Kote Seetharamanjaneya Temple : ಆಂಜನೇಯ , ಇವನನ್ನು ಅರಿಯದವರು ಯಾರು ? ರಾಮ ಭಕ್ತನಾಗಿ ಭಕ್ತಿಯ ಸಾರವನ್ನು ಸಾರಿದವನು . ತಾನು ಹೇಗೆ ಭಕ್ತನೋ ಅಂತೆಯೇ, ತನಗೆ ಭಕ್ತರಾದವರನ್ನು ನಿಷ್ಟೆಯಿಂದ ಕಾಯುತ್ತಾನೆ ಈ ಭಕ್ತವತ್ಸಲ. ದುಷ್ಟ ಶಕಿಯನ್ನು ನಾಷ ಮಾಡುವ ಶಕ್ತಿ ಅನ್ನಿಸಿಕೊಂಡಿರೋ ಹನುಮನನ್ನು ಮೊದಲು ಪೂಜಿಸಿದ್ದು ಎಲ್ಲಿ ಅಂತ ಗೊತ್ತಾ? ಅದು ಕರ್ನಾಟಕದಲ್ಲೇ ಅಂದ್ರೆ ನೀವು ಆಶ್ಚರ್ಯ ಪಡದೇ ಇರೋದಿಲ್ಲ ?

ಹೌದು ಇದು ಆಂಜನೇಯನ್ನು ದೇವರಾಗಿ ಮೊದಲ ಬಾರಿ ಪೂಜೆ ಮಾಡಿದ ಸ್ಥಳ . ಇದು ದುರ್ವಾಸರು ನೆಲೆಗೊಂಡಿದ್ದ ಕ್ಷೇತ್ರ. ಇಲ್ಲಿ ಪೂಜೆ ಮಾಡಿದ್ರೆ ಸಕಲ ಇಷ್ಟಾರ್ಥಗಳು ಈಡೇರುತ್ತೆ. ಅದರಲ್ಲೂ ನಾಗ ದೋಷ ಇದ್ದರಂತು ದೇವರ ದರ್ಶನ ಮಾಡಿ, ದೇವರ ಅಭಿಷೇಕದ ತೀರ್ಥವನ್ನು ಸೇವಿಸಿದ್ರೆ, ನಾಗ ದೋಷ ತಕ್ಷಣ ಪರಿಹಾರ ಆಗುತ್ತೆ ಅಂತಾರೆ ಭಕ್ತರು . ಹೀಗಾಗಿ ಸಾವಿರಾರು ಮಂದಿ ಭಕ್ತರು ಇಲ್ಲಿಗೆ ಆಗಮಿಸಿ ದೇವರ ಆಶೀರ್ವಾದ ಪಡೆಯುತ್ತಾರೆ.
ಇಲ್ಲಿ ಆಂಜನೇಯ ಬಾಲ ರೂಪದಲ್ಲಿ ಕಾಣಿಸಿ ಕೊಂಡಿದ್ದಾನೆ . ಅದರಲ್ಲೂ ಕೈಯಲ್ಲಿ ಬೆಟ್ಟವನ್ನು ಹಿಡಿದು ಪುಟ್ಟ ಬಾಲಕನಂತೆ ಹನುಮಂತ ಕಂಗೊಳಿಸುತ್ತಿದ್ದಾನೆ . ಇಂತಹ ಬಾಲರೂಪದ ವಿಗ್ರಹವಿರೋದು ಈ ದೇವಾಲಯದಲ್ಲಿ ಮಾತ್ರ ಅನ್ನೋದೇ ವಿಶೇಷ.. ಇದಕ್ಕೆ ಕಾರಣ ಇಲ್ಲಿನ ಸ್ಥಳಪುರಾಣ .ಇಲ್ಲಿನ ಸ್ಥಳ ಪುರಾಣದ ಪ್ರಕಾರ ಇದು ಹನುಮನೇ ಋಷಿ ದೂರ್ವಾಸರಿಗೆ ದರ್ಶನ ನೀಡಿದಂತಹ ಸ್ಥಳ.

ಇಲ್ಲಿ ತುಂಗಾ ನದಿಯು ಹರಿಯುತ್ತಿದ್ದು. ಅಲ್ಲೇ ಋಷಿ ದುರ್ವಾಸರು ನೆಲೆ ನಿಂತು ತಪಸ್ಸನ್ನು ಆಚರಿಸುತ್ತಿದ್ದರು. ರಾಮ ರಾವಣರ ಯುದ್ದ ನಡೆಯುತ್ತಿದ್ದ ಸಮಯ. ಒಂದು ದಿನ ಆಂಜನೇಯ ಸ್ವಾಮಿ ಸಂಜೀವಿನಿ ಬೆಟ್ಟವನ್ನು ತೆಗೆದುಕೊಂಡು ಬರುತ್ತಿದ್ದಾಗ, ಸೂರ್ಯನ ಕಿರಣಗಳಿಗೆ ಅಡ್ಡವಾಗಿ ಯಾವುದೋ ವಸ್ತು ಇರುವಂತೆ ತಪಸ್ಸಿನಲ್ಲಿದ್ದ ದುರ್ವಾಸರಿಗೆ ಭಾಸವಾಯತು.
ಆಗ ನೋಡಿದಾಗ ಬೆಟ್ಟವನ್ನು ಹಿಡಿದ ಹನುಮಂತ ಕಾಣಿಸಿಕೊಂಡ. ಇದನ್ನು ನೋಡಿ ಭಕ್ತಿಯಿಂದ ಹನುಮಂತನಿಗೆ ದರ್ಶನವನ್ನು ನೀಡುವಂತೆ ಕೇಳಿಕೊಂಡರು. ಆಗ ಬೃಹತ್ ದೇಹಿಯಾಗಿ ದುರ್ವಾಸರಿಗೆ ದರ್ಶನ ನೀಡಿದ. ಆಗ ಅವರು ತನಗೆ ಬಾಲ ರೂಪದಲ್ಲಿ ದರ್ಶನ ನೀಡುವಂತೆ ಬೇಡಿಕೊಂಡರು. ಆಗ ಒಪ್ಪಿದ ಹನುಮಾನ್ ಪುಟ್ಟ ಬಾಲಕ ನಾಗಿ ದರ್ಶನ ನೀಡಿದ . ಅಲ್ಲೇ ದುರ್ವಾಸರು ಹನುಮನಿಗೆ ಮೊದಲ ಬಾರಿ ಪೂಜೆ ಗೈದರು.

ಆತ ತೆರಳಿದ ನಂತರವೂ ಆತ ನಿಂತ ಬಂಡೆಯ ಮೇಲೆ ಬಾಲ ಹನುಮನ ನೆರಳು ಹಾಗೇ ಇತ್ತು . ಅದನ್ನು ಕಂಡ ದುರ್ವಾಸರು ಯಂತ್ರ ರೂಪದಲ್ಲಿ ಬಾಲ ಹನುಮನನ್ನು ಸ್ಥಾಪಿಸಿ, ಪೂಜಿಸಲು ಆರಂಭಿಸಿದರು..ಕೆಲವರ್ಷಗಳ ನಂತರ ಈ ಯಂತ್ರವನ್ನು ಅಲ್ಲೇ ಬಿಟ್ಟು ದುರ್ವಾಸರು ತಪಸ್ಸಿಗಾಗಿ ಹಿಮಾಲಯಕ್ಕೆ ಹೋದ್ರು.
ಇದನ್ನೂ ಓದಿ : ಇಲ್ಲಿರೋ ಒಂದೊಂದು ದೇವರು ನೀಡ್ತಾರೆ ಒಂದೊಂದು ಫಲ – ಜಲಕಂಠೇಶ್ವರನ ಸನ್ನಿಧಾನದಲ್ಲಿ ಸರ್ವ ಕಷ್ಟ ಪರಿಹಾರ
ಇದಾದ ನಂತರ ದ್ವಾಪರ ಕಳೆದು ಕಲಿಗಾಲದಲ್ಲಿ ಪಾಂಡವರ ವಂಶದ ಜನಮೇಜ ರಾಜನು, ತಾನು ಮಾಡಿದ ತಾನು ಮಾಡಿದ ಸರ್ಪ ಯಾಗದ ಪ್ರಾಯಶ್ಚಿತ ಕ್ಕಾಗಿ ತುಂಗಾ ನದಿಯ ಬಳಿ ಬಂದ. ಆಗ ಅಲ್ಲಿ ಒಂದು ಬಂಡೆಯ ಬಳಿಯಲ್ಲಿನ ಹುತ್ತದಿಂದ ರಾಮ ನಾಮ ಕೇಳಿ ಬಂದಿತು . ಅದನ್ನು ತೆರವು ನೋಡಿದಾಗ, ಅಲ್ಲಿ ಈ ಯಂತ್ರ ಕಾಣಿಸಿಕೊಂಡಿತು.
ಅದರಿಂದ ಮಂತ್ರಮುಗ್ದನಾದ ಜನಮೇಜಯ ರಾಜನು ಯಂತ್ರದಲ್ಲಿ ಇರುವಂತ ಬಾಲ ಹನುಮನ ಮೂರ್ತಿಯನ್ನು ಕೆತ್ತಿಸಿ, ಯಂತ್ರ ಸಮೇತವಾಗಿ ಸ್ಥಾಪಿಸಿ ಪೂಜಿಸಲು ಆರಂಭಿಸಿದನು. ಆಗ ಆತನಿಗೆ ಇದ್ದ ಸರ್ಪದೋಷ ನಿವಾ

ರಣೆ ಆಯಿತಂತೆ . ಇದರ ನೆನಪಿಗಾಗಿ ವಿಗ್ರಹದ ತಳದಲ್ಲಿ ಸರ್ಪದ ಕೆತ್ತನೆಯನ್ನು ಕಾಣಬಹುದು.
ಅಂದು ಚಿಕ್ಕದಾಗಿ ನಿರ್ಮಾಣ ಮಾಡಿದ ಈ ದೇವಾಲಯವನ್ನು, ಮುಂದೆ ಹೊಯ್ಸಳ ದೊರೆ ನರಸಿಂಹ ಬಲ್ಲಾಳ 800 ವರ್ಷದ ಹಿಂದೆ ಜೀರ್ಣೋದ್ದಾರ ಮಾಡಿದ್ದರು. ನಂತರ ಬಂದ ಕೆಳದಿ ದೊರೆ ಶಿವಪ್ಪನಾಯಕರು ದೇವಾಲಯವನ್ನು ಅಭಿವೃದ್ಧಿ ಪಡಿಸಿದ್ರು ಅನ್ನೋ ಮಾತಿದೆ. ಅಲ್ಲೇ ಪಕ್ಕದಲ್ಲಿ ಶಿವಪ್ಪ ನಾಯಕರ ಕೋಟೆ ಇರೋದ್ರಿಂದ ಇದನ್ನು ಕೋಟೆ ಸೀತಾರಾಮಾಂಜನೇಯ ದೇವಾಲಯ (Kote Seetharamanjaneya Temple) ಅಂತ ಕರೆಯುತ್ತಾರೆ.
ಇದನ್ನೂ ಓದಿ : ರಾಜ್ಯ ಕಾಯೋ ರೂಪದಲ್ಲಿ ನೆಲೆನಿಂತಿದ್ದಾಳೆ ರಾಜ ರಾಜೇಶ್ವರಿ- ನಿಂಬೆ ದೀಪ ಬೆಳಗಿದ್ರೆ ಮನೆಮನಗಳಲ್ಲಿ ನೆಮ್ಮದಿ ಶಾಂತಿ
ಇಲ್ಲಿ ರಾಮ ಸೀತೆ ಲಕ್ಷ್ಮಣನ ವಿಗ್ರಹವನ್ನು ಕೂಡಾ ನಾವು ಕಾಣಬಹುದು. ಆದರೆ ಇದು ಹಿಂದೆಯೇ ಸ್ಥಾಪಿತವಾದ ವಿಗ್ರಹವಲ್ಲ. ಬದಲಾಗಿ 50 ರಿಂದ 60 ವರ್ಷದ ಹಿಂದೆ ಸ್ಥಾಪಿತವಾದ ವಿಗ್ರಹ . ಇದಕ್ಕೆ ಕಾರಣ ಇಲ್ಲಿನ ಹಿಂದಿನ ಅರ್ಚಕರರಾದ ಅನಂತ ರಾಮ ಅಯ್ಯಂಗಾರ್ ರು. ಅವರು ಹನುಮನ ಅತಿ ದೊಡ್ಡ ಭಕ್ತರಾಗಿದ್ರು .

ಅವರಿಗೆ ಒಂದು ಬಾರಿ ಕನಸಲ್ಲಿ ಹನುಮ ಕಾಣಿಸಿ ತನಗೆ ತನ್ನ ಪ್ರಭುವಿನೊಂದಿಗೆ ಇರಲು ಆಸೆ ಎಂದು ಹೇಳಿ ಸೂಚನೆ ನೀಡಿದನಂತೆ. ಅವನ ಆಣತಿಯಂತೆ ಅಲ್ಲಿ ರಾಮ ಸೀತೆ ಲಕ್ಷ್ಮಣನ ವಿಗ್ರಹ ಸ್ಥಾಪಿಸಿದರಂತೆ . ಈ ವಿಗ್ರಹದ ಮತ್ತೊಂದು ವಿಶೇಷವೆಂದರೆ ಇದರಲ್ಲಿ ಸೀತೆ ರಾಮನ ಬಲಬಾಗದಲ್ಲಿ ನಿಂತಿದ್ದಾಳೆ ಅನ್ನೋದು.ಇನ್ನು ಈ ದೇವಾಲಯದಲ್ಲಿ ಬಾಲರೂಪದ ಹನುಮನನ್ನು ಕಾಣೋಕೆ ಅಂತಾನೇ ದೂರ ದೂರದಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಇಲ್ಲಿ ಸಾಮಾನ್ಯವಾಗಿ ಎಪ್ರೀಲ್ ಹಾಗೂ ಮೇ ತಿಂಗಳಿನಲ್ಲಿ ಬ್ರಹ್ಮರಥೋತ್ಸವ ನಡೆಯುತ್ತೆ. ಆಗ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ಆಶೀರ್ವಾದ ಪಡೆಯುತ್ತಾರೆ. ಇನ್ನು ದೇವಾಲಯದ ವಿಳಾಸದ ಕುರಿತಾಗಿ ಹೇಳೋದಾದ್ರೆ , ಇದು ಇರೋದು ಶಿವಮೊಗ್ಗ ಪಟ್ಟಣದ ಕೋಟೆ ರೋಡ್ ನಲ್ಲಿ ಶಿವಮೊಗ್ಗ ನಗರಕ್ಕೆ ಹೋದ್ರೆ ಇಲ್ಲಿಗೂ ಒಂದು ಬಾರಿ ಭೇಟಿ ನೀಡಿ.
Kote Seetharamanjaneya Temple Shivamogga