ಭಾನುವಾರ, ಏಪ್ರಿಲ್ 27, 2025
HomeSpecial StoryLife Stylehair dandruff solution : ತಲೆಹೊಟ್ಟಿನ ಸಮಸ್ಯೆಯೆ : ಇಲ್ಲಿದೆ ಮನೆ ಮದ್ದು

hair dandruff solution : ತಲೆಹೊಟ್ಟಿನ ಸಮಸ್ಯೆಯೆ : ಇಲ್ಲಿದೆ ಮನೆ ಮದ್ದು

- Advertisement -
  • ಅಂಚನ್ ಗೀತಾ

hair dandruff solution : ಫ್ಯಾಷನ್ ಲೈಫ್ ಸ್ಟೈಲ್. ಹಾಗಾಗಿ ಹೆಚ್ಚಿನ ಯುವತಿಯರು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಆದ್ರೆ ನಮ್ಮ ತ್ವಚೆ ತಲೆ ಕೊದಲು ಅಥವಾ ದೇಹದ ಯಾವುದೇ ಭಾಗಕ್ಕೂ ಹೆಚ್ಚಿನ ಕೆಮಿಕಲ್ ಬಳಕೆಯಾಗಿರೋ ಪ್ರಾಡಕ್ಟ್ ಯೂಸ್ ಮಾಡಿದ್ರೆ ಎಲ್ಲನೂ ನೆಗೆಟಿವ್ ಇಂಪ್ಯಾಕ್ಟ್ ಆಗುತ್ತೆ.

ಹೀಗಾಗಿ ತ್ವಚೆ ಅಂದಗೆಟ್ಟರೆ. ತಲೆಕೂದಲಿನಲ್ಲಿ ಡ್ಯಾಂಡ್ರಪ್ ಹುಟ್ಟಿಕೊಳ್ಳುತ್ತೆ. ಆದ್ರೆ ಈ ತಲೆಹೊಟ್ಟಿನ ಸಮಸ್ಯೆ ಇಂದ ತಲೆನೋವು ಆರಂಭವಾಗುತ್ತದೆ.

ಇದರ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ಕೂದಲಿಗೆ ಶ್ಯಾಂಪೂ, ಕಂಡೀಷನರ್ ಸೇರಿದಂತೆ ಹಲವು ಉತ್ಪನ್ನಗಳ ಮೊರೆ ಹೋಗುವವರೇ ಹೆಚ್ಚು. ಆದರೆ ವಾತಾವರಣದ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಡ್ಯಾಂಡ್ರಫ್ ಸಮಸ್ಯೆ ಮರುಕಳಿಸುತ್ತ ಇರುತ್ತದೆ.

ತಲೆ ಕೂದಲುಗಳ ಎಡೆಯಲ್ಲಿ ಉಳಿಯುವ ಇಂತಹ ಕೊಳಕುಗಳನ್ನು ಕೆಲವೊಂದು ದಿನನಿತ್ಯದ ವಸ್ತುಗಳನ್ನು ಬಳಸಿ ಹೋಗಲಾಡಿಸ ಬಹುದು. ಹಾಗಾದ್ರೆ ತಲೆಹೊಟ್ಟಿನ ಸಮಸ್ಯೆಯನ್ನು ಯಾವ ರೀತಿಯ ಮನೆಮದ್ದಿನ ಮೂಲಕ ಹತೋಟಿಗೆ ತರಬಹುದು ಎಂಬುದರ ಡಿಟೈಲ್ಸ್ ಇಲ್ಲಿದೆ.

ತಲೆಹೊಟ್ಟಿನ ಸಮಸ್ಯೆಗೆ ಇಲ್ಲಿದೆ ನೋಡಿ ಸರಳ ಮನೆಮದ್ದು

ಆಲೋವಿರಾ ಜೆಲ್ ತಲೆಹೊಟ್ಟಿಗೆ ಪರಿಣಾಮಕಾರಿ ಮನೆಮದ್ದು. ಈ ಜೆಲ್ ಅನ್ನ ತಲೆಯ ಬುಡಕ್ಕೆ ಹಾಕಿ ಮಸಾಜ್ ಮಾಡೋದ್ರಿಂದ ಕೂದಲು ಮ್ರದು ಆಗೋದ್ರ ಜೊತೆಗೆ ತಲೆ ಹೊಟ್ಟು ಕಮ್ಮಿನು ಆಗುತ್ತೆ.

ಆಲಿವ್ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಮಾಡಿ. ಈ ಎಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಹೀಗೆ ಒಂದು ವಾರಗಳ ತನಕ ಮಾಡುತ್ತಿದ್ದರೆ ತಲೆ ಹೊಟ್ಟಿನ ಸಮಸ್ಯೆ ದೂರವಾಗುತ್ತದೆ.

ಮೊಸರಿನಿಂದ ಕೂಡ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸ್ನಾನಕ್ಕೂ ಅರ್ಧ ಗಂಟೆಗೂ ಮುನ್ನ ಮೊಸರನ್ನು ಕೂದಲಿನ ಬುಡಕ್ಕೆ ಅನ್ವಯಿಸಿ. ಬಳಿಕ ಮಸಾಜ್ ಮಾಡುತ್ತಾ ತೊಳೆಯುವುದರಿಂದ ತಲೆಹೊಟ್ಟನ್ನು ನಿವಾರಿಸಿಕೊಳ್ಳಬಹುದು.

ತಲೆಹೊಟ್ಟಿನ ಸಮಸ್ಯೆಗೆ ತೆಂಗಿನ ಎಣ್ಣೆ ಅತ್ಯುತ್ತಮ ಮನೆ ಮದ್ದು. ತೆಂಗಿನ ಎಣ್ಣೆಯನ್ನು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೆಲೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಕೂಡ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ಕಾಣಬಹುದು.

ಎರಡು ಸ್ಪೂನ್ ಆಲಿವ್ ಎಣ್ಣೆ ಮತ್ತು ನಾಲ್ಕು ಚಮಚ ಮೊಸರನ್ನು ಮಿಶ್ರ ಮಾಡಿ. ಈ ಮಿಶ್ರಣವನ್ನು ತಲೆ ಕೂದಲ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಸ್ನಾನಕ್ಕೂ ಮುನ್ನ ದಿನ ನಿತ್ಯ ಹೀಗೆ ಮಾಡಿದರೆ ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಬಹುದು.

ಇದನ್ನೂ ಓದಿ : ಹೆಚ್ಚು ಸೊಳ್ಳೆ ಕಡಿತಕ್ಕೆ ನಿಮ್ಮರಕ್ತದ ಗ್ರೂಪ್ ಕೂಡ ಕಾರಣ ! ಯಾವ ಬ್ಲಡ್‌ ಗ್ರೂಪಿನವರಿಗೆ ಹೆಚ್ಚು ಸೊಳ್ಳೆ ಕಚ್ಚುತ್ತೆ ಗೊತ್ತಾ ?

ಇದನ್ನೂ ಓದಿ : ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತೆ ತುಪ್ಪ : ನಿತ್ಯ ಬಳಕೆಯಿಂದ ಹಲವು ಅನುಕೂಲ

( Health Tips : hair dandruff solution)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular