Beauty tips : ಒಣದ್ರಾಕ್ಷಿಯ ಸೌಂದರ್ಯ ರಹಸ್ಯ

ಒಣದ್ರಾಕ್ಷಿ ಆರೋಗ್ಯಕ್ಕೆ ಬಹಳ ಉತ್ತಮ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಒಣದ್ರಾಕ್ಷಿಯಿಂದ ಸೌಂದರ್ಯವನ್ನು ಕಾಪಾಡಬಹುದು ಎಂಬ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲಾ. ಒಣದ್ರಾಕ್ಷಿಯ ಫೇಸ್ ಪ್ಯಾಕ್ ನಿಮ್ಮ ತ್ವಚೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುವುದು. ನಿಮ್ಮ ಚರ್ಮ ಪ್ರಕಾರಕ್ಕೆ ಅನುಗುಣವಾಗಿ ಒಣದ್ರಾಕ್ಷಿಯ ಫೇಸ್ ಪ್ಯಾಕ್ ತಯಾರಿಸಬಹುದು.

ಎಣ್ಣೆಯುಕ್ತ ತ್ವಚೆಗಾಗಿ ಒಣದ್ರಾಕ್ಷಿ ಫೇಸ್ ಮಾಸ್ಕ್ ತಯಾರಿಸಲು ಬೇಕಾಗುವ ಪದಾರ್ಥಗಳು : ಒಣದ್ರಾಕ್ಷಿ, ಟೀ ಟ್ರೀ ಆಯಿಲ್, ನಿಂಬೆ ರಸ, ಲೋಳೆಸರ, ಮುಲ್ತಾನಿ ಮಿಟ್ಟಿ. ಈ ಫೇಸ್ ಮಾಸ್ಕ್ ತಯಾರಿಸುವ ವಿಧಾನ: ಹೇಳಿದ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ ಒಟ್ಟಿಗೆ ಮಿಶ್ರಣ ಮಾಡಿ.

ಇದನ್ನೂ ಓದಿ: Coriander leaves Facepack : ಕ್ರೀಮ್‌ಗಳಿಗೆ ಗುಡ್‌ಬೈ ಹೇಳಿ ಕೊತ್ತೊಂಬರಿ ಸೊಪ್ಪಿನ ಫೇಸ್ ಪ್ಯಾಕ್ ಟ್ತೈ ಮಾಡಿ

ನಂತರ ಅವುಗಳನ್ನು ಗ್ರೈಂಡರ್‌ಗೆ ವರ್ಗಾಯಿಸಿ, ದಪ್ಪ ಪೇಸ್ಟ್ ಮಾಡಿ. ಸ್ಥಿರತೆ ದಪ್ಪವಾಗಿದ್ದರೆ ಮತ್ತು ಒಣಗಿದ್ದರೆ ಅದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಬಹುದು. ನಿಮ್ಮ ಬೆರಳುಗಳನ್ನು ಬಳಸಿ ಮುಖಕ್ಕೆ ಮಾಸ್ಕ್ ಹಚ್ಚಿ ಮಸಾಜ್ ಮಾಡಿ. ಇದನ್ನು 25 ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಿರಿ.

ಸಾಮಾನ್ಯ ಮತ್ತು ಒಣ ಚರ್ಮಕ್ಕಾಗಿ ಒಣದ್ರಾಕ್ಷಿ ಫೇಸ್ ಮಾಸ್ಕ್ ತಯಾರಿಸಲು ಬೇಕಾಗುವ ಪದಾರ್ಥಗ ಳು: ಒಣದ್ರಾಕ್ಷಿ, ಮೊಸರು, ಸೌತೆಕಾಯಿ, ಹಾಲು, ಕಡಲೆ ಹಿಟ್ಟು, ಗುಲಾಬಿ ದಳಗಳು. ಈ ಫೇಸ್ ಮಾಸ್ಕ್ ತಯಾರಿಸುವ ವಿಧಾನ: ಒಂದು ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

ಇದನ್ನೂ ಓದಿ: Beauty Tips : ಮೆಂತೆಯಲ್ಲಿದೆ ಸೌಂದರ್ಯದ ಗುಟ್ಟು

ನಂತರ ಅವುಗಳನ್ನು ಗ್ರೈಂಡರ್ ಗೆ ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ ನಂತರ 20 ನಿಮಿಷಗಳ ಕಾಲ ಹಾಗೆ ಬಿಡಿ. ಇದು ಒಣಗಿದ ನಂತರ, ರೋಸ್ ವಾಟರ್ ಮತ್ತು ನೀರಿನ ಮಿಶ್ರಣದಿಂದ ತೊಳೆಯಿರಿ.

(The secret of the beauty of raisins)

Comments are closed.