Beautiful Nails :ಸುಂದರವಾದ ಉಗುರು ಪಡೆಯಲು ಇಲ್ಲಿದೆ ಟಿಪ್ಸ್

(Beautiful Nails )ಚಂದದ ಉಗುರನ್ನು ಪಡೆಯಬೇಕು ಎನ್ನುವುದು ಹೆಚ್ಚಿನ ಮಹಿಳೆಯರ ಆಸೆಯಾಗಿರುತ್ತದೆ. ಆದರೆ ಕೆಲವರ ಕೈಯಲ್ಲಿ ಉಗುರುಗಳು ಬಹಳ ಬೇಗ ಬೆಳೆಯುವುದಿಲ್ಲ . ಬೇರೆಯವರ ಉಗುರನ್ನು ನೋಡಿ ನಮಗೂ ಕೂಡ ಇಷ್ಟು ಸುಂದರ ಉಗುರು ಬೇಕೆಂದು ಯೋಚಿಸುತ್ತಾರೆ ಇನ್ನುಮುಂದೆ ಆ ಚಿಂತೆ ಬೇಡ ಈ ಕೆಳಗೆ ಮಾಹಿತಿ ನೀಡಿರುವಂತೆ ಎಣ್ಣೆ ತಯಾರಿಸಿಕೊಂಡು ಉಗುರಿಗೆ ಹಚ್ಚುತ್ತಾ ಬಂದರೆ ಬಹಳ ಬೇಗ ಸುಂದರವಾದ ಉಗುರು ಬೆಳೆಯುತ್ತದೆ.

(Beautiful Nails )ಬೇಕಾಗುವ ಸಾಮಗ್ರಿಗಳು:
ಕೊಬ್ಬರಿ ಎಣ್ಣೆ
ಹರಳೆಣ್ಣೆ
ಬೆಳ್ಳುಳ್ಳಿ

ಮಾಡುವ ವಿಧಾನ:
ಒಂದು ಬಾಟಲಿಯಲ್ಲಿ ಬೆಳ್ಳುಳ್ಳಿಗೆ ಕೊಬ್ಬರಿ ಎಣ್ಣೆ, ಹರಳೆಣ್ಣೆ ಬೆರೆಸಿ 3-4 ದಿನಗಳ ಕಾಲ ಹಾಗೆ ಇಡಬೇಕು. ಪ್ರತಿನಿತ್ಯ ಉಗುರಿಗೆ ಈ ಎಣ್ಣೆಯನ್ನು ಹಚ್ಚುತ್ತಾ ಬಂದರೆ ಉಗುರು ಬೆಳೆಯುತ್ತದೆ.

ಕೊಬ್ಬರಿ ಎಣ್ಣೆ:
ನೈಸರ್ಗಿಕವಾಗಿ ಸಿಗುವ ಕೊಬ್ಬರಿ ಎಣ್ಣೆಯಿಂದ ಹಲವು ಪ್ರಯೋಜನವಿದೆ. ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಸ್ಟ್ರಚ್ ಮಾರ್ಕ್ ಗಳು ಮಾಯವಾಗುತ್ತವೆ. ಸೋರಿಯಾಸಿಸ್, ಡರ್ಮಟಿಟಿಸ್, ಎಕ್ಸಿಮಾ ಅಂಶ ಕೊಬ್ಬರಿ ಎಣ್ಣೆಯಲ್ಲಿ ಇರುವುದರಿಂದ ಚರ್ಮ ದಲ್ಲಿರುವ ಕಲೆಯನ್ನು ಸುಲಭದಲ್ಲಿ ತೆಗೆಯಲು ಸಹಕಾರಿಯಾಗಿದೆ. ಇನ್ನು ತುಟಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ತುಟಿ ಒಡೆಯುವ ಸಮಸ್ಯೆಯಿಂದ ದೂರ ಇರಬಹುದು. ಚರ್ಮಗಳಿಗೆ ತಗಲುವ ಹಲವು ಸೋಂಕುಗಳಿಂದ ರಕ್ಷಣೆ ಕೊಡುತ್ತದೆ. ತೆಂಗಿನ ಕಾಯಿ ಎಣ್ಣೆಯನ್ನು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಆರೋಗ್ಯಕ್ಕೂ ಉತ್ತಮ. ಜಠರದ ಆಮ್ಲೀಯತೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಉತ್ತಮ ಗೊಳಿಸುತ್ತದೆ.

ಹರಳೆಣ್ಣೆ:

ಒಂದು ಹನಿ ಹರಳೆಣ್ಣೆಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಗೆ ಮತ್ತು ತಲೆಯಲ್ಲಿರುವ ಹೊಟ್ಟನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಪ್ರತಿದಿನ ರಾತ್ರಿ ಒಂದು ಹನಿ ಹರಳೆಣ್ಣೆಯನ್ನು ಮುಖಕ್ಕೆ ಹಚ್ಚಿ ಕೊಂಡು ಮಲಗುವುದರಿಂದ ಮುಖದ ಸುಕ್ಕುಗಳನ್ನು ಕಡಿಮೆ ಮಾಡಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಮತ್ತು ಡಾರ್ಕ್‌ ಸರ್ಕಲ್ಸ್‌ ಕಡಿಮೆ ಮಾಡುತ್ತದೆ. ಕಾಲುಗಂಟುಗಳ ಮೇಲೆ ಹರಳೆಣ್ಣೆಯನ್ನು ಹಚ್ಚಿಕೊಂಡು ಮಸಾಜ್‌ ಮಾಡಿ ನಂತರ ಬಿಸಿ ನೀರನ್ನು ಕಾಲುಗಂಟಿನ ಮೇಲೆ ಹಾಕುವುದರಿಂದ ಕಾಲುಗಂಟಿನ ನೋವನ್ನು ಶಮನ ಮಾಡುತ್ತದೆ.

ಇದನ್ನೂ ಓದಿ: Onion Beauty Tips:ನೀಳವಾದ ಕೂದಲು ಬೇಕಾ ಹಾಗಾದ್ರೆ ಈರುಳ್ಳಿ ಬಳಸಿ

ಇದನ್ನೂ ಓದಿ:Pumpkin Soup : ಕುಂಬಳಕಾಯಿ ಸೂಪ್ ಕುಡಿದು ದೇಹದ ತೂಕ ಇಳಿಸಿಕೊಳ್ಳಿ

ಬೆಳ್ಳುಳ್ಳಿ:
ಬೆಳ್ಳುಳ್ಳಿಯನ್ನು ಕೇವಲ ಅಡುಗೆಯಲ್ಲಿ ಆಹಾರ ರುಚಿ ಹೆಚ್ಚಿಸುವುದಕ್ಕೆ ಅಷ್ಟೇ ಅಲ್ಲದೆ ಆರೋಗ್ಯದ ಪ್ರಯೋಜನವನ್ನು ನೀಡುತ್ತದೆ.ಇದರಲ್ಲಿ ವಿಟಮಇನ್‌ ಬಿ 1,ಬಿ 6 ,ಕ್ಯಾಲ್ಸಿಯಂ, ತಾಮ್ರ, ಸೆಲೆನಿಯಮ್‌,ಮತ್ತು ಮ್ಯಾಂಗನೀಸ್‌ ಅಂಶವನ್ನು ಹೇರಳವಾಗಿ ಇರುವುದರಿಂದ ಅನೇಕ ಆರೋಗ್ಯದ ಸಮಸ್ಯೆಗಳಿಂದ ನಮ್ಮನ್ನು ದೂರ ಇರಿಸುತ್ತದೆ. ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಬೊಜ್ಜು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಸಿ ಬೆಳ್ಳುಳ್ಳಿಯನ್ನು ಬಾಯಲ್ಲಿ ಇಟ್ಟು ಜಗಿಯುವುದರಿಂದ ಗಂಟಲಲ್ಲಿ ಇರುವ ಹಾನಿಕಾರಕ ವೈರಸ್‌ ಗಳು ಶಮನಗೊಳ್ಳುತ್ತದೆ. ವಾತಾವರಣ ವೈಪರೀತ್ಯದಿಂದ ಉಂಟಾಗುವ ಜ್ವರ ಮತ್ತು ಶೀತದ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುತ್ತದೆ.

Here are tips to get beautiful nails:oil for to get beautiful nails

Comments are closed.