Ben stokes: ಏಕದಿನ ಕ್ರಿಕೆಟ್​ಗೆ ಇಂಗ್ಲೆಂಡ್​ ಸ್ಟಾರ್​ ಆಲ್ರೌಂಡರ್​​ ಬೆನ್​ ಸ್ಟೋಕ್ಸ್​ ದಿಢೀರ್​ ವಿದಾಯ

Ben stokes: ಇಂಗ್ಲೆಂಡ್​ ತಂಡದ ಸ್ಟಾರ್​ ಆಟಗಾರ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​​ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಬೆನ್​ ಸ್ಟೋಕ್ಸ್​ ದಿಢೀರ್​ ವಿದಾಯವು ಅಭಿಮಾನಿಗಳಿಗೆ ಆಘಾತ ಮೂಡಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರದ ನಡೆಯಲಿರುವ ಪಂದ್ಯವು ಬೆನ್​ ಸ್ಟೋಕ್ಸ್​ ವೃತ್ತಿ ಜೀವನದ ಕೊನೆಯ ಏಕದಿನ ಪಂದ್ಯವಾಗಿರಲಿದೆ. ರಿವರ್‌ಸೈಡ್‌ ಗ್ರೌಂಡ್‌ನಲ್ಲಿ ತವರು ಅಭಿಮಾನಿಗಳ ಸಮ್ಮುಖದಲ್ಲಿ ಬೆನ್​ಸ್ಟೋಕ್ಸ್​ ತಮ್ಮ ವೃತ್ತಿ ಜೀವನದ ಕೊನೆಯ ಆಟವನ್ನು ಆಡಲಿದ್ದಾರೆ .

ಈ ಸಂಬಂಧ ಟ್ವಿಟರ್​ನಲ್ಲಿ ಸುದೀರ್ಘ ಟಿಪ್ಪಣಿಯನ್ನು ಬರೆದಿರುವ ಬೆನ್​ ಸ್ಟೋಕ್ಸ್ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳುವುದು ಕಠಿಣ ಎನಿಸುತ್ತಿದೆ. ಆದರೆ ಕ್ರಿಕೆಟ್​ನ ಮೂರು ವಿಭಾಗಗಳಲ್ಲಿ ಆಡುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ನನಗೆ ನನ್ನ ಸಹ ಆಟಗಾರರಿಗೆ 100 ಪ್ರತಿಶತ ನೆರವು ನೀಡುವುದು ನನ್ನಿಂದಾಗದು. ಇಂಗ್ಲೆಂಡ್​ ತಂಡದ ವೇಳಾಪಟ್ಟಿಯಂತೆ ಕ್ರಿಕೆಟ್​ನ ಮೂರು ವಿಭಾಗಗಳಲ್ಲಿ ಆಡಲು ನನ್ನ ಶರೀರವು ಸ್ಪಂದಿಸುವುದಿಲ್ಲ. ಹೀಗಾಗಿ ನನ್ನ ಸ್ಥಾನದಲ್ಲಿ ಇನ್ನೊಬ್ಬ ಕ್ರಿಕೆಟಿಗ ಆಡಲಿ. 11 ವರ್ಷಗಳ ಕಾಲ ನಾನು ಏಕದಿನ ಪಂದ್ಯಗಳಲ್ಲಿ ಆಡಿದ್ದೇನೆ. ಇನ್ಮುಂದೆ ನಾನು ಟೆಸ್ಟ್​ ಕಡೆಗೆ ಸಂಪೂರ್ಣ ಗಮನ ನೀಡುತ್ತೇನೆ. ಹಾಗೂ ಟಿ 20 ಕ್ರಿಕೆಟ್​ಗೂ ನಾನು ಸಂಪೂರ್ಣ ಬದ್ಧನಾಗಿದ್ದೇನೆ ಎಂದು ಬರೆದು ಕೊಂಡಿದ್ದಾರೆ.


ಐರ್ಲೆಂಡ್​ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್​ ಜೀವನಕ್ಕೆ ಪಾದಾರ್ಪಣೆ ಮಾಡಿರುವ ಬೆನ್​ ಸ್ಟೋಕ್ಸ್​ ಈವರೆಗೆ 104 ಪಂದ್ಯಗಳನ್ನು ಆಡಿದ್ದಾರೆ. 2912 ರನ್​ಗಳನ್ನು ಸ್ಟೋಕ್ಸ್​ ಗಳಿಸಿದ್ದು ಇದರಲ್ಲಿ 3 ಶತಕ ಹಾಗೂ 21 ಅರ್ಧ ಶತಕಗಳು ಇವರ ಹೆಸರಿನಲ್ಲಿ ದಾಖಲಾಗಿದೆ. ಈವರೆಗೆ ಏಕದಿನ ಕ್ರಿಕೆಟ್​ನಲ್ಲಿ ಬೆನ್​ ಸ್ಟೋಕ್ಸ್​ 74 ವಿಕೆಟ್​ಗಳನ್ನು ಕಬಳಿಸಿದ್ದಾರೆ.


ಕೆಲವು ಸಮಯದ ಹಿಂದೆಯಷ್ಟೇ ಬೆನ್​ ಸ್ಟೋಕ್ಸ್​ ಇಂಗ್ಲೆಂಡ್​ ತಂಡದ ಟೆಸ್ಟ್​ ಕ್ರಿಕೆಟ್​ನ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಯಕನಾದ ಬಳಿಕ ನ್ಯೂಜಿಲೆಂಡ್​ ವಿರುದ್ಧ ಟೆಸ್ಟ್​ ಪಂದ್ಯದಲ್ಲಿ 3-0 ಅಂತರದಲ್ಲಿ ಗೆಲುವು ಕಂಡಿದ್ದಾರೆ. ಟೀಂ ಇಂಡಿಯಾ ವಿರುದ್ಧದದ ಟೆಸ್ಟ್​ ಪಂದ್ಯದಲ್ಲಿ 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿದ್ದಾರೆ.

ಇದನ್ನು ಓದಿ : Ranbir Kapoor-Alia Bhatt : ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರಾ ಆಲಿಯಾ ಭಟ್​:ಕುತೂಹಲ ಮೂಡಿಸಿದ ರಣಬೀರ್ ಹೇಳಿಕೆ

ಇದನ್ನೂ ಓದಿ : Virat Kohli Rohit Sharma : ಟೀಮ್ ಇಂಡಿಯಾ ಅಭ್ಯಾಸದ ವೇಳೆ ಮಿಲಿಯನ್ ಡಾಲರ್ ಫೋಟೋ : ಕೊಹ್ಲಿ, ರೋಹಿತ್ ಫ್ಯಾನ್ಸ್ ಫುಲ್ ಖುಷ್

England all-rounder Ben Stokes to retire from ODIs after Tuesday’s match against SA

Comments are closed.