ಹ್ಯಾಂಡ್‌ಬ್ಯಾಗ್ (Handbags) ಅಥವಾ ಜಂಭದ ಚೀಲಗಳು ಅತಿ ಹೆಚ್ಚು ಉಪಯೋಗಿಸುವ ವಸ್ತುಗಳಲ್ಲೊಂದು. ಹ್ಯಾಂಡ್‌ಬ್ಯಾಗ್‌ಗಳು ನಿಮ್ಮ ಕಪಾಟಿನ ಗೌರವಾನ್ವಿತ ಆಸ್ತಿ. ನೀವು ಬಳಸುವ ಹ್ಯಾಂಡ್‌ಬ್ಯಾಗ್‌ಗಳು ಎಲ್ಲರೂ ನಿಮ್ಮನ್ನು ನೋಡುವಂತೆ ಮಾಡಬಹುದು ಅಥವಾ ನಿಮಗೆ ಮುಜುಗರವನ್ನೂ ತರಲೂಬಹುದು. ನಿಮ್ಮ ಉಡುಪಿನೊಂದಿಗೆ ಸರಿಹೊಂದುವ ಬ್ಯಾಗ್‌ಗಳನ್ನು ಧರಿಸುವುದು ನಿಮಗೆ ಪ್ರಶಂಸೆಯನ್ನು ಕೊಡಿಸಬಹುದು. ಆದ್ದರಿಂದ, ಸರಿಯಾದ ಹ್ಯಾಂಡ್‌ಬ್ಯಾಗ್‌ಗಳನ್ನು ಆಯ್ದುಕೊಳ್ಳುವುದು ಸ್ವಲ್ಪ ಕಠಿಣದ ಕೆಲಸ. ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಅತ್ಯಾಕರ್ಷಕ ಉಡುಪುಗಳೊಂದಿಗೆ ಯಾವ ರೀತಿಯ ಹ್ಯಾಂಡ್‌ಬ್ಯಾಗ್‌ಗಳನ್ನು ಒಯ್ಯುತ್ತಾರೆ ಎಂಬುದು ಇಲ್ಲಿದೆ ನೋಡಿ.
ನೀವೂ ಆಯ್ದುಕೊಳ್ಳಬಹುದಾದ 5 ಟ್ರೆಂಡಿಂಗ್ ಹ್ಯಾಂಡ್‌ಬ್ಯಾಗ್‌ಗಳು:
ಕಾಯಿನ್ ಪರ್ಸ್:
ಅಷ್ಟೇನೂ ಜಾಗವಿರದ, ಆದರೆ ನಿಮ್ಮ ಸೂಕ್ಷ್ಮವಾದ ಉಡುಪಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುವ ಚಿಕ್ಕ ಬ್ಯಾಗ್ ಎಂದರೆ ಕಾಯಿನ್ ಪರ್ಸ್ ಆಗಿದೆ. ಈ ಸಣ್ಣ ಪರ್ಸ್‌ನಲ್ಲಿ ಸರಿಯಾಗಿ ಕಾಯಿನ್ ಇರಿಸಲು ಮಾತ್ರ ಸಾಧ್ಯ. ಅದರ ಜೊತೆಗೆ ಸಣ್ಣ ಲಿಪ್‌ಸ್ಟಿಕ್ ಮತ್ತು ಪರಫ್ಯೂಮ್ ಗಳನ್ನೂ ಇಡಬಹುದು. ತಾರಾ ಸುತಾರಿಯ ಇತ್ತೀಚೆಗೆ ಸಂಪೂರ್ಣ ಗುಲಾಬಿ ಬಣ್ಣದ ಪ್ರಯಾಣದ ಉಡುಪಿನೊಂದಿಗೆ ಬಬಲ್ಗಮ್ ಗುಲಾಬಿ ಬಣ್ಣದ ಕಾಯಿನ್ ಪರ್ಸ್‌ನಲ್ಲಿ ಕಾಣಿಸಿಕೊಂಡಿದ್ದರು.

ಹೊಬೊ ಬ್ಯಾಗ್ :
ಸದ್ಯದ ಟ್ರೆಂಡಿಯಸ್ಟ್ ಬ್ಯಾಗ್ ಇದಾಗಿದೆ. ಹೊಬೊ ಬ್ಯಾಗ್ ಚೀಲವನ್ನು ಕೋಲಿಗೆ ಕಟ್ಟಿದಂತೆ ಇರುತ್ತದೆ. ಇದು ಹಲವು ಸೈಜ್‌ಗಳಲ್ಲಿ ಲಭ್ಯ. ಹೊಬೋ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಲೂ ಚೆನ್ನಾಗಿ ಕಾಣಿಸುತ್ತದೆ. ಹೊಬೊ ಬ್ಯಾಗ್‌ಗಳು ವೈಡ್ ಲೆಗ್ ಪ್ಯಾಂಟ್‌ಗಳು ಮತ್ತು ಬ್ಲೇಜರ್‌ಗಳೊಂದಿಗೆ ಉತ್ತಮವಾಗಿ ಕಾಣಿಸುತ್ತದೆ. ಸಮಂತಾ ರುತ್ ಪ್ರಭು ಅವರು ಇದನ್ನು ಸೊಗಸಾದ ಐವೊರಿ ಬಣ್ಣದ ಬ್ಯಾಗ್ ಜೊತೆ ಅದೇ ಬಣ್ಣದ ಕೋ–ಆರ್ಡ್ ಸೆಟ್‌ನೊಂದಿಗೆ ಜೋಡಿಸಿದ್ದಾರೆ.

ದೊಡ್ಡದಾದ ಟೋಟ್ ಬ್ಯಾಗ್‌ಗಳು :
ಸಾರ್ವಕಾಲಿಕ ಎಲ್ಲರ ನೆಚ್ಚಿನ ಹ್ಯಾಂಡ್‌ಬ್ಯಾಗ್ ಅಂದರೆ ಎಲ್ಲ ಅಗತ್ಯ ವಸ್ತುಗಳನ್ನು ಸುಲಭವಾಗಿ ಸೇರಿಸ ಬಹುದಾದ ಬ್ಯಾಗ್ ಆಗಿದೆ. ಮೇಕ್ ಅಪ್ ಕಿಟ್‌ನಿಂದ ಸನ್‌ಗ್ಲಾಸ್ ಮತ್ತು ಸ್ಲಿಪ್ಪರ್ ಎಲ್ಲವನ್ನೂ ಆರಾಮವಾಗಿ ತುಂಬಿಸಿಕೊಂಡು ಹೋಗಬಹುದಾದ ಬ್ಯಾಗ್ ಎಂದರೆ ದೊಡ್ಡದಾದ ಟೋಟ್ ಬ್ಯಾಗ್‌ಗಳು. ಕರೀನಾ ಕಪೂರ್ ಗೋಲ್ಡನ್ ಬಣ್ಣದ ಟೊಟ್ ಬ್ಯಾಗ್ ಜೊತೆ ಬ್ಲಾಕ್ ಟೈಟ್ಸ್ ಮತ್ತು ರೆಡ್ ಟ್ಯಾಂಕ್ ಟಾಪ್ ಹೊಂದಿಸಿಕೊಂಡಿದ್ದಾರೆ.

ನಿಯಾನ್ ಹ್ಯಾಂಡ್‌ಬ್ಯಾಗ್ :
ಬೇಸಿಗೆಯ ಪ್ರಕಾಶದಂತೆ, ಹ್ಯಾಂಡ್ ಬ್ಯಾಗ್‌ಗಳನ್ನೂ ಸಹ ಅದೇ ರೀತಿ ಗಾಢ ಬಣ್ಣದ ನಿಯಾನ್ ಬ್ಯಾಗ್‌ಗಳು ಸದ್ಯದ ಟ್ರೆಂಡ್ ಆಗಿದೆ. ಸೆಲಿಬ್ರಿಟಿಗಳು ಕೆಲವು ಸೊಗಸಾದ ನಿಯಾನ್ ಉಡುಪು ಆರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅದಕ್ಕೆ ತಕ್ಕಂತೆ ಇತರೆ ವಸ್ತುಗಳನ್ನು ಹೊಂದಿಸಿಕೊಂಡಿದ್ದಾರೆ. ನಿಯಾನ್ ಬಣ್ಣದ ಹೀಲ್ಸ್‌ನಿಂದ ಹಿಡಿದು, ನಿಯಾನ್ ಬಣ್ಣದ ಕಿವಿಯೋಲೆಗಳು ಮುಂತಾದವು ಎಲ್ಲಡೆ ಹೊಂದಿಸಿಕೊಂಡಿದ್ದಾರೆ. ನೋರಾ ಫತೇಹಿ ನಿಯಾನ್ ಕಿತ್ತಳೆ ಬಣ್ಣದ ಹ್ಯಾಂಡ್‌ಬ್ಯಾಗ್‌ನ ಜೊತೆ ಗಮನ ಸೆಳೆದಿದ್ದಾರೆ.

ಮೋನೋಟೋನ್ ಶೋಲ್ಡರ್ ಬ್ಯಾಗ್:
ಕೈಗಳಿಗೆ ಹಾಕಿಕೊಳ್ಳದೇ ಶೋಲ್ಡರ್‌ಗೆ ಹಾಕಿಕೊಳ್ಳುವ ಸೊಗಸಾದ ಬ್ಯಾಗ್ ಇದಾಗಿದೆ. ಇದು ತುಂಬಾ ಡ್ರೆಸ್ಸೀ ಬ್ಯಾಗ್ ಏನೂ ಅಲ್ಲ. ಶೋಲ್ಡರ್ ಬ್ಯಾಗ್‌ಗಳು ಸಾಂದರ್ಭಿಕ ಬಟ್ಟೆಗಳಿಗೆ ಹೊಂದಿಕೆಯಾಗುವ ಪರಿಪೂರ್ಣ ಕ್ಯಾರಿ–ಆನ್ ಬ್ಯಾಗ್ ಆಗಿದೆ. ಅನುಷ್ಕಾ ಶರ್ಮಾ ಕಪ್ಪು ಬಣ್ಣದ ಶೋಲ್ಡರ್ ಬ್ಯಾಗ್ ಅನ್ನು ಬೇಸಿಕ್ ಡೆನಿಮ್ ಮತ್ತು ಕಾರ್ಡಿಜನ್‌ನೊಂದಿಗೆ ಹೊಂದಿಸಿಕೊಂಡಿದ್ದಾರೆ.

ಇದನ್ನೂ ಓದಿ : Summer Sarees: ನಿಮಗೆ ಸೀರೆ ಇಷ್ಟವೇ? ಹಾಗಾದರೆ ಸ್ಟೈಲಿಶ್ ಆಗಿ ಕಾಣಿಸುವಂತಹ 5 ವಿಧದ ಸೀರೆಗಳ ಪರಿಚಯ ಇಲ್ಲಿದೆ
ಇದನ್ನೂ ಓದಿ : skin in summer : ಬೇಸಿಗೆ ಕಾಲದಲ್ಲಿ ಹೀಗಿರಲಿ ನಿಮ್ಮ ತ್ವಚೆಯ ಆರೈಕೆ
(ಚಿತ್ರ ಕೃಪೆ : ಇನ್ಸ್ಟಾಗ್ರಾಂ ಮತ್ತು ಗೂಗಲ್)
(Handbags Do you want to buy a handbag, here are some bag collections)