- ಅಂಚನ್ ಗೀತಾ
Curd Beauty Secrets : ಮೂವತ್ತು ವರ್ಷದ ಬಳಿಕ ಮಹಿಳೆಯರಂತೂ ತ್ವಚೆಯ ಸೌಂದರ್ಯ ದ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗುತ್ತದೆ. ಅಷ್ಟೆ ಅಲ್ಲ ಮಹತ್ವವನ್ನು ನೀಡುತ್ತಾರೆ ಕೂಡ. ಆದ್ರೆ ಕೆಲವರಿಗೆ ತಮ್ಮ ಮನೆಯಲ್ಲಿ ದ್ದ ಅಡುಗೆ ಪದಾರ್ಥಗಳನ್ನು ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ನೀಡುವ ಔಷಧಿಗಳ ಬಗ್ಗೆ ತಿಳಿದಿರೋದಿಲ್ಲ. ಹೀಗಾಗಿ ಪ್ರತಿ ಬಾರಿ ಕೂಡ ಬ್ಯೂಟಿ ಪಾರ್ಲರ್ ಗಳಿಗೆ ಭೇಟಿ ನೀಡ್ತಾರೆ.

ಆದ್ರೆ ಪಾರ್ಲರ್ ಗಳಿಗೆ ಭೇಟಿ ನೀಡುವ ಅವಶ್ಯಕತೆನೆ ಇರೋದಿಲ್ಲ. ಬದಲಿಗೆ ನಾವೂ ಬಳಸೋ ದಿನ ಬಳಕೆಯ ವಸ್ತುಗಳಲ್ಲಿ ತ್ವಚೆಯ ಅಂದವನ್ನು ಹೆಚ್ಚಿಸಬಹುದು. ಅಂತಹವುಗಳಲ್ಲಿ ಮೊಸರು ಕೂಡ ಒಂದು. ಪ್ರತಿದಿನ ಮೊಸರು ಸೇವಿಸೋದ್ರಿಂದ ಜೀರ್ಣಾಂಗ ಕ್ರಿಯೆ ಉತ್ತಮವಾಗಿರುತ್ತದೆ.

ಅಲ್ಲದೆ ಮೊಸರಿನ ಇನ್ನೊಂದು ವಿಶೇಷತೆ ಅಂದ್ರೆ ಚರ್ಮದ ಸಮಸ್ಯೆ ಗಳಿಗೆ ಪರಿಹಾರ ನೀಡುವುದು. ಇದ್ರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ನಂತಹ ವಿಟಮಿನ್ ಗಳು ಹೆಚ್ಚಿರೋದ್ರಿಂದ ಚರ್ಮದ ತೊಂದರೆಗಳಿಗೆ ಸೂಕ್ತ ಮನೆಮದ್ದು. ಮೊಸರಿನಿಂದ ಯಾವ ರೀತಿಯ ಉಪಯೋಗ ಗಳಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Curd Beauty : ಮೊಸರಿನ ಪ್ರಯೋಜನಗಳು
- ಚರ್ಮವನ್ನು ಆಳವಾಗಿ ಶುದ್ದ ಮಾಡುತ್ತೆ. ಮೊಡವೆಗಳಿಂದ ಶಮನ ನೀಡುತ್ತೆ. ಹೊಳಪು ಹೆಚ್ಚಿಸಲು ಸೂಕ್ತ. ಮುಖದ ಕಲೆಗಳನ್ನು ನಿವಾರಿಸುತ್ತದೆ
- ಸೂರ್ಯ ಕಿರಣಗಳಿಂದಾಗುವ ಹಾನಿಯಿಂದ ರಕ್ಷಿಸುತ್ತದೆ ತೇವಾಂಶವನ್ನು ಹೆಚ್ಚಿಸುತ್ತದೆಚರ್ಮದ ಕಾಂತಿ ಹೆಚ್ಚಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಾಸ್ಮೆಟಿಕ್ ಗಳಲ್ಲಿ ರಾಸಾಯನಿಕಗ ಳಿರೋದ್ರಿಂದ ಚರ್ಮ ಕಳೆಗುಂದುವ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿ ಕೊಳ್ಳುತ್ತದೆ. ಇಂತಹ ಸಮಸ್ಯೆಗೆ ಮೊಸರಿನೊಂದಿಗೆ ಸೌತೆಕಾಯಿ ಸೇರಿಸಿ ಮುಖಕ್ಕೆ ಲೇಪಿಸಿದರೆ ಸಮಸ್ಯೆ ದೂರವಾಗುತ್ತದೆ.

( ಒಂದು ಬಟ್ಟಲಿನಲ್ಲಿ ಒಂದು ಚಮಚ ಮೊಸರು ಮತ್ತು ತಾಜಾ ಸೌತೆಕಾಯಿ ಕತ್ತರಿಸಿ ಮೊಸರಿನೊಂದಿಗೆ ಸೇರಿಸಿ ಪೇಸ್ಟ್ ತಯಾರಿಸಿ. ಪೇಸ್ಟ್ ಮುಖಕ್ಕೆ ಹಚ್ಚಿ ೧೫ ನಿಮಿಷಗಳ ಕಾಲ ಒಣಗಳು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನೊಂದಿಗೆ ತೊಳೆಯಿರಿ. ಹೀಗೆ ಮಾಡೋದ್ರಿಂದ ಮುಖದ ಸೌಂದರ್ಯ ಹೆಚ್ಚುವುದರ ಜೊತೆಗೆ ಕಳೆಗುಂದಿದ ತ್ವಚೆ ಹೊಳೆಯುತ್ತದೆ.)
Curd Beauty : ಶುಷ್ಕ ಚರ್ಮಕ್ಕೆ
ಶುಷ್ಕ ಚರ್ಮವನ್ನು ನಿಯಂತ್ರಿಸುವುದು ಸುಲಭವಲ್ಲ. ಅದ್ರಲ್ಲೂ ಚಳಿಗಾಲ ದಲ್ಲಾದರೆ ಕಷ್ಟಕರ. ಇಂತಹ ಸಮಸ್ಯೆಗಳಿಗೆ ಮೊಸರು ಸಹಕಾರಿ. ಚರ್ಮವನ್ನು ತೇವಗೊಳಿಸುವ ಮೂಲಕ ಶುದ್ದಗೊಳಿ ಸುತ್ತದೆ. ಜೇನುತುಪ್ಪ ಸೇರಿಸುವುದರಿಂದ ಚರ್ಮದ ಹಾನಿಯನ್ನು ತಪ್ಪಿಸಬಹುದು.

2 ಚಮಚ ಮೊಸರು ಹಾಗೂ ಒಂದು ಚಮಚ ಜೇನುತುಪ್ಪ ಸೇರಸಿ ಪೇಸ್ಟ್ ಮಾಡಿ. ನಂತರ ಮುಖಕ್ಕೆ ಹಾಗೂ ಕುತ್ತಿಗೆಗೆ ಲೇಪಿಸಿ. 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದರೆ ಮುಖವು ಕಾಂತಿಯಿಂದ ಕೊಡಿರುತ್ತದೆ.

Curd Beauty : ಮೊಡವೆಗೆ ಮೊಸರು ಮತ್ತು ಅಕ್ಕಿಹಿಟ್ಟು
ಮೊಡವೆ ಸಮಸ್ಯೆಗೆ ಅಕ್ಕಿಹಿಟ್ಟು ಸೂಕ್ತವಾದದ್ದು. ಇದ್ರಲ್ಲಿ ವಿಟಮಿನ್ ಬಿ ಇರುವುದರಿಂದ ಚರ್ಮದ ಬಣ್ಣ ಹೆಚ್ಚಲು ಸಹಕಾರಿ ಆಗುತ್ತೆ.

Curd Beauty : ಹೀಗೆ ಮಾಡಿ
ಒಂದು ಚಮಚ ಮೊಸರು ಹಾಗೂ ಒಂದುವರೆ ಚಮಚ ಅಕ್ಕಿ ಹಿಟ್ಟು ಸೇರಿಸಿ ಪೇಸ್ಟ್ ತಯಾರಿಸಿ. ನಂತರ ಪೇಸ್ಟ್ ಅನ್ನು ಮೊಡವೆಗಳ ಮೇಲೆ ಲೇಪಿ. 15 ರಿಂದ 20 ನಿಮಿಷಗಳ ಕಾಲ ಒಣಗಲು ಬಿಡಿ. ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಪೇಸ್ಟ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ನಿಯಮಿತವಾಘಿ ಹಚ್ಚುವುದ ರಿಂದ ಮೊಡವೆಗಳು ಕಡಿಮೆಯಾಗುತ್ತದೆ.

ಹೊಳಪಿಗೆ ಮೊಸರು ಮತ್ತು ಕಡಲೇಹಿಟ್ಟು
ಒಂದು ಚಮಚ ಮೊಸರು ಮತ್ತು ಒಂದೂವರೆ ಚಮಚ ಕಡಲೇ ಹಿಟ್ಟು ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಲೇಪಿಸಿ. 10 ರಿಂದ 15 ನಿಮಿಷಗಳ ನಂತರ ಒದ್ದೆ ಬಟ್ಟೆಯಿಂದ ನಿಧಾನವಾಗಿ ಒರೆಸಿಕೊಳ್ಳಿ. ವಾರಕ್ಕೆ ಒಂದು ಭಾರಿ ಹಚ್ಚಿದ್ರೆ ಸಾಕು ಮುಖದ ಬಣ್ಣ ಹೆಚ್ಚುತ್ತದೆ.
ಇದನ್ನೂ ಓದಿ : ವೆದರ್ ಚೇಂಜ್ ನಿಂದ ಅಲರ್ಜಿ ಹೆಚ್ಚಾಗಿದೆಯಾ? ಇಲ್ಲಿ ಹೇಳಿರುವ ಟಿಪ್ಸ್ ಪಾಲಿಸಿ
ಇದನ್ನೂ ಓದಿ : Coconut Oil Good Health : ಸೌಂದರ್ಯವನ್ನು ಹೆಚ್ಚಿಸುತ್ತೆ ತೆಂಗಿನ ಎಣ್ಣೆ
(Curd Beauty Health Secrets )