Terror Attack: ಉಗ್ರರ ದಾಳಿ ಮಾಹಿತಿ; ಮುಂಬೈನಲ್ಲಿ 1 ತಿಂಗಳು ಡ್ರೋನ್, ಖಾಸಗಿ ಹೆಲಿಕಾಪ್ಟರ್ ಗಳ ಹಾರಾಟ ನಿಷೇಧ

ಮುಂಬೈ: Terror attack: 2008ರಲ್ಲಿ ಮುಂಬೈ ನ ತಾಜ್ ಹೋಟೆಲ್ ಸೇರಿದಂತೆ ಹಲವೆಡೆಗಳಲ್ಲಿ ಅಟ್ಟಹಾಸ ಮೆರೆದಿದ್ದ ಉಗ್ರರ ಕೃತ್ಯವನ್ನು ಯಾರೂ ಮರೆತಿಲ್ಲ. ಅದೇ ರೀತಿ ಇದೀಗ ಮತ್ತೆ ಮುಂಬೈನಲ್ಲಿ ಉಗ್ರರು ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆ ಮುಂಬೈ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.

ಇದನ್ನೂ ಓದಿ: Jaish terrorist outfit : ಜೈಶ್ ಭಯೋತ್ಪಾದಕ ಘಟಕವನ್ನು ಭೇದಿಸಿದ ಜಮ್ಮು ಪೊಲೀಸರು ; ಮೂವರ ಬಂಧನ

ಭಯೋತ್ಪಾದಕರು ದಾಳಿ ನಡೆಸಲು ಸಂಚು ಹೂಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆ ಮುಂಬೈನಲ್ಲಿ ಡ್ರೋನ್ ಗಳು ಹಾಗೂ ಖಾಸಗಿ ಹೆಲಿಕಾಪ್ಟರ್ ಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಸೆಕ್ಷನ್ ಜಾರಿ ಮಾಡಲಾಗಿದೆ. 30 ದಿನಗಳ ಕಾಲ ಮುಂಬೈನಲ್ಲಿ ಡ್ರೋನ್, ಖಾಸಗಿ ಹೆಲಿಕಾಪ್ಟರ್ ಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ನವೆಂಬರ್ 13ರಿಂದ ಡಿಸೆಂಬರ್ 12ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಮುಂಬೈನಲ್ಲಿ ವಿಐಪಿಗಳು ಸೇರಿದಂತೆ ಹಲವರನ್ನು ಗುರಿಯಾಗಿಸಿಕೊಂಡು ಡ್ರೋನ್, ಏರಿಯಲ್ ಮಿಸೈಲ್ಸ್ ಗಳನ್ನು ಬಳಸಿಕೊಂಡು ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯಸ್ಥೆಗೆ ಧಕ್ಕೆ ಉಂಟಾಗುವ ಭೀತಿ ಇರುವುದರಿಂದ 30 ದಿನಗಳ ಕಾಲ ಡ್ರೋನ್ ಹಾಗೂ ಖಾಸಗಿ ವಿಮಾನ ಹಾರಾಟ ನಿಷೇಧಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Jacqueline Fernandez: ‘ಜಾಕ್ವೆಲಿನ್ ಬಂಧನ ಯಾಕೆ ಇನ್ನೂ ಆಗಿಲ್ಲ’..? ಇಡಿ ಅಧಿಕಾರಿಗಳಿಗೆ ಕೋರ್ಟ್ ತರಾಟೆ

ಡ್ರೋನ್ ಗಳು, ಪ್ಯಾರಾಗ್ಲೈಡರ್ ಗಳು, ಪ್ಯಾರಾಮೋಟಾರ್, ಮೈಕ್ರೋ ಲೈಟ್ ಏರ್ ಕ್ರಾಫ್ಟರ್, ಹಾಟ್ ಏರ್ ಬಲೂನುಗಳು ಹಾಗೂ ಖಾಸಗಿ ಹೆಲಿಕಾಪ್ಟರ್ ಗಳನ್ನು ಮುಂಬೈನಲ್ಲಿ ಹಾರಾಟ ನಡೆಸಬೇಕಾದರೆ ಕಡ್ಡಾಯವಾಗಿ ಲಿಖಿತ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಹಾರಾಟಕ್ಕೆ ಅವಕಾಶ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸದ್ಯ ಮುಂಬೈನಲ್ಲಿ ವಿಐಪಿಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿಯಷ್ಟೇ ಲಭ್ಯವಾಗಿದೆ. ಆದರೆ ಯಾವ ಉಗ್ರ ಸಂಘಟನೆಯು ಸಂಚು ರೂಪಿಸಿ ದಾಳಿ ನಡೆಸಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.

Terror Attack: In Anti-Terror Bid, Mumbai Police Bans Drones, Private Helicopters For 30 Days

Comments are closed.