Gowri Movie : ರವಿಚಂದ್ರನ್ ಗೌರಿ ಸಿನಿಮಾದಲ್ಲಿ ಮೂರೇ ಮೂರು ಪಾತ್ರ !

ಕನ್ನಡ ಸಿನಿರಂಗದಲ್ಲಿ ಪ್ರೇಮಲೋಕ ಸೃಷ್ಟಿಸಿದ ಕೀರ್ತೀ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಸಲ್ಲುತ್ತದೆ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಸಿನಿಮಾಗಳನ್ನು ಹುಡುಕಿಕೊಂಡು ಹೊರಟಿದ್ದಾರೆ. (Gowri Movie) 2023ರಲ್ಲಿ ಸಿನಿಪ್ರೇಕ್ಷಕರ ಹೊಸ ರೀತಿಯ ಸಿನಿಮಾ ನೀಡಲೇಬೇಕು ಅಂತ ಪಣ ತೊಟ್ಟು ನಿಂತಿದ್ದಾರೆ ರವಿಚಂದ್ರನ್. ಹೀಗಾಗಿ ಕ್ರೇಜಿಸ್ಟಾರ್ ರವಿಚಂದ್ರನ್‌ ಅಭಿನಯದ ಹೊಸ ಸಿನಿಮಾ ಡಿಸೆಂಬರ್ 9ರಂದು ಸೆಟ್ಟೇರಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕ ನಟನಾಗಿ ನಟಿಸುತ್ತಿರುವ ಈ ಸಿನಿಮಾಕ್ಕೆ, ಎನ್.ಎಸ್.ರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ರವಿಚಂದ್ರನ್‌ ಅಭಿನಯದ ಈ ಹೊಸ ಸಿನಿಮಾದ ಹೆಸರು ‘ಗೌರಿ’. ಇತ್ತೀಚೆಗಷ್ಟೇ ಈ ಸಿನಿಮಾದ ಮುಹೂರ್ತ ನೆರವೇರಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ‘ಗೌರಿ’ ಸಿನಿಮಾದ ಮೊದಲ ಸನ್ನಿವೇಶಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದಾರೆ. ಅಣ್ಣಾವ್ರ ಜೊತೆ ಮೂವತ್ತಕ್ಕೂ ಅಧಿಕ ವರ್ಷಗಳ ಕಾಲ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವ ಚನ್ನ ಈ ಸಿನಿಮಾಗೆ ಕ್ಯಾಮೆರಾ ಚಾಲನೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ಗೆ ಕಂಟೆಂಟ್ ಇರುವ ಸಿನಿಮಾ ಕೊಡಬೇಕು ಅನ್ನೋದು ನಿರ್ಮಾಪಕರಿಗೆ ಗೊತ್ತಾದೆ. ಅದರಲ್ಲೂ ಈ ವರ್ಷ ಕನ್ನಡ ಸಿನಿಮಾರಂಗ ಅದ್ಭುತ ಸಾಧನೆಗಳನ್ನು ಮಾಡಿದೆ. ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದೆ. ಹೀಗಾಗಿ ನಿರ್ಮಾಪಕ ರಾಜ್‌ಕುಮಾರ್ ವಿಭಿನ್ನ ಕಥೆಯುಳ್ಳ ಸಿನಿಮಾಗಳನ್ನು ತೆರೆಮೇಲೆ ತರುವುದಕ್ಕೆ ನಿರ್ಧರಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿರುವ ‘ಗೌರಿ’ ಸಿನಿಮಾ ಕೂಡ ವಿಭಿನ್ನ ಕಥಾಹಂದರವನ್ನು ಒಳ್ಳಗೊಂಡಿದೆ.

ಈ ಸಿನಿಮಾದ ವಿಶೇಷ ಎಂದರೆ ಸಿನಿಮಾ ಪೂರ್ತಿ ಕೇವಲ ಮೂರು ಪಾತ್ರಗಳಿಂದ ಕೂಡಿದೆ. ಈ ಮೂರು ಪಾತ್ರಗಳೊಂದಿಗೆ ಕೆಲವು ಪ್ರಾಣಿಗಳನ್ನು ಸಹ ಸಿನಿಮಾದಲ್ಲಿ ಬಳಸಿಕೊಳ್ಳುತ್ತಿರೋದಾಗಿ ನಿರ್ದೇಶಕರು ಹೇಳಿದ್ದಾರೆ. ದಾಂಡೇಲಿಯಲ್ಲಿಯೇ ‘ಗೌರಿ’ ಸಿನಿಮಾದ ಬಹುಭಾಗದ ಚಿತ್ರೀಕರಣ ನಡೆಯಲಿದೆ. “ಹೊಸವರ್ಷಕ್ಕೆ ಹೊಸತರಹದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು ರಾಜಕುಮಾರ್ ಎಂಬ ಹೆಸರು ಸದಾ ನನ್ನ ಜೊತೆ ಇರುತ್ತದೆ ಎಂಬುದಕ್ಕೆ ಈ ಸಿನಿಮಾದ ನಿರ್ಮಾಪಕ ರಾಜಕುಮಾರ್ ಅವರೇ ಸಾಕ್ಷಿ” ಎಂದು ರವಿಚಂದ್ರನ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾ ಮೂಲಕ ಮುಂಬೈ ಬೆಡಗಿ ಬರ್ಕಾ ಬಷ್ಟ್ ಸ್ಯಾಂಡಲ್‌ವುಡ್ ಎಂಟ್ರಿ ಕೊಡಲಿದ್ದಾರೆ. ಸಿನಿಮಾದಲ್ಲಿರುವ ಮೂರು ಪಾತ್ರಗಳಲ್ಲಿ ನಾಯಕಿ ಬರ್ಕಾ ಬಷ್ಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ನನಗೆ ಕನ್ನಡದಲ್ಲಿ‌ ಇದು ಮೊದಲನೆಯ ಸಿನಿಮಾ. ಅದರಲ್ಲೂ ದಕ್ಷಿಣ ಭಾರತದಲ್ಲೇ ಮೊದಲು ಎನ್ನಬಹುದು. ರವಿಚಂದ್ರನ್ ಸರ್ ಜೊತೆ ನಟಿಸುತ್ತಿರುವುದು ಸಂತಸ ತಂದಿದೆ” ಎಂದು ನಟಿ ಬರ್ಕಾ ಬಿಷ್ಟ್ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Film Chamber Meeting | ಫಿಲ್ಮ್‌ ಚೇಂಬರ್‌ ಕೈಯಲ್ಲಿ ಅನಿರುದ್ಧ ಕಿರುತೆರೆ ಭವಿಷ್ಯ : ಸಭೆಯಲ್ಲಿ “ಬ್ಯಾನ್”‌ ವಿಚಾರ ಏನಾಯ್ತು

ಇದನ್ನೂ ಓದಿ : Internet Movie Database : 2022ನೇ ಸಾಲಿನ ಟಾಪ್ 10 ಭಾರತೀಯರ ನಟ-ನಟಿಯರ ಪಟ್ಟಿ ಬಿಡುಗಡೆ : ಧನುಷ್‌ ನಂ 1, ಯಶ್ ಎಷ್ಟನೇ ಸ್ಥಾನ?

ಇದನ್ನೂ ಓದಿ : Vasuki Vaibhav – Chandana : ಹಸೆಮಣೆ ಏರಲು ಸಜ್ಜಾದ ಬಿಗ್‌ಬಾಸ್‌ ಖ್ಯಾತಿಯ ವಾಸುಕಿ ವೈಭವ್‌ – ಚಂದನಾ

ಇನ್ನೂ ನಿರ್ದೇಶಕ ಅನೀಸ್ ಅವರಿಗೂ ಇದು ಮೊದಲ ಸಿನಿಮಾವಾಗಿದೆ. ವಿಶಿಷ್ಟ ಸಿನಿಮಾವನ್ನು ತೆರೆಮೇಲೆ ತರುತ್ತಿರುವ ಆತ್ಮವಿಶ್ವಾಸದಲ್ಲಿ ನಿರ್ದೇಶಕರಿದ್ದಾರೆ. “ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಖ್ಯಾತ ನಟರಾದ ರವಿಚಂದ್ರನ್ ನನ್ನ ಮೊದಲ ನಿರ್ದೇಶನದ ಸಿನಿಮಾದಲ್ಲಿ ನಾಯಕರಾಗಿರುವುದು ಖುಷಿ ಕೊಟ್ಟಿದೆ. ಮುಂಬೈನ ಬರ್ಕಾ ಬಿಷ್ಟ್ ಈ ಸಿನಿಮಾದ ನಾಯಕಿ. ಗ್ರೀಷ್ಮಾ ಎಂಬ ಬಾಲ ಕಲಾವಿದೆ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಟ್ಟು ಮೂರೇ ಪಾತ್ರಗಳಿವೆ. ಇದೊಂದು ಕೌಟುಂಬಿಕ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಯಾಕೆ ಸಮಸ್ಯೆಗಳು ಬರುತ್ತವೆ ಎಂಬುದನ್ನು ತೋರಿಸುತ್ತಿದ್ದೇವೆ.” ಎಂದು ನಿರ್ದೇಶಕರು ಹೇಳಿದ್ದಾರೆ.

Three roles in Ravichandran Gowri Movie

Comments are closed.