Best Summer Dresses : ಈಗಂತೂ ವಿಪರೀತ ಸೆಖೆ. ಹೀಗಾಗಿ ಹೊರಗಡೆ ತಿರುಗಾಡೋಕೆ ಹೋಗೋಣ ಅಂದರೂ ಸೂರ್ಯನ ಧಗೆ ನಿಮ್ಮನ್ನು ನೆಮ್ಮದಿಯಿಂದ ಇರಲು ಬಿಡದು. ಹೀಗಾಗಿ ಮಹಿಳೆಯರಿಗೆ ಈ ಬೇಸಿಗೆ ಕಾಲದಲ್ಲಿ ಯಾವ ಡ್ರೆಸ್ಗಳನ್ನು ಹಾಕಿ ತಿರುಗಾಡೋಕೆ ಹೋಗೋದು ಎಂಬುದೇ ದೊಡ್ಡ ತಲೆನೋವು. ಫ್ಯಾಶನ್ನ್ನು ಮರೆಯದೇ ಸೆಖೆಯನ್ನೂ ಗಮನದಲ್ಲಿಟ್ಟುಕೊಂಡು ನೀವು ಅತ್ಯಂತ ಆರಾಮಾದಾಯಕ ಎಂಬ ಧಿರಿಸುಗಳನ್ನೂ ಈ ಬೇಸಿಗೆಯಲ್ಲಿ ಧರಿಸಬಹುದು. ಸ್ಕರ್ಟ್ಗಳು, ಜಂಪ್ಸೂಟ್ಗಳು ಅಷ್ಟೇ ಏಕೆ ಮ್ಯಾಕ್ಸಿಗಳು ಬೇಸಿಗೆ ಕಾಲದಲ್ಲಿ ನಿಮ್ಮ ಆಪ್ತ ಮಿತ್ರ ಎನಿಸುತ್ತವೆ. ಹಾಗಾದರೆ ಈ ಸೆಖೆಗಾಲದಲ್ಲಿ ನಿಮ್ಮ ಧಿರಿಸಿನ ಆಯ್ಕೆ ಹೇಗಿರಬೇಕು ಎಂಬುವುದಕ್ಕೆ ಇಲ್ಲಿದೆ ಮಾಹಿತಿ :
ಮ್ಯಾಕ್ಸಿ ಡ್ರೆಸ್ :

ಬೇಸಿಗೆ ಕಾಲದಲ್ಲಿ ಮ್ಯಾಕ್ಸಿ ಡ್ರೆಸ್ಗಳು ನೀಡುವಷ್ಟು ನೆಮ್ಮದಿಯನ್ನು ನಿಮಗೆ ಮತ್ಯಾವ ಡ್ರೆಸ್ಗಳು ನೀಡಲು ಅಸಾಧ್ಯ. ಉದ್ದನೆಯ ತೋಳಿನ, ಮೈ ತುಂಬಾ ಕವರ್ ಆಗುವಂತಹ ಈ ಮ್ಯಾಕ್ಸಿ ಉಡುಪುಗಳು ನಿಮ್ಮನ್ನು ಸೂರ್ಯನ ಶಾಖದಿಂದ ಸುಡದಂತೆ ನೋಡಿಕೊಳ್ಳುತ್ತವೆ. ಸಾಮಾನ್ಯವಾಗಿ ಹತ್ತಿ ಬಟ್ಟೆಯಲ್ಲಿಯೇ ನಿಮಗೆ ಮ್ಯಾಕ್ಸಿಗಳು ದೊರೆಯುವುದರಿಂದ ನಿಮಗೆ ಈ ಉಡುಪು ಅತ್ಯಂತ ಭಾರ ಎಂತಲೂ ಎನಿಸುವುದಿಲ್ಲ.
ಫ್ಲೋರಲ್ ಪ್ರಿಂಟ್ ಡ್ರೆಸ್ಗಳು :

ನೀವು ಬಟ್ಟೆಗಳ ಮೇಲೆ ದೊಡ್ಡ ದೊಡ್ಡ ಹೂವುಗಳು ಅಥವಾ ಇನ್ಯಾವುದೇ ದೊಡ್ಡ ದೊಡ್ಡ ಡಿಸೈನ್ಗಳನ್ನು ನೀವು ಇಷ್ಟಪಡುವವರಾಗಿದ್ದರೆ ಫ್ಲೋರಲ್ ಪ್ರಿಂಟ್ ಡ್ರೆಸ್ಗಳು ನಿಮ್ಮ ಬೇಸಿಗೆಗೆ ಬೆಸ್ಟ್ ಆಯ್ಕೆ ಎನಿಸಲಿವೆ. ಡ್ರೆಸ್ಗಳ ಮೇಲೆ ಅತಿಯಾದ ಎಂಬ್ರಾಯ್ಡರಿಗಳು ನಿಮಗೆ ಈ ಸೆಖೆಯಲ್ಲಿ ಕಿರಿಕಿರಿ ಎನಿಸಬಹುದು. ಆದರೆ ಅದರ ಬದಲು ಫ್ಲೋರಲ್ ಪ್ರಿಂಟ್ ಬಟ್ಟೆಗಳನ್ನು ಧರಿಸುವುದರಿಂದ ನಿಮಗೆ ಕಿರಿಕಿರಿಯೂ ಇರೋದಿಲ್ಲ. ಹಾಗೂ ಬೇಸಿಗೆಗೆ ಟ್ರೆಂಡಿ ಎಂತಲೂ ಎನಿಸುತ್ತವೆ.
ಶರ್ಟ್ ಡ್ರೆಸ್ಗಳು :

ಶರ್ಟ್ ಡ್ರೆಸ್ಗಳು ಬೇಸಿಗೆಯ ಸಂದರ್ಭದಲ್ಲಿ ಸ್ಟಾರ್ ನಟಿಯರ ಹಾಟ್ ಫೇವರಿಟ್ ಆಯ್ಕೆಯಾಗಿದೆ. ಇದರಲ್ಲಿ ಅನೇಕ ವಿಧಗಳು ನಿಮಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕಾಟನ್ ಅಥವಾ ಲಿನೆನ್ಗಳಿಂದ ಮಾಡಲ್ಪಡುವ ಈ ಡ್ರೆಸ್ಗಳು ನಿಮ್ಮ ಫಿಗರ್ನ್ನು ಅಚ್ಚುಕಟ್ಟಾಗಿ ತೋರಿಸುತ್ತದೆ. ಈ ಡ್ರೆಸ್ಗಳ ನೆಕ್ನಲ್ಲಿರುವ ಕಾಲರ್ಗಳು ನಿಮಗೆ ಸಖತ್ ಲುಕ್ ನೀಡುತ್ತದೆ.
ಮಿಡಿ ಡ್ರೆಸ್ಗಳು :

ನೀವು ಮಿಡಿ ಡ್ರೆಸ್ಗಳನ್ನು ಇಷ್ಟ ಪಡುವವರಾಗಿದ್ದರೆ ನೀವು ಬೇಸಿಗೆಯಲ್ಲಿ ತಲೆ ಕೆಡಿಸಿಕೊಳ್ಳುವುದೇ ಬೇಡ. ಮಿಡಿ ಡ್ರೆಸ್ಗಳು ಹೀಲ್ಸ್ಗಳ ಜೊತೆಯಲ್ಲಿ ಧರಿಸುವುದರಿಂದ ನಿಮಗೆ ಸಖತ್ ಹಾಟ್ ಲುಕ್ ನೀಡುತ್ತದೆ. ಇದರಲ್ಲಿ ಬರುವ ಕೋಲ್ಡ್ ಶೋಲ್ಡರ್ಗಳು , ಬ್ರಾಡ್ ನೆಕ್ ಡ್ರೆಸ್ಗಳು ಸಖತ್ ಟ್ರೆಂಡಿಯಾಗಿದೆ .
ಇದನ್ನು ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್
ಇದನ್ನೂ ಓದಿ : School Open Postpone : ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್ ಹೊರಟ್ಟಿ
Best Summer Dresses for Reveling in Warmer Temps