ಇಲ್ಲಿರೋ ಒಂದೊಂದು ದೇವರು ನೀಡ್ತಾರೆ ಒಂದೊಂದು ಫಲ – ಜಲಕಂಠೇಶ್ವರನ ಸನ್ನಿಧಾನದಲ್ಲಿ ಸರ್ವ ಕಷ್ಟ ಪರಿಹಾರ

jalakanteshwara temple kalasipalya  : ಕರ್ನಾಟಕದ ರಾಜ್ಯಧಾನಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ. ಕೋಟೆ ಶ್ರೀ ಜಲಕಂಠೇಶ್ವರ ಸ್ವಾಮಿ ದೇವಾಲಯ ಅಂತ ಇಲ್ಲಿ ಈ ದೇವಾಲಯವನ್ನು ಕರೆಯಲಾಗುತ್ತೆ. ಮೊದಲು ಕಲಾಸಿಪಾಳ್ಯವನ್ನು ಇದನ್ನು ಕೈಲಾಸಪುರ ಅಂತ ಕರೆಯಲಾಗುತ್ತಿತ್ತು.

jalakanteshwara temple kalasipalya  : ನಮ್ಮಲ್ಲಿ ಇನ್ನೂ ಸಾವಿರಾರು ವರ್ಷಗಳ ಇತಿಹಾಸವಿರುವ ದೇವಾಲಯಗಳಿವೆ . ಕೆಲವು ಸಾಕಷ್ಟು ಜನರಿಗೆ ಗೊತ್ತಿದ್ರೆ, ಇನ್ನು ಕೆಲವು ಕೆಲವರಿಗೆ ಮಾತ್ರ ಗೊತ್ತಿರುತ್ತೆ. ಆದರೆ ಇಂಥಾ ಪುರಾತನ ದೇವಾಲಯಗಳಲ್ಲಿ ಮಾತ್ರ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಇರುತ್ತೆ ಅಂದ್ರೆ ತಪ್ಪಾಗಲ್ಲ . ಅಂತಹದೇ ಒಂದು ದೇವಾಲಯ ನಮ್ಮ ನಾಡಲ್ಲಿದೆ. ಇಲ್ಲಿ ಬಂದು ಹೇಳಿದಂತೆ ಮಾಡಿದ್ರೆ ಸರ್ವ ಕಷ್ಟಗಳು ಪರಿಹಾರವಾಗುತ್ತೆ ಅನ್ನೋದಕ್ಕೆ ಎರಡು ಮಾತಿಲ್ಲ.

ಹೌದು ಈ ದೇವಾಲಯದ ವಿಶೇಷವೇ ಹಾಗೆ. ಇಲ್ಲಿ ಪೂಜೆ ಮಾಡಿದ್ರೆ ಈಡೇರದ ಬೇಡಿಕೆನೇ ಇಲ್ಲ. ಇಲ್ಲಿ ಹರಕೆ ಹೊತ್ತುಕೊಂಡ್ರೆ ಕಷ್ಟವೆಲ್ಲಾ ಪರಿಹಾರವಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ . ಇದಕ್ಕೆ ಕಾರಣ ಅಲ್ಲಿ ಇರೋ ದೇವರುಗಳು. ಸಾಮಾನ್ಯವಾಗಿ ಯಾವುದೇ ದೇವಾಲಯದಲ್ಲಿ ಪ್ರತಿಷ್ಠಾಪಿಸದ ದೇವರಿಗೆ ಮಾತ್ರ ಪೂಜೆ ಮಾಡುವ ಅವಕಾಶವಿರುತ್ತೆ .

Karnataka Temples Special Story jalakanteshwara temple kalasipalya Bangalore
Image Credit to Original Source

ಅಲ್ಲಿ ಪೂಜೆ ಮಾಡಿದ್ರೆ ಮಾತ್ರ ಇಷ್ಟಾರ್ಥ ಈಡೇರುತ್ತೆ ಅನ್ನೋ ನಂಬಿಕೆನು ಇರುತ್ತೆ. ಆದರೆ ಇಲ್ಲೊಂದು ದೇವಾಲಯವಿದೆ. ಇಲ್ಲಿ ಕಂಬ ಕಂಬದಲ್ಲೂ ಒಂದೊಂದು ದೇವರು ನೆಲೆಸಿದ್ದಾನೆ . ಇಲ್ಲಿ ಪ್ರತಿಯೊಬ್ಬ ದೇವರು ಒಂದೊಂದು ಒಂದೊಂದು ರೀತಿಯ ಕಷ್ಟವನ್ನು ಬಗೆ ಹರಿಸುತ್ತಾನೆ ಅನ್ನೋ ನಂಬಿಕೆ ಇಲ್ಲಿದೆ.

ಆದ್ರೆ ಈ ದೇವಾಲಯದಲ್ಲಿ ಮುಖ್ಯವಾಗಿ ಪೂಜೆಗೊಳ್ಳೋದು ಶಿವ. ಅದು ಜಲ ಕಂಟೇಶ್ವರನಾಗಿ. ಜೊತೆಯಲ್ಲಿ ನಾಟ್ಯ ಗಣಪತಿ,ದೋಷಹರ ಗಣಪತಿ , ಸುಬ್ರಹ್ಮಣ್ಯ , ದುರ್ಗೆ, ಪಾರ್ವತಿ , ಬ್ರಹ್ಮ , ವಿಷ್ಣು , ಆಂಜನೇಯ , ವೀರಭದ್ರ , ಕಾಲ ಭೈರವ ಹೀಗೆ ಹತ್ತು ಹಲವು ದೇವರಿದ್ದಾರೆ. ಇವರು ವಿವಿಧ ರೀತಿಯ ವರ ಪ್ರಸಾದವನ್ನು ಕರುಣಿಸುತ್ತಾರೆ ಅನ್ನೋ ನಂಬಿಕೆ ಇದೆ.

ಇದನ್ನೂ ಓದಿ : ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ: ರಾಮ ನಡೆದ ಹಾದಿ ಇಂದಿಗೂ ಜೀವಂತ, ದೇಶದ ಹಲವೆಡೆ ಇದೆ ರಾಮನ ಕುರುಹು

ಇದು ಮುಖ್ಯವಾಗಿ ಶಿವನ ದೇವಾಲಯವಾಗಿದ್ದು, ಈತ ಜಲಕಂಠೇಶ್ವರನಾಗಿ ಇಲ್ಲಿ ನೆಲೆ ನಿಂತಿದ್ದಾನೆ. ಇದಕ್ಕೆ ಒಂದು ಪೌರಾಣಿಕ ಕಾರಣವಿದೆ . ಇದು ಚೋಳರ ಕಾಲದಲ್ಲಿ ನಿರ್ಮಿತವಾಗಿರುವ ದೇವಾಲಯ ವಾಗಿದೆ . ಕಥೆಯ ಪ್ರಕಾರ ಒಂದು ಬಾರಿ ಚೋಳ ರಾಜ್ಯದಲ್ಲಿ ವಿಪರೀತ ಬರ ಕಾಣಿಸಿಕೊಂಡಿತು, ಆಗ ಚೊಳ ರಾಜನು ಪ್ರಜೆಗಳ ಬಳಿ ಶಿವ ಕುರಿತು ತಪಸ್ಸು ಮಾಡುವಂತೆ ಕೇಳಿಕೊಂಡನು.

Karnataka Temples Special Story jalakanteshwara temple kalasipalya Bangalore
Image Credit to Original Source

ಅವರ ತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗಿ ಮಳೆ ಬರಲು ಆರಂಭವಾಯಿತು. ಆಗ ನೀರು ಶಿವ ಕಂಠದ ವರೆಗೆ ಬಂದು ನಿಂತಾಗ ಭಕ್ತರು ಧ್ಯಾನವನ್ನು ನಿಲ್ಲಿಸಿದರಂತೆ . ಹೀಗಾಗಿ ಶಿವನಿಗೆ ಜಲಕಂಠೇಶ್ವರ ಅನ್ನೋ ಹೆಸರು ಬಂತು ಅನ್ನೋ ನಂಬಿಕೆ ಇದೆ. ಇನ್ನು ಇಲ್ಲಿ ಪಂಚ ಶಿವ ಲಿಂಗಗಳಿವೆ . ಆದರಲ್ಲಿ ಎರಡು ದೊಡ್ಡ ಲಿಂಗಗಳಾಗಿದ್ದು , ಮೂರು ಸುಪ್ತರೀತಿಯಲ್ಲಿವೆ .

ಸುಪ್ತ ಲಿಂಗಗಳು ಯಾವುವೆಂದರೆ ಜಲಕಂಠೇಶ್ವರನ ಎದುರಿನ ನಂದಿ ಹಣೆಯಲ್ಲಿ, ಪಾರ್ವತಿಯ ಹಣೆಯಲ್ಲಿ, ಹಾಗೂ ನಾಗನ ಹೆಡೆಯಲ್ಲಿ ನೆಲೆಸಿವೆ. ಇನ್ನು ಇಲ್ಲಿ 9 ಕಂಬಗಳಿದ್ದು ಅದರ ಮುಂದೆ ಕೂತು ದ್ಯಾನ ಮಾಡಿದ್ರೆ ಇಷಾರ್ಥಗಳು ಈಡೇರುತ್ತೆ ಅನ್ನೋ ನಂಬಿಕೆ ಇದೆ. ಇಲ್ಲಿ 9 ಕಂಬಗಳ ಪೈಕಿ ಕೇವಲ 8 ಕಂಬ ಮಾತ್ರ ಕಾಣೋಕೆ ಸಿಗುತ್ತೆ. ಇನ್ನೊಂದು ಕಂಬ ವಿಷ್ಣು ಹಾಗೂ ಶಿವನ ಗುಡಿಯ ನಡುವಿನಲ್ಲಿ ನಡುವಿನಲ್ಲಿದೆ.

ಇದನ್ನೂ ಓದಿ : ಭಕ್ತರಿಗಾಗಿ ಕಣ್ಣೀರು ಸುರಿಸ್ತಾನೆ ಆಂಜನೇಯ – ಇಲ್ಲಿ ಬಂದ್ರೆ ಕಷ್ಟವೆಲ್ಲಾ ಆಗುತ್ತೆ ನಿವಾರಣೆ

ಇನ್ನು ಇಲ್ಲಿ ಕೇವಲ ಶಿವನಿಗೆ ಮಾತ್ರವಲ್ಲದೆ ದೇವಾಲಯದ ಪ್ರಾಂಗಣದಲ್ಲಿ ಕೆತ್ತಲಾದ ಅಷ್ಟೂ ದೇವತೆಗಳಿಗೂ ಮಹತ್ವವಿದೆ. ಇಲ್ಲಿ ನೆಲೆಸಿರುವ ಕಾಲಬೈರವನಿಗೆ ಪೂಜೆ ಮಾಡಿ ವಿವಿಧ ತರಕಾರಿಗಳಲ್ಲಿ ದೀಪ ಬೆಳಗಿದ್ರೆ ದೀರ್ಘ ಕಾಲದ ರೋಗ ನಾಶವಾಗುತ್ತೆ ಅನ್ನೋ ನಂಬಿಕೆ ಇದೆ. ಇನ್ನು ಇಲ್ಲಿರುವ ಗಣಪ ನಾಟ್ಯ ಗಣಪನಾಗಿದ್ದು, ಯಾವುದೇ ವಿದ್ಯೆ ಕಲಿಯುವ ಮುನ್ನ ಇಲ್ಲಿಗೆ ಬಂದ್ರೆ ಪೂರ್ಣ ವಿದ್ಯೆ ದಕ್ಕುತ್ತೆ ಅನ್ನೋ ನಂಬಿಕೆ ಇದೆ .

Karnataka Temples Special Story jalakanteshwara temple kalasipalya Bangalore
Image Credit to Original Source

ಇನ್ನು ಇಲ್ಲಿ ದೋಷ ಹರ ಗಣಪತಿಯೂ ಇದ್ದು , ನಾವು ಇಲ್ಲಿ ಮಾಡಿದ ಪೂಜೆಯಲ್ಲಿ ದೋಷ ವಾಗಿದ್ರೆ ದೇವಾಲಯದ ಹೊರಗೆ ತೆರಳಿ ಅಲ್ಲಿಂದ ಈ ಗಣೇಶನನ್ನು ವೀಕ್ಷಿಸಿದ್ರೆ ಎಲ್ಲಾ ದೋಷ ಪರಿಹಾರವಾಗುತ್ತೆ ಅನ್ನೋ ನಂಬಿಕೆ ಇದೆ . ಇದಲ್ಲದೆ ಉಳಿದ ದೇವ ದೇವತೆಗಳಿಗೂ ಇಲ್ಲಿ ವಿಶಿಷ್ಟ ಸ್ಥಾನ ವಿದೆ. ಇಲ್ಲಿ ಯಾರನ್ನು ಹೇಗೆ ಪೂಜಿಸಿದ್ರೆ ಯಾವ ಫಲ ದಕ್ಕುತ್ತೆ ಅನ್ನೋದನ್ನು ಇಲ್ಲಿನ ಪುರೋಹಿತರು ಹೇಳುತ್ತಾರೆ.

Karnataka Temples Special Story jalakanteshwara temple kalasipalya Bangalore
Image Credit to Original Source

ಇನ್ನು ಇದು ಬ್ರಹ್ಮ ವಿಷ್ಣು ಮಹೇಶ್ವರನನ್ನು ಪೂಜಿಸುವ ಮಂದಿರ ಅಂದರೂ ತಪ್ಪಾಗಲ್ಲ. ಇಲ್ಲಿ ವಿಷ್ಣು ಹಾಗೂ ಶಿವನ ದ್ವಾರ ಪಾಲಕರೂ ಕಾಣಸಿಗುತ್ತಾರೆ. ಇನ್ನು ಈ ದೇವಾಲಯದಲ್ಲಿ ಧ್ಯಾನಕ್ಕೆ ಆಧ್ಯತೆ ನೀಡಲಾಗಿದ್ದು ತಪಕ್ಕೆ ಕುಳಿತು ಕೊಳ್ಳಲು ಹಾವು ಹಾಗೂ ಆಮೆಯ ಚಿಹ್ನೆಗಳನ್ನು ನೀಡಲಾಗಿದೆ. ಜೊತೆಗೆ ಇದು ಕೈಲಾಸೇಶ್ವರ ಮುನಿಗಳ ತಪಕ್ಷೇತ್ರವೂ ಹೌದು . ಇದೇ ದೇವಾಲಯದಲ್ಲಿರುವ ಕೈಲಾಸೇಶ್ವರ ಲಿಂಗದ ಮೆಟ್ಟಿಲುಗಳಿಗೆ ಕಿವಿ ಕೊಟ್ಟು ಆಲಿಸಿದ್ರೆ ೯ ರೀತಿಯ ನಾದ ಕೇಳಿ ಬರುತ್ತಂತೆ.

Karnataka Temples Special Story jalakanteshwara temple kalasipalya Bangalore
Image Credit to Original Source

ಇದನ್ನೂ ಓದಿ : ಬೆಣ್ಣೆ ಸೇವೆ ಮಾಡಿದ್ರೆ ಮಕ್ಕಳ ಭಾಗ್ಯ – ಇಲ್ಲಿನ ಕೃಷ್ಣನಿಗೆ ಮರುಳಾಗಿದ್ದರು ಪುರಂದರ ದಾಸರು

ಅಂದಹಾಗೆ ಇಷ್ಟು ವಿಸ್ಮಯವಿರುವ ಈ ದೇವಾಲಯವಿರೋದು ಎಲ್ಲಿ ಅಂದ್ರೆ ಕರ್ನಾಟಕದ ರಾಜ್ಯಧಾನಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ. ಕೋಟೆ ಶ್ರೀ ಜಲಕಂಠೇಶ್ವರ ಸ್ವಾಮಿ ದೇವಾಲಯ ಅಂತ ಇಲ್ಲಿ ಈ ದೇವಾಲಯವನ್ನು ಕರೆಯಲಾಗುತ್ತೆ. ಮೊದಲು ಕಲಾಸಿಪಾಳ್ಯವನ್ನು ಇದನ್ನು ಕೈಲಾಸಪುರ ಅಂತ ಕರೆಯಲಾಗುತ್ತಿತ್ತು. ಮುಂದೆ ಅದೇ ಅಪಭ್ರಂಶವಾಗಿ ಕಲಾಸಿ ಪಾಳ್ಯ ಅಂತ ಕರೆಯಲಾಗುತ್ತಿದೆ ಅಂತೆ. ಇಲ್ಲಿಗೆ ತೆರಳೋಕೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸಾಕಷ್ಟು ಬಸ್ ಗಳಿವೆ
Karnataka Temples Special Story jalakanteshwara temple kalasipalya Bangalore

Comments are closed.