ಸೋಮವಾರ, ಏಪ್ರಿಲ್ 28, 2025
HomeSpecial StoryLife StylePotato Beauty tips : ಆಲೂಗಡ್ಡೆಯಿಂದ ಅರಳುತ್ತೆ ಬಿಳುಪಾದ ಸುಂದರ ತ್ವಚೆ

Potato Beauty tips : ಆಲೂಗಡ್ಡೆಯಿಂದ ಅರಳುತ್ತೆ ಬಿಳುಪಾದ ಸುಂದರ ತ್ವಚೆ

- Advertisement -

ಮಾರ್ಕೆಟ್ ನಲ್ಲಿ ಸಿಗುವ ಕೆಮಿಕಲ್‌ ಬಳಸಿ ತಯಾರಿಸಿದ ಬ್ಯೂಟಿ ಪ್ರೋಡೆಕ್ಟ್‌ ಉಪಯೋಗಿಸಿ ತ್ವಚೆಯನ್ನು ಹಾಳುಮಾಡಿ ಕೊಳ್ಳುವುವ ಬದಲು. ಮನೆಯಲ್ಲೇ ಸಿಗುವ ನೈಸರ್ಗಿಕ ತರಕಾರಿಯಿಂದ ಸೌಂದರ್ಯದ ಕಾಪಾಡಿಕೊಳ್ಳುವುದು ಉತ್ತಮ. ಆಲೂಗಡ್ಡೆಯನ್ನು ಸೌಂದರ್ಯ ವೃದ್ದಿಸಲು ನಿತ್ಯ ಬಳಸಬಹುದು. ಯಾಕಂದ್ರೆ ಆಲೂಗಡ್ಡೆಯ ರಸ ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಉಂಟು ಮಾಡುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಉತ್ತಮ ಬಣ್ಣವನ್ನು ಕೊಡುತ್ತದೆ.

ತ್ವಚೆ ಕಪ್ಪಾಗಿದ್ದರೆ : ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು, ಇದಕ್ಕೆ ಒಂದು ಚಮಚ ಮೊಸರು ಸೇರಿಸಿ ನುಣ್ಣಗೆ ಅರೆಯಬೇಕು. ಈ ಪೇಸ್ಟ್‌ ಅನ್ನು ಕಪ್ಪಾಗಿದ್ದ ಚರ್ಮದ ಮೇಲೆ ತೆಳುವಾಗಿ ಹಚ್ಚಿ ನಯವಾಗಿ ಮಸಾಜ್‌ ಮಾಡಬೇಕು. ಸುಮಾರು ಇಪ್ಪತ್ತು ನಿಮಿಷ ಹಾಗೆಯೇ ಬಿಡಬೇಕು. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಬೇಕು.

ಇದನ್ನೂ ಓದಿ: ಸೀಬೆ ಹಣ್ಣಿನಲ್ಲಿದೆ ಕಾಂತಿಯ ರಹಸ್ಯ : ಸೀಬೆ ಫೇಸ್‌ ಮಾಸ್ಕ್‌ನಿಂದ ಹೊಳೆಯುತ್ತೆ ಚರ್ಮ

ಒಣ ಚರ್ಮವಾಗಿದ್ದರೆ : ನಿತ್ಯ ಆಲೂಗಡ್ಡೆ ರಸವನ್ನು ಹಚ್ಚಿಕೊಳ್ಳುತ್ತಿದ್ದರೆ, ಚರ್ಮಕ್ಕೆ ಕಾಂತಿ ಬರುತ್ತದೆ. ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದುಕೊಳ್ಳಬೇಕು. ಇದಕ್ಕೆ ಸ್ವಲ್ಪ ಲೋಳೆಸರದ ರಸವನ್ನು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಬೇಕು. ಇದನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿಕೊಂಡು ನಲವತ್ತು ನಿಮಿಷ ಒಣಗಲು ಬಿಡಬೇಕು. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು.

ತ್ವಚೆ ಸುಟ್ಟಂತಾಗಿದ್ದರೆ : ಮಿಕ್ಸಿಗೆ ಆಲೂಗಡ್ಡೆ ಹಾಕಿ ಅದರ ರಸ ತೆಗೆಯಬೇಕು. ಈ ರಸವನ್ನು ಫ್ರಿಜ್ ನಲ್ಲಿ ಇರಿಸಬೇಕು. ಬಿಸಿಲಿನಿಂದ ಚರ್ಮ ಸುಟ್ಟಂತಾದಾಗ ಈ ರಸವನ್ನು ಚರ್ಮದ ಮೇಲೆ ಹಚ್ಚಿಕೊಂಡು ನಯವಾಗಿ ಮಸಾಜ್‌ ಮಾಡಬೇಕು. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು.

ಇದನ್ನೂ ಓದಿ: Beauty Secret : ಶ್ರೀಗಂಧದಲ್ಲಿನ ಸೌಂದರ್ಯ ರಹಸ್ಯ ಏನು ಗೊತ್ತಾ ?

(Blooms from potatoes White skin)

RELATED ARTICLES

Most Popular