Sikkim road accident: ಕಮರಿಗೆ ಉರುಳಿ ಬಿದ್ದ ಸೇನಾ ವಾಹನ: 16 ಮಂದಿ ಸೇನಾ ಯೋಧರ ಸಾವು

ಸಿಕ್ಕಿಂ: (Sikkim road accident) ಕಡಿದಾದ ಇಳಿಜಾರಿನಲ್ಲಿ ಸೇನಾ ವಾಹನ ಜಾರಿ ಕಮರಿಗೆ ಬಿದ್ದಿದ್ದು, ಇದರ ಪರಿಣಾಮ 16 ಮಂದಿ ಸೇನಾ ಯೋಧರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಉತ್ತರ ಸಿಕ್ಕಿಂ ನಲ್ಲಿ ಶುಕ್ರವಾರ ನಡೆದಿದೆ. ಬೆಳಿಗ್ಗೆ ಚಾಟೆನ್‌ ನಿಂದ ಥಾಂಗು ಕಡೆಗೆ ಪ್ರಯಾಣಿಸುತ್ತಿರುವ ವೇಳೆ ಝೀಮಾ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ.

ಉತ್ತರ ಸಿಕ್ಕಿಂ ನ ಝೀಮಾ ಮಾರ್ಗದಲ್ಲಿ ಸೇನಾ ಯೋಧರು ಪ್ರಯಾಣಿಸುತ್ತಿದ್ದ ಸೇನಾ ವಾಹನ ಜಾರಿ ಕಮರಿಗೆ ಬಿದ್ದಿದೆ (Sikkim road accident). ಕೂಡಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದು, ಗಾಯಗೊಂಡ ನಾಲ್ವರು ಸೇನಾ ಯೋಧರನ್ನು ಏರ್‌ ಲಿಫ್ಟ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್‌ ಅಪಘಾತದಲ್ಲಿ ಮೂವರು ಜೂನಿಯರ್‌ ಕಮಿಷನ್ಡ್‌ ಅಧಿಕಾರಿಗಳು ಹಾಗೂ 13 ಮಂದಿ ಸೇನಾ ಯೋಧರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತದೇಹಗಳನ್ನು ಕಮರಿಯಿಂದ ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಪಘಾತದಲ್ಲಿ ಸಾವನ್ನಪ್ಪಿರುವ ಯೋಧರಿಗೆ ಸಂತಾಪ ಸೂಚಿಸಿದ್ದು, “ಉತ್ತರ ಸಿಕ್ಕಿಂ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಆದ ಪ್ರಾಣಹಾನಿಯಿಂದ ತೀವ್ರ ನೋವಾಗಿದೆ. ಅವರ ಸೇವೆ ಮತ್ತು ಬದ್ಧತೆಗೆ ರಾಷ್ಟ್ರವು ಆಳವಾಗಿ ಕೃತಜ್ಞವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ಶುಕ್ರವಾರ ಟ್ವೀಟ್‌ ಮಾಡುವ ಮೂಲಕ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

ಇದನ್ನೂ ಓದಿ : Kidnapp and Rape Case : 5 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ : ಸಿಸಿಟಿವಿಯಲ್ಲಿ ಕಾಮುಕನ ನೀಚಕೃತ್ಯ

ಇದನ್ನೂ ಓದಿ : Islamabad Suicide bomb blast: ಇಸ್ಲಾಮಾಬಾದ್‌ ನಲ್ಲಿ ಆತ್ಮಹತ್ಯಾ ಬಾಂಬ್‌ ಸ್ಪೋಟ: ಓರ್ವ ಪೊಲೀಸ್‌ ಸಾವು, ಆರು ಮಂದಿ ಗಾಯ

(Sikkim road accident) An army vehicle fell into a ravine on a steep slope, as a result of which 16 army soldiers were killed and four were injured in an incident that took place in North Sikkim on Friday.

Comments are closed.