Aloe Vera Gel Benefits: ಕೂದಲಿನ ತೊಂದರೆಗಳನ್ನು ನಿವಾರಿಸಲು ಜೆಲ್ ಬಳಸಿ

ಅಲೋವೆರಾ ಬಹಳ ಹಿಂದಿನಿಂದಲೂ ಚರ್ಮದ ಮೇಲೆ ಸೂಥಿಂಗ್ ಎಫೆಕ್ಟ್ ಗೆ ಹೆಸರುವಾಸಿಯಾಗಿದೆ. ಇದು ಉರಿಯೂತದ ಪ್ರದೇಶಗಳಿಗೆ ಪರಿಹಾರವನ್ನು ನೀಡುತ್ತದೆ ಮತ್ತು ಕಡಿತ, ಗಾಯಗಳು ಅಥವಾ ಸಣ್ಣ ಗಾಯಗಳಿಗೆ ಮನೆಮದ್ದುಗಿ ಬಳಸಲಾಗುತ್ತದೆ. ಯಾವುದೇ ಸನ್ ಬರ್ನ್ ಗಳನ್ನು ಕಡಿಮೆಮಾಡಲು ಡಿ.ಐ.ವೈ ಫೇಸ್ ಮಾಸ್ಕ್ ಗಳಲ್ಲಿ ಇದನ್ನು ಬಳಸಲಾಗುತ್ತದೆ.ಅಲೋವೆರಾವನ್ನು ಹೊಂದಿರುವ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.ಅವುಗಳಲ್ಲಿ ಕೆಲವು ಅಲೋವೆರಾ ಜೆಲ್‌ಗಳಾಗಿಯೂ ಮಾರಾಟವಾಗುತ್ತವೆ. ನೀವು ಅಲೋವೆರಾವನ್ನು ಅದರ ಕಚ್ಚಾ ರೂಪದಲ್ಲಿಯೂ ಬಳಸಬಹುದು, ಸಸ್ಯದ ಕಾಂಡವನ್ನು ಕತ್ತರಿಸಿ ಅದರಿಂದ ಜೆಲ್ ಅನ್ನು ಹೊರತೆಗೆಯಬಹುದು ಮತ್ತು ಅದನ್ನು ಎಫ್ಫೆಕ್ಟ್ದ್ ಪ್ರದೇಶಗಳಿಗೆ ಹಚ್ಚಬಹುದು.ಅಲೋವೆರಾ ಚರ್ಮಕ್ಕೆ ಮಾತ್ರವಲ್ಲ, ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ನಿಮ್ಮ ಕೂದಲಿನ ತೊಂದರೆಯನ್ನು ಕಡಿಮೆಮಾಡಲು ನಿಮ್ಮ ಕೂದಲಿಗೆ ಅಲೋವೆರಾ ಜೆಲ್ ಅನ್ನು ಹಚ್ಚಬಹುದು. ಅಲೋವೆರಾ ನಿಮ್ಮ ಕೂದಲಿಗೆ ಒದಗಿಸುವ ಪ್ರಯೋಜನಗಳನ್ನು ನೋಡೋಣ(Aloe Vera Gel Benefits).

ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ:

ಅಲೋವೆರಾ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಅಲೋವೆರಾ ಜೆಲ್ ಅನ್ನು ನಿಮ್ಮ ನೆತ್ತಿಗೆ ಹಚ್ಚುವುದರಿಂದ ಕೂದಲನ್ನು ಬಲಪಡಿಸಲು ಮತ್ತು ಕೂದಲಿನ ಒಡೆಯುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಕೂದಲು ದಪ್ಪ ಮತ್ತು ನೀಳವಾಗಿ ಬೆಳೆಯಲು ಅಲೋವೆರಾ ಜೆಲ್ ತುಂಬಾ ಪ್ರಯೋಜಕ.

ನೆತ್ತಿಯ ತುರಿಕೆ ಕಮ್ಮಿ ಮಾಡಲು ಸಹಾಯ ಮಾಡುತ್ತದೆ:

ಅದರ ಉರಿಯೂತದ (ಅಂಟಿ ಇನ್ಫ್ಲ್ಯಾಮಟರಿ) ಗುಣಗಳಿಂದಾಗಿ, ಅಲೋವೆರಾ ಜೆಲ್ ಅನ್ನು ತುರಿಕೆ ಹೊಂದಿರುವ ಪ್ರದೇಶಕ್ಕೆ ಹಚ್ಚುವುದರಿಂದ ನೆತ್ತಿಯ ತುರಿಕೆ ಕಮ್ಮಿ ಮಾಡಬಹುದು . ಅಲೋವೆರಾ ಜೆಲ್ ಅನ್ನು ಹಚ್ಚಿ ಸ್ವಲ್ಪ ಸಮಯದ ನಂತರ ಮೈಲ್ಡ್ ಹೇರ್ ಕ್ಲೆನ್ಸರ್‌ನಿಂದ ನಿಮ್ಮ ಕೂದಲನ್ನು ತೊಳೆಯುದರಿಂದ ಶೈನಿ ಕೂದಲನ್ನು ಪಡೆಯಬಹುದು.

ತಲೆಹೊಟ್ಟುಗೆ ಸಹಾಯ ಮಾಡುತ್ತದೆ:

ತಲೆಹೊಟ್ಟು ನೆತ್ತಿಯಲ್ಲಿ ಫಂಗಸ್ ಅಥವಾ ಬ್ಯಾಕ್ಟೀರಿಯಾದ ಬೆಳವಣಿಗೆಯ ಪರಿಣಾಮವಾಗಿರಬಹುದು. ಅಲೋವೆರಾ ಜೆಲ್ ಅನ್ನು ನೆತ್ತಿಗೆ ಹಚ್ಚುವುದರಿಂದ ಫಂಗಸ್ ನ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ:

ಅಲೋವೆರಾದಲ್ಲಿ ವಿಟಮಿನ್ ಎ, ಸಿ ಮತ್ತು ಇ ಇದ್ದು ಇದು ಕೂದಲನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಕೂದಲು ಒಡೆಯುವುದನ್ನು ತಡೆಯುತ್ತದೆ. ಅಲ್ಲದೆ, ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಅವರು ಸಹಾಯ ಮಾಡುತ್ತದೆ .

ಇದನ್ನೂ ಓದಿ: Bloating Problem:ಹೊಟ್ಟೆ ಉಬ್ಬರಿಸುತ್ತದೆಯೇ? ಈ 7 ಆಹಾರಗಳನ್ನು ಸೇವಿಸಲೇಬೇಡಿ

(Aloe Vera Gel Benefits for hair)

Comments are closed.