Banana Hair Paste:ಬಾಳೆಹಣ್ಣಿನ ಪೇಸ್ಟ್ ನಿಂದ ನಯವಾದ ನೇರ ಕೂದಲನ್ನು ಪಡೆಯಿರಿ

(Banana Hair Paste)ನಯವಾದ ನೇರ ಕೂದಲನ್ನು ಹಲವಾರು ಮಹಿಳೆಯರು ಇಷ್ಟ ಪಡುತ್ತಾರೆ . ನಯವಾದ ನೇರ ರೀತಿಯಲ್ಲಿ ಕೂದಲು ಕಾಣಬೇಕೆಂದು ಹೆರ್‌ ಸ್ಟ್ರೈಟನಿಂಗ್‌ ಮಾಡುತ್ತಾರೆ. ಇದರಿಂದ ಸಾಕಷ್ಟು ಮಹಿಳೆಯರು ಕೂದಲು ಉದುರುವ ತೊಂದರೆಯನ್ನು ಅನುಭವಿಸಿದ್ದಾರೆ. ಈ ತೊಂದರೆಯಿಂದ ಮುಕ್ತಿ ಪಡೆಯುವುದಕ್ಕೆ ಬಾಳೆಹಣ್ಣಿನ ಪೇಸ್ಟ್‌ ಅನ್ನು ಕೂದಲಿಗೆ ಹಚ್ಚಿ ನಯವಾದ ನೇರ ಕೂದಲನ್ನು ಪಡೆಯಬಹುದು. ಇದನ್ನು ಮಾಡುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

(Banana Hair Paste)ಬೇಕಾಗುವ ಸಾಮಾಗ್ರಿಗಳು:

  • ತೆಂಗಿನಕಾಯಿ
  • ಬಾಳೆಹಣ್ಣು
  • ಕೊಬ್ಬರಿ ಎಣ್ಣೆ

ಮಾಡುವ ವಿಧಾನ:
ಬಾಳೆಹಣ್ಣನ್ನು ಮಿಕ್ಸಿಯಲ್ಲಿ ಹಾಕಿಕೊಂಡು ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ ಇಟ್ಟುಕೊಳ್ಳಬೇಕು. ನಂತರ ಮಿಕ್ಸಿ ಜಾರಿಯಲ್ಲಿ ಪಿಸ್‌ ಮಾಡಿಟ್ಟುಕೊಂಡ ತೆಂಗಿನಕಾಯಿ ಹಾಕಿ ರುಬ್ಬಿಕೊಂಡು ಅದನ್ನು ಸೋಯಿಸಿಕೊಳ್ಳಬೇಕು. ಸೋಯಿಸಿಕೊಂಡ ತೆಂಗಿನಕಾಯಿ ಹಾಲಿಗೆ ರುಬ್ಬಿಕೊಂಡ ಬಾಳೆಹಣ್ಣನ್ನು ಹಾಕ ಬೇಕು ನಂತರ ಅದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಿದರೆ ಕೂದಲಿಗೆ ಹಚ್ಚಿದರೆ ನಯವಾದ ನೇರ ಕೂದಲನ್ನು ಪಡೆಯಬಹುದು.

ಇದನ್ನೂ ಓದಿ:Juice Good For Health : ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್‌ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ

ಇದನ್ನೂ ಓದಿ:Benefits Of Nutmeg : ಚಿಕ್ಕ ಕಾಯಿಯಾದರೂ ಅದ್ಭುತ ಪ್ರಯೋಜನವಿದೆ ಜಾಯಿಕಾಯಿಯಲ್ಲಿ…

ಬೆಂಡೆಕಾಯಿ ಪೇಸ್ಟ್

ಬೇಕಾಗುವ ಸಾಮಾಗ್ರಿಗಳು:

  • ಬೆಂಡೆಕಾಯಿ
  • ಜೋಳದ ಹಿಟ್ಟು
  • ನೀರು
  • ಕೊಬ್ಬರಿ ಎಣ್ಣೆ
  • ಬಾದಾಮಿ ಎಣ್ಣೆ

ಮಾಡುವ ವಿಧಾನ:

ಬೆಂಡೆಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ನೀರನ್ನು ಹಾಕಿ ಒಂದು ನಿಮಿಷ ಬೆಯಿಸಿಕೊಳ್ಳಬೇಕು. ನಂತರ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು.ಅನಂತರ ಅದನ್ನು ಸೊಸಿಕೊಳ್ಳಬೇಕು. ಸೊಸಿಕೊಂಡ ಬೆಂಡೆಕಾಯಿ ರಸಕ್ಕೆ ನೀರಿನ್ನು ಹಾಕಬೇಕು.ನಂತರ ಅದಕ್ಕೆ ಅರ್ಧ ಚಮಚ ಜೋಳದ ಹಿಟ್ಟು ಬೆರೆಸಿ ಕಲಸಿಕೊಂಡು ನಾಲ್ಕು ನಿಮಿಷಗಳ ಕಾಲ ಕಾಯಿಸಬೇಕು. ಅನಂತರ ಅದಕ್ಕೆ ಕೊಬ್ಬರಿ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಬೇರೆಸಿಕೊಂಡು ತಲೆಗೆ ಹಚ್ಚಿದರೆ ನಯವಾದ ನೇರ ಕೂದಲನ್ನು ಪಡೆಯಬಹುದು.

Get smooth straight hair with banana paste

Comments are closed.