vastu tips for evening : ಸೂರ್ಯ ಮುಳುಗಿದ ಬಳಿಕ ಎಂದಿಗೂ ಈ ಕೆಲಸಗಳನ್ನು ಮಾಡಬೇಡಿ

vastu tips for evening : ಹಿಂದೂ ಧರ್ಮದ ಪ್ರಕಾರ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯವು ಅತ್ಯಂತ ವಿಶೇಷವಾಗಿದೆ. ಆದ್ದರಿಂದ ಈ ಸಮಯದಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸದ ಬಗ್ಗೆ ನೀವು ಅತ್ಯಂತ ಜಾಗರೂಕರಾಗಿ ಇರಬೇಕು. ಹಿಂದೂ ಧರ್ಮ, ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರಗಳ ಪ್ರಕಾರ ಬೆಳಗ್ಗೆ ಹಾಗೂ ಸಂಜೆಯ ಸಮಯ ನೀವು ಕೆಲವು ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ.


ಸೂರ್ಯಾಸ್ತದ ಬಳಿಕ ಕೆಲವು ಕೆಲಸಗಳನ್ನು ಮಾಡುವುದುನ್ನು ವಾಸ್ತು ಶಾಸ್ತ್ರವು ನಿಷಿದ್ಧವೆಂದು ಹೇಳುತ್ತದೆ. ಕೆಲವೊಂದು ಕೆಲಸಗಳನ್ನು ನೀವು ಸಂಜೆಯ ಬಳಿಕ ಮಾಡಿದರೆ ಇದರಿಂದ ಅನೇಕ ತೊಂದರೆಗಳು ಉಂಟಾಗುತ್ತದೆ. ಇದರಿಂದ ಒಬ್ಬ ವ್ಯಕ್ತಿಯು ದಾರಿದ್ರ್ಯ ಜೀವನವನ್ನು ಬಾಳಬೇಕಾಗಿ ಬರಬಹುದು. ಹೀಗಾಗಿ ಈ ವಿಚಾರದಲ್ಲಿ ನೀವು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.


ಸೂರ್ಯಾಸ್ತದ ಸಮಯದಲ್ಲಿ ಯಾರೂ ಮಲಗಬಾರದು. ಅನಾರೋಗ್ಯ ಪೀಡಿತರು ಅಥವಾ ವೃದ್ಧರಿಗೆ ಈ ನಿಯಮದಿಂದ ವಿನಾಯಿತಿ ಇದೆ. ಆರೋಗ್ಯವಂತರು ಸೂರ್ಯನು ಮುಳುಗುವ ಸಮಯದಲ್ಲಿ ಮಲಗಿದ್ದರೆ ಇದರಿಂದ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳೆ.


ಸೂರ್ಯಾಸ್ತದ ಸಮಯದಲ್ಲಿ ಆಹಾರವನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಮುಂದಿನ ಜನ್ಮದಲ್ಲಿ ಪ್ರಾಣಿಯಾಗಿ ಜನಿಸುತ್ತಾರೆ.


ಸಂಜೆ ಯಾರಿಗೂ ಹಾಲು, ಮೊಸರು, ಉಪ್ಪನ್ನು ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಲಕ್ಷ್ಮಿ ದೂರವಾಗುತ್ತಾಳೆ. ಇದರ ಜೊತೆಯಲ್ಲಿ ಸಂಜೆಯ ಬಳಿಕ ಅಪ್ಪಿ ತಪ್ಪಿಯೂ ಯಾರಿಗೂ ಸಾಲ ನೀಡಬೇಡಿ. ಇದರಿಂದ ನಿಮಗೆ ದಾರಿದ್ರ್ಯ ಬರುತ್ತದೆ.


ಸೂರ್ಯಾಸ್ತದ ಸಮಯದಲ್ಲಿ ಅಧ್ಯಯನ ಮಾಡುವುದರ ಬದಲು ಮಂತ್ರ ಜಪ ಅಥವಾ ಆರತಿಯನ್ನು ಮಾಡುವುದು ಒಳ್ಳೆಯದು ಎಂಬ ನಂಬಿಕೆಯಿದೆ.


ಸೂರ್ಯಾಸ್ತದ ಸಂದರ್ಭದಲ್ಲಿ ಪತಿ – ಪತ್ನಿ ಎಂದಿಗೂ ಲೈಂಗಿಕ ಚಟುವಟಿಕೆ ನಡೆಸಬಾರದು. ಈ ಸಮಯದಲ್ಲಿ ನಡೆದ ಸಂಭೋಗದಿಂದ ಜನಿಸುವ ಮಗುವು ಸಂಸ್ಕಾರಹೀನವಾಗಿರುತ್ತದೆ .


ಸಾಯಂಕಾಲದ ವೇಳೆ ಅಪ್ಪಿತಪ್ಪಿಯೂ ಕಸ ಗುಡಿಸಿ ಒರೆಸಬೇಡಿ. ಈ ರೀತಿ ಮಾಡಿದರೆ ಹಣದ ನಷ್ಟ ಉಂಟಾಗುತ್ತದೆ. ಹಾಗೂ ದುಂದು ಖರ್ಚು ಹೆಚ್ಚಾಗುತ್ತದೆ.

ಇದನ್ನು ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್

ಇದನ್ನೂ ಓದಿ : Vastu Tips : ಸ್ನಾನ ಮಾಡಿದ ಬಳಿಕ ಮಾಡಲೇಬೇಡಿ ಈ ತಪ್ಪು: ಇದರಿಂದ ಉಂಟಾಗುತ್ತದೆ ಆರ್ಥಿಕ ನಷ್ಟ

vastu tips for evening do not do these work on sunset time its dangerous for your financial position

Comments are closed.