PM Modi Covid Review Meeting :ದೇಶದಾದ್ಯಂತ ಮತ್ತೆ ಜಾರಿಯಾಗುತ್ತಾ ಲಾಕ್‌ಡೌನ್‌ : ಮುಖ್ಯಮಂತ್ರಿಗಳಿಗೆ ಮೋದಿ 3T ಸೂತ್ರ

PM Modi Covid Review Meeting :ದೇಶದ ನಾನಾ ರಾಜ್ಯಗಳ ಜೊತೆಯಲ್ಲಿ ಇಂದು ವರ್ಚುವಲ್​ ಸಭೆ ನಡೆಸಿದ ಪ್ರಧಾನಿ ಮೋದಿ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಿದರು. ದೇಶದಲ್ಲಿ ಕೋವಿಡ್​ ಸವಾಲುಗಳು ಇನ್ನೂ ಮುಗಿದಿಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಇತರೆ ದೇಶಗಳಿಗೆ ಹೋಲಿಸಿದರೆ ಕೋವಿಡ್​ ಬಿಕ್ಕಟ್ಟನ್ನು ನಮ್ಮ ದೇಶವು ಉತ್ತಮವಾಗಿ ನಿರ್ವಹಿಸುತ್ತಿದ್ದರೂ ಸಹ ನಾವು ಪ್ರಸ್ತುತ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಏರಿಕೆಯನ್ನು ಕಾಣುತ್ತಿದ್ದೇವೆ. ನಾವು ಜಾಗರೂಕರಾಗಿ ಇರಬೇಕಾದ ಸಮಯವಿದು. ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತವಾದ ಕೋವಿಡ್​ ಮಾರ್ಗಸೂಚಿಗಳ ಪಾಲನೆಯಾಗಬೇಕು. ಪ್ರತಿ ಅರ್ಹ ಮಗುವಿಗೆ ಕೊರೊನಾ ಲಸಿಕೆಗಳನ್ನು ನೀಡುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದ್ದಾರೆ.


ಪ್ರಧಾನಿ ಮೋದಿ ನಡೆಸಿದ ವರ್ಚುವಲ್​ ಸಭೆಯಲ್ಲಿ ರಾಜ್ಯ ಸಿಎಂ ಬಸವರಾಜ ಬೊಮ್ಮಾಯಿ , ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಚತ್ತೀಸಗಢ ಸಿಎಂ ಭೂಪೇಶ್​ ಬಾಗೇಲ್​ ಹಾಗೂ ಪಂಜಾಬ್​ ಸಿಎಂ ಭಗವಂತ್​​ ಮಾನ್​ ಸೇರಿದಂತೆ ಇನ್ನೂ ಕೆಲವರು ಭಾಗಿಯಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್​ ಶಾ ಕೂಡ ಈ ಸಭೆಯಲ್ಲಿ ಹಾಜರಿದ್ದರು.


ಮುಖ್ಯಮಂತ್ರಿಗಳೊಂದಿಗಿನ ಕೋವಿಡ್-19 ಪರಿಶೀಲನಾ ಸಭೆಯಲ್ಲಿ, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಹಕಾರಕ್ಕಾಗಿ ಪ್ರಧಾನಿ ಮೋದಿ ಕರೆ ನೀಡಿದರು. ಉಕ್ರೇನ್‌ನಲ್ಲಿನ ಯುದ್ಧವು ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರಿದೆ, ಇದು ಹಲವಾರು ಸವಾಲುಗಳನ್ನು ಒಡ್ಡಿದೆ ಎಂದು ಹೇಳಿದ ಪ್ರಧಾನಿ ಮೋದಿ, “ಸಹಕಾರಿ ಫೆಡರಲಿಸಂ ಮುಖ್ಯವಾಗಿದೆ” ಎಂದು ಹೇಳಿದರು . ಅಲ್ಲದೇ ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಹೆಚ್ಚಿಸಲು ಅವರು ಕರೆ ನೀಡಿದರು. ಕೋವಿಡ್​ ಟೆಸ್ಟಿಂಗ್​, ಟ್ರ್ಯಾಕಿಂಗ್​ ಹಾಗೂ ಟ್ರೀಟ್​ಮೆಂಟ್​ಗೆ ಹೆಚ್ಚು ಒತ್ತು ನೀಡಬೇಕು ಎಂದು ಇದೇ ವೇಳೆ ಹೇಳಿದರು.

ಕೋವಿಡ್​ ನಾಲ್ಕನೇ ಅಲೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡುವುದು ನಮ್ಮ ಗುರಿ ಹಾಗೂ ಜವಾಬ್ದಾರಿ ಆಗಿರಬೇಕು. ದೇಶ್ಯಾದ್ಯಂತ ಸದ್ಯ ಬೇಸಿಗೆಯ ಉಷ್ಣ ಗಾಳಿ ಬೀಸುತ್ತಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಬೇಕು. ದೇಶದ ಎಲ್ಲಾ ರಾಜ್ಯಗಳು ಆಸ್ಪತ್ರೆಗಳನ್ನು ಸುಸಜ್ಜಿತವಾಗಿಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಮುಖ್ಯಮಂತ್ರಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್-ಸೂಕ್ತ ನಡವಳಿಕೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳುವಾಗ, ಪ್ರತಿ ಅರ್ಹ ಮಗುವಿಗೆ ಬೇಗನೆ ಲಸಿಕೆ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.

ಇದನ್ನು ಓದಿ : Graeme Smith : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್

ಇದನ್ನೂ ಓದಿ : SSLC Marks Card : ಎಸ್‌ಎಸ್‌ಎಲ್‌ ಸಿ ಅಂಕಪಟ್ಟಿಯಲ್ಲಿ ಶಾಲೆಗಳ ಹೆಸರು ನಮೂದಿಸಿ : ಹೈಕೋರ್ಟ್‌ ಆದೇಶ

PM Modi Covid Review Meeting Live Updates: Vaccinating children a priority, Covid-appropriate behaviour in public places must, says PM Modi

Comments are closed.