Worshiping rats : ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ

Worshiping rats : ಇಲಿ… ಇದು ಒಮ್ಮೆ ಮನೆ ಹೊಕ್ಕರೆ ಮಾಡುವ ಅವಾಂತರ ಅಷ್ಟಿಷ್ಟಲ್ಲ. ಮನೆಗೆ ಬಂದ ಮೂಷಿಕ ಹೋದ್ರೆ ಸಾಕು ಅಂತ ಅನಿಸುವಷ್ಟರ ಮಟ್ಟಿಗೆ ಮಾಡಿ ಹಾಕುತ್ತೆ. ಅದು ಮಾಡುವ ಅವಾಂತರವನ್ನು ನೋಡಿ ಇಲಿಯನ್ನು ಕೊಲ್ಲೋಕೆ ಯಾವುದ್ಯಾವುದೋ ಪ್ರಾಡಕ್ಟನ್ನು ನಾವೆಲ್ಲರೂ ಹಾಕಿರುತ್ತೀವಿ. ಆದ್ರೆ ಆ ಊರಿನಲ್ಲಿ ಹಾಗಲ್ಲ ಅಲ್ಲಿ ಇಲಿ ಇದ್ರೆ ಒಳ್ಳೆದಾಗುತ್ತೆ ಅನ್ನೋ ನಂಬಿಕೆ ಇದೆ. ಅದಕ್ಕೆ ಕೈ ಮುಗಿದು ಬೇಡಿಕೊಳ್ಳುತ್ತಾರೆ. ಇಲ್ಲಿಯ ಜನ. ಅದಕ್ಕೆ ಕಾರಣ ಈ ಊರಿನಲ್ಲಿರೋ ದೇವಾಲಯ.

ಭಾರತೀಯ ಸಂಸ್ಕೃತಿಯಲ್ಲಿ ಭೂಮಿಯ ಪ್ರತಿಯೊಂದು ವಸ್ತುವಿಗೂ ಪೂಜನೀಯ ಸ್ಥಾನವಿದೆ. ಅದಕ್ಕೆ ಉದಾಹರಣೆ ಎಂಬಂತೆ ವಿಚಿತ್ರ ವಿಚಿತ್ರವಾದ ದೇವಾಲಯಗಳೂ ಈ ನಾಡಿನಲ್ಲಿದೆ. ಅಂತಹದೇ ಒಂದು ದೇವಾಲಯ ಇದು. ಇಲ್ಲಿ ಮೂಷಿಕಕ್ಕೆ ಪೂಜನೀಯ ಸ್ಥಾನವಿದೆ. ಈ ದೇವಾಲಯದಲ್ಲಿ ಇಲಿಗಳದ್ದೇ ರಾಜ್ಯಭಾರ. ಎಲ್ಲಿ ನೋಡಿದ್ರೂ ಇಲಿಗಳೇ ಇಲಿಗಳು. ಭಕ್ತರೇ ಇಲಿಗಳಿಗೆ ನೋವಾಗದಂತೆ ದೇವಾಲಯಕ್ಕೆ ನಡೆದು ಹೋಗುತ್ತಾರೆ. ಇಲ್ಲಿ ನೆಲೆಸಿರೋ ತಾಯಿಯ ಸಂತಾನ ಅಂತಾನೇ ( Worshiping rats) ಈ ಮೂಷಿಕಗಳನ್ನು ನಂಬಲಾಗುತ್ತೆ.

ಇದು ಜಗನ್ಮಾತೆ ಅಂಶದಿಂದ ಜನಿಸಿರೋ ಕರಣಿ ಮಾತೆಯ ಮಂದಿರ. ಇಲ್ಲಿ ಗುಹೆಯಲ್ಲಿ ಕರಣಿ ಮಾತೆಯನ್ನು ಭಕ್ತಿಯಿಂದ ಪೂಜಿಸಲಾಗುತ್ತೆ. ಈ ದೇವಿಯ ದರ್ಶನಕ್ಕೆ ಅಂತಾನೆ ಸಾವಿರಾರು ಮಂದಿ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿ ಬಂದು ತಾಯಿಯನ್ನು ಪೂಜಿಸಿದ್ರೆ, ಹಾಗೂ ಇಲಿಗಳಿಗೆ ಆಹಾರ ನೀಡಿದ್ರೆ ತಮ್ಮ ಕಷ್ಟಗಳು ನಿವಾರಣೆ ಆಗುತ್ತೆ ಅನ್ನೋ ನಂಬಿಕೆ ಇಲ್ಲಿಯ ಭಕ್ತರದು. ಈ ಕರಣಿ ಮಾತೆಯ ದೇವಾಲಯದ ಇತಿಹಾಸ ಬಗ್ಗೆ ಹೇಳೋದಾದ್ರೆ ಇಲ್ಲಿನ ಸ್ಥಳ ಪುರಾಣ ಹೀಗೆ ಹೇಳುತ್ತೆ. ಕರಣಿ ಮಾತೆಯ ಅವತಾರ ವಾಗಿದ್ದು ಸನ್ 1444ರಲ್ಲಿ ಬಾಲ್ಯದಿಂದಲೇ ಧ್ಯಾನ ಹಾಗೂ ಪೂಜೆಯಲ್ಲಿ ಮಗ್ನಳಾಗಿದ್ದ ಈ ಮಾತೆ ಪವಾಡಗಳನ್ನು ಮಾಡುತ್ತಿದ್ರು. ವಯಸ್ಸಿಗೆ ಬಂದಾಗ ಆಕೆಗೆ ದೇವಾಜಿ ಎಂಬವರ ಜೊತೆ ವಿವಾಹ ಮಾಡಲಾಯಿತು. ಆದ್ರೆ ಆಕೆ ವಿವಾಹ ನಂತರವೂ ಬ್ರಹ್ಮಚರ್ಯವನ್ನು ಪಾಲಿಸುತ್ತಾ ಬಂದಿದ್ದಳು. ಇದೇ ಕಾರಣಕ್ಕೆ ಕಾರಣಿ ಮಾತೆಯ ಇಚ್ಚೆಯ ಅನುಸಾರವಾಗಿ ಆಕೆಯ ಕೊನೆ ತಂಗಿ “ಭಾಯಿ”ಯೊಡನೆ ದೇವಾಜಿ ವಿವಾಹ ಮಾಡಲಾಯಿತು. ನಂತರ ಕಾರಣೀ ಮಾತೆ ಇದೇ ಗುಹೆಯಲ್ಲಿ ತಮ್ಮ ಇಷ್ಟ ದೇವತೆಗಳನ್ನು ಪೂಜಿಸುತ್ತಾ 1565 ಚೈತ್ರ ಶುಕ್ಲ ನವಮಿ ಗುರುವಾರದಂದು ಜ್ಯೋತಿ ಲೀನರಾದ್ರು. ಇದಾಗಿ ನಾಲ್ಕನೇ ದಿನದಿಂದ ಮಾತೆಗೆ ಪೂಜೆ ನಡೆದುಕೊಂಡು ಬರುತ್ತಿದೆ.

ಇನ್ನು ಇಲ್ಲಿರುವ ಇಲಿಗಳ (Worshiping rats) ಬಗ್ಗೆಯೂ ಒಂದು ಕಥೆಯಿದೆ. ಕರಣಿ ಮಾತೆಯ ಪತಿ ಹಾಗು ಆತನ ಎರಡನೇ ಪತ್ನಿ (ಕರಣಿ ಮಾತೆಯ ತಂಗಿ) ಗೆ ನಾಲ್ವರು ಮಕ್ಕಳು ಜನಿಸಿದ್ರು. ಅವರ ಹೆಸರು ಪೂನಂ ರಾಜ್, ನಾಗರಾಜ್, ಸಿದ್ದರಾಜ್ ಲಕ್ಷ್ಮಣ್ ರಾಜ್. ಈ ನಾಲ್ವರು ಪುತ್ರರು ತಿಂಗಳಿ ಗೊಬ್ಬರಂತೆ ಗುಹೆಯಲಿ ಕರಣಿ ಮಾತೆಯ ಪೂಜಾ ಕೈಕರ್ಯಕ್ಕೆ ಸಹಾಯ ಮಾಡುತ್ತಾ ಆಕೆಯ ಸೇವೆ ಮಾಡುತ್ತಿದ್ರು.

ಅದರಲ್ಲಿ ಲಕ್ಷ್ಮಣ್ ರಾಜ್. ಅತ್ಯಂತ ಪ್ರೀತಿ ಪಾತ್ರನಾಗಿದ್ದ. ಆತ ಅನಿರೀಕ್ಷಿತನಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದ. ಆಗ ಕರಣಿ ಮಾತೆಯು ತಪ್ಪಸ್ಸು ಮಾಡಿ ಯಮ ನನ್ನು ಒಪ್ಪಿಸಿ ಆತನಿಗೆ ಮರು ಜೀವ ನೀಡಿದ್ಲು. ಆದ್ರೆ ಯಮ ಆತನಿಗೆ ಮನುಷ್ಯ ರೂಪದ ಬದಲಿಗೆ ಇಲಿಯ ರೂಪದಲ್ಲಿ ಮರು ಜೀವ ನೀಡಿದ್ದ. ಅಂದಿನಿಂದ ಕರಣಿ ಮಾತೆಯ ವಂಶಜರು ಸಾವನ್ನಪ್ಪಿದ ನಂತ್ರ ಮೂಷಿಕರಾಗುತ್ತಾರೆ ಅನ್ನೋ ನಂಬಿಕೆ ಇಲ್ಲಿದೆ. ಇಂದಿಗೂ ಈ ಮಕ್ಕಳ ವಂಶಜರೇ ಇಲ್ಲಿ ತಿಂಗಳಿಗೊಬ್ಬರಂತೆ ಪೂಜೆ ಮಾಡುತ್ತಾರೆ. ಅವರನ್ನು ಬಾರಿದಾರ್ ಎಂದು ಕರೆಯಲಾಗುತ್ತೆ.

ಪ್ರಸ್ತುತ, 20,000 ಕ್ಕೂ ಅಧಿಕ ಕಪ್ಪು ಇಲಿಗಳು (Worshiping rats ) ಈ ದೇವಸ್ಥಾನದಲ್ಲಿ ನೆಲೆಸಿದ್ದು, ಇದನ್ನು ನೋಡೋಕೆ ದೂರದ ಪಟ್ಟಣಗಳಿಂದಲೂ ಸಹ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಇಲ್ಲಿರುವ ಇಲಿಗಳಲ್ಲಿ ಕೆಲವೇ ಕೆಲವು ಶ್ವೇತ ವರ್ಣದ ಇಲಿಗಳಿದ್ದು ಅವುಗಳನ್ನು ಅತ್ಯಂತ ಪವಿತ್ರವೆಂದು ಭಾವಿಸಲಾಗುತ್ತದೆ. ನೀವು ಭೇಟಿ ನೀಡಿದಾಗ ನಿಮಗೆ ಏನಾದರೂ ಇವುಗಳ ದರ್ಶನವಾದ್ರೆ ಮಾತೆಯ ಕೃಪಾದೃಷ್ಟಿಯು ನಿಮ್ಮ ಮೇಲಿದೆ ಎಂಬುದು ಇಲ್ಲಿನ ಜನರ ನಂಬಿಕೆ. ಇನ್ನು ಯಾವುದೇ ಮೂಷಿಕವಾದ್ರೂ ನಿಮ್ಮ ಕಾಲಿನ ಮೇಲಿಂದ ಹೋದ್ರೆ ಶುಭವಾಗುತ್ತೆ ಅಂತಾನು ನಂಬಲಾಗುತ್ತೆ.

ಇಲ್ಲಿ ಮೂಷಿಕಗಳನ್ನು ಕಬಾ ಅಂತನೂ ಕರೆಯಲಾಗುತ್ತೆ, ಕಾಬಾ ಅಂದ್ರೆ ಸಂತಾನ ಅಥವಾ ಮಕ್ಕಳು ಅಂತ ಅರ್ಥವಿದೆ. ಇಲ್ಲಿಗೆ ಬರುವ ಭಕ್ತರು ಮಾತೆಗೆ ಪೂಜಾ ಸಾಮಾಗ್ರಿ ಜೊತೆ ಇಲಿಗಳಿಗೆ ಲಡ್ಡು ಹಾಗು ಹಾಲನ್ನು ತರುತ್ತಾರೆ. ದೇವಾಲಯದ ಗರ್ಭಗುಡಿಯ ಎದುರೇ ಇಲಿಗಳಿಗೆ ಹಾಲು ಕುಡಿಯೋಕೆ ಅಂತ ದೊಡ್ಡದೊಡ್ಡ ಬೆಳ್ಳಿ ಬಟ್ಟಲುಗಳನ್ನು ಇಡಲಾಗಿದೆ. ಇನ್ನು ಉಳಿದ ಪ್ರಾಣಿಗಳಿಂದ ತೊಂದರೆ ಯಾಗದಂತೆಯೂ ದೇವಾಲಯ ಸುತ್ತಲೂ ಕಬ್ಬಿಣದ ಸರಳುಗಳನ್ನು ಜೋಡಿಸಲಾಗಿದೆ.

ಈ ದೇವಾಲಯ (Worshiping rats) ಮತ್ತೊಂದು ವಿಶೇಷ ಅಂದ್ರೆ ಮೊದಲ ಪ್ರಸಾದ ಮೂಷಿಕಗಳಿಗೆ ನೀಡಲಾಗುತ್ತೆ. ಅವುಗಳು ತಿಂದ ನಂತರ ಅದೇ ಹಾಲು ಹಾಗು ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತೆ. ಆದ್ರೆ ಇಂದಿನವರೆಗೂ ಇದನ್ನು ತಿಂದ ಭಕ್ತರಿಗೆ ಆರೋಗ್ಯದಲ್ಲಿ ಏರುಪೇರು ಕೂಡಾ ಆಗಿಲ್ಲ. ಇಷ್ಟೆಲ್ಲಾ ಇಲಿಗಳಿದ್ರೂ ಪ್ಲೇಗ್ ನಂತಹ ಮಹಾಮಾರಿ ಈ ಊರಿನ ಬಳಿ ಸುಳಿದಿಲ್ಲ. ಇದು ಕಾರಣಿ ಮಾತೆಯ ಪವಾಡ ಅಂತಾರೆ ಭಕ್ತರು. ಇಲ್ಲಿ ಎಲ್ಲಂದರಲ್ಲಿ ಮೂಷಿಕಗಳು ಓಡಾಡುವ ಕಾರಣಕ್ಕಾಗಿಯೇ ದೇವಾಲಯದ ಆವರಣದಲ್ಲಿ ಚಪ್ಪಲಿ ಕೂಡಾ ಹಾಕುವುದನ್ನು ನಿಷೇಧಿಸ ಲಾಗಿದೆ. ಇನ್ನು ಈ ಇಲಿಗಳು ಭಕ್ತರಿಗೆ ಯಾವುದೇ ತೊಂದರೆಯನ್ನು ನೀಡೋದಿಲ್ಲ. ಆಕಸ್ಮಿಕವಾಗಿ ಕಾಲಿಗೆ ತಾಕಿ ಮೂಷಿಕ ಸಾವನ್ನಪ್ಪದ್ರೆ ಅಗ ಬೆಳ್ಳಿ ಅಥವಾ ಚಿನ್ನದ ಇಲಿಯ ಪ್ರತಿಮೆಯನ್ನು ದೇವಾಲಯಕ್ಕೆ ಒಪ್ಪಿಸುವ ರೂಡಿ ಇದೆ.

ಈ ವಿಚಿತ್ರ ಮೂಷಿಕ ದೇವಾಲಯ ಅಥವಾ ಕರಣಿ ಮಾತೆಯ ದೇವಾಲಯವಿರೋದು ರಾಜಸ್ಥಾನ ರಾಜ್ಯದ ಬಿಕಾನೇರ್ ಪಟ್ಟಣದಿಂದ ಸುಮಾರು 30 ಕಿ.ಮೀ ದೂರವಿರುವ ದೇಶ್ನೋಕ್ ಎಂಬಲ್ಲಿ. ಇದು ಜೋಧಪುರ್ ಹಾಗು ಬಿಕಾನೇರ್ ವಂಶಸ್ಥರ ಆರಾಧ್ಯವಾಗಿರೋ ಕಾರಣಿ ದೇವಿ ನೆಲೆಯಾದ ಸ್ಥಳ. ಇದನ್ನು ರಾಜಗಂಗಾಸಿಂಗ್ ಕಟ್ಟಿಸಿದ ಅಂತ ಹೇಳಲಾಗುತ್ತೆ.

ಇಲ್ಲಿಗೆ ದೇಶ ವಿದೇಶದಿಂದ ಸಾವಿರಾರು ಭಕ್ತರು ಬರುತ್ತಾರೆ. ಭಕ್ತರಿಗೆ ಉಳಿದುಕೊಳ್ಳೋಕೆ ಛತ್ರಗಳ ವ್ಯವಸ್ಥೆಯೂ ಇಲ್ಲಿದೆ. ಇಲ್ಲಿ ಎರಡು ಬಾರಿ ಅಂದ್ರೆ ಸೆಪ್ಟಂಬರ್ – ಅಕ್ಟೋಬರ್ ಹಾಗೂ ಮಾರ್ಚ್ – ಎಪ್ರಿಲ್ ನಲ್ಲಿ ಜಾತ್ರೆ ನಡೆಯುತ್ತೆ. ಇಲ್ಲಿಗೆ ರೈಲು ಹಾಗೂ ಬಸ್ ಮೂಲಕ ನಾವು ಹೋಗಬಹುದು. ಸಾದ್ಯವಾದ್ರೆ ಜೀವನದಲ್ಲಿ ಒಂದು ಬಾರಿ ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ : ದೇವಾಲಯಗಳಲ್ಲಿ ಡ್ರೆಸ್‌ ಕೋಡ್‌ ಜಾರಿ ಮಾಡಿ : ರಾಜ್ಯ ಸರಕಾರಕ್ಕೆ ಹಿಂದೂ ಮಹಾಸಭಾ ಎಚ್ಚರಿಕೆ

ಇದನ್ನೂ ಓದಿ : ನದಿಯಲ್ಲಿ ನೆಲೆಯೂರಿದ ದುರ್ಗಾಪರಮೇಶ್ವರಿ : ಆದಿ ಕಟೀಲು ದೇವಸ್ಥಾನದ ನಿಮಗೆ ಗೊತ್ತಾ …!

The gods here are rat children. Worshiping rats is becoming a favorite

Comments are closed.