗುಣಪಡಿಸುವ ಮತ್ತು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಜಂಕ್ ಫುಡ್ ಹಲವಾರು ರೋಗಗಳಿಗೆ ಕಾರಣವಾಗುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ, ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುವ ಸರಿಯಾದ ರೀತಿಯ ಆಹಾರವನ್ನು ನೀವು ತಿನ್ನುವುದು ಮುಖ್ಯ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಮಿನರಲ್ ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ನೀವು ಸೇವಿಸುವುದು ಮುಖ್ಯ. ನಿಮ್ಮ ಇಮ್ಮ್ಯೂನ್ ಸಿಸ್ಟಮ್ ನ ಮೇಲೆ ಪರಿಣಾಮ ಬೀರುವ ಆಹಾರಗಳನ್ನು ಇಲ್ಲಿ ನೋಡೋಣ(Immunity Damaging Foods):

ಹುರಿದ ಆಹಾರ ( ಫ್ರೈಡ್ ಫುಡ್) :

ಫ್ರೈಡ್ ಫುಡ್ ದೇಹಕ್ಕೆ ಉರಿಯೂತ ಮತ್ತು ಸೆಲ್ಯುಲಾರ್ ಹಾನಿಯನ್ನು ಉಂಟುಮಾಡುತ್ತವೆ.ಇದರೊಂದಿದೆ ಕೊಲೆಸ್ಟ್ರಾಲ್ ಹೆಚ್ಚಿಸುವುದರ ಜೊತೆಗೆ ನಮ್ಮ ದೇಹದ ತೂಕವನ್ನು, ಕೊಬ್ಬನ್ನೂ ಹೆಚ್ಚಿಸುತ್ತದೆ.
ಸಂಸ್ಕರಿಸಿದ ಮಾಂಸ:

ಹುರಿದ ಆಹಾರದಂತೆಯೇ, ಇವುಗಳು ದೇಹದ ಇಮ್ಮ್ಯೂನ್ ಸಿಸ್ಟಮ್ ಹದಗೆಡಿಸುವ ಎ.ಜಿ .ಇ ಗಳನ್ನು ಅಪಾರ ಪ್ರಮಾಣದಲ್ಲಿ ಹೊಂದಿವೆ . ಈ ಆಹಾರಗಳು ಕೊಬ್ಬಿನಲ್ಲಿ ಸಮೃದ್ಧವಾಗಿವೆ. ಸಂಸ್ಕರಿಸಿದ ಮಾಂಸವು ಹೆಚ್ಚಿನ ಪ್ರಮಾಣದಲ್ಲಿ ಪ್ರಿಸರ್ವಾಟಿವ್ ಅನ್ನು ಹೊಂದಿದ್ದು , ಇದು ಉರಿಯೂತಕ್ಕೆ ಕಾರಣವಾಗಬಹುದು.

ಸಕ್ಕರೆಯ ಆಹಾರಗಳು ಮತ್ತು ಪಾನೀಯಗಳು:

ಆಹಾರದಲ್ಲಿ ಹೆಚ್ಚಿನ ಸಕ್ಕರೆ ಅಂಶವು ಬೊಜ್ಜು ಮತ್ತು ಮಧುಮೇಹದಂತಹ ಹಲವಾರು ಕಾಯಿಲೆಗಳನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ, ಆಹಾರ ಮತ್ತು ಪಾನೀಯಗಳಲ್ಲಿ ಹೆಚ್ಚಿನ ಸಕ್ಕರೆ ಅಂಶವು ದೇಹದ ಇಮ್ಮ್ಯೂನ್ ಸಿಸ್ಟಮ್ ಮೇಲೆ ಪರಿಣಾಮ ಬೀರುತ್ತದೆ.
ಒಮೆಗಾ -6 ಕೊಬ್ಬುಗಳು:

ಒಮೆಗಾ -3 ಕೊಬ್ಬುಗಳು ಮತ್ತು ಒಮೆಗಾ -6 ಕೊಬ್ಬುಗಳು ದೇಹದ ಆರೋಗ್ಯಕರ ಕಾರ್ಯನಿರ್ವಹಣೆಗೆ ಪ್ರಮುಖವಾಗಿವೆ. ಆದರೆ , ಒಮೆಗಾ -6 ಕೊಬ್ಬಿನ ಅತಿಯಾದ ಸೇವನೆಯು ದೇಹದ ಇಮ್ಮ್ಯೂನ್ ಸಿಸ್ಟಮ್ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಇಮ್ಮ್ಯೂನ್ ಸಿಸ್ಟಮ್ ನ ಆರೋಗ್ಯಕರ ಕಾರ್ಯಕ್ಕಾಗಿ ನೀವು ಹೆಚ್ಚು ಒಮೆಗಾ -3 ಮತ್ತು ಕಡಿಮೆ ಒಮೆಗಾ -6 ಅನ್ನು ಸೇವಿಸುವುದು ಮುಖ್ಯ.
ಹೆಚ್ಚು ಉಪ್ಪುಸಹಿತ ಆಹಾರಗಳು:

ಉಪ್ಪು ಹೆಚ್ಚಿರುವ ಆಹಾರಗಳನ್ನು ನೀವು ತ್ಯಜಿಸಬೇಕು ಏಕೆಂದರೆ ಅವು ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು ಮತ್ತು ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ : Rainbow Diet : ರೈನ್ ಬೋ ಡಯಟ್ ಎಂದರೇನು? ಈ ಕಲರ್ ಫುಲ್ ಡಯಟ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

(Immunity Damaging Foods)

RELATED ARTICLES

Most Popular