Gray Hair : ಬಿಳಿ ಕೂದಲ ನಿವಾರಣೆಗೆ ಇಲ್ಲಿದೆ 5 ಅದ್ಭುತ ಮನೆಮದ್ದುಗಳು!!

ಇವತ್ತಿನ ದಿನಗಳಲ್ಲಿ ಸಾಮಾನ್ಯ ಶೀತ ಮತ್ತು ಕೆಮ್ಮುವಿನಂತೆ ಬಿಳಿ ಕೂದಲು (Gray Hair) ಸಾಮಾನ್ಯವಾಗಿದೆ. ನಿಮಗೆ ತಿಳಿದಿರುವಂತೆ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಬಲ್ಲ ಮನೆ ಮದ್ದುಗಳನ್ನು ಹುಡುಕುವುದೊಂದೇ ನಿಮಗೆ ಉಳಿದಿರುವ ಹಲವು ಆಯ್ಕೆಗಳಲ್ಲಿ ಒಂದಾಗಿದೆ. ಬಿಳಿ ಬಣ್ಣದ ಕೂದಲನ್ನು ಬುದ್ಧಿವಂತಿಕೆ ಮತ್ತು ಪ್ರಬುದ್ಧತೆಯ ಸಂಕೇತವೆಂದು ಹೇಳುತ್ತಾರೆ. ಆದರೆ ಇದು ನಿಮ್ಮ ದೇಹವು ಸಾಕಷ್ಟು ಮೆಲಮೈನ್‌ ಅನ್ನು ಉತ್ಪಾದಿಸುವುದಿಲ್ಲ ಎಂದು ಹೇಳುತ್ತದೆ. ಇದು ವಯಸ್ಸಾಗುವಿಕೆಯ ಆರಂಭದ ಚಿಹ್ನೆಯಾಗಿದೆ. ಒಳ್ಳೆಯ ಸಮಾಚಾರವೆಂದರೆ ನೈಸರ್ಗಿಕವಾಗಿಯೇ ಅದರಿಂದ ಮುಕ್ತಿ ಹೊಂದಬಹುದು. ಬಿಳಿ ಕೂದಲನ್ನು ಕಪ್ಪು ಮಾಡಲು ರಾಸಾಯನಿಕ ವಸ್ತುಗಳ ಚಿಕಿತ್ಸೆಯ ಮೊರೆ ಹೋಗುವ ಬದಲು, ನಾವು ನಿಮಗೆ ಮನೆಯಲ್ಲಿಯೇ ಸಿಗುವ ಔಷಧಗಳನ್ನು ಹೇಳುತ್ತಿದ್ದೇವೆ.

ನೈಸರ್ಗಿಕ ರೀತಿಯಲ್ಲಿ ಬಿಳಿ ಕೂದಲಿನ ವಿರುದ್ಧ ಹೋರಾಡುವ ಔಷಧಗಳು:

  • ಬಾದಾಮಿ ಎಣ್ಣೆ ಮತ್ತು ಲಿಂಬು ರಸ :
    ಬಾದಾಮಿ ಎಣ್ಣೆಯು ವಿಟಮಿನ್‌ ಸಿ ಯ ಆಗರ. ಇದು ಕೂದಲಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಕೂದಲಿನ ಬೇರುಗಳಿಗೆ ಆಳವಾಗಿ ಪೂಷಣೆ ಒದಗಿಸುತ್ತದೆ. ಇದರಿಂದ ಬಾಲನೆರೆ ತಡೆಯಬಹುದು. ಲಿಂಬುರಸ ಬರೀ ಹೊಳಪನ್ನಷ್ಟೇ ನೀಡುವುದಿಲ್ಲ, ಅದರ ಜೊತೆಗೆ ಆರೋಗ್ಯಯುತ ಕೂದಲಿನ ಬೆಳವಣಿಗೆಗೂ ಸಹಾಯಮಾಡುತ್ತದೆ. ಕೆಲವು ಹನಿ ಬಾದಾಮಿ ಎಣ್ಣೆ ಮತ್ತು ಲಿಂಬು ರಸ ಸೇರಿಸಿ. ಕೂದಲಿನ ಬುಡದಿಂದ ಸ್ಕಾಲ್ಪೆಗೆ ಹಚ್ಚಿ. 30 ನಿಮಿಷಗಳ ಬಳಿಕ ತೊಳೆಯಿರಿ.
  • ಬ್ಲಾಕ್‌ ಟೀ:
    ಕೆಫಿನ್‌ನ್ ಅಂಶ ಹೊಂದಿರುವ ಬ್ಲಾಕ್‌ ಟೀ ಆಂಟಿಒಕ್ಸಿಡೆಂಟ್‌ಗಳಿಂದ ಕೂಡಿದೆ. ನೈಸರ್ಗಿಕವಾಗಿ ಕಪ್ಪು ಬಣ್ಣ ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಬಲಿಷ್ಟವಾದ ಹೊಳೆಯುವ ಕೂದಲು ನೀಡುತ್ತದೆ. ಬ್ಲಾಕ್‌ ಟೀ ಉಪಯೋಗಿಸುವುದರಿಂದ ನೂಸರ್ಗಿಕವಾಗಿ ಬಿಳಿ ಕೂದಲಿಂದ ಮುಕ್ತಿ ಹೊಂದಬಹುದು. ಎರಡು ಚಮಚ ಬ್ಲಾಕ್‌ ಟೀ ಅನ್ನುಒಂದು ಕಪ್‌ ನೀರಿನಲ್ಲಿ ಕುದಿಸಿ. ಅದಕ್ಕೆ ಸಮುದ್ರದ ಉಪ್ಪು ಸೇರಿಸಿ. ಸಂಪೂರ್ಣ ತಣ್ಣಗಾಗಲು ಬಿಡಿ. ನಂತರ ಕೂದಲಿಗೆ ಹಚ್ಚಿಕೊಳ್ಳಿ. ಒಣಗಲು ಬಿಡಿ. ನಿಯಮಿತವಾಗಿ ಮಾಡುವುದರಿಂದ ಬಿಳಿಕೂದಲು ಮಾಯವಾಗಿ ಕಪ್ಪು ಕೂದಲುಗಳು ಬರಲು ಆರಂಭವಾಗುತ್ತದೆ.
  • ಈರುಳ್ಳಿ ರಸ:
    ಬಿಳಿ ಕೂದಲಿಗೆ ಅತಿ ಪ್ರಬಲವಾಗಿ ಪರಿಹಾರ ಈರುಳ್ಳಿ ರಸ ಕೊಡುವುದು. ಈರುಳ್ಳಿಯು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಲಿಂಬುರಸದೊಂದಿಗೆ ಮಿಕ್ಸ್‌ ಮಾಡುವುದರಿಂದ ಕೂದಲಿಗೆ ಹೊಳಪು ನೀಡುತ್ತದೆ. 2–3 ಚಮಚ ಈರುಳ್ಳಿ ರಸ, 1 ಚಮಚ ಲಿಂಬು ರಸ ಮತ್ತು 1 ಚಮಚ ಆಲೀವ್‌ ಎಣ್ಣೆ ಸೇರಿಸಿ. ಕೂದಲಿನ ಬುಡದಿಂದ ತುದಿಯವರೆಗೆ ಮಸ್ಸಾಜ್‌ ಮಾಡಿ, ಒಂದು ಗಂಟೆ ಬಿಟ್ಟು ತೊಳೆಯಿರಿ.

ಇದನ್ನೂ ಓದಿ :Onion Benefits : ಈರುಳ್ಳಿಯ 6 ಪ್ರಯೋಜನಗಳು : ಸೌಂದರ್ಯಕ್ಕೂ ಸೈ, ಆರೋಗ್ಯಕ್ಕೂ ಜೈ !

  • ಕರಿ ಮೆಣಸು ಮತ್ತು ಲಿಂಬು :
    ರಾಸಾಯನಿಕ ಡೈ ಗಳನ್ನು ಬಿಡಿ ಮತ್ತು ನೈಸರ್ಗಿಕ ಹೇರ್‌ ಡೈಗಳು ಬಿಳಿ ಕೂದಲನ್ನು ಕಪ್ಪು ಕೂದಲನ್ನಾಗಿಸುತ್ತದೆ. ಕರಿ ಮೆಣಸು ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದೆ. ನೈಸರ್ಗಿಕ ಬಣ್ಣ ಕೊಡುವುದರ ಜೊತೆಗೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಒಂದು ಚಮಚ ಕರಿ ಮೆಣಸು ಮತ್ತು ಒಂದು ಚಮಚ ಲಿಂಬುರಸ ಮತ್ತು ಅರ್ಧ ಕಪ್‌ ಮೊಸರಿನೊಂದಿಗೆ ಮಿಕ್ಸರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಆ ಪೇಸ್ಟ್‌ ಅನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ ಮಸ್ಸಾಜ್‌ ಮಾಡಿ. ಒಂದು ಗಂಟೆ ಕಾಲ ಹಾಗೆ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ 2 ರಿಂದ 3 ಸಲ ಹೀಗೆ ಮಾಡಿ.
  • ದಾಸವಾಳ :
    ದಾಸವಾಳದಲ್ಲಿರುವ ಆಂಟಿಒಕ್ಸಿಡೆಂಟ್‌ ಮತ್ತು ವಿಟಮಿನ್‌ ಗಳು ಮೆಲನಿನ್‌ ಅನ್ನು ಉತ್ಪಾದಿಸಿ ನೈಸರ್ಗಿಕವಾಗಿಯೇ ಕೂದಲಿಗೆ ಕಪ್ಪು ಬಣ್ಣವನ್ನು ಕೊಡುತ್ತದೆ. ಈ ಹೂವನ್ನು ಅನೇಕ ಕೂದಲಿನ ಸಮಸ್ಯೆಗಳಿಗೆ ಉಪಯೋಗಿಸಬಹುದು. ತಲೆಹೊಟ್ಟು, ಒಣಗಿದ ಕೂದಲು ಮತ್ತು ಕೂದಲು ಉದುರುವಿಕೆಗೆ ಮುಂತಾದವುಗಳಿಗೆ ಉಪಯೋಗಿಸುತ್ತಾರೆ. ದಾಸವಾಳದ ಎಲೆ ಮತ್ತು ಹೂವುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಆ ನೀರಿನಿಂದ ಕೂದಲನ್ನು ತೊಳೆಯಿರಿ.

ಇದನ್ನೂ ಓದಿ :Wet Hair Mistakes : ನೀವೂ ಈ ತಪ್ಪುಗಳನ್ನು ಮಾಡುತ್ತೀರಾ?ಇದರಿಂದ ಕೂದಲಿಗೆ ಸಮಸ್ಯೆಯಾಗಬಹುದು ಹುಷಾರ್‌!

(Grey Hair know the 5 wonderful home remedies for grey hair)

Comments are closed.