Food Poisoning: ಫುಡ್‌ ಪಾಯ್ಸನ್‌ ಆಗಿದೆಯಾ? ಅದಕ್ಕೆ ಕಾರಣ ಹೀಗೂ ಇರಬಹುದು!

ಬೇಸಿಗೆಯಲ್ಲಿ ಫುಡ್‌ ಪಾಯ್ಸನ್‌ (Food Poisoning) ಸಾಮಾನ್ಯ. ಮಕ್ಕಳಿಗಂತೂ ಫುಡ್‌ ಪಾಯ್ಸನ್‌ ಬಹಳ ಬೇಗ ಆಗುತ್ತದೆ. ನಾವು ತಿನ್ನುವ ಆಹಾರವನ್ನು ಸೂಕ್ಷ್ಮಜೀವಿಗಳು ಕಲುಷಿತಗೊಳಿಸಿದಾಗ ಫುಡ್‌ ಪಾಯ್ಸನ್‌ ಆಗುತ್ತದೆ. ಆಹಾರ ಹೇಗೆ ಕಲುಷಿತಗೊಳ್ಳುತ್ತದೆ? ಆಹಾರಗಳನ್ನು ಸರಿಯಾಗಿ ಬೇಯಿಸಿದೇ ಇದ್ದಾಗ, ಅಸಮರ್ಪಕ ರೀತಿಯಲ್ಲಿ ಶೇಖರಿಸಿದಾಗ, ಮರುಬಳಕೆಯಲ್ಲಿನ ನಿರ್ಲಕ್ಷ್ಯ, ಸ್ವಚ್ಛತೆಯ ಕಡೆಗೆ ಗಮನವಹಿಸದೇ ಇದ್ದಾಗ, ಎಕ್ಷ್‌ಪೈರ್‌ ಆದ ಆಹಾರ ಸೇವಿಸಿದಾಗ ಹೀಗೆ ಹಲವಾರು ಕಾರಣಗಳಿಂದ ಫುಡ್‌ ಪಾಯ್ಸನ್‌ ಆಗುತ್ತದೆ. ಹಾಗಾದರೆ, ಮನೆಗಳಲ್ಲಿ ಫುಡ್‌ ಫಾಯ್ಸನ್‌ ಆಗುವುದನ್ನು ತಪ್ಪಿಸುವುದು ಹೇಗೆ? ಇಲ್ಲಿದೆ ಪೂರಕವಾದ ಮಾಹಿತಿ.

ನಿಮ್ಮ ಕೈಗಳನ್ನು ಸ್ವಚ್ಛವಾಗಿಡಿ: ನಿಮ್ಮ ಕೈಗಳನ್ನು ಆಗಾಗ ಸೋಪು ಮತ್ತು ನೀರಿನಿಂದ ತೊಳೆದು ಒಣಗಿಸಿರಿ.

  • ಅಡುಗೆಗಳನ್ನು ಮಾಡುವ ಮೊದಲು
  • ಮಾಂಸ, ಮೀನು, ಮೊಟ್ಟೆ ಮತ್ತು ತರಕಾರಿಗಳನ್ನು ಸ್ವಚ್ಛಗೊಳಿಸಿದ ನಂತರ
  • ಡಸ್ಟ್‌ ಬಿನ್‌(ಕಸದ ಡಬ್ಬಿ)ಗಳನ್ನು ಉಪಯೋಗಿಸಿದ ನಂತರ, ಶೌಚಾಲಯಗಳಿಗೆ ಹೋಗಿ ಬಂದ ನಂತರ, ಮೂಗು ಮತ್ತು ಪ್ರಾಣಿಗಳನ್ನು ಮುಟ್ಟಿದ ನಂತರ ಕೈಗಳನ್ನು ಸ್ವಚ್ಛಗೊಳಿಸಿ.

ಅಡುಗೆ ಮಾಡುವ ಜಾಗ, ಚಾಕು ಮತ್ತು ಪಾತ್ರೆಗಳನ್ನು ತೊಳೆಯಿರಿ:
ಅಡುಗೆ ಮಾಡುವ ಜಾಗ, ಚಾಕು ಮತ್ತು ಪಾತ್ರೆಗಳನ್ನು ಅಡುಗೆ ಮಾಡುವ ಮೊದಲು ಮತ್ತು ನಂತರ, ಅದರಲ್ಲೂ ಮಾಂಸ, ಮೀನು, ಮೊಟ್ಟೆ ಮತ್ತು ತರಕಾರಿಗಳನ್ನು ಕತ್ತರಿಸಿದ ನಂತರ ತೊಳೆಯಿರಿ. ಉಗುರುಬೆಚ್ಚಗಿನ ನೀರು ಉತ್ತಮ.

ಪ್ರತ್ಯೇಕ ಕತ್ತರಿಸುವ ಮಣೆ ಉಪಯೋಗಿಸಿ:
ಹಸಿ ತರಕಾರಿಗಳು, ಹಸಿ ಮಾಂಸ ಮತ್ತು ಮೀನುಗಳನ್ನು ಕತ್ತರಿಸಲು ಪ್ರತ್ಯೇಕ ಕತ್ತರಿಸುವ ಮಣೆ ಉಪಯೋಗಿಸಿ. ಇದರಿಂದ ಅವುಗಳಲ್ಲಿರುವ ಹಾನಿಕಾರ ಬ್ಯಾಕ್ಟೀರಿಯಗಳು ಆಹಾರದಲ್ಲಿ ಸೇರುವುದುನ್ನು ತಪ್ಪಿಸಬಹುದು.

ಕರವಸ್ತ್ರ ಸ್ವಚ್ಛಗೊಳಿಸಿ:
ಅಡುಗೆಮನೆಯಲ್ಲಿ ಉಪಯೋಗಿಸುವ ಕರವಸ್ತ್ರಗಳನ್ನು ನಿಯಮಿತವಾಗಿ ತೊಳೆದು ಒಣಗಿಸಿ. ಕೊಳಕು, ಒದ್ದೆ ವಸ್ತ್ರಗಳು ಸೂಕ್ಷ್ಮಾಣು ಜೀವಿಗಳು ಉತ್ಪತ್ತಿಯಾಗಲು ಸರಿಯಾದ ಜಾಗ.

ಇದನ್ನೂ ಓದಿ: Summer Skincare : ಬೆವರಿನ ದುರ್ಗಂಧದಿಂದ ಅವಮಾನ ಎದುರಿಸುತ್ತಿದ್ದೀರಾ? ಅದರಿಂದ ಪಾರಾಗಲು ಹೀಗೆ ಮಾಡಿ

ಆಹಾರಗಳನ್ನು ಸರಿಯಾಗಿ ಬೇಯಿಸಿ:
ಕೋಳಿ, ಹಂದಿ ಮಾಂಸ, ಬರ್ಗರ್‌, ಮೀನು ಮತ್ತು ಕಬಾಬ್‌ಗಳನ್ನು ಚೆನ್ನಾಗಿ(ಅಂದರೆ ಹಸಿ ಮಾಂಸದ ಬಣ್ಣ ಹೋಗುವವರೆಗೆ) ಬೇಯಿಸಿ. ಮಾಂಸಗಳನ್ನು ಪ್ರತ್ಯೇಕ ಜಾಗದಲ್ಲಿ ತೊಳೆಯಿರಿ, ಅಡುಗೆಮನೆಯಲ್ಲಲ್ಲ. ಇದರಿಂದ ಬ್ಯಾಕ್ಟೀರಿಯಾಗಳು ಹರಡುವುದನ್ನು ತಪ್ಪಿಸಬಹುದು.

ಹಸಿ ಮಾಂಸಗಳನ್ನು ಪ್ರತ್ಯೇಕವಾಗಿರಿಸಿ:
ಮುಖ್ಯವಾಗಿ ರೆಡಿ–ಟು–ಈಟ್‌ ಫುಡ್‌, ಸಲಾಡ್‌, ಹಣ್ಣು ಮತ್ತು ಬ್ರೆಡ್‌ಗಳನ್ನು ಹಸಿ ಮಾಂಸದಿಂದ ದೂರವಿಡಿ. ಏಕೆಂದರೆ, ಅವುಗಳನ್ನು ಬೇಯಿಸಿ ತಿನ್ನುವುದಿಲ್ಲ. ಹಸಿ ಮಾಂಸಗಳಲ್ಲಿರುವ ಬ್ಯಾಕ್ಟೀರಿಯಾಗಳು ಆಹಾರದಲ್ಲಿ ಸೇರುವುದನ್ನು ತಪ್ಪಿಸಬಹುದು.

ಹಸಿ ಮಾಂಸಗಳನ್ನು ಕೆಳಗಿನ ಶೆಲ್ಫ್‌ನಲ್ಲಿ ಶೇಖರಿಸಿ:
ಹಸಿ ಮಾಂಸಗಳನ್ನು ಮುಚ್ಚಿ, ಫ್ರಿಡ್ಜ್‌ನ ಕೆಳಗಿನ ಶೆಲ್ಫ್‌ನಲ್ಲಿ ಶೇಖರಿಸಿ. ಇದರಿಂದ ಅವುಗಳು ಇತರ ಆಹಾರದ ಸಂಪರ್ಕಕ್ಕೆ ಬರದಂತಾಗುತ್ತದೆ.

ಫ್ರಿಡ್ಜ್‌ನ ತಾಪಮಾನ 5C ಗಿಂತ ಕಡಿಮೆ ಇಡಿ:
ಫ್ರಿಡ್ಜ್‌ನ ತಾಪಮಾನವನ್ನು 5Cಗಿಂತ ಕಡಿಮೆ ಇಡಿ. ಇದರಿಂದ ಹಾನಿಕಾರಕ ಸೂಕ್ಷ್ಮಜೀವಿಗಳ ಉತ್ಪತ್ತಿಗೆ ಕಡಿವಾಣ ಹಾಕಿದಂತಾಗುತ್ತದೆ. ಫ್ರಿಡ್ಜ್‌ ಅನ್ನು ಸಂಪೂರ್ಣವಾಗಿ ಅಂದರೆ ಜಾಗವೇ ಇಲ್ಲದಂತೆ ತುಂಬಿಸ ಬೇಡಿ. ಇದರಿಂದ ಸರಿಯಾಗಿ ಗಾಳಿಯಾಡಲು ಜಾಗವೇ ಇಲ್ಲದಂತಾಗಿ ಶೇಖರಿಸಿಟ್ಟ ಪದಾರ್ಥಗಳ ಮೇಲೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ಫ್ರಿಡ್ಜ್‌ನ ತಾಪಮಾನದ ಮೇಲೂ ಪರಿಣಾಮ ಬೀರುತ್ತದೆ. ಮತ್ತೊಂದು ಮುಖ್ಯವಾದ ವಿಷಯವೆಂದರೆ ಅನಾವಶ್ಯಕವಾಗಿ ಫ್ರಿಡ್ಜ್‌ನ ಬಾಗಿಲು ತೆರೆದಿಡಬೇಡಿ.

ಉಳಿದ ಆಹಾರಗಳನ್ನು ತ್ವರಿತವಾಗಿ ಫ್ರಿಡ್ಜ್‌ನಲ್ಲಿಡಿ:
ಅಡುಗೆ ಮಾಡಿದ ನಂತರ ತಕ್ಷಣ ಸೇವಿಸುವುದಲ್ಲವೆಂದರೆ ಅವುಗಳನ್ನು ಆರಿಸಿ ಫ್ರಿಡ್ಜ್‌ ಅಥವಾ ಫ್ರೀಜರ್‌ನಲ್ಲಿಡಿ. ಎರಡು ದಿನಗಳ ಒಳಗೆ ಅವುಗಳನ್ನು ಖಾಲಿ ಮಾಡಿ. ಪದೇ ಪದೇ ಬಿಸಿಮಾಡಿ ಫ್ಟಿಡ್ಜ್‌ನಲ್ಲಿಡಬೇಡಿ.

ಯುಸ್‌–ಬಾಯ್‌ ಡೇಟ್‌ಗೆ ಮನ್ನಣೆ ಕೊಡಿ:
ಯುಸ್‌–ಬಾಯ್‌ ಡೇಟ್‌ ಅಂದರೆ ಎಕ್ಸ್‌ಪೈಯರಿ ಡೇಟ್‌ ಆದ ಆಹಾರಗಳನ್ನು ಸೇವಿಸ ಬೇಡಿ. ಅದು ನೋಡಲಿಕ್ಕೆ ಮತ್ತು ವಾಸನೆಯಲ್ಲಿ ಸರಿಯಾಗಿದೆ ಅನಿಸಿದರೂ, ಉಪಯೋಗ ಮಾಡಬೇಡಿ. ಯುಸ್‌–ಬಾಯ್‌ ಡೇಟ್‌ ಆಹಾರಗಳು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಟ್ಟಿರುತ್ತವೆ. ಅದರ ಅರ್ಥ ಸಂಸ್ಕರಿಸಿದ ಮತ್ತು ಪ್ಯಾಕೆಟ್‌ ಆಹಾರಗಳು ಎಷ್ಟು ಬೇಗ ಹಾನಿಕಾರ ಜೀವಿಗಳು ಅದರಲ್ಲಿ ಉತ್ಪತ್ತಿಯಾಗಬಹುದು ಎಂದು ಪರೀಕ್ಷೆ ಮಾಡಿಯೇ ನಮೂದಿಸಿರುತ್ತಾರೆ.

ಇದನ್ನೂ ಓದಿ: Mint Tea : ಎಸಿಡಿಟಿ ಮತ್ತು ಬೇಸಿಗೆಯ ಆಲಸ್ಯ ಹೋಗಲಾಡಿಸಲು ಕುಡಿಯಿರಿ ಪುದೀನಾ ಟೀ!!

(Food poisoning how it happens and important health tips)

Comments are closed.