ಚಳಿಗಾಲ ಬಂತೆಂದರೆ ಹಿಮ್ಮಡಿಗಳು ಒಡೆಯುವುದು (Cracked Heels) ಕಾಣಿಸುತ್ತದೆ. ಪಾದದ ಚರ್ಮ(Skin) ಒರಟಾಗಿ ಬಿರುಕು ಬಿಡುತ್ತದೆ. ಇದರಿಂದ ಪಾದಗಳಲ್ಲಿ ನೋವು (Pain) ಕಾಣಿಸುತ್ತದೆ ಮತ್ತು ಕೆಲವೊಮ್ಮೆ ಆಳವಾಗಿ ಬಿರುಕು ಬಿಟ್ಟಾಗ ರಕ್ತವೂ ಬರುತ್ತದೆ. ಆಗ ನಡೆದಾಡಲು ಕಷ್ಟ ಎನಿಸುತ್ತದೆ. ಇದಕ್ಕೆ ಕಾರಣ ಪಾದಗಳ ಮೇಲಿನ ಚರ್ಮವು ಶುಷ್ಕವಾಗಿ ಒರಟಾಗುತ್ತದೆ. ಪರಿಣಾಮ ಹಿಮ್ಮಡಿಗಳು ಬಿಡುತ್ತವೆ. ಮಾರುಕಟ್ಟೆಯಲ್ಲಿ ಇದಕ್ಕೇ ಹಲವು ಬಗೆಯ ಕ್ರೀಮ್‌ಗಳು ಸಿಗುತ್ತವೆ. ಆದರೂ ಕೆಲವೊಮ್ಮೆ ಅವುಗಳಿಂದ ಸಮರ್ಪಕ ರೀತಿಯಲ್ಲಿ ಸಮಸ್ಯೆ ಬಗೆ ಹರಿಯುವುದಿಲ್ಲ. ಅದಕ್ಕಾಗಿ ನಾವು ಇಲ್ಲಿ ಕೆಲವು ಮನೆಮದ್ದುಗಳನ್ನು ಹೇಳುತ್ತಿದ್ದೇವೆ. ಅವುಗಳನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು.
ಒಡೆದ ಹಿಮ್ಮಡಿಗಳ (Cracked Heels) ಸಮಸ್ಯೆಯನ್ನು ದೂರಮಾಡಲು ಈ ಮನೆಮದ್ದುಗಳನ್ನು ಉಪಯೋಗಿಸಿ:
ಸಸ್ಯಜನ್ಯ ಎಣ್ಣೆ (ವೆಜಿಟೇಬಲ್ ಆಯಿಲ್):
ಸಂಶೋಧನೆಗಳ ಪ್ರಕಾರ ಸಸ್ಯಜನ್ಯ ಎಣ್ಣೆಗಳು ಎಮೋಲಿಯಂಟ್ ಗುಣಲಕ್ಷಣಗಳನ್ನು ಹೊಂದಿವೆ. ಅವುಗಳು ಆಂಟಿಒಕ್ಸಿಡೆಂಟ್, ಆಂಟಿಮೈಕ್ರೊಬಿಯಲ್, ಉರಿಯೂತದ ಮತ್ತು ಗಾಯವನ್ನು ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿವೆ. ಈ ಎಣ್ಣೆಗಳು ಆರೋಗ್ಯಕರ ಚರ್ಮವನ್ನು ನೀಡುತ್ತವೆ. ಈ ಎಲ್ಲ ಗುಣಗಳಿರುವುದರಿಂದ ಸಸ್ಯಜನ್ಯ ಎಣ್ಣೆಯು ಬಿರುಕು ಬಿಟ್ಟ ಹಿಮ್ಮಡಿಗಳ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ.
ಇದನ್ನೂ ಓದಿ : Weight Loss Tips : ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆ ? ಇಲ್ಲಿದೆ ಸುಲಭ ಪರಿಹಾರ
ಉಪ್ಪು, ಗ್ಲಿಸರಿನ್ ಮತ್ತು ರೋಸ್ ವಾಟರ್ ಫುಟ್ ಮಾಸ್ಕ್:
ರೋಸ್ ವಾಟರ್ ಉತ್ತಮ ಆಂಟಿಒಕ್ಸಿಡೆಂಟ್ ಹೊಂದಿದೆ. ಮತ್ತು ಉರಿಯೂತವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಇದು ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ. ಇದರಿಂದ ಶುಷ್ಕತೆ ದೂರವಾಗಿ, ಚರ್ಮದ ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಗ್ಲಿಸರಿನ್ ಶಕ್ತಿಯುತವಾದ ಹ್ಯೂಮೆಕ್ಟಂಟ್ ಆಗಿದ್ದು ಚರ್ಮವನ್ನು ನೈಸರ್ಗಿಕವಾಗಿ ತೇವಾಂಶದಿಂದ ಇರುವಂತೆ ಮಾಡಲು ಸಹಾಯ ಮಾಡುತ್ತದೆ.
ಶಿಯಾ ಬಟರ್:
ಶಿಯಾ ಬಟರ್ ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಚರ್ಮವನ್ನು ಪೋಷಿಸುತ್ತದೆ ಮತ್ತು ಹೈಡ್ರೇಟ್ ಮಾಡುತ್ತದೆ. ಇದು ಬಿರುಕುಗಳನ್ನು ಗುಣಪಡಿಸುವ ಲಕ್ಷಣಗಳನ್ನು ಹೊಂದಿದೆ. ಇದರಲ್ಲಿರುವ ವಿಟಮಿನ್ ಎ ಮತ್ತು ಇ ಅಂಶದಿಂದಾಗಿ ಚರ್ಮಗಳ ಶುಷ್ಕತೆಯನ್ನು ದೂರಮಾಡುತ್ತದೆ. ಮತ್ತು ಚರ್ಮದ ಸ್ಥಿತಿಯನ್ನು ಸುಧಾರಿಸುತ್ತದೆ.
ಪೆಟ್ರೋಲಿಯಂ ಜೆಲ್ಲಿ:
ಪೆಟ್ರೋಲಿಯಂ ಜೆಲ್ಲಿ ಶುಷ್ಕ ಮತ್ತು ಬಿರುಕು ಬಿಟ್ಟ ಹಿಮ್ಮಡಿಗಳಿಗೆ ತೇವಾಂಶವನ್ನು ಪುನಃ ನೀಡಲು ಸಹಾಯ ಮಾಡುತ್ತದೆ. ಇದು ಚರ್ಮದ ಮೇಲ್ಮೈಯಿಂದ ನೀರು ಹೋಗದಂತೆ ಮಾಡುತ್ತದೆ. ಅಂದರೆ ಆರ್ದ್ರತೆಯು ಚರ್ಮದಲ್ಲಿಯೇ ಇರುವಂತೆ ನೋಡಿಕೊಳ್ಳುತ್ತದೆ. ಇದು ನಿಮ್ಮ ತ್ವಚೆಯನ್ನು ಮೃದುವಾಗಿ ಮತ್ತು ಹೈಡ್ರೇಟೆಡ್ ಆಗಿರಿಸುತ್ತದೆ.
ಜೇನು:
ಒಡೆದ ಹಿಮ್ಮಡಿಗಳಿಗೆ ನೈಸರ್ಗಿಕ ಚಿಕಿತ್ಸೆಯಾಗಿ ಜೇನುತುಪ್ಪವನ್ನು ಬಳಸಬಹುದು. ಇದು ಆಂಟಿಮೈಕ್ರೊಬಿಯಲ್ ಮತ್ತು ಆಂಟಿಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿದೆ. ಇದು ಗಾಯಗಳನ್ನು ಗುಣಪಡಿಸುತ್ತದೆ ಜೊತೆಗೆ ಚರ್ಮವನ್ನು ತೇವಗೊಳಿಸುತ್ತದೆ. ಜೇನುತುಪ್ಪವನ್ನು ಪಾದಗಳಿಗೆ ಹಚ್ಚಿ ರಾತ್ರಿಯಿಡೀ ಪಾದದ ಮಾಸ್ಕ್ ನಂತೆ ಬಳಸಬಹುದು.
ಇದನ್ನೂ ಓದಿ : Meditation : ಒತ್ತಡ ನಿಭಾಯಿಸಲು ಧ್ಯಾನ ಮಾಡುವುದೇ ಬೆಸ್ಟ್; ಹೇಗೆ ಅಂತೀರಾ ಇಲ್ಲಿದೆ ಓದಿ
(Best home remedies for Cracked Heels problem)