Besan Hair Mask: ಚಳಿಗಾಲದ ತಲೆಹೊಟ್ಟು ಸಮಸ್ಯೆಗೆ, ಕಡಲೆ ಹಿಟ್ಟಿನ ಹೇರ್‌ ಮಾಸ್ಕ್‌ನಲ್ಲಿದೆ ಪರಿಹಾರ

ನಮ್ಮ ಅಡುಗೆ ಮನೆಯಲ್ಲಿ (Kitchen) ಸಿಗುವ ಕಡಲೆ ಹಿಟ್ಟು (Besan) ಬರಿ ಅಡುಗೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅದು ಸೌಂದರ್ಯದ (Beauty) ವಿಷಯದಲ್ಲಿಯೂ ಬಹಳ ಪ್ರಯೋಜನಕಾರಿಯಾಗಿದೆ. ಕಡಲೆ ಹಿಟ್ಟು ಮೊಡವೆಯಿಂದಾದ ಕಲೆ, ಎಕ್ನಿ, ಪಿಗ್ಮಂಟೇಷನ್‌ ಮುಂತಾದ ತ್ವಚೆಯ ಸಮಸ್ಯೆಗಳಿಗೆ ಇದನ್ನು ಉಪಯೋಗಿಸಲಾಗುತ್ತದೆ. ಸೋಪು ಅಥವಾ ಫೇಸ್‌ ವಾಶ್‌ಗಳಿಂದ ಅಲರ್ಜಿ ಇರುವವರಿಗೆ ಕಡಲೆ ಹಿಟ್ಟಿನಿಂದ ಮುಖ ತೊಳೆಯಲು ಹೇಳುವುದನ್ನು ನಾವು ಕೇಳಿರುತ್ತೇವೆ. ನೈಸರ್ಗಿಕ ರೀತಿಯಲ್ಲಿ ತ್ವಚೆಯ ಆರೈಕೆ ಮಾಡುವವರು ಕಡಲೆ ಹಿಟ್ಟಿಗೆ ಒಂದು ಚಿಟಿಕೆ ಅರಿಶಿಣ ಮತ್ತು ಹಾಲು ಅಥವಾ ಮೊಸರು ಸೇರಿಸಿ ಫೇಸ್‌ ಮಾಸ್ಕ್‌ ಹಾಕಿಕೊಳ್ಳುತ್ತಾರೆ. ಏಕೆಂದರೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಇಷ್ಟೆಲ್ಲಾ ಪ್ರಯೋಜನವಿರುವ ಕಡಲೆ ಹಿಟ್ಟು ಕೂದಲಿನ ಆರೈಕೆ ಮತ್ತು ಸಮಸ್ಯೆಗಳನ್ನು ಕೂಡ ಯಶಸ್ವಿಯಾಗಿ ಪರಿಹರಿಸಬಲ್ಲದು (Besan Hair Mask). ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆ ಬಹಳ ಕಿರಿಕಿರಿಯನ್ನು ಜೊತೆಗೆ ಮುಜುಗರವನ್ನು ತಂದೊಡ್ಡುತ್ತದೆ. ಕಡಲೆ ಹಿಟ್ಟು ಅದಕ್ಕೆ ಉತ್ತಮ ಪರಿಹಾರವಾಗಿದೆ.

ಕಡಲೆ ಹಿಟ್ಟು ಕೂದಲಿನ ಪೋಷಣೆಯನ್ನು ಮಾಡುತ್ತದೆ. ಅದು ನೆತ್ತಿಯಲ್ಲಿ ಉಂಟಾಗುವ ಉರಿ, ಶುಷ್ಕತೆಯಿಂದ ಹೆಚ್ಚಾಗುವ ತಲೆಹೊಟ್ಟು ಮುಂತಾದ ಕೂದಲು ಮತ್ತು ನೆತ್ತಿಯ ಸಮಸ್ಯೆಗಳಿಂದ ಕಾಪಾಡುತ್ತದೆ. ಕೆಲವರು ಎಣ್ಣೆಯುಕ್ತ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಂತಹವರಿಗೂ ಕಡಲೆ ಹಿಟ್ಟಿನ ಹೇರ್‌ ಮಾಸ್ಕ್‌ ಉತ್ತಮವಾಗಿದೆ. ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಜೊತೆಗೆ ಇದರಲ್ಲಿ ಇರುವ ಪ್ರೋಟೀನ್‌ ಕೂದಲನ್ನು ಬುಡದಿಂದ ಗಟ್ಟಿಯಾಗಿಸುತ್ತದೆ. ಇಷ್ಟೆಲ್ಲಾ ಪ್ರಯೋಜನವಿರುವ ಕಡಲೆ ಹಿಟ್ಟಿನ ಹೇರ್‌ ಮಾಸ್ಕ್‌ ತಯಾರಿಸುವುದು ಹೇಗೆ? ಇಲ್ಲಿದೆ ಓದಿ.

ಕಡಲೆ ಹಿಟ್ಟಿನ ಹೇರ್‌ ಮಾಸ್ಕ್‌ ತಯಾರಿಸುವುದು ಹೇಗೆ?
ಇದನ್ನು ತಯಾರಿಸಲು ಕಡಲೆ ಹಿಟ್ಟು, ಮೊಸರು ಮತ್ತು ನೀವು ಬಳಸುವ ಹೇರ್‌ ಆಯಿಲ್‌ ಸಾಕು.

ವಿಧಾನ:
ಅರ್ಧ್‌ ಕಪ್‌ ಮೊಸರಿಗೆ ಎರಡು ಚಮಚ ಕಡಲೆ ಹಿಟ್ಟು ಮತ್ತು ಒಂದು ದೊಡ್ಡ ಚಮಚ ಹೇರ್‌ ಆಯಿಲ್‌ ಸೇರಿಸಿ ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನು ಕೂದಲಿನ ಬುಡದಿಂದ ಕೆಳ ಮುಖವಾಗಿ ಹಚ್ಚಿ. ಈ ಪೇಸ್ಟ್‌ ಅನ್ನು ನೆತ್ತಿಗೂ ಹಚ್ಚಿ ನಿಧಾನವಾಗಿ ಮಸ್ಸಾಜ್‌ ಮಾಡಿ. ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಯಾವುದಾದರೂ ಸಲ್ಫೇಟ್‌ ರಹಿತ ಶಾಂಪೂ ಬಳಸಿ ನಿಧಾನವಾಗಿ ಕೂದಲನ್ನು ತೊಳೆಯಿರಿ. ಕೂದಲು ಒಣಗಿದ ಮೇಲೆ ನಿಧಾನವಾಗಿ ಬಾಚಿಕೊಳ್ಳಿ. ಹೀಗೆ ವಾರಕ್ಕೆ ಎರಡು ಸಲ ಮಾಡುವುದರಿಂದ ಪರಿಣಾಮ ನೋಡಬಹುದಾಗಿದೆ. ಜೊತೆಗೆ ಸಾಕಷ್ಟು ನೀರನ್ನು ಕುಡಿಯಿರಿ. ಏಕೆಂದರೆ ಚಳಿಗಾಲದಲ್ಲಿ ನೀರಿನ ಕೊರತೆಯಿಂದಲೂ ಕೂದಲು ಉದುರುತ್ತದೆ.

ಇದನ್ನೂ ಓದಿ: Hair Beauty Tips:ಕೂದಲು ತೊಳೆಯಲು ಶಾಂಪು ಬಳಸಬೇಕಿಲ್ಲ! ಈ ಟಿಪ್ಸ್ ಅನುಸರಿಸಿ

ಇದನ್ನೂ ಓದಿ: Best Superfoods : ಯಾವಾಗಲೂ ಫಿಟ್‌ ಆಗಿರಲು ಈ ಸೂಪರ್‌ಫುಡ್‌ಗಳು ನಿಮಗೆ ಸಹಾಯ ಮಾಡುತ್ತವೆ; ತಪ್ಪದೇ ಇವುಗಳನ್ನು ಸೇವಿಸಿ

(Besan Hair Mask to cure dandruff and hair fall.)

Comments are closed.