Tiff over not serving laddoos : ಮದುವೆ ಮಂಟಪದಲ್ಲಿ ಲಡ್ಡುಗಾಗಿ ಫೈಟ್​!ಪೊಲೀಸ್​ ಠಾಣೆ ಮೆಟ್ಟಿಲೇರಿದ ಲಡ್ಡು ಪುರಾಣ

Tiff over not serving laddoos : ಮದುವೆ ಮನೆ ಅಂದಮೇಲೆ ಅಲ್ಲಿ ಸಿಹಿ ತಿನಿಸುಗಳನ್ನು ಮಾಡಿಯೇ ಇರುತ್ತಾರೆ. ಪಾಯಸ, ಲಡ್ಡೂ ಇವೆಲ್ಲ ಬಹುತೇಕ ಎಲ್ಲಾ ಮದುವೆ ಮನೆಯ ಊಟಗಳಲ್ಲೂ ಇರುತ್ತದೆ. ಕೆಲವರು ಏನಾದರೂ ಡಿಫರೆಂಟ್​ ಆಗಿ ಮಾಡೋಣ ಎಂದು ಹೊಸ ಬಗೆಯ ತಿನಿಸುಗಳನ್ನು ಕೂಡ ಮಾಡಿಸುತ್ತಾರೆ. ಆದರೆ ಛತ್ತೀಸಗಢದ ಮುಂಗೇಲಿ ಜಿಲ್ಲೆಯ ಚಾರ್ಭಾ ಎಂಬಲ್ಲಿ ಮದುವೆ ಮನೆಯಲ್ಲಿ ಲಡ್ಡು ಮಾಡಿಲ್ಲ ಎಂಬ ಕಾರಣಕ್ಕೆ ಮದುವೆ ಮಂಟಪದಲ್ಲಿಯೇ ವಧು – ವರನ ಮನೆಯವರು ದೊಡ್ಡ ಗಲಾಟೆಯನ್ನೇ ಮಾಡಿಕೊಂಡಿದ್ದಾರೆ. ಈ ಗಲಾಟೆ ಎಷ್ಟು ವಿಪರೀತ ಮಟ್ಟಕ್ಕೆ ಹೋಗಿದೆ ಅಂದರೆ ವಧು ಹಾಗೂ ವರನ ಕುಟುಂಬಸ್ಥರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.


ಮುಂಗೇಲಿ ಜಿಲ್ಲೆ ಬೆಮೆತಾರಾ ಗ್ರಾಮದ ಗುಣರಾಮ್​ ಸಾಹು ಪುತ್ರ ಸೂರಜ್​ ಸಾಹು ಹಾಗೂ ಚಾರ್ಭಾ ಗ್ರಾಮದ ರಂಭಾಜ್​ ಸಾಹು ಪುತ್ರಿ ಕುಂತಿಯ ವಿವಾಹವು ಚಾರ್ಭಾ ಗ್ರಾಮದಲ್ಲಿ ನಡೆಯುತ್ತಿತ್ತು. ವಧುವಿನ ಕಡೆಯವರು ಮದುವೆಗೆ ಅದ್ಧೂರಿ ತಯಾರಿಯನ್ನೇ ಮಾಡಿದ್ದರು. ಎಲ್ಲಾ ಶಾಸ್ತ್ರಗಳನ್ನು ಸರಿಯಾಗಿಯೇ ನಡೆಸಲಾಗುತ್ತಿತ್ತು. ಆದರೆ ಅತಿಥಿಗಳಿಗೆ ಭೋಜನ ವ್ಯವಸ್ಥೆ ಆರಂಭವಾದ ಮೇಲೆ ನಿಜವಾದ ಸಮಸ್ಯೆ ಸೃಷ್ಟಿಯಾಗಿದೆ. ಊಟ ಮಾಡುತ್ತಿದ್ದ ವರನ ಕಡೆಯವರು ಮದುವೆ ಊಟದಲ್ಲಿ ಲಡ್ಡು ಇಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ಇದಕ್ಕೆ ಪರ್ಯಾಯವಾಗಿ ಬೇರೆ ಸಿಹಿ ತಿನಿಸು ಇದೆ ಎಂಬುದು ವಧುವಿನ ಕಡೆಯವರ ವಾದ. ಆದರೆ ಈ ಲಡ್ಡು ಫೈಟ್​​ ಹೊಡೆದಾಟದ ಮಟ್ಟಿಗೆ ಹೋಗಿದೆ. ನೆಮ್ಮದಿಯಿಂದ ನಡೆಯುತ್ತಿದ್ದ ವಿವಾಹವು ಲಡ್ಡುವಿನ ಕಾರಣಕ್ಕೆ ರದ್ದಾಗುವ ಸ್ಥಿತಿಗೆ ಬಂದು ತಲುಪಿತ್ತು.


ವಧು – ವರನ ಕಡೆಯವರು ಪರಸ್ಪರ ಹೊಡೆದಾಟ ಮಾಡಿಕೊಂಡು ಟೌನ್​ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮುಂಗೇಲಿ ನಗರದ ಪೊಲೀಸ್​ ಠಾಣೆಯಲ್ಲಿ ಲಡ್ಡು ವಿಚಾರದ ಬಗ್ಗೆ ಪೊಲೀಸರ ಸಮ್ಮುಖದಲ್ಲಿ ಚರ್ಚೆ ನಡೆದಿದೆ. ವಧು ಹಾಗೂ ವರನ ಕಡೆಯವರನ್ನು ಕೂರಿಸಿ ಮಾತನಾಡಿಸಿದ ಮುಂಗೇಲಿ ಠಾಣೆಯ ಸ್ಷ್ಟೇಷನ್​ ಹೌಸ್​ ಅಧಿಕಾರಿ ಕ್ಷುಲ್ಲಕ ಕಾರಣಕ್ಕೆ ವಧು ವರರ ಭವಿಷ್ಯವನ್ನು ಬಲಿ ಕೊಡಬೇಡಿ. ಎರಡೂ ಕಡೆಯವರು ಹೊಂದಾಣಿಕೆ ಮಾಡಿಕೊಳ್ಳಿ ಎಂದು ಬುದ್ಧಿ ಮಾತನ್ನು ಹೇಳಿದ್ದಾರೆ. ಇದರಿಂದ ಸಮಧಾನಗೊಂಡ ವಧು ಹಾಗೂ ವರನ ಕಡೆಯವರು ಮತ್ತೆ ಮಂಟಪಕ್ಕೆ ತೆರಳಿ ಸಾಂಗವಾಗಿ ಮದುವೆ ಕಾರ್ಯವನ್ನು ಮುಗಿಸಿದ್ದಾರೆ.

ಇದನ್ನು ಓದಿ : Graeme Smith : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್

ಇದನ್ನೂ ಓದಿ : SSLC Marks Card : ಎಸ್‌ಎಸ್‌ಎಲ್‌ ಸಿ ಅಂಕಪಟ್ಟಿಯಲ್ಲಿ ಶಾಲೆಗಳ ಹೆಸರು ನಮೂದಿಸಿ : ಹೈಕೋರ್ಟ್‌ ಆದೇಶ

Tiff over not serving laddoos to baaratis reach police station in Chhattisgarh

Comments are closed.