SSC Applications 2022 : ಹಿಂದಿ ಅನುವಾದಕರಿಗೆ ಇಲ್ಲಿದೆ ಸುವರ್ಣವಕಾಶ

ಹಿಂದಿ ಜೂನಿಯರ್ ಹಾಗೂ ಸೀನಿಯರ್ ಅನುವಾದರಾಗಲು (Hindi Junior and Senior Translator)  ಇಚ್ಚಿಸುವವರಿಗೆ ಸುವರ್ಣಾವಕಾಶ ಇಲ್ಲಿದೆ. SSC ನೇಮಕಾತಿಗೆ (SSC Applications 2022 ) ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ssc.nic.in ಅಧಿಕೃತ ವೆಬ್‌ಸೈಟ್ ಮೂಲಕವಾಗಿ ಸಲ್ಲಿಸಬಹುದಾಗಿದೆ. ವಯೋಮಿತಿ, ಅರ್ಜಿ ಸಲ್ಲಿಸುವ ಹಂತ, ಖಾಲಿ ಹುದ್ದೆಯ ವಿವರಗಳನ್ನು ಇಲ್ಲಿ ಪರಿಶೀಲಿಸಬಹುದಾಗಿದೆ.

ಹಿಂದಿ ಅನುವಾದಕರಿಗೆ SSC ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭಗೊಂಡಿದೆ. ಇದು ಜುಲೈ 20 ರಂದು ಶುರುವಾಗಿದ್ದು, ಅರ್ಹ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ವೆಬ್‌ಸೈಟ್ ಮೂಲಕ ssc.nic.in ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು  ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಆಗಸ್ಟ್ 4, 2022, ರಾತ್ರಿ 11 ಗಂಟೆಯೊಳಗೆ,ಅಭ್ಯರ್ಥಿಗಳು ಕೆಳಗೆ ತಿಳಿಸಲಾದ ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. SSC ನೇಮಕಾತಿ ವೇಳಾಪಟ್ಟಿಯಂತೆ, ಇದೇ ಆಗಸ್ಟ್  6ರಂದು ಅರ್ಜಿಯನ್ನು ಮರು ಪರಿಶೀಲನೆ ಮಾಡಲಿದೆ. SSC ನೇಮಕಾತಿ 2022ರ ಕಂಪ್ಯೂಟರ್ ಆಧಾರಿತ ಪರೀಕ್ಷೆಯ  ದಿನಾಂಕ ಬಿಡುಗಡೆ ಮಾಡಲಾಗಿಲ್ಲ ಆದರೆ ಪರೀಕ್ಷೆಯನ್ನು ಅಕ್ಟೋಬರ್‌ನಲ್ಲಿ ನಡೆಸಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು:ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ 100 ಪಾವತಿಸಬೇಕಾಗುತ್ತದೆ. ಇನ್ನೂ /SC/ST/ESM/PwD ಗೆ ಸೇರಿದ ಮಹಿಳಾ ಅಭ್ಯರ್ಥಿ ಅರ್ಜಿ ಶುಲ್ಕಯಲ್ಲಿ ಪಾವತಿಸಲು ವಿನಾಯತಿ ಇದೆ.

ವಯಸ್ಸಿನ ಮಿತಿ: ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 1, 2022 ರಂತೆ 18 ರಿಂದ 30 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿ ಸಡಿಲಿಕೆಯು ಅನ್ವಯಿಸುತ್ತದೆ. ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

  • SSC ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ: ssc.nic.in
  • ಒಂದು ಬಾರಿ ನೋಂದಣಿಗಾಗಿ ಲಾಗಿನ್ ವಿಭಾಗದ ಅಡಿಯಲ್ಲಿ ‘ಈಗ ನೋಂದಾಯಿಸಿ’ ಕ್ಲಿಕ್ ಮಾಡಿ ನಂತರ
  • ನಿಮ್ಮ SSC ಪೋರ್ಟಲ್‌ಗೆ ಲಾಗಿನ್ ಮಾಡಿ, ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಹಾಕಿ
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಸ್ಕ್ಯಾನ್ ಮಾಡಿದ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  • ಪಾವತಿಸಿ ಮತ್ತು ಅರ್ಜಿ ಶುಲ್ಕ ಮತ್ತು ಫಾರ್ಮ್ ಅನ್ನು ಸಲ್ಲಿಸಿ,ಅಗತ್ಯವಿದ್ದರೆ ಫಾರ್ಮ್‌ನ ಪ್ರಿಂಟ್‌ಔಟ್ ತೆಗೆದುಕೊಳ್ಳಿ

ಹುದ್ದೆಯ ವಿವರ:

• ಕೇಂದ್ರ ಸಚಿವಾಲಯದಲ್ಲಿ ಅಧಿಕೃತ ಭಾಷಾ ಸೇವೆಯ (CSOLS) ಜೂನಿಯರ್ ಅನುವಾದಕ

• M/o ರೈಲ್ವೆಯಲ್ಲಿ ಕಿರಿಯ ಅನುವಾದಕ (ರೈಲ್ವೆ ಮಂಡಳಿ)

• ಸಶಸ್ತ್ರ ಪಡೆಗಳ ಪ್ರಧಾನ ಕಛೇರಿಯಲ್ಲಿ (AFHQ) ಜೂನಿಯರ್ ಅನುವಾದಕ

• JT/JHT ಗಾಗಿ DoP&T ಯ ಮಾದರಿ RRಗಳನ್ನು ಅಳವಡಿಸಿಕೊಂಡಿರುವ ಅಧೀನ ಕಚೇರಿಗಳಲ್ಲಿ ಜೂನಿಯರ್ ಅನುವಾದಕ (JT)/ ಜೂನಿಯರ್ ಹಿಂದಿ ಅನುವಾದಕ (JHT).

• ವಿವಿಧ ಕೇಂದ್ರ ಸರ್ಕಾರದ ಸಚಿವಾಲಯಗಳು/ಇಲಾಖೆಗಳು/ಕಚೇರಿಗಳಲ್ಲಿ ಹಿರಿಯ ಹಿಂದಿ ಅನುವಾದಕರು.

ಇದನ್ನು ಓದಿ : BSNL Recruitment 2022 : BSNL ನಲ್ಲಿ ಅಪ್ರೆಂಟಿಸ್‌ಶಿಪ್‌ ತರಬೇತಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ?

ಇದನ್ನು ಓದಿ : Work From Home Permanent : ಸಮೀಕ್ಷೆಯಲ್ಲಿ ಬಯಲಾಯ್ತು ವರ್ಕ್​ ಫ್ರಾಮ್​ ಹೋಮ್​ ಕುರಿತ ಬಹುಮುಖ್ಯ ಮಾಹಿತಿ

(SSC Applications 2022 : The applications for the various translator posts on SSC.NIC.IN)

Comments are closed.