Acne Scars : ಮೊಡವೆಯಿಂದ ಮುಖದ ಮೇಲಾದ ಕಲೆಗಳಿಗೆ ಈ ಮನೆಮದ್ದುಗಳೇ ಬೆಸ್ಟ್‌

ಈಗಿನ ಕಾಲದಲ್ಲಿ ಪ್ರತಿಯೊಬ್ಬರು ತಮ್ಮ ಮುಖ (Face) ಕಲೆ (Scars) ರಹಿತವಾಗಿ ಸುಂದರವಾಗಿ ಕಾಣಿಸಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಅನೇಕ ಕ್ರೀಮ್‌ಗಳನ್ನು ಬಳಸುತ್ತಾರೆ. ಪದೇ ಪದೇ ಪಾರ್ಲರ್‌ಗಳಿಗೆ ಭೇಟಿ ಕೊಡುತ್ತಾರೆ. ಆದರೂ ಕೆಲವರಿಗೆ ಮೊಡವೆಯ ಕಲೆಗಳಿಂದ (Acne Scars) ಮುಕ್ತಿ ಸಿಗುವುದೇ ಇಲ್ಲ. ಆ ಕಲೆಗಳು ಹೋಗುವುದಿಲ್ಲ ಎಂದು ಬೇಜಾರು, ಸಿಟ್ಟನ್ನು ಹೊರಹಾಕುತ್ತಾರೆ. ಮಾನಸಿಕವಾಗಿ ಕುಗ್ಗಿಹೋಗುವವರೂ ಇದ್ದಾರೆ. ಮೊಡವೆಯಿಂದಾದ ಕಲೆಗಳಿಗೆ ಕೆಲವು ಉತ್ತಮ ಮನೆಮದ್ದುಗಳಿವೆ. ಅವುಗಳು ಕಲೆಯನ್ನು ಮಾತ್ರ ಹೋಗಲಾಡಿಸದೇ ತ್ವಚೆಯ ಪೋಷಣೆಯನ್ನು ಮಾಡುತ್ತವೆ. ಇಲ್ಲಿ ಹೇಳಿರುವ ಮನೆ ಮದ್ದುಗಳು ನಿಮ್ಮ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಸಿಗುತ್ತವೆ. ಅವುಗಳನ್ನು ನಿಯಮಿತವಾಗಿ ಬಳಸುವುದರಿಂದ ಕಲೆಗಳನ್ನು ದೂರಮಾಡಿಕೊಳ್ಳಬಹುದು.

ಮೊಡವೆಯಿಂದಾದ ಕಲೆಗಳನ್ನು ದೂರಮಾಡುವ ಮನೆಮದ್ದುಗಳು :

ತೆಂಗಿನ ಎಣ್ಣೆ :
ತೆಂಗಿನ ಎಣ್ಣೆ ಕಲೆಗಳನ್ನು ನಿವಾರಿಸುತ್ತದೆ ಎಂಬುದು ಬಹಳ ಹಿಂದಿನಿಂದಲೂ ತಿಳಿದಿರುವ ಉಪಾಯ. ವರದಿಗಳ ಪ್ರಕಾರ ತೆಂಗಿನ ಎಣ್ಣೆಯಲ್ಲಿ ಮೊಡವೆಯ ಕಲೆಯನ್ನು ಹೋಗಲಾಡಿಸುವ ಗುಣವಿದೆ. ತೆಂಗಿನ ಎಣ್ಣೆಯು ವಿಟಮಿನ್‌ ಇ ಜೊತೆಗೆ ಆಂಟಿಬ್ಯಾಕ್ಟೀರಿಯಲ್‌, ಆಂಟಿಒಕ್ಸಿಡೆಂಟ್‌ ಮತ್ತು ಆಂಟಿಫಂಗಲ್‌ ಗುಣವನ್ನು ಹೊಂದಿದ್ದರು ತ್ವಚೆಗೆ ಉತ್ತಮವಾಗಿದೆ. ಇವುಗಳು ತ್ವಚೆಯ ಮೇಲಿನ ಕೋಶಗಳ ಅಭಿವೃದ್ದಿಗೆ ಸಹಾಯ ಮಾಡುತ್ತದೆ. ಇದರಿಂದ ಕಲೆಗಳು ಕ್ರಮೇಣ ಕಡಿಮೆಯಾಗುತ್ತದೆ. ತೆಂಗಿನ ಎಣ್ಣೆಯು ತ್ವಚೆಯ ಮೇಲಿನ ವಯಸ್ಸಿನ ಕಳೆಯನ್ನು ನಿಧಾನವಾಗಿಸುತ್ತದೆ.

ಅರಿಶಿಣ:
ಅರಿಶಿಣ ತ್ವಚೆಗೆ ಉತ್ತಮವಾಗಿದೆ. ಇದರಿಲ್ಲಿರುವ ಆಂಟಿಒಕ್ಸಿಡೆಂಟ್‌ ಮತ್ತು ಆಂಟಿ–ಇನ್‌ಫ್ಲೆಮೆಟರಿ ಗುಣವು ತ್ವಚೆಯನ್ನು ಬೆಳ್ಳಗಾಗಿಸಲು ಸಹಾಯ ಮಾಡುತ್ತದೆ. ಮತ್ತು ಕಲೆಗಳನ್ನು ಇಲ್ಲವಾಗಿಸುತ್ತದೆ. ಅದಲ್ಲದೇ, ಅರಿಶಿಣವನ್ನು ಕಣ್ಣಿನ ಸುತ್ತ ಆಗಿರುವ ಕಪ್ಪು ಕಲೆಗಳನ್ನು ನಿವಾರಣೆಗೂ ಬಳಸುತ್ತಾರೆ. ಒಂದು ಚಮಚ ಹಾಲಿಗೆ ಒಂದು ಚಿಟಿಕೆ ಅರಿಶಿಣ ಸೇರಸಿ. ಅದಕ್ಕೆ ಎರಡು ಚಮಚ ಜೇನುತುಪ್ಪ, ಮತ್ತು ಒಂದು ಚಮಚ ಲಿಂಬು ರಸ ಸೇರಿಸಿ. ಇದನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿ. ಒಣಗಿದ ನಂತರ ನೀರಿನಿಂದ ಮುಖ ತೊಳೆದುಕೊಳ್ಳಿ.

ಟೀ ಟ್ರೀ ಎಣ್ಣೆ :
ಟೀ ಟ್ರೀ ಎಣ್ಣೆಯಲ್ಲಿರುವ ಆಂಟಿ–ಇನ್‌ಫ್ಲೆಮೆಟರಿ ಮತ್ತು ಆಂಟಿಬ್ಯಾಕ್ಟೀರಿಯಾ ಗುಣವು ಮೊಡವೆಗಳ ಚಿಕಿತ್ಸೆಗೆ ಉತ್ತಮವಾಗಿದೆ. ಈ ಎಣ್ಣೆಯು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದನ್ನು ಯಾವುದೇ ರೀತಿಯ ತ್ವಚೆಯವರು ಬಳಸಬಹುದು. ಇದು ಮೊಡವೆಯ ಕಲೆಯನ್ನು ಕಡಿಮೆ ಮಾಡುತ್ತದೆ. ಎರಡರಿಂದ ಮೂರು ಹನಿ ಟೀ ಟ್ರೀ ಎಣ್ಣೆಯನ್ನು ಒಂದು ಕಾಟನ್‌ ಬಾಲ್‌ ಮೇಲೆ ಹಾಕಿ, ಅದನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿ. ಇದನ್ನು ನಿಯಮಿತವಾಗಿ ಹಚ್ಚುವುದರಿಂದ ಪರಿಣಾಮವು ಬಹು ಬೇಗನೆ ಸಿಗುತ್ತದೆ.

ದ್ರಾಕ್ಷಿ ಹಣ್ಣು (ಗ್ರೀನ್‌ ಗ್ರೇಪ್ಸ್‌) :
ಒಂದು ಬಟ್ಟಲಿನಷ್ಟು ಹಸಿರು ದ್ರಾಕ್ಷಿ ಹಣ್ಣುಗಳನ್ನು ತೆಗೆದುಕೊಳ್ಳಿ. ಅದರ ಮೇಲೆ ನೀರು ಮತ್ತು ಒಂದು ಚಮಚ ಅಲಮ್‌ ಹಾಗೂ ಒಂದು ಚಮಚ ಉಪ್ಪು ಸೇರಿಸಿ. ಅದನ್ನು ಫಾಯಿಲ್‌ (Foil) ನಲ್ಲಿ ಸುತ್ತಿ ಓವನ್‌ನಲ್ಲಿ 15 ನಿಮಷಗಳವರೆಗೆ ಬೇಕ್‌ ಮಾಡಿ. ನಂತರ ಅದನ್ನು ಕಿವಿಚಿ ರಸ ತೆಗೆಯಿರಿ. ಅದನ್ನು ಕಲೆಗಳಿರುವ ಜಾಗದಲ್ಲಿ ಅಥವಾ ಪೂರ್ತಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಡಿ ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮುಲ್ತಾನಿ ಮಿಟ್ಟಿ:
ನಮೆಗಲ್ಲರಿಗೂ ತಿಳಿದಿರುವಂತೆ ಮುಲ್ತಾನಿ ಮಿಟ್ಟಿಯಿಂದ ತ್ವಚೆಗೆ ಬಹಳಷ್ಟು ಪ್ರಯೋಜನಗಳಿವೆ. ಅದರಲ್ಲಿರುವ ವಿಟಮಿನ್‌ ಮತ್ತು ಮಿನರಲ್‌ಗಳು ತ್ವಚೆಗೆ ಪೋಷಣೆಯನ್ನು ನೀಡುತ್ತವೆ. ಇದು ಮೊಡವೆಯ ಕಲೆಗಳನ್ನು ಹೋಗಲಾಡಿಸಲು ಉತ್ತಮ ಆಯ್ಕೆಯಾಗಿದೆ. ಎರಡು ಚಮಚ ಮುಲ್ತಾನಿ ಮಿಟ್ಟಿ ತೆಗೆದುಕೊಂಡು ಅದಕ್ಕೆ ಒಂದು ಚಮಚ ಶ್ರೀಗಂಧದ ಪುಡಿ, ಮತ್ತು ಒಂದು ಚಮಚ ಅರಿಶಿಣ ಪುಡಿ ಸೇರಿಸಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ, ಪೇಸ್ಟ್‌ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಿಚ್ಚಿ, 20 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಆಮೇಲೆ ಉತ್ತಮ ಗುಣಮಟ್ಟದ ಒಂದು ಮಾಯಿಶ್ಚರೈಸರ್‌ ಅನ್ನು ಹಚ್ಚಿ. ಹೀಗೆ ಮಾಡುವುದರಿಂದ ಮುಖದ ಮೇಲಿನ ಎಣ್ಣೆಯುಕ್ತ ಪದಾರ್ಥ ಹೋಗಿ ಮುಖ ಹೊಳೆಯುತ್ತದೆ.

ಇದನ್ನೂ ಓದಿ : Baby Skin Care : ಚಳಿಗಾಲದಲ್ಲಿ ನಿಮ್ಮ ಮಕ್ಕಳ ಕೋಮಲ ತ್ವಚೆಗಾಗಿ ಮನೆಯಲ್ಲಿಯೇ ತಯಾರಿಸಿ ಮಾಯಿಶ್ಚರೈಸರ್‌

ಇದನ್ನೂ ಓದಿ : Banana Shake Side Effects : ಮಕ್ಕಳಿಗೆ ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಕೊಡುವ ಮೊದಲು ಇದನ್ನೊಮ್ಮೆ ಓದಿ…

(Acne Scars want to get rid of it try these 5 home remedies)

Comments are closed.