Beauty Tips : ಶಾಂಪೂ ಬಳಸಿದ್ರೂ ಕೂದಲು ಉದುರುತ್ತಿದ್ಯಾ ? ಹಾಗಿದ್ದರೆ ಚಿಂತೆ ಬಿಡಿ, ಇಲ್ಲಿದೆ ಸುಲಭ ಪರಿಹಾರ

Beauty Tips : ಬರಿ ಶಾಂಪೂ ಬಳಕೆ ಮಾಡುವುದರಿಂದ ಇದರಲ್ಲಿರುವ ಕೆಮಿಕಲ್‌ ನಿಂದ ನಿಮ್ಮ ಕೂದಲು ಉದುರುತ್ತದೆ. ಹಾಗಾಗಿ ಬೌಲ್ ನಲ್ಲಿ ಶಾಂಪೂ ಹಾಕಿಕೊಂಡು ಅದಕ್ಕೆ ನೀರು ಬೆರೆಸಿ ಕೂದಲು ತೊಳೆಯುವುದರಿಂದ ಕೂದಲ ಉದುರುವ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ಶಾಂಪೂಗೆ ಬರಿ ನೀರು ಹಾಕಿಕೊಳ್ಳುವ ಬದಲು ಕರಿಬೇವು, ಅಕ್ಕಿ ಮತ್ತು ಮೆಂತ್ಯೆಯ ಕುದಿಸಿ ಆರಿದ ನೀರು ಹಾಕಿಕೊಳ್ಳುವುದರಿಂದ ಇದರಲ್ಲಿರುವ ನೈಸರ್ಗಿಕ ಅಂಶ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕರಿಬೇವು ,ಅಕ್ಕಿ ಮತ್ತು ಮೆಂತ್ಯೆಯ ನೀರು ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.

Beauty Tips : ಬೇಕಾಗುವ ಸಾಮಾಗ್ರಿಗಳು:

ಕರಿಬೇವು
ಮೆಂತ್ಯೆ
ಅಕ್ಕಿ

ಮಾಡುವ ವಿಧಾನ:

ಪಾತ್ರೆಯಲ್ಲಿ ಒಂದು ಲೋಟ ನೀರು ಇಟ್ಟುಕೊಂಡು ಅದಕ್ಕೆ ಒಂದು ಚಮಚ ಮೆಂತ್ಯೆ, ಒಂದು ಚಮಚ ಅಕ್ಕಿ, ಏಳು ಕರಿಬೇವು ಕಾಕಿಕೊಂಡು ಕುದಿಸಿ ಆರಲು ಬಿಡಬೇಕು. ಬೌಲ್‌ ನಲ್ಲಿ ಶಾಂಪೂ ಹಾಕಿಕೊಂಡು ಇದಕ್ಕೆ ಕುದಿಸಿಕೊಂಡ ನೀರು ಸೊಸಿಕೊಂಡು ಮಿಶ್ರಣ ಮಾಡಿಕೊಳ್ಳಬೇಕು. ಇದರಿಂದ ಕೂದಲು ತೊಳೆಯುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ.

ಅಕ್ಕಿ
ಅಕ್ಕಿಯಿಂದ ಹಲವು ಪ್ರಯೋಜನವನ್ನು ಪಡೆದುಕೊಳ್ಳಬಹುದು ಕೂದಲಿನ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಅಕ್ಕಿ ತಿನ್ನುವುದರಿಂದ ಇದರಲ್ಲಿರುವ ಲೆಕ್ಟಿನ್‌ ಎಂಬ ಪ್ರೊಟೀನ್‌ ಅಂಶ ಜೀರ್ಣಕಾರಿ ಸಮಸ್ಯೆ ನಿವಾರಣೆ ಆಗಲು ಸಹಾಯ ಮಾಡುತ್ತದೆ. ಅಕ್ಕಿಯಲ್ಲಿ ಬ್ಯಾಸಿಲಸ್‌ ಸಿರಸ್‌ ಎಂಬ ಬ್ಯಾಕ್ಟೀರಿಯಾ ಇರುವುದರಿಂದ ಫುಡ್‌ ಪಾಯಿಸನಿಂಗ್‌ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಕೂದಲಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಅಕ್ಕಿ ನೆನಸಿದ ನೀರನ್ನು ಕೂದಲಿಗೆ ಹಚ್ಚುವುದರಿಂದ ಕೂದಲ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್‌ ಲಸಿಕೆ: ಪೂರ್ಣ ವಿವರ ಇಲ್ಲಿದೆ

ಇದನ್ನೂ ಓದಿ:Benefits Of Sunlight:ದೇಹದಲ್ಲಿ ವಿಟಮಿನ್‌ ಡಿ ಹೆಚ್ಚಿಸುವ ಸೂರ್ಯನ ಕಿರಣದಿಂದ ಹಲವು ಪ್ರಯೋಜನ

ಇದನ್ನೂ ಓದಿ:Nasal vaccine: ಮೂಗಿನ ಮೂಲಕ ಕೊರೊನಾ ಲಸಿಕೆ : ಗ್ರೀನ್ ಸಿಗ್ನಲ್‌ ಕೊಟ್ಟ ಕೇಂದ್ರ ಆರೋಗ್ಯ ಇಲಾಖೆ

ಮೆಂತ್ಯೆ
ಪೋಷಕಾಂಶ ಭರಿತವಾದ ಮೆಂತ್ಯೆಯಿಂದ ಹಲವು ಆರೋಗ್ಯದ ಪ್ರಯೋಜನವಿದೆ. ಇದರಲ್ಲಿರುವ ಫೈಬರ್‌, ವಿಟಮಿನ್‌ ಎ ಮತ್ತು ವಿಟಮಿನ್‌ ಡಿ ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಮೆಂತ್ಯೆಯನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯೆಯನ್ನು ನೀರಲ್ಲಿ ನೆನಸಿ ಅದನ್ನು ಬೌಲ್‌ ನಲ್ಲಿ ಸೊಸಿಕೊಂಡು ಜೇನುತುಪ್ಪ ಬೆರೆಸಿ ತಿನ್ನುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯೆಯನ್ನು ಹೀಗೂ ಕೂಡ ಸೇವನೆ ಮಾಡಬಹುದು ನೆನಸಿದ ಮೆಂತ್ಯೆಯನ್ನು ರುಬ್ಬಿ ಪೇಸ್ಟ್‌ ತಯಾರಿಸಿಕೊಳ್ಳಬೇಕು ಅದಕ್ಕೆ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ಕೂಡ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಇಂಗ್ಲಿಷ್‌ ಸುದ್ದಿಗಾಗಿ ಕ್ಲಿಕ್‌ ಮಾಡಿ

Beauty Tips Is your hair falling out even after using shampoo? If so then don’t worry, here is an easy solution

Comments are closed.