Baby Skin Care : ಚಳಿಗಾಲದಲ್ಲಿ ನಿಮ್ಮ ಮಕ್ಕಳ ಕೋಮಲ ತ್ವಚೆಗಾಗಿ ಮನೆಯಲ್ಲಿಯೇ ತಯಾರಿಸಿ ಮಾಯಿಶ್ಚರೈಸರ್‌

ಚಳಿಗಾಲ ()Winter) ಪ್ರಾರಂಭವಾಗಿದೆ. ಒಣ ಹವೆಯಿಂದ (Dry weather) ತ್ವಚೆ ಹಾಳಾಗುತ್ತಿದೆ. ಕೈ, ಕಾಲು, ಹಿಮ್ಮಡಿ, ತುಟಿಗಳು ಒಡಿಯುತ್ತಿವೆ. ಅದರಲ್ಲೂ ಪುಟ್ಟ ಮಕ್ಕಳ ಕೋಮಲ ತ್ವಚೆಯನ್ನು (Baby Skin Care) ಕಾಪಾಡುವುದು ಬಹಳ ಕಷ್ಟ. ಒಣ ತ್ವಚೆ ಮಕ್ಕಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಮಕ್ಕಳ ತ್ವಚೆಯ ಆರೈಕೆಯನ್ನು ತಾಯಂದಿರು ಯಾವಾಗಲು ಮಾಡುತ್ತಿರುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಮಾಯಿಶ್ಚರೈಸರ್‌ಗಳು ಮಕ್ಕಳ ನಾಜೂಕು ತ್ವಚೆಗೆ ಹಾನಿಕಾರಕ. ಮಕ್ಕಳ ತ್ಚಚೆ ಒಡೆದಿದೆ ಎಂದು ಯಾವುದೋ ಒಂದು ಮಾಯಿಶ್ಚರೈಸರ್‌ ತಂದು ಹಚ್ಚುವ ಹಾಗಿಲ್ಲ. ಅದಕ್ಕಾಗಿಯೇ ನಾವು ಇಲ್ಲಿ ಮನೆಯಲ್ಲಿಯೇ ತಯಾರಿಸಬಹುದಾದ ಮಾಯಿಶ್ಚರೈಸರ್‌ ಅನ್ನು ಹೇಳಿದ್ದೇವೆ. ನಿಮ್ಮ ಮಕ್ಕಳ ತ್ವಚೆಯ ಪೋಷಣೆಗಾಗಿ ಎಷ್ಟು ಸಾಧ್ಯವೊ ಅಷ್ಟು ಕಡಿಮೆ ರಾಸಾಯನಿಕಗಳನ್ನು ಬಳಸಿ.

ಬಾದಾಮ್‌ ಎಣ್ಣೆಯ ಮಾಯಿಶ್ಚರೈಸರ್‌:
ಬಾದಾಮ್‌ ಎಣ್ಣೆ ಮಕ್ಕಳ ತ್ಚಚೆಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದು ಮಕ್ಕಳ ತ್ವಚೆಗೆ ಪೋಷಣೆ ನೀಡಿ ಅವು ಒರಟಾಗದಂತೆ ನೋಡಿಕೊಳ್ಳುತ್ತದೆ. ಬಾದಾಮ್‌ ಎಣ್ಣೆಯ ಮಾಯಿಶ್ಚರೈಸರ್‌ ಅನ್ನು ಹೀಗೆ ತಯಾರಿಸಿ.

ಬೇಕಾಗುವ ಸಾಮಗ್ರಿಗಳು :

ಬಾದಾಮ್‌ ಎಣ್ಣೆ 2 ಚಮಚ
ಪೆಟ್ರೋಲಿಯಮ್‌ ಜೆಲ್‌ (ವ್ಯಾಸಲಿನ್‌) 2 ಚಮಚ
ಗ್ಲಿಸರಿನ್‌ 1 ಚಮಚ
ಕಾನ್‌ ಸ್ಟಾರ್ಚ್‌ 1 ಚಮಚ

ತಯಾರಿಸುವು ವಿಧಾನ :
ಒಂದು ಚಮಚ ನೀರಿಗೆ ಬಾದಾಮ್‌ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಒಂದು ಚಿಕ್ಕ ಪಾತ್ರೆಗೆ ಆ ಮಿಶ್ರಣವನ್ನು ಹಾಕಿ. ಅದಕ್ಕೆ ಕಾರ್ನ್‌ಫ್ಲೋರ್‌ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಆ ಮಿಶ್ರಣಕ್ಕೆ ಗ್ಲಿಸರಿನ್‌ ಮತ್ತು ವ್ಯಾಸಲಿನ್‌ ಹಾಕಿ, ಚೆನ್ನಾಗಿ ಮಿಕ್ಸ್‌ ಮಾಡಿ. ಅದು ತಣ್ಣಗಾದ ಮೇಲೆ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಿ. ಇದನ್ನು ಮಕ್ಕಳ ತ್ವಚೆಗೆ ಲೇಪಿಸಿ.

ಇದನ್ನೂ ಓದಿ : Juice Good For Health : ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್‌ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ

ಇದನ್ನೂ ಓದಿ : Benefits Of Nutmeg : ಚಿಕ್ಕ ಕಾಯಿಯಾದರೂ ಅದ್ಭುತ ಪ್ರಯೋಜನವಿದೆ ಜಾಯಿಕಾಯಿಯಲ್ಲಿ…

(Baby Skin Care how to make moisturizer at home in winter)

Comments are closed.