Flax Seed Gel:ತಲೆ ಕೂದಲು ಕಪ್ಪಾಗಬೇಕೆ ? ಹಾಗಾದ್ರೆ ಬಳಸಿ ಅಗಸೆ ಬೀಜದ ಜೆಲ್

(Flax Seed Gel)ಕೂದಲು ಕಪ್ಪಾಗಿ ಬೆಳೆಯುವುದಕ್ಕೆ ಮಹಿಳೆಯರು ಮನೆಯಲ್ಲಿ ಇರುವ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಮನೆಮದ್ದು ಮಾಡಿ ಕೂದಲಿಗೆ ಹಚ್ಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಕಪ್ಪು ಕೂದಲು ಬಿಳಿ ಆಗುತ್ತದೆ ಆದರೆ ಇತ್ತಿಚೀನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಸಮಸ್ಯೆ ಕಂಡುಬರುತ್ತಿದೆ. ಬಿಳಿ ಕೂದಲಿನ ಸಮಸ್ಯೆಯನ್ನು ಹೊಗಲಾಡಿಸಲು ಅಗಸೆ ಬೀಜದ ಜೆಲ್‌ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ಕೂದಲು ಕಪ್ಪಾಗಿ ಬೆಳೆಯುತ್ತದೆ. ಅಗಸೆ ಬೀಜದ ಜೆಲ್‌ ಹೇಗೆ ತಯಾರಿಸಿಕೊಳ್ಳುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Flax Seed Gel)ಬೇಕಾಗುವ ಸಾಮಾಗ್ರಿಗಳು:
ಅಗಸೆ ಬೀಜ
ಕೊಬ್ಬರಿ ಎಣ್ಣೆ

ಮಾಡುವ ವಿಧಾನ
ಪಾತ್ರೆಯಲ್ಲಿ ಮೂರು ಲೋಟ ನೀರು ಹಾಕಿಕೊಂಡು ಬಿಸಿಮಾಡಬೇಕು. ನೀರು ಕುದಿಯುತ್ತಿದ್ದ ಹಾಗೆ ಎರಡು ಚಮಚ ಅಗಸೆ ಬೀಜ ಹಾಕಿ ಕುದಿಸಿಕೊಂಡು ನೀರು ದಪ್ಪ ಬರುತ್ತಿದ್ದ ಹಾಗೆ ಪಾತ್ರೆಯಲ್ಲಿ ನೀರನ್ನು ಸೊಸಿಕೊಂಡು ತಣ್ಣಗಾಗಲು ಬೀಡಬೇಕು ಇದು ಜೆಲ್‌ ನ ರೂಪಕ್ಕೆ ಬರುತ್ತದೆ. ಕೂದಲಿಗೆ ಎಷ್ಟು ಅಗತ್ಯವು ಅಷ್ಟು ಪ್ರಮಾಣದ ಜೆಲ್‌ ಅನ್ನು ಬೌಲ್‌ ಗೆ ಹಾಕಿಕೊಂಡು ಎರಡರಿಂದ ಮೂರು ಚಮಚ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಒಂದು ಗಂಟೆಗಳ ಕಾಲ ಬಿಟ್ಟು ತಲೆ ಸ್ನಾನ ಮಾಡಬೇಕು. ಹೀಗೆ ವಾರಕ್ಕೆ ಎರಡು ಬಾರಿ ಈ ಜೆಲ್‌ ಹಚ್ಚಿಕೊಂಡು ತಲೆಸ್ನಾನ ಮಾಡುವುದರಿಂದ ಕೂದಲು ಕಪ್ಪಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ.

ತೆಂಗಿನಕಾಯಿ ಮತ್ತು ನಿಂಬೆ ರಸ ಮಿಶ್ರಣ

ತೆಂಗಿನ ಎಣ್ಣೆ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿಕೊಂಡು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ಡ್ರಾಂಡ್ರಫ್‌ ಕಡಿಮೆ ಮಾಡುವುದರ ಜೊತೆಗೆ ಕೂದಲು ಕಪ್ಪಾಗುವಂತೆ ಮಾಡುತ್ತದೆ. ವಾರದಲ್ಲಿ ಎರಡು ದಿನ ತೆಂಗಿನ ಕಾಯಿ ಮತ್ತು ನಿಂಬೆ ರಸದ ಮಿಶ್ರಣ ಹಚ್ಚಿಕೊಳ್ಳಬೇಕು.

ಆಲೂಗಡ್ಡೆ
ತುಂಡರಿಸಿದ ಆಲೂಗಡ್ಡೆಯನ್ನು ನೀರಲ್ಲಿ ಹಾಕಿ ಕುದಿಸಿಕೊಂಡು ನಂತರ ಈ ನೀರನ್ನು ಬೌಲ್‌ ಗೆ ಸೊಸಿಕೊಳ್ಳಬೇಕು . ಈ ನೀರು ತಣ್ಣಗಾದ ನಂತರ ಇದನ್ನು ಕೂದಲಿಗೆ ಹಚ್ಚಿಕೊಂಡು ಇಪ್ಪತ್ತು ನಿಮಿಷದ ಬಳಿಕ ತಲೆಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಕೂದಲು ಕಪ್ಪಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:Nail Wrap Problem Tips:ಉಗುರು ಸುತ್ತು ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ

ಇದನ್ನೂ ಓದಿ:Remedies For Boils:ಈ ಮನೆಮದ್ದು ಬಳಸಿ ನೋಡಿ ಕುರು, ನೋವು ತಕ್ಷಣ ಕಡಿಮೆಯಾಗುತ್ತದೆ

ನೆಲ್ಲಿಕಾಯಿ
ತುಂಡರಿಸಿದ ನೆಲ್ಲಿಕಾಯಿಯನ್ನು ನೀರಿನಲ್ಲಿ ಕುದಿಸಿಕೊಂಡು ಆ ನೀರನ್ನು ಬೌಲ್‌ ಗೆ ಸೊಸಿಕೊಂಡು ಗೋರಂಟಿ ಮತ್ತು ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಬೇಕು ಬಳಿಕ ತಲೆಸ್ನಾನ ಮಾಡಿದರೆ ಕೂದಲು ಕಪ್ಪಾಗುತ್ತದೆ.

Flax Seed Gel Should the head hair be black? So use flax seed gel

Comments are closed.