Madur Madanantheshwara Temple : ಈ ಕ್ಷೇತ್ರದಲ್ಲಿ ಪವಾಡ ಸೃಷ್ಟಿಸಿದ್ದಾನೆ ಗಣೇಶ : ಗೋಡೆಯಲ್ಲಿ ಬೆಳೆಯುತ್ತಲೇ ಇದೆ ವಿಘ್ನವಿನಾಶಕನ ಚಿತ್ರ

0

Madur Madanantheshwara Temple : ಯಾವುದೇ ಕಾರ್ಯ ಆದ್ರೂ ಮೊದಲು ಕೈ ಮುಗಿಯೋದು ದೇವರಿಗೆನೇ. ಅವನನ್ನು ನೆನೆಯದಿದ್ರೆ ಯಾವ ಕೆಲಸಾನೂ ಸಾಗಲ್ಲ ಆನ್ನೋ ನಂಬಿಕೆ. ಅದರಲ್ಲೂ ಪ್ರತಿ ಹೊಸ ಕಾರ್ಯದ ಮುನ್ನ ಅಗ್ರ ಪೂಜೆ ಸಲ್ಲೋದು ನಮ್ಮ ಗಣಪನಿಗೆ. ವಿಘ್ನವಿನಾಶಕ, ಗಣೇಶ, ಮೂಶಿಕ ವಾಹನನನ್ನು ನೆನೆಯದವರೇ ಇರಲಿಕ್ಕಿಲ್ಲ. ಅವನಿಗಾಗಿ ದೇಶಾದ್ಯಂತ ಹಲವು ದೇವಾಲಯಗಳಿವೆ. ಆದ್ರೆ ಈ ದೇವಾಲಯ ಮಾತ್ರ ಎಲ್ಲಾ ದೇವಾಲಯಗಳಿಗಿಂತ ಭಿನ್ನ.

ಈ ದೇವಾಲಯದಲ್ಲಿ ಗಣೇಶ ಮುಖ್ಯ ದೇವರಲ್ಲ ಆದ್ರೂ ಭಕ್ತರು ನೋಡೋಕೆ ಬರೋದು ಮಾತ್ರ ಅವನ್ನೇ. ಇಲ್ಲಿ ಗಣೇಶನ್ನು ನಂಬಿದ್ರೆ ಯಾವುದೇ ವಿಘ್ನ ಇದ್ರೂ ಕ್ಷಣ ಮಾತ್ರದಲ್ಲಿ ದೂರವಾಗುತ್ತಂತೆ. ಯಾವುದೇ ಹೊಸ ಕೆಲಸ ಆರಂಭಿಸೋಕೆ ಮುನ್ನ ಇವನ ದರ್ಶನ ಮಾಡಲೇ ಬೇಕು ಅಂತ ಅಂತಾರೆ ಭಕ್ತರು.

ಇಲ್ಲಿಗೆ ಹೆಚ್ಚಾಗಿ ಹೊಸದಾಗಿ ವಾಹನ ತೆಗೆದುಕೊಂಡವರು, ಹೊಸದಾಗಿ ಮದುವೆಯಾದವರು ಬರುತ್ತಾರೆ. ಇಲ್ಲಿ ಕೈ ಮುಗಿದರೆ ಹೊಸದಾಗಿ ಮಾಡಹೊರಟಿರುವ ಕೆಲಸ ನಿರ್ವಿಘ್ನವಾಗಿ ನೆರವೇರುತ್ತೆ ಅನ್ನೋ ನಂಬಿಕೆಯಿದೆ. ಇಲ್ಲಿನ ಸುತ್ತಮುತ್ತಲಿನ ಊರಿನವರು ಮಾದುವೆ ಸಮಾರಂಭ ಮುನ್ನವೇ ಶುಭ ಕಾರ್ಯವನ್ನು ನಿರ್ವಿಘ್ನವಾಗಿ ನಡೆಸುವಂತೆ ಸನ್ನಿಧಾನಕ್ಕೆ ಬಂದು ಪ್ರಾರ್ಥಿಸುವ ಪರಿಭಾವವನ್ನು ಇಟ್ಟುಕೊಂಡಿದ್ದಾರೆ.

ಇನ್ನು ಇಲ್ಲಿನ ದೇವಾಲಕ್ಕೆ ಅದರದೇ ಆದ ವಿಶೇಷ ಇತಿಹಾಸವಿದೆ. ಮೊದಲೇ ಹೇಳಿದಂತೆ ಇದು ಗಣೇಶ ದೇವಾಲಯವಲ್ಲ ಬದಲಾಗಿ ಅವನ ತಂದೆ ಶಿವನ ದೇವಾಲಯ. ಇಲ್ಲಿ ಶಿವಲಿಂಗ ಮಾವನ ನಿರ್ಮಿತವಲ್ಲ. ಬದಲಾಗಿ ಇದು ಉದ್ಬವ ಮೂರ್ತಿ. ಇಲ್ಲಿ ಕಾಡಿದ ಮದ್ಯೆ ಇದ್ದ ಶಿವಲಿಂಗವನ್ನು ಮೊಗೆರ ಸಾಮಾಜದ ಜನ ಪತ್ತೆಹಚ್ಚಿದ್ರು. ಇನ್ನು ಈ ಗಣೇಶನ ಮೂರ್ತಿಯ ಬಗ್ಗೆನೂ ಒಂದು ವಿಶೇಷ ಕಥೆ ಇದೆ.

ಅದೇನಂದ್ರೆ ಬಾಲಕನೊಬ್ಬ ದೇವಾಲುದ ಪಶ್ಚಿಮ ಗೋಡೆಯಲ್ಲಿ ಗಣೇಶನ್ನು ರಚಿಸಿದ್ದ. ಆದ್ರೆ ದಿನದಿಂದ ದಿನಕ್ಕೆ ಇದು ಬೆಳೆಯುತ್ತ ಹಾಗು ದಪ್ಪವಾಗುತ್ತಾ ಹೋಯಿತು ಅನ್ನುತ್ತೆ ಸ್ಥಳ ಪುರಾಣ.

ಈ ದೇವಾಲಯದ ಮತ್ತೊಂದು ವಿಶೇಷವೆಂದರೆ ಇದು ಮೈಸೂರು ಹುಲಿ ಟಿಪ್ಪು ಸುಲ್ತಾನ್ ದಾಳಿಗೆ ತುತ್ತಾದ ದೇವಾಲಯ. ಈ ಕುರಿತಂತೆ ದೇವಾಲಯದಲ್ಲಿ ಟಿಪ್ಪುವಿನ ಕಡ್ಗದಿಂದಾದ ಚಿಹ್ನೆಯೊಂದು ಇಲ್ಲಿ ಇನ್ನೂ ಇದೆ. ಇಲ್ಲಿನ ಸ್ಥಳೀಯರ ಪ್ರಕಾರ ಟಿಪ್ಪು ಈ ದೇವಾಲಯ ನಾಶ ಮಾಡೋಕೆ ಯತ್ನಸಿದ್ದ ಆದ್ರೆ ದೇವಾಲಯದ ಆವರಣದಲ್ಲಿನ ಬಾವಿ ಯ ನೀರು ಕುಡಿದ ನಂತರ ಟಿಪ್ಪು ತನ್ನ ನಿರ್ಧಾರವನ್ನು ಕೈಬಿಟ್ಟಿದ್ದ ಅನ್ನೋದು ಇಲ್ಲಿಯ ಮತ್ತೊಂದು ಸ್ಪೆಷಲ್ ಅಂದರೆ ಗಣೇಶನ ಪ್ರಿಯ ಅಪ್ಪಂ ಪ್ರಸಾದ.

ಇಲ್ಲಿಯ ಅಪ್ಪಂ ಪ್ರಸಾದಕ್ಕೆ ತುಂಬಾ ಬೇಡಿಕೆಯಿದೆ . ಇಲ್ಲಿಗೆ ಬರೋ ಭಕ್ತರು ಅಪ್ಪಂ ಪ್ರಸಾದ ತೆಗೆದುಕೊಳ್ಳದೆ ಹಿಂದಿರುಗೋದಿಲ್ಲ. ಇಲ್ಲಿಯ ಅಪ್ಪಂ ನ ರುಚಿ ಇನ್ನೆಲ್ಲೂ ಸಿಗಲ್ಲ. ಇದು ಗಣೇಶನ ಮಹಿಮೆ ಅಂತಾರೆ ಭಕ್ತರು.

ಈ ಅದ್ಬುತ ದೇವಾಲಯವಿರೋದು ಕೇರಳದ ಕಾಸರಗೋಡು ಜಿಲ್ಲೆ ಯಲ್ಲಿ. ಕಾಸರಗೋಡಿನ ಮದೂರಿನ ಮದನಂತೇಶ್ವರನ ದೇವಾಲಯ (Madur Madanantheshwara Temple) ವಿದು. ಆದ್ರೆ ಇಲ್ಲಿ ಪೂಜಿಸಲ್ಪಡೋದು ಮಾತ್ರ ದೊಡ್ಡಗಣಪ. ಮದನ ಅಂದರೆ ಕಾಮದೇವ. ಅವನನ್ನು ಮದಿಸಿದವನು ಎಂಬ ಅರ್ಥದಲ್ಲಿ ಶಿವನನ್ನು ಕಾಣಲಾಗುತ್ತೆ. ಹೀಗಾಗಿ ಈ ಊರಿಗೂ ಮದೂರು ಅಂತ ಹೆಸರು ಬಂತು ಅಂತ ಹೇಳಲಾಗ್ತಿದೆ.

ಕಾಸರಗೋಡಿನಿಂದ 7.5 ಕಿ ಮೀ ದೂರವಿರುವ ಈ ದೇವಾಲಯಕ್ಕೆ (Madur Madanantheshwara Temple)ಕಾಸರಗೋಡಿನಿಂದ ಬಸ್ ಸೌಕರ್ಯವಿದೆ. ಸಾಧ್ಯವಾದ್ರೆ ಒಂದು ಬಾರಿ ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ : ಇಲ್ಲಿ ಬಂದರೆ ಚರ್ಮರೋಗ ಮಾಯ : ಮೀನುಗಳ ರೂಪದಲ್ಲಿ ಕಾಯುತ್ತಾನೆ ಶಿವ

ಇದನ್ನೂ ಓದಿ : Natta Raameshwaram : ನತ್ತಾ ರಾಮೇಶ್ವರಂ : 11 ತಿಂಗಳು ನೀರಿನಲ್ಲಿಯೇ ಮುಳುಗಿರುತ್ತೆ ಶಿವಲಿಂಗ

Madur Madanantheshwara Temple Kerala

Leave A Reply

Your email address will not be published.