Hundred Crore Movies: 100 ಕೋಟಿ ಗಳಿಸಿದ ಚಿತ್ರಗಳು ಮತ್ತು ಅವುಗಳನ್ನು ನಿರ್ಮಿಸಿದ ಬಜೆಟ್; ಕುತೂಹಲಕರ ಮಾಹಿತಿ ಇಲ್ಲಿದೆ

ಈ ಚಿತ್ರನಿರ್ಮಾಪಕರು ಬಾಕ್ಸ್ ಆಫೀಸ್‌ನ ಫಲಿತಾಂಶಗಳ(Box Office Result) ಕುರಿತು ಯಾಕಿಷ್ಟು ತಲೆಕೆಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಇಲ್ಲಿದೆ ಉತ್ತರ. ಅವರು ಚಿತ್ರ ನಿರ್ಮಾಣಕ್ಕಾಗಿ ಸುರಿದ ದುಡ್ಡು ದ್ವಿಗುಣವಾಗುತ್ತಾ ಇಲ್ಲವಾ ಎಂಬ ನಿರ್ಣಯ ಘೋಷಿಸುವುದು ಈ ಬಾಕ್ಸ್‌ ಆಫೀಸೇ. ಹಾಗೆ ಯಶಸ್ಸು ಕಂಡು ಕೋಟಿಗಳನ್ನು ಮುಡಿಗೇರಿಸಿಕೊಂಡ (Hundred Crore Owned Movies) ಕೆಲವು ಚಿತ್ರಗಳ ಪಟ್ಟಿಯೇ ಇಲ್ಲಿದೆ. ಭರ್ಜರಿ ಸಿನಿಮಾಗಳನ್ನು ಮಾಡಲು ಅವರು ಭರ್ಜರಿ ಹಣವನ್ನೇ ಸುರಿದಿರುತ್ತಾರೆ. ಹಾಗೆ ನಿರ್ಮಾಪಕರನ್ನು(Producers) ಸದಾ ಆತಂಕದಲ್ಲಿ ಇರಿಸಿದ, ಭಾರೀ ಬಜೆಟ್ಟಿ (Big Budget) ಸಿನಿಮಾಗಳು ಯಾವುವು ಎಂದು ನೋಡೋಣ.

ತಮಿಳಿನಲ್ಲಿ ಮಣಿರತ್ನಂ ನಿರ್ಮಾಣದ ‘ ಪೊನ್ನಿನಿಯಿನ್‌ ಸೆಲ್ವನ್’ ಚಿತ್ರಕ್ಕೆ 500 ಕೋಟಿ ರೂಪಾಯಿ ಹಣ ವೆಚ್ಚ ಮಾಡಲಾಗುತ್ತಿದೆ. ಬಹುಭಾಷಾ ಚಿತ್ರ ಸಾಹೋ ಕೂಡ ದೊಡ್ಡ ಮೊತ್ತವನ್ನು ಖರ್ಚು ಮಾಡಿ ರೂಪುಗೊಂಡ ಚಿತ್ರ. ಪ್ರಭಾಸ್ ನಟನೆಯ ಈ ಚಿತ್ರಕ್ಕೆ 350 ಕೋಟಿ ವ್ಯಯಿಸಲಾಗಿದೆ. ನಾಯಕನು ಅಪರಾಧಿಗಳನ್ನು ಅಟ್ಟಾಡಿಸಿ ಹಿಡಿಯುವ ಕಥೆಯುಳ್ಳ ಚಿತ್ರವಿದು. ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಮತ್ತು ಶಾಹೀದ್ ಕಪೂರ್ ಅಭಿನಯದ ಪದ್ಮಾವತ್ ಭಾರಿ ಸದ್ದು ಮಾಡಿದ, ವಿವಾದಗಳನ್ನು ಸೃಷ್ಟಿಸಿದ ಚಿತ್ರ. ಐತಿಹಾಸಿಕ ಕತೆಯ ಎಳೆಯನ್ನು ಹಿಡಿದು ನಿರ್ಮಿಸಿದ ಚಿತ್ರಕ್ಕೆ ಖರ್ಚಾಗಿದ್ದು 215 ಕೋಟಿ ರೂಪಾಯಿ. ಬೃಹತ್‍ ಸೆಟ್ ಗಳು, ರಾಜ ವೈಭವದ ಉಡುಗೆಗಳು, ಅರಮನೆಯ ದೃಶ‍್ಯಾವಳಿಗಳು ಈ ಸಿನಿಮಾಕ್ಕೆ ಹೊಸ ಕಳೆಯನ್ನು ಕೊಟ್ಟಿದೆ.

ಕನ್ನಡ ಸಿನಿಮಾ ಕೆಜಿಎಫ್ ಅಧ್ಯಾಯ 1 ಕೂಡ ದೊಡ್ಡ ಬಜೆಟ್ಟಿನ ಚಿತ್ರ. ಗಣಿಗಾರಿಕೆಯ ದೃಶ್ಯಾವಳಿಗಳ ಚಿತ್ರವು ನಟ ಯಶ್‍ ಗೆ ಹೆಚ್ಚು ಪ್ರಸಿದ್ಧಿ ತಂದು ಕೊಟ್ಟಿತು. 50 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಈ ಚಿತ್ರವು ದೊಡ್ಡ ಹಿಟ್‌ ಆಗಿತ್ತು. ಸಂಜಯ್ ದತ್ತ್ ಖಳನಾಯಕನಾಗಿ ನಟಿಸಿದ ಚಿತ್ರ ಕೆಜಿಎಫ್‍ ಭಾಗ 2 ರೂಪುಗೊಳ್ಳುತ್ತಿದ್ದು ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಪರಿಸ್ಥಿತಿ ಎಲ್ಲವೂ ಸರಿಯಾಗಿದ್ದರೆ ಈ ವರ್ಷ ತೆರೆಕಾಣುವ ನಿರೀಕ್ಷೆಯಿದೆ. ಇದಕ್ಕೆ 100 ಕೋಟಿ ಬಜೆಟ್‌ ಖರ್ಚಾಗಲಿದೆ ಎನ್ನಲಾಗುತ್ತಿದೆ.

ಈ ಹಿಂದೆ ತೆರೆ ಕಂಡ ಸೂರ್ಯವಂಶಿ ಚಿತ್ರವೂ 165 ಕೋಟಿ ರೂ. ವೆಚ್ಚದ್ದು. ‘ಜಸ್ಟೀಸ್ ಲೀಗ್’ ಎಂಬುದು 30 ಕೋಟಿ ಡಾಲರ್‌ ವೆಚ್ಚದ್ದು. ಮನುಷ್ಯತ್ವದ ಮೇಲೆ ನಂಬಿಕೆಯನ್ನು ಮರುಸ್ಥಾಪಿಸುವ ಕತೆಯಿರುವ ಚಿತ್ರವಿದು. ಅವೆಂಜರ್ ಎಂಡ್ ಗೇಮ್ ಗೆ 35.6 ಕೋಟಿ ಡಾಲರ್ ಖರ್ಚಾಗಿದ್ದರೆ, ಶಿವರಾಜ್‌ ಕುಮಾರ್ ಮತ್ತು ಸುದೀಪ್ ಅಭಿನಯದ ‘ವಿಲನ್‌’ ಚಿತ್ರಕ್ಕೆ ವ್ಯಯಿಸಿದ್ದು 60 ಕೋಟಿ ರೂ.

ಪ್ರಭಾಸ್‌ ನಟನೆಯ ಬಾಹುಬಲಿ 2 (ಸಮಾರೋಪ) ಚಿತ್ರಕ್ಕೆ 250 ಕೋಟಿ ಖರ್ಚಾಗಿದೆ. ಬಾಹುಬಲಿ 1 ಬಿಡುಗಡೆಯಾದ ಮೇಲೆ ಅಭಿಮಾನಿಗಳು ಎರಡನೇ ಭಾಗಕ್ಕಾಗಿ ಕಾಯುವಂತೆ ಮಾಡಿದ ರಾಜಮೌಳಿ, ಎರಡನೇ ಭಾಗದ ಕಥೆವನ್ನು ಭರ್ಜರಿಯಾಗಿ ಕಟ್ಟಿಕೊಟ್ಟಿದ್ದಾರೆ. ಹೀಗೆ ಕೋಟಿ ಗಟ್ಟಲೆ ಹಣವನ್ನು ವ್ಯಯಿಸಿದ ಚಿತ್ರಗಳ ಸಾಲೇ ಇದೆ. ಮತ್ತೆ ಈಗ ಕೋವಿಡ್ ಬ್ರೇಕ್‍ ನಂತರ ಚಿತ್ರ ನಿರ್ಮಾಣದ ಭರಾಟೆ ಶುರುವಾಗಿದೆ. ಖರ್ಚುಗಳೂ ಏರಿಕೆಯಾಗಿವೆ. ಕೋಟಿಗಳ ಸಂಖ್ಯೆಯೂ ಏರಿಕೆಯಾಗಿವೆ ಎನ್ನಿ.

ಇದನ್ನೂ ಓದಿ: Vikrant Rona movie :ಸುದೀಪ್ ಅಭಿಮಾನಿಗಳಿಗೆ‌ ಮತ್ತೊಮ್ಮೆ ನಿರಾಸೆ : ವಿಕ್ರಾಂತ್ ರೋಣ ರಿಲೀಸ್ ಮುಂದೂಡಿಕೆ

ಇದನ್ನೂ ಓದಿ: James movie Release date : ಬರ್ತಡೇಗೆ ಬರ್ತಾರೆ ಪುನೀತ್ ರಾಜ್ ಕುಮಾರ್ : ಜೇಮ್ಸ್ ರಿಲೀಸ್ ಗೆ ಕೊನೆಗೂ ಫಿಕ್ಸ್ ಅಯ್ತು ಮುಹೂರ್ತ


(Hundred Crore Movies box office hits and budget)

Comments are closed.