Suresh Kumar Protest : ಸರ್ಕಾರಕ್ಕೆ ಸೆಡ್ಡು ಹೊಡೆದ ಮಾಜಿ ಸಚಿವ: ಕೆಪಿಎಸ್ ಸಿ ಮುಂದೆ ಸುರೇಶ್ ಕುಮಾರ್ ಪ್ರತಿಭಟನೆ

ಬೆಂಗಳೂರು : ರಾಜ್ಯದಲ್ಲಿ ಪಿಎಸ್ಐ ಪರೀಕ್ಷಾ ಅಕ್ರಮ ವಿಚಾರ ಸದ್ದು ಮಾಡುತ್ತಿರುವಾಗಲೇ ಈಗಾಗಲೇ ನಡೆದಿರುವ ಕೆಪಿಎಸ್ಸಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸುವಂತೆ ಕೋರಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸುರೇಶ್ ಕುಮಾರ್ (Suresh kumar protest) ಮಂಗಳವಾರ ಕೆಪಿಎಸ್ಸಿ ಮುಂದೇ ಧರಣಿಗೆ ಸಿದ್ಧವಾಗಿದ್ದಾರೆ. ಈಗಾಗಲೇ ಮಾಜಿ ಸಚಿವ ಸುರೇಶ್ ಕುಮಾರ್ ಕೆಪಿಎಸ್ ಸ್ಸಿ ಆಯೋಗದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಫೆಬ್ರವರಿ 2021 ರ ಕೆಎಎಸದ ಮುಖ್ಯ ಪರೀಕ್ಷೆಗಳ ಮೌಲ್ಯ ಮಾಪನ ಕುರಿತು ಯಾವುದೇ ಮಾಹಿತಿ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಗಮನ ಸೆಳೆದಿದ್ದರು.

ಅಲ್ಲದೇ ಅಭ್ಯರ್ಥಿಗಳು ನೀರಿಕ್ಷೆ ಕಳೆದುಕೊಂಡು ಅನಾಹುತಗಳಿಗೆ ಮನಸ್ಸು ಮಾಡುವ ಮುನ್ನ ಫಲಿತಾಂಶ ಪ್ರಕಟಿಸಿ ಎಂದು ಮನವಿ ಮಾಡಿದ್ದಲ್ಲದೇ, ಒಂದೊಮ್ಮೆ ಇದಕ್ಕೆ ಪ್ರತಿಕ್ರಿಯೆ ನೀಡದೇ ಹೋದಲ್ಲಿ ಮೇ31 ರಂದು ಕೆಪಿಎಸ್ ಸ್ಸಿ ಗೇಟ್ ಎದುರು ನಿಲ್ಲುವುದಾಗಿ ಎಚ್ಚರಿಸಿದ್ದರು. ಆದರೆ ಸುರೇಶ್ ಕುಮಾರ್ ಪತ್ರಕ್ಕೆ ಸಕಾರಾತ್ಮಕವಾದ ಉತ್ತರ ಸಿಗದ ಹಿನ್ನೆಲೆಯಲ್ಲಿ ಸುರೇಶ್ ಕುಮಾರ್ ಮಂಗಳವಾರ ಮುಂಜಾನೆ ಕೆಪಿ ಎಸ್ ಸ್ಸಿ ಗೇಟ್ ಬಳಿ ಪ್ರೊಟೆಸ್ಟ್ ನಡೆಸೋದಾಗಿ ಹೇಳಿದ್ದಾರೆ. ಇದಕ್ಕೆ ಪರೀಕ್ಷೆ ಬರೆದ ಅಭ್ಯರ್ಥಿಗಳು ಸಾಥ್ ನೀಡೋ ನೀರಿಕ್ಷೆಇದೆ.

ಈ ಬಗ್ಗೆ ತಮ್ಮ ಪತ್ರದಲ್ಲಿ ವಿವರವಾದ ಮಾಹಿತಿ ನೀಡಿದ ಸುರೇಶ್ ಕುಮಾರ್, 2021 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಅದೇ ರೀತಿ ಹತ್ತಾರು ಇಲಾಖೆಗಳಿಗೆ ಸಿಬ್ಬಂದಿ ನೇಮಕಾತಿಗೆ ಸಂಸ್ಥೆ ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದ ಇಡೀ ಆಡಳಿತ ವ್ಯವಸ್ಥೆ ನಲುಗುತ್ತಿದೆ. ನಾನು ಸಚಿವನಾಗಿದ್ದಲೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದೇ. ಅದರೆ ಜನರಿಗೆ ಪಾರದರ್ಶಕವಾಗಿ ಉದ್ಯೋಗ ಒದಗಿಸಬೇಕಾದ ಕೆಪಿಎಸ್ ಸ್ಸಿ‌ಸಂಸ್ಥೆಯೇ ಪ್ರತಿಕೂಲವಾಗಿ ವರ್ತಿಸುತ್ತಿರುವುದು ವಿಷಾದಕರ ಸಂಗತಿ ಎಂದು ಸುರೇಶ್ ಕುಮಾರ್ ಬರೆದಿದ್ದಾರೆ.

ಇನ್ನೊಂದೆಡೆ ಈಗಾಗಲೇ ಸರ್ಕಾರ ಪಿಎಸ್ ಐ ಪರೀಕ್ಷಾ ಅಕ್ರಮದ ಮುಜುಗರ ಎದುರಿಸುತ್ತಿದೆ. ಹೀಗಿರುವಾಗಲೇ ಮತ್ತೆ ಕೆಪಿಎಸ್ ಸ್ಸಿ ವಿಳಂಬ ಧೋರಣೆ ವಿರೋಧಿಸಿ ಸ್ವತಃ ಶಾಸಕರೇ ಆಡಳಿತ ಸರ್ಕಾರದ ಎದುರು ನಿಂತಿರೋದು ಮತ್ತೊಮ್ಮೆ ಸರ್ಕಾರಕ್ಕೆ ತೀವ್ರ ಮುಜುಗರದ ಸಂಗತಿಯಾಗಿದ್ದು, ಇನ್ನಾದರೂ ಕೆಪಿಎಸ್ ಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿ ನೇಮಕ ಪ್ರಕ್ರಿಯೆ ಮುಂದುವರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Ex minister suresh kumar protest infront of kpsc office

Comments are closed.