IPL Auction Mayank Agarwal: 8.25 ಕೋಟಿ ಸನ್ ರೈಸರ್ಸ್ ಹೈದರಾಬಾದ್ ಪಾಲಾದ ಮಯಾಂಕ್ ಅಗರ್ವಾಲ್

ಕೊಚ್ಚಿ: IPL Auction Mayank Agarwal : ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮುಂಬರುವ ಐಪಿಎಲ್’ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಲಿದ್ದಾರೆ. ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿರುವ ಐಪಿಎಲ್ 2023 ಆಟಗಾರರ ಹರಾಜಿನಲ್ಲಿ (IPL 2023 Players Auction) ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 8.24 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಿದೆ. ಹರಾಜಿನಲ್ಲಿ 1 ಕೋಟಿ ರೂ.ಗಳ ಮೂಲಬೆಲೆ ಹೊಂದಿದ್ದ ಮಯಾಂಕ್ ಅವರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಕೂಡ ಜಿದ್ದಿಗೆ ಬಿದ್ದಿತ್ತು. 8 ಕೋಟಿಯವರೆಗೆ ಮಯಾಂಕ್’ಗೆ ಬಿಡ್ ಮಾಡಿದ ಚೆನ್ನೈ, ನಂತರ ಹೋರಾಟ ಕೈಬಿಟ್ಟಿತು. ಹೀಗಾಗಿ 8.25 ಕೋಟಿ ಮೊತ್ತಕ್ಕೆ ಮಯಾಂಕ್ ಅಗರ್ವಾಲ್ ಹೈದರಾಬಾದ್ ತಂಡಕ್ಕೆ ಮಾರಾಟವಾದರು.

20222ರ ಐಪಿಎಲ್ ಟೂರ್ನಿಯಲ್ಲಿ ಮತ್ತೊಬ್ಬ ಕನ್ನಡಿಗ ಕೆ.ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ತೊರೆದಾಗ ಮಯಾಂಕ್ ಅಗರ್ವಾಲ್ ಅವರಿಗೆ ನಾಯಕತ್ವ ವಹಿಸಲಾಗಿತ್ತು. ಮಯಾಂಕ್ ನಾಯಕತ್ವದಲ್ಲಿ ಆಡಿದ 13 ಪಂದ್ಯಗಳಲ್ಲಿ ಪಂಜಾಬ್ 7 ಗೆಲುವು ದಾಖಲಿಸಿತ್ತು. ಆದರೂ ಮಯಾಂಕ್ ಅವರನ್ನು ರೀಟೇನ್ ಮಾಡಿಕೊಳ್ಳದ ಪಂಜಾಬ್ ಕಿಂಗ್ಸ್ ತಂಡದಿಂದ ರಿಲೀಸ್ ಮಾಡಿತ್ತು.

ಇಂಗ್ಲೆಂಡ್’ನ ಮಧ್ಯಮ ಕ್ರಮಾಂಕದ ಸ್ಫೋಟಕ ದಾಂಡಿಗ ಹ್ಯಾರಿ ಬ್ರೂಕ್ (Harry Brook) 13.25 ಕೋಟಿ ಮೊತ್ತಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಮಯಾಂಕ್ ಮತ್ತು ಹ್ಯಾರಿ ಬ್ರೂಕ್ ಅವರನ್ನ ಖರೀದಿಸಲು ಹೈದರಾಬಾದ್ ಫ್ರಾಂಚೈಸಿ 22 ಕೋಟಿ ರೂ.ಗಳನ್ನು ವಿನಿಯೋಗಿಸಿದೆ. ಹೈದರಾಬಾದ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರನ್ನು 2 ಕೋಟಿ ರೂ.ಗಳ ಮೂಲಬೆಲೆಗೆ ಗುಜರಾತ್ ಟೈಟನ್ಸ್ ತಂಡ ಖರೀದಿಸಿದೆ.

ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಅಜಿಂಕ್ಯ ರಹಾನೆ (Ajinkya Rahane) ಅವರನ್ನು 50 ಲಕ್ಷ ರೂ.ಗಳ ಮೂಲ ಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿದೆ.

ಐಪಿಎಲ್ 2023 ಆಟಗಾರರ ಹರಾಜು
ಹ್ಯಾರಿ ಬ್ರೂಕ್: 13.25 ಕೋಟಿ (ಸನ್ ರೈಸರ್ಸ್ ಹೈದರಾಬಾದ್)
ಮಯಾಂಕ್ ಅಗರ್ವಾಲ್: 8.25 ಕೋಟಿ (ಸನ್ ರೈಸರ್ಸ್ ಹೈದರಾಬಾದ್)
ಕೇನ್ ವಿಲಿಯಮ್ಸನ್: 2 ಕೋಟಿ (ಗುಜರಾತ್ ಟೈಟನ್ಸ್)
ಅಜಿಂಕ್ಯ ರಹಾನೆ: 50 ಲಕ್ಷ (ಚೆನ್ನೈ ಸೂಪರ್ ಕಿಂಗ್ಸ್)

ಇದನ್ನೂ ಓದಿ : ಐಪಿಎಲ್‌ ಮಿನಿ ಹರಾಜಿಗೆ ಪ್ರವೇಶಿಸಿದ ಅಫ್ಘಾನಿಸ್ತಾನದ ಅತ್ಯಂತ ಕಿರಿಯ ಆಟಗಾರ ಯಾರು ಗೊತ್ತಾ ?

ಇದನ್ನೂ ಓದಿ : IPL 2023 Auction: ಐಪಿಎಲ್‌ ಮಿನಿ ಹರಾಜು: ಹರಾಜು ಸಮಯ, ನೇರ ಪ್ರಸಾರ ಮತ್ತು ಆಟಗಾರರ ಪಟ್ಟಿಯ ಪೂರ್ಣ ವಿವರ

IPL 2023 Auction LIve Mayank Agarwal 8.25 crore Sun Risers Hyderabad

Comments are closed.