ಮುಖದ ಕಾಂತಿ ಹೆಚ್ಚಿಸಲು ಬಳಸಿ ಕರಿಬೇವಿನ ಈ ಫೇಸ್​ಪ್ಯಾಕ್​​

ಆಹಾರ ಖಾದ್ಯಗಳ ರುಚಿಯನ್ನು ಹೆಚ್ಚಿಸಲು ಅನೇಕ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಬಳಕೆ ಮಾಡುವ ವಸ್ತುಗಳಲ್ಲಿ ಬೇವಿನ ಎಲೆ (bay leaf is best in skin care) ಕೂಡ ಒಂದು. ಇದಕ್ಕೆ ಖಾದ್ಯದ ರುಚಿಯನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ಇದರಲ್ಲಿರುವ ಪೌಷ್ಠಿಕಾಂಶಗಳು ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ. ಬೇವಿನ ಎಲೆಗಳಲ್ಲಿ ಪ್ರೋಟಿನ್​, ಫೈಬರ್​, ಕ್ಯಾಲ್ಸಿಯಂ, ಕಬ್ಬಿಣಾಂಶ ಹಾಗೂ ವಿಟಾಮಿನ್​ ಸಿ ಸಮೃದ್ಧವಾಗಿರುತ್ತದೆ.ವಿಶೇಷವೆಂದರೆ ಇದು ಆಹಾರದಲ್ಲಿ ಮಾತ್ರವಲ್ಲದೆ ತ್ವಚೆಯ ಆರೈಕೆಗೂ ತುಂಬಾ ಪ್ರಯೋಜನಕಾರಿಯಾಗಿದೆ.

ಇದರಲ್ಲಿರುವ ಗುಣಲಕ್ಷಣಗಳು ಚರ್ಮದ ಆಳವಾದ ಶುಚಿಗೊಳಿಸುವಿಕೆಯಲ್ಲಿ ಪರಿಣಾಮಕಾರಿಯಾಗಿದೆ. ಅಂದಹಾಗೆ, ಬೇವಿನ ಎಲೆಯು ಚರ್ಮದ ಆರೈಕೆಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೆಲವೇ ಜನರಿಗೆ ತಿಳಿದಿದೆ.


ಚರ್ಮದ ಮೇಲೆ ಬೇವಿನ ಎಲೆಗಳನ್ನು ಹೇಗೆ ಹಚ್ಚಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಬೇವಿನ ಎಲೆಯನ್ನು ತ್ವಚೆಗೆ ಲೇಪಿಸಿಕೊಳ್ಳುವುದರಲ್ಲಿ ಕೊಂಚ ಹೆಚ್ಚು ಕಡಿಮೆಯಾದರೂ ಸಹ ನಿಮಗೆ ಹಾನಿ ಉಂಟಾಗಬಹುದು.


ಬೇವಿನ ಸೊಪ್ಪು ಹಾಗೂ ಮೊಸರು : ಬೇವಿನ ಎಲೆಯ ರೀತಿಯಲ್ಲಿ ಚರ್ಮದ ಆರೋಗ್ಯಕ್ಕೆ ಮೊಸರು ಕೂಡ ಅತ್ಯಂತ ಉಪಯುಕ್ತವಾಗಿದೆ. ನೀವು ಒಂದು ಬಟ್ಟಲಿನಲ್ಲಿ 1 ಚರ್ಮ ಬೇವಿನ ಎಲೆಯ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ ಜೇನುತುಪ್ಪ ಹಾಗೂ ಮೊಸರನ್ನು ಮಿಶ್ರಣ ಮಾಡಿ. ಈ ಪೇಸ್ಟ್​ನ್ನು ತ್ವಚೆಗೆ ಹಚ್ಚಿಕೊಳ್ಳಿ. ಈ ಪೇಸ್ಟ್​ ಒಣಗಿದ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಬೇವಿನ ಎಲೆಗಳು ಚರ್ಮವನ್ನು ರಿಪೇರಿ ಮಾಡುತ್ತವೆ. ಮೊಸರು ಹಾಗೂ ಜೇನುತುಪ್ಪವು ಚರ್ಮದ ತೇವಾಂಶವನ್ನು ಉಳಿಸುತ್ತವೆ.

ಬೇವಿನ ಸೊಪ್ಪು ಹಾಗೂ ರೋಸ್​ ವಾಟರ್ : ಒಂದು ಬೌಲ್​ನಲ್ಲಿ ಬೇವಿನ ಸೊಪ್ಪಿನ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ ಎರಡರಿಂದ ಮೂರು ಚಮಚ ರೋಸ್​ ವಾಟರ್​ನ್ನು ಸೇರಿಸಿ. ಈ ಪೇಸ್ಟ್​ನ್ನು ಮುಖದ ಮೇಲೆ 10 ರಿಂದ 15 ನಿಮಿಷಗಳ ಕಾಲ ಇಡಿ. ಈ ಪೇಸ್ಟ್​ ಮುಖದ ಮೇಲೆ ಒಣಗುತ್ತಿದ್ದಂತೆಯೇ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ನಿಮ್ಮ ಮುಖದಲ್ಲಿ ತೇವಾಂಶವನ್ನು ಹೆಚ್ಚಿಸುತ್ತದೆ.

bay leaf is best in skin care use it with these ways in your beauty routine

ಇದನ್ನು ಓದಿ : Vastu Tips For Marriage : ಮದುವೆಯ ವಯಸ್ಸು ಮೀರಿದರೂ ಸಂಗಾತಿಯು ಸಿಗುತ್ತಿಲ್ಲವೇ..? ಹಾಗಾದರೆ ಅನುಸರಿಸಿ ಈ ವಾಸ್ತುಟಿಪ್ಸ್​

ಇದನ್ನೂ ಓದಿ : Vastu Ideas : ವಾಸ್ತು ಶಾಸ್ತ್ರದ ಪ್ರಕಾರ ಉಪ್ಪಿಗೆ ಇರುವ ಪಾಸಿಟಿವ್​ ಹಾಗೂ ನೆಗೆಟಿವ್​ ಎಫೆಕ್ಟ್​ಗಳ ಬಗ್ಗೆ ಇಲ್ಲಿದೆ ಮಾಹಿತಿ

Comments are closed.