T20 World Cup : ರಾಹುಲ್‌, ಕಿಶಾನ್‌ ಪರಾಕ್ರಮ : ವಿಶ್ವಕಪ್‌ ನಲ್ಲಿ ಟೀಂ ಇಂಡಿಯಾ ಶುಭಾರಂಭ

ದುಬೈ : ಐಪಿಎಲ್‌ ಮುಕ್ತಾಯದ ಬೆನ್ನಲ್ಲೇ ಟಿ 20 ವಿಶ್ವಕಪ್‌ ಆರಂಭಗೊಂಡಿದೆ. ಇಂಗ್ಲೆಂಡ್‌ ತಂಡದ ವಿರುದ್ದದ ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌, ಇಶಾನ್‌ ಕಿಶನ್‌, ಮೊಹ್ಮದ್‌ ಸೆಮಿ ಅತ್ಯುತ್ತಮ ಆಟದ ಪ್ರದರ್ಶನದಿಂದಾಗಿ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ವಿಶ್ವಕಪ್‌ ನಲ್ಲಿ ವಿರಾಟ್‌ ಕೊಯ್ಲಿ ಪಡೆ ಶುಭಾರಂಭ ಮಾಡಿದೆ.

ದುಬೈನ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ಇಂಗ್ಲೆಂಡ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 188 ರನ್‌ ಗಳಿಸಿತ್ತು. ಆರಂಭಿಕರಾದ ರಾಯ್‌ ಹಾಗೂ ಜೋಸ್‌ ಬಟ್ಲರ್‌ ಉತ್ತಮ ಜೊತೆಯಾಟ ನೀಡಿದ್ರು. ಆದರೆ ಮೊಹಮದ್‌ ಶೆಮಿ ಇಂಗ್ಲೆಂಡ್‌ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ರು. ರಾಯ್‌ ಹಾಗೂ ಬಟ್ಲರ್‌ ವಿಕೆಟ್‌ ಪಡೆಯುವ ಮೂಲಕ ಆಘಾತವನ್ನು ನೀಡಿದ್ರು. ನಂತರ ಡಿ ಮಲನ್‌ ಹಾಗೂ ಜಾನಿ ಬ್ರೆಸ್ಟೋ ಉತ್ತಮ ಜೊತೆಯಾಟವಾಡಿದ್ರು. ಬ್ರೆಸ್ಟೋ 49 ರನ್‌ ಗಳಿಸಿದ್ದಾ ಬೂಮ್ರಾಗೆ ಬೌಲ್ಡ್‌ ಆಗುವ ಮೂಲಕ ಅರ್ಧ ಶತಕದಿಂದ ವಂಚಿತರಾದ್ರು. ನಂತರದಲ್ಲಿ ಲಿವಿಂಗ್‌ ಸ್ಟೋನ್‌ ಹಾಗೂ ಮೊಯಿನ್‌ ಆಲಿ ಉತ್ತಮ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್‌ ತಂಡ ಸವಾಲಿನ ಮೊತ್ತವನ್ನೇ ಪೇರಿಸಿತ್ತು.

IMAGE Credit : England Cricket |twitter

ಇಂಗ್ಲೆಂಡ್‌ ತಂಡ ನೀಡಿದ್ದ 189 ರನ್‌ ಗುರಿ ಬೆನ್ನತ್ತಲು ಹೊರಟ ಟೀಂ ಇಂಡಿಯಾಕ್ಕೆ ಆರಂಭಿಕರಾದ ಕೆ.ಎಲ್.ರಾಹುಲ್‌ ಹಾಗೂ ಇಶಾನ್‌ ಕಿಶನ್‌ ಭರ್ಜರಿ ಆರಂಭವೊದಗಿಸಿದ್ರು. ಆರಂಭದಿಂದಲೇ ಅಬ್ಬರದ ಹೊಡೆತಕ್ಕೆ ಮನ ಮಾಡಿದ ಕನ್ನಡಿಗ ಕೆ.ಎಲ್.ರಾಹುಲ್‌ ಕೇವಲ 24 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 6 ಬೌಂಡರಿ ನೆರವಿನಿಂದ ಆಕರ್ಷಕ ಅರ್ಧ ಶತಕ ಸಿಡಿಸಿದ್ರೆ, ಇಶಾನ್‌ ಕಿಶಾನ್‌ 46 ಎಸೆತಗಳನ್ನು ಎದುರಿಸಿ 70 ಎನ್‌ ಬಾರಿಸಿದ್ದಾರೆ. ಈ ಜೋಡಿ ಮೊದಲ ವಿಕೆಟ್‌ಗೆ ೮೨ರನ್‌ ಜೊತೆಯಾಟ ನೀಡಿತ್ತು. ರಾಹುಲ್‌ ಔಟಾಗುತ್ತಲೇ ಕ್ರೀಸ್‌ಗೆ ಬಂದ ನಾಯಕ ಕೊಯ್ಲಿ 11 ರನ್‌ಗಳಿಸಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ್ರು. ನಂತರ ಸೂರ್ಯಕುಮಾರ್‌ ಯಾದವ್‌ ನಿರಾಸೆ ಅನುಭವಿಸಿದ್ರು. ಆದರೆ ರಿಷಬ್‌ ಪಂತ್‌ ಹಾಗೂ ಹಾರ್ದಿಕ್‌ ಪಾಂಡ್ಯ ಭಾರತ ತಂಡವನ್ನು ಗೆಲುವಿನ ದಡ ದಾಟಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌ :
ಇಂಗ್ಲೆಂಡ್‌ : ಬ್ರೆಸ್ಟೋ 49, ಮೊಯಿನ್‌ ಆಲಿ 43, ಲಿವಿಂಗ್‌ ಸ್ಟೋನ್‌ 30, ಮಲನ್‌ 18, ಜೋಸ್‌ ಬಟ್ಲರ್‌ 18, ರಾಯ್‌ 17, ಶೆಮಿ 40/3, ಬೂಮ್ರಾ 26/1, ರಾಹುಲ್‌ ಚಹರ್‌ 43/1

ಭಾರತ : ಇಶಾನ್‌ ಕಿಶಾನ್‌ 70, ಕೆ.ಎಲ್.ರಾಹುಲ್‌ 51, ರಿಷಬ್‌ ಪಂತ್‌ 19, ಹಾರ್ದಿಕ್‌ ಪಾಂಡ್ಯ 12, ವಿರಾಟ್‌ ಕೊಯ್ಲಿ 11, ಸೂರ್ಯ ಕುಮಾರ್‌ ಯಾದವ್‌ 8, ವಿಲ್ಲಿಂಗ್‌ ಸ್ಟೋನ್‌ 10/1, ಡೇವಿಡ್‌ ವಿಲ್ಲಿ 16/1, ಮಾರ್ಕ್‌ ವುಡ್‌ 22/1.

( ICC T20 World Cup : India vs England warm-up Match: Ishan Kishan, KL Rahul help India beat England by 7 wickets )

Comments are closed.