International Women’s Day 2023: ಈ ಬಾರಿಯ ಮಹಿಳಾ ದಿನದ ವಿಷಯವೇನು ? ಇದರ ಮಹತ್ವವೇನು ಗೊತ್ತಾ…

(International Women’s Day 2023) ದೇಶ ಮತ್ತು ಇಡೀ ಜಗತ್ತಿಗೆ ಲಿಂಗ ಸಮಾನತೆ ಬಹಳ ಮುಖ್ಯ. ನಾವೆಲ್ಲರೂ ಸೇರಿ ಈ ಲಿಂಗ ಅಸಮಾನತೆಯನ್ನು ಹೋಗಲಾಡಿಸಬೇಕು. ಸಮಾನತೆ ಎಂದರೆ ಪ್ರತಿಯೊಬ್ಬ ವ್ಯಕ್ತಿ ಅಥವಾ ಜನರ ಗುಂಪು ಸಮಾನ ಅವಕಾಶಗಳನ್ನು ಹೊಂದಿರಬೇಕು. ಅವನು ಯಾವುದೇ ಲಿಂಗವಾಗಿದ್ದರೂ ಪರವಾಗಿಲ್ಲ. ಆದ್ದರಿಂದ ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ಕಲ್ಪಿಸಲು ನಾವು ಪ್ರತಿ ವರ್ಷ ಮಾರ್ಚ್ 8 ರಂದು ಮಹಿಳಾ ದಿನ 2023 ಅನ್ನು ಆಚರಿಸುತ್ತೇವೆ. “DigitALL: Innovation and technology for gender equality” ಎಂಬ ವಿಷಯದ ಅಡಿಯಲ್ಲಿ, 2023 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶ್ವಸಂಸ್ಥೆಯ ಆಚರಣೆಯು ಅಂತರ್ಗತ ಮತ್ತು ಪರಿವರ್ತಕ ತಂತ್ರಜ್ಞಾನ ಮತ್ತು ಡಿಜಿಟಲ್ ಶಿಕ್ಷಣದ ಅಗತ್ಯವನ್ನು ಎತ್ತಿ ತೋರಿಸುತ್ತದೆ.

ಲಿಂಗ ಅಸಮಾನತೆ ಇಂದು ನೆನ್ನೆಯ ಸಮಸ್ಯೆಯಲ್ಲ. ಇದಕ್ಕೆ ದೀರ್ಘ ಇತಿಹಾಸವಿದ್ದು ಇದರ ಬೇರುಗಳು ಅತ್ಯಂತ ಆಳವಾಗಿವೆ. ಲಿಂಗ ಅಸಮಾನತೆಗಳು ಆಯಾ ಸಮಾಜದ ಸಂಸ್ಕೃತಿಯ ಒಂದು ಭಾಗವೆಂಬಂತೆ ಸಹಜವಾಗಿ ಬೆಳೆದಿದ್ದು ಒಪ್ಪಲ್ಪಟ್ಟ ಸಾಮಾಜಿಕ ಮೌಲ್ಯಗಳಾಗಿವೆ. ಲಿಂಗ ಅಸಮಾನತೆಯ ವಿರುದ್ದ ನಡೆದಿರುವ ಚಿಂತನೆಗಳು ಕಡಿಮೆ. ಅಲ್ಲಿ ಇಲ್ಲಿ ಇಂತಹ ಚಿಂತನೆಗಳು ಹುಟ್ಟಿದ್ದರೂ ಸಾಮಾಜಿಕ ಬೆಂಬಲವಿಲ್ಲದೆ ಜನಮದಲ್ಲಿ ಮೂಡಲಿಲ್ಲ. ವಿವಿಧ ದೇಶಗಳು,ಸಮಾಜ,ಸಂಸ್ಕೃತಿ ಮತ್ತು ವಿವಿಧ ಕಾಲಘಟ್ಟಗಳಲ್ಲಿ ಲಿಂಗ ಅಸಮಾನತೆಯ ರೀತಿ ನೀತಿಗಳಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಜಗತ್ತಿನ ಎಲ್ಲ ಸಮಾಗಜಗಳಲ್ಲು ಅಸಮಾನತೆ ಇರುವುದು ಸತ್ಯ. ಈ ರೀತಿಯ ಲಿಂಗ ಅಸಮಾನತೆಗೆ ಯಾವುದೇ ಒಂದು ಕಾಲವಾಗಲಿ, ಒಂದು ಅಂಶವಾಗಲಿ ಕಾರಣವಲ್ಲ.

ಕೌಟುಂಬಿಕ, ಸಾಮಾಜಿಕ, ಸಾಂಸ್ಕ್ರತಿಕ, ಆರ್ಥಿಕ, ಆಡಳಿತಾತ್ಮಕ, ಧಾರ್ಮಿಕ, ಆಧ್ಯಾತ್ಮಿಕ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಅಸಮಾನತೆ ವ್ಯಾಪಕವಾಗಿ ಆಚರಣೆಯಲ್ಲಿದೆ. ಧಾರ್ಮಿಕ ಆಚರಣೆಗಲ್ಲಿ ರೂಡಿಗತವಾಗಿ ಬೆಳೆದು ಬಂದಿರುವ ಆಚರಣೆಗಳು ಮತ್ತು ನಂಬಿಕೆಗಳಿಂದ ಪುರು‌‍‍‍ಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಿಂದ ಧರ್ಮ, ಸಾಹಿತ್ಯ, ಸಂಸ್ಕ್ರತಿಗಳ ಮೂಲಕ ಅಸಮಾನತೆಗಳು ಬೆಳೆದಿವೆ. ಈ ಹಿನ್ನಲೆಯಲ್ಲಿ ಯುನೆಸ್ಕೋ ಸಂಸ್ಥೆ ಈ ಬಾರಿ ಮಹಿಳಾ ದಿನದಂದು “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ” ಎಂಬ ವಿಷಯನ್ನಿಟ್ಟುಕೊಂಡು ಮಹಿಳಾ ದಿನವನ್ನು ಆಚರಿಸುತ್ತದೆ.

ಮನುಷ್ಯ ಜೀವಿಗಳ ನಡುವೆ ಅಸಮಾನತೆ, ಅಗೌರವಗಳನ್ನು ತಪ್ಪಿಸಿ ಸಮಾನತೆ ಸಹಬಾಳ್ವವೆ ನಡೆಸಲು ಅಂತರ ಸಂಬಂಧ, ವಿಚಾರ ವಿನಿಮಯ ಹಾಗೂ ಮಾನವ ಘನತೆಯನ್ನು ಎತ್ತಿ ಹಿಡಿಯುವುದು, ಹೆಣ್ಣು ಮಕ್ಕಳ ಬಗ್ಗೆ ಆಚರಣೆಯಲ್ಲಿರುವ ಕೀಳರಿಮೆಯನ್ನು ಅಳಿಸಿಹಾಕಿ ಹೆಣ್ಣು ಮಕ್ಕಳು ಹುಟ್ಟಿ ಬೆಳೆಯುವ ವಿವಿಧ ಹಂತಗಳಲ್ಲಿ ಮಾನವೀಯ ವಾತಾವರಣವನ್ನು ಸೃಷಿಸುವುದು, ಮಹಿಳೆಯರು ಪುರು‍‍‍‍‍‍‍‍‍‌‍ಷರಿಗಿಂತ ಎಲ್ಲ ಕ್ಷೇತ್ರಗಳಲ್ಲು,ಕೀಳು, ಅಶಕ್ತರು ಎಂಬ ರೂಡಿಗತ ತಪ್ಪು ಕಲ್ಪನೆಗಳನ್ನು ಪೂರ್ಣ ಅಳಿಸಿ ಹಾಕಿ ಲಿಂಗ ಸಮಾನತೆಯ ಮನೋಭಾವ ಬೆಳೆಸಿ, ಪ್ರತಿಯೊಬ್ಬ ಹೆಣ್ಣು ಗಂಡು ಸಮಾನತೆಯನ್ನು ಹೊಂದಿರಬೇಕು. ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ಕಲ್ಪಿಸಬೇಕು ಎಂಬ ಮಹತ್ವಪೂರ್ಣ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.International Women’s Day 2023ಮನುಷ್ಯ ಜೀವಿಗಳ ನಡುವೆ ಅಸಮಾನತೆ, ಅಗೌರವಗಳನ್ನು ತಪ್ಪಿಸಿ ಸಮಾನತೆ ಸಹಬಾಳ್ವವೆ ನಡೆಸಲು ಅಂತರ ಸಂಬಂಧ, ವಿಚಾರ ವಿನಿಮಯ ಹಾಗೂ ಮಾನವ ಘನತೆಯನ್ನು ಎತ್ತಿ ಹಿಡಿಯುವುದು, ಹೆಣ್ಣು ಮಕ್ಕಳ ಬಗ್ಗೆ ಆಚರಣೆಯಲ್ಲಿರುವ ಕೀಳರಿಮೆಯನ್ನು ಅಳಿಸಿಹಾಕಿ ಹೆಣ್ಣು ಮಕ್ಕಳು ಹುಟ್ಟಿ ಬೆಳೆಯುವ ವಿವಿಧ ಹಂತಗಳಲ್ಲಿ ಮಾನವೀಯ ವಾತಾವರಣವನ್ನು ಸೃಷಿಸುವುದು, ಮಹಿಳೆಯರು ಪುರು‍‍‍‍‍‍‍‍‍‌‍ಷರಿಗಿಂತ ಎಲ್ಲ ಕ್ಷೇತ್ರಗಳಲ್ಲು,ಕೀಳು, ಅಶಕ್ತರು ಎಂಬ ರೂಡಿಗತ ತಪ್ಪು ಕಲ್ಪನೆಗಳನ್ನು ಪೂರ್ಣ ಅಳಿಸಿ ಹಾಕಿ ಲಿಂಗ ಸಮಾನತೆಯ ಮನೋಭಾವ ಬೆಳೆಸಿ, ಪ್ರತಿಯೊಬ್ಬ ಹೆಣ್ಣು ಗಂಡು ಸಮಾನತೆಯನ್ನು ಹೊಂದಿರಬೇಕು. ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ಕಲ್ಪಿಸಬೇಕು ಎಂಬ ಮಹತ್ವಪೂರ್ಣ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ : International Women Day 2023: ವೋಲ್ವೋದೊಂದಿಗೆ ಎಲ್ಲಾ BMTC ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

International Women’s Day 2023: What is the theme of Women’s Day this time? Do you know the significance of this?

Comments are closed.