Kolluru shri mukambika: ಅಭಯ ಹಸ್ತಗಳಿಂದ ಭಕ್ತರನ್ನು ಆಶಿರ್ವದಿಸುವ ದೇವಿ ಮೂಕಾಂಬಿಕೆ

(Kolluru shri mukambika) ಈ ಹಿಂದೆ ನಿಮಗೆ ಗಣಪತಿ ಕ್ಷೇತ್ರದ ಬಗ್ಗೆ, ಶಕ್ತಿಪೀಠಗಳ ಬಗ್ಗೆ ನನಗೆ ತಿಳಿದಷ್ಟು ಮಾಹಿತಿಗಳನ್ನು ತಿಳಿಸಿದ್ದೇನೆ. ಇಂದು ನಿಮಗೆ ಉಡುಪಿ ಜಿಲ್ಲೆಯ ಇನ್ನೊಂದು ಶಕ್ತಿ ಪೀಠದ ಬಗ್ಗೆ ತಿಳಿಸಲು ಹೊರಟಿದ್ದೇನೆ. ಇದು ಪರಶುರಾಮ ಸೃಷ್ಟಿಯಲ್ಲಿ ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ದೇವಾಲಯವಾಗಿದ್ದು, ದಕ್ಷಿಣ ಕನ್ನಡದ ಉಡುಪಿ ಜಿಲ್ಲೆಯ ಏಳು ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಇದು ಒಂದು ಶಕ್ತಿಯ ಆರಾಧನೆಯ ಕ್ಷೇತ್ರ. ದೇವಿ ಮೂಕಾಂಬಿಕೆ ಇಲ್ಲಿಯ ಶಕ್ತಿ ದೇವತೆ. ಮೂಕಾಸುರ (ಕೌಂಹಾಸುರ) ಎಂಬ ರಾಕ್ಷಸರನ್ನು ವಧಿಸಿದವಳು. ಇದೊಂದು ಪೌರಾಣಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದ್ದು, ಸ್ಕಂದ ಪುರಾಣದಲ್ಲಿ ಶ್ರೀ ಕ್ಷೇತ್ರದ ಮಹಿಮೆಯನ್ನು ವಿವರಿಸಲಾಗಿದೆ.

ಸ್ಕಂದ ಪುರಾಣದ ಉಲ್ಲೇಖ(Kolluru shri mukambika)ವಾಗಿರುವಂತೆ, ಕೌಂಹಾಸುರ ಎನ್ನುವ ರಾಕ್ಷಸನು ತನಗೆ ಯಾವುದೇ ಜೀವರಾಶಿಗಳಿಂದ ಮರಣ ಬರಬಾರದೆಂದು ವರವನ್ನು ಶಿವನಲ್ಲಿ ಕೇಳುವ ಸಂದರ್ಭದಲ್ಲಿ ವಾಗ್ದೇವಿಯು ಅವನು ಶಿವನಲ್ಲಿ ಏನನ್ನು ಕೇಳಲಾಗದಂತೆ ಮೂಕಳಾಗಿಸಿದಳು. ಅದರಂತೆ ಅವನು ಮೂಕ (ಮೂಗ) ರಾಕ್ಷಸನಾದನು. ಇದರಿಂದ ಕುಪಿತನಾದ ಮೂಕಾಸುರನು ದೇವತೆಗಳ ಮೇಲೆ ಸೇಡು ತೀರಿಸಿಕೊಳ್ಳಲು ನಿಶ್ಚಯಿಸಿದನು. ದೇವತೆಗಳು ಇವನ ಕಿರುಕುಳ ತಡೆಯಲಾರದೆ ದೇವಿಯ ಮೊರೆಹೋದರು. ದೇವಿಯು ಸಕಲ ದೇವತೆಗಳ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡು ಮೂಕಾಸುರನನ್ನು ವಧಿಸಿ ಲಿಂಗೈಕ್ಯವಾಗಿ ಮೂಕಾಂಬಿಕೆ (Kolluru shri mukambika) ಎಂಬ ಹೆಸರನ್ನು ಗಳಿಸಿದಳು.

Kolluru shri mukambika: Goddess Mookambike who blesses the devotees with abhaya hasta hands

ಮೂಕಾಂಬಿಕೆಯು ಒಂದು ಆದಿಶಕ್ತಿಯ ರೂಪ. ಅಂದರೆ ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾ ಸರಸ್ವತಿಯರನ್ನು ಒಳಗೊಂಡವಳು. ಈ ರೀತಿಯ ಆದಿಶಕ್ತಿಯನ್ನು ಕಾಣಬರುವುದು ಈ ಕ್ಷೇತ್ರದಲ್ಲಿ ಮಾತ್ರ. ಉದ್ಭವಲಿಂಗವಾಗಿರುವ ಮಾಕಾಂಬಿಕೆಯು ಬ್ರಹ್ಮ, ಶಿವ ಹಾಗೂ ವಿಷ್ಣು ಬಲ ಭಾಗದಲ್ಲಿಯೂ ಹಾಗೂ ಎಡಭಾಗ ಎಂದು ಪ್ರತ್ಯೇಕಿಸುತ್ತದೆ. ಲಿಂಗದ ಎಡಭಾಗವು ಶಕ್ತಿಯ ಸಂಕೇತ ಹಾಗೂ ಅದರ ಬಲ ಭಾಗವು ಶಿವನನ್ನು ಪ್ರತಿನಿಧಿಸುತ್ತದೆ. ದೇವಿ ಮೂಕಾಂಬಿಕೆಯು ಶ್ರೀ ಚಕ್ರದ ಮೇಲೆ ನೆಲೆಸಿದ್ದಾಳೆ. ಕೋಲ ಋಷಿಗಳು ಹಸುವು ಲಿಂಗಕ್ಕೆ ತನ್ನ ಕೆಚ್ಚಲಿನ ಹಾಲಿನಿಂದ ಅಭಿಷೇಕಿಸುವುದನ್ನು ಕಂಡು ಚಕಿತರಾದರು. ನಂತರ ಅವರು ಅದನ್ನು ಪೂಜಿಸಲು ಆರಂಭಿಸಿದರು. ಹಸುವಿನ ಗೊರಸಿನ ಚಿಹ್ನೆಯನ್ನು ಈ ಲಿಂಗದಲ್ಲಿ ಕಂಡು ಆಶ್ಚರ್ಯ ಚಕಿತರಾದರು. ನಂತರ ಅವರು ಅದನ್ನು ಪೂಜಿಸಲು ಆರಂಭಿಸಿದರು. ಹಸುವಿನ ಗೊರಸಿನ ಚಿಹ್ನೆಯನ್ನು ಈ ಲಿಂಗದಲ್ಲಿ ನಾವು ಕಾಣುವುದರಿಂದ ಈ ಲಿಂಗವು ವಿಶಿಷ್ಟವಾದ ಶಕ್ತಿಯನ್ನು ಹೊಂದಿರುವ ಲಿಂಗವೆನ್ನುವುದಕ್ಕೆ ಸಾಕ್ಷಿಯಾಗಿದೆ. ಆದಿಶಂಕರರು ತಪಸ್ಸಿನಲ್ಲಿದ್ದಾಗ ದೇವಿಯು ಅವರ ದೃಷ್ಟಿಯಲ್ಲಿ ಕಾಣಸಿಕೊಂಡಿದ್ದರಿಂದಾಗಿ ಆದಿಶಂಕರರು ಶ್ರೀ ಚಕ್ರದ ಯಂತ್ರದ ಮೇಲೆ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿದ್ದಾರೆ ಎನ್ನಲಾಗುತ್ತದೆ. ದೇವಸ್ಥಾನದ ಒಳಭಾಗದಲ್ಲಿ ಈಗಲೂ ಶಂಕರಾಚಾರ್ಯರ ಪೀಠವಿದ್ದು, ಆದಿ ಶಂಕರರು ರೂಪಿಸಿರುವ ನಿಯಯಾಗಮ ಪದ್ದತಿಯಂತೆ, ಪೂಜೆಯನ್ನು ಕೈಗೊಳ್ಳಲಾಗುತ್ತಿದೆ.

Kolluru shri mukambika: Goddess Mookambike who blesses the devotees with abhaya hasta hands

ಇಲ್ಲಿ ದೊರೆತಿರುವ ಪ್ರಾಚೀನ ಶಾಸ್ತ್ರಗಳಿಂದಲೂ, ಶಾಸನಗಳು ಮತ್ತು ಪುರಾವೆಗಳ ಕಾರಣವಾಗಿ ೧೦ ನೇ ಶತಮಾನದಿಂದ ದೇವಸ್ಥಾನವು ದೇವಿ ಶಕ್ತಿಯ ಆರಾಧನಾ ಕೇಂದ್ರವಾಗಿದೆ. ಇಲ್ಲಿ ದೊರಕಿರುವ ಕ್ರಿ.ಶ.೧೪೮೧ ರ ಪ್ರಾಚೀನ ಶಾಸನದಲ್ಲಿ ದೇವಿ ಶಕ್ತಿಯ ಮೂಲದ ಬಗ್ಗೆ ವಿವರಿಸಲಾಗಿದೆ. ಶ್ರೀ ಮೂಕಾಂಬಿಕಾ ದೇವಿಯು ಲಿಂಗದ ರೂಪದಲ್ಲಿರುವ ಆದಿಶಕ್ತಿ, ಸೃಷ್ಟಿಕರ್ತೆ, ಸಕಲ ಜೀವಗಳ ರಕ್ಷಕಿ ಎಂದು ಶಾಸನದಲ್ಲಿ ವಿವರಿಸಲಾಗಿದೆ.

ಗರ್ಭಗುಡಿಯ ಶಿಕರವು ಶತಮಾನಗಳ ಹಿಂದೆ ಸ್ಥಳೀಯ ರಾಜನಿಂದ ದಾನವಾಗಿ ನೀಡಲ್ಪಟ್ಟ ಚಿನ್ನದಿಂದಾವೃತವಾಗಿದೆ. ಪರಿವಾರ ದೇವತೆಗಳು ದೇವಿಯ ಗರ್ಭಗುಡಿಯ ಸುತ್ತಲೂ ನೆಲೆಸಿವೆ. ಅವುಗಳಲ್ಲಿ ಪ್ರಮುಖವಾದುದು ಶ್ರೀ ವೀರಭದ್ರ ದೇವರು, ಪರಿವಾರ ದೇವತೆಗಳಾದ ಸುಬ್ರಹ್ಮಣ್ಯ, ದಶಭುಜ ಗಣಪತಿ, ಪಂಚಮುಖಿ ಗಣಪತಿ, ಆಂಜನೇಯ, ಚಂದ್ರಮೌಳೇಶ್ವರ ಹಾಗೂ ಗೋಪಾಲ ಕೃಷ್ಣರ ಗುಡಿಗಳು. ಪಂಚಲೋಹದ ಮೂಕಾಂಬಿಕೆ ವಿಗ್ರಹವು ಬಹಳ ಆಕರ್ಷಕವಾಗಿದ್ದು, ೪ ಕೈಗಳನ್ನು ಹೊಂದಿದ್ದು, ಮೇಲ್ಭಾಗದ ಎರಡು ಕೈಗಳಲ್ಲಿ ಶಂಖ ಚಕ್ರವನ್ನು ಹಿಡಿದಿದ್ದು, ಮತ್ತೆರೆಡು ಕೈಗಳು ವರದ ಅಭಯ ಹಸ್ತಗಳಿಂದ ಭಕ್ತರನ್ನು ಆಶಿರ್ವದಿಸುವಂತೆ ಕಾಣುತ್ತಿದೆ.

Kolluru shri mukambika: Goddess Mookambike who blesses the devotees with abhaya hasta hands

ಮೂಕಾಂಬಿಕೆಯ (Kolluru shri mukambika) ಗುಡಿಯ ಸುತ್ತ ನೆಲೆಸಿರುವ ಗುಡಿಗಳು
ಶ್ರೀ ಚೌಡೇಶ್ವರಿ ದೇವಸ್ಥಾನ
ಶ್ರೀ ಸಂಪ್ರೆ ಗಣಪತಿ ದೇವಸ್ಥಾನ
ಶ್ರೀ ಸಿದ್ದೇಶ್ವರ ದೇವಸ್ಥಾನ
ಶ್ರೀ ಬಲಮುರಿ ಬೀದಿ ಗಣಪತಿ ದೇವಸ್ಥಾನ
ಶ್ರೀ ಗೋಪಾಲ ಕೃಷ್ಣ ದೇವಸ್ಥಾನ
ಶ್ರೀ ಮಾರಿಯಮ್ಮ ದೇವಸ್ಥಾನ
ಶ್ರೀ ಗಡಿ ಮಾಸ್ತಿಯಮ್ಮ ದೇವಸ್ಥಾನ

ದೇವಾಲಯದಲ್ಲಿ (Kolluru shri mukambika) ನಡೆಯುವ ಹಬ್ಬಗಳು ಮತ್ತು ಉತ್ಸವಗಳು
ನವರಾತ್ರಿ ಉತ್ಸವ
ನವರಾತ್ರಿ ಉತ್ಸವದ ದಿನಗಳಂದು ವಿಶೇಷ ಪೂಜೆಗಳ ಜೊತೆಗೆ ಶತ ರುದ್ರಾಭಿಷೇಕಗಳು ನಡೆಯುತ್ತದೆ. ರಾತ್ರಿ ಕಲ್ಪೋಕ್ತ ನವರಾತ್ರಿ ವಿಶೇಷ ಪೂಜೆ ನಡೆಯುತ್ತದೆ. ೯ ದಿನಗಳ ಕಾಲ ನಡೆಯುವ ನವರಾತ್ರಿಯಲ್ಲಿ ದೇವಿಗೆ ನವದುರ್ಗಾ ಅಲಂಕಾರಗಳು ನಡೆಯುತ್ತವೆ. ಮಹಾನವಮಿ ದಿನ ರಥವನ್ನು ಅಲಂಕರಿಸಿ ಅದರಲ್ಲಿ ದೇವಿಯನ್ನು ಕೂರಿಸಿ ರಥೋತ್ಸವವನ್ನು ನಡೆಸುತ್ತಾರೆ. ೯ ದಿನಗಳ ಕಾಲ ಚಂಡಿ ಪಾರಾಯಣ ಹಾಗೂ ಚಂಡಿಕಾ ಹೋಮ ನಡೆಸಲಾಗುತ್ತದೆ. ನವರಾತ್ರಿ ಕಾರ್ಯಕ್ರಮವು ವಿಜಯದಶಮಿಯಂದು ಕೊನೆಗೊಳ್ಳುತ್ತದೆ. ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿ ದಿನ ಸಾವಿರಾರು ಭಕ್ತರು “ಅಕ್ಷರಭ್ಯಾಸ ಸೇವೆ” (ವಿದ್ಯಾಭ್ಯಾಸದ ಆರಂಭದ ದಿನ) ಯನ್ನು ಸರಸ್ವತಿ ಮಂಟಪದಲ್ಲಿ ಮಾಡುತ್ತಾರೆ.

Kolluru shri mukambika: Goddess Mookambike who blesses the devotees with abhaya hasta hands

ದೀಪಾವಳಿ ಉತ್ಸವ
ದೀಪಾವಳಿಯಲ್ಲಿ ಮಾಮೂಲಿನಂತೆ ಸೇವೆಗಳು ಮತ್ತು ವಿಶೇಷ ಪೂಜೆಗಳು (ವಿಶೇಷ) ಮಂಗಳಾರತಿಗಳು ಎಂದಿನಂತೆ ಮೂರು ದಿನಗಳು ನಡೆಯುತ್ತವೆ. ಕಾರ್ತಿಕ ಹುಣ್ಣಿಮೆ ಮತ್ತು ಕಾರ್ತಿಕ ಅಮಾವಾಸ್ಯೆಯಂದು ದೀಪೋತ್ಸವವು ತುಂಬಾ ವಿಜೃಂಭಣೆಯಿಂದ ನಡೆಯುತ್ತದೆ.

ವಾರ್ಷಿಕೋತ್ಸವ (ವರ್ಷದ ಜಾತ್ರೆ)
ವಾರ್ಷಿಕೋತ್ಸವವು ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ೯ ದಿನಗಳ ಕಾಲ ನಡೆಯುತ್ತದೆ. ನಿತ್ಯ ಪೂಜೆ, ವಿಶೇಷ ಬಲಿಗಳು ನಡೆಯುತ್ತವೆ. ಶತರುದ್ರಾಭಿಷೇಕವು ಮಧ್ಯಾಹ್ನ ನಡೆಯುತ್ತದೆ. ಸಂಜೆ ೫:೩೦ ಮತ್ತು ರಾತ್ರಿ ೧೦:೦೦ ಗಂಟೆಗೆ ಬೀದಿ ಉತ್ಸವಗಳು ನಡೆಯುತ್ತವೆ. ಎಂಟನೇ ದಿನ ಶ್ರೀ ಮಹಾ ರಥೋತ್ಸವವು ನಡೆಯುತ್ತದೆ. ಮಾರನೇ ದಿನ ಓಕುಳಿ ಉತ್ಸವ ಮತ್ತು ತೆಪ್ಪೋತ್ಸವವು (ಸೌಪರ್ಣಿಕಾ ನದಿಯಲ್ಲಿ) ನಡೆಯುತ್ತದೆ. ಆ ದಿನ ಮಹಾ ರಥೋತ್ಸವದಲ್ಲಿ ದೊಡ್ಡ ಕಟ್ಟೆಯಲ್ಲಿ ದೇವಿಯನ್ನು ಕೂರಿಸಿ ಉತ್ಸವ ಮಾಡುತ್ತಾರೆ.

Kolluru shri mukambika: Goddess Mookambike who blesses the devotees with abhaya hasta hands

ಜನ್ಮಾಷ್ಟಮಿ (ಶ್ರೀದೇವಿ ಅವತಾರ ತಾಳಿದ ದಿನ)
ಜನ್ಮಾಷ್ಟಮಿ ದಿನ ಎಂದಿನಂತೆ ನಿತ್ಯ ಪೂಜೆ ನಂತರ ಶತರುದ್ರಾಭಿಷೇಕವು ಮಧ್ಯಾಹ್ನ ನಡೆಯುತ್ತದೆ. ಈ ದಿನದ ನಂತರ ಕೃಷ್ಣಾಷ್ಟಮಿ ಮತ್ತು ಶಿವರಾತ್ರಿ ಹೊರತುಪಡಿಸಿ ಇತರ ಎಲ್ಲ ಉತ್ಸವಗಳು ನವರಾತ್ರಿ ಬರುವವರೆಗೆ ನಡೆಯುವುದಿಲ್ಲ. ಅದರೆ ಈ ಅವಧಿಯಲ್ಲಿ ಮಾಮುಲಿನಂತೆ ಬಲಿ ಉತ್ಸವಗಳು ನಡೆಯುತ್ತವೆ.

ಅಷ್ಟಭಂದ ಬ್ರಹ್ಮ ಕಲಶೋತ್ಸವ
ಅಷ್ಟಬಂಧ ಬ್ರಹ್ಮ ಕಲಶೋತ್ಸವವು ೧೨ ವರ್ಷಕೊಮ್ಮೆ ನಡೆಯುತ್ತದೆ. ಲಿಂಗಕ್ಕೆ ೧೦೦೮ ಕಳಶದ (೧೦೦೦ ಬೆಳ್ಳಿಯ ಕಳಶ ಮತ್ತು ೮ ಚಿನ್ನದ ಕಳಶ) ಪವಿತ್ರ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ. ಎಲ್ಲಾ ಸೇವೆಗಳು, ಕಾರ್ಯಕ್ರಮಗಳು, ಬ್ರಹ್ಮ ಕಲಶೋತ್ಸವದ ಜಾತ್ರೆಯಂದು ನಡೆಯುತ್ತದೆ.

ಇದನ್ನೂ ಓದಿ : Kodi Festival: ಕೊಡಿ ಹಬ್ಬದ ಸಂಭ್ರಮದಲ್ಲಿ ಕೋಟೇಶ್ವರದ ಕೋಟಿಲಿಂಗೇಶ್ವರ ಸ್ವಾಮಿ

ಚಂಡಿಕಾ ಹೋಮ
ಈ ದೇವಸ್ಥಾನದಲ್ಲಿ ಚಂಡಿಕಾಹವನವು ಭಕ್ತರು ನಡೆಸುವ ವಿಶೇಷ ಸೇವೆಯಾಗಿರುತ್ತದೆ. ಶ್ರೀ ದೇವಿ ಮಹಾತ್ಮೆಯ ೭೦೦ ಶ್ಲೋಕಗಳನ್ನು ಓದಿ ಮತ್ತು ೭೦೦ ಮಂತ್ರಗಳನ್ನು ಹೇಳುತ್ತಾ, ೭೦೦ ಬಾರಿ ಪಾಯಸವನ್ನು ಅಗ್ನಿಗೆ ಅರ್ಪಿಸುತ್ತಾರೆ. ಈ ಸೇವೆಯು ಸುಮಾರು ೨ ಗಂಟೆಯದಾಗಿದ್ದು ೬ ರಿಂದ ೭ ಜನ ಪುರೋಹಿತರು ನೆರವೇರಿಸುತ್ತಾರೆ. ಪ್ರತಿದಿನ ದೇವಸ್ಥಾನದಲ್ಲಿ ೩ ರಿಂದ ೯ ಚಂಡಿಕಾ ಹೋಮ ಮಾಡಲಾಗುವುದು.

Kolluru shri mukambika: Goddess Mookambike who blesses the devotees with abhaya hasta hands

ಮಂಗಳೂರು, ಉಡುಪಿ ಮತ್ತು ಕುಂದಾಪುರಗಳಿಂದ ರಸ್ತೆಯಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು (Kolluru shri mukambika) ಸಂಪರ್ಕವನ್ನು ಹೊಂದಿದ್ದು, ಇಲ್ಲಿಗೆ ನೇರ ಬಸ್ಸುಗಳಿವೆ.

(Kolluru shri mukambika) Earlier I have told you as much information as I know about Ganapati Kshetra, Shaktipeeths. Today I am going to tell you about another Shakti Peetha of Udupi district. It is a temple founded by Sri Adisankaracharya in Parasurama Srishti and is one of the seven famous places in Udupi district of Dakshina Kannada.

Comments are closed.