Eye infection : ಕರಾವಳಿಯಲ್ಲಿ ಹರಡುತ್ತಿದೆ ಕೆಂಗಣ್ಣು ಬೇನೆ : ಮಕ್ಕಳನ್ನು ಕಾಡುತ್ತಿದೆ ಮದ್ರಾಸ್ ಐ

ಕರಾವಳಿ ಹಲವು ಕಡೆಯಲ್ಲಿ (Eye infection) ಕೆಂಗಣ್ಣು ಬೇನೆ (Madras Eye) ಕೆಲ ದಿನಗಳಿಂದ ಜನರನ್ನು ಕಾಡುತ್ತಿದೆ. ಹೆಚ್ಚಾಗಿ ಅಕ್ಟೋಬರ್‌ನಿಂದ ಡಿಸೆಂಬರ್‌ ತನಕ ಈ ರೋಗ ವೇಗವಾಗಿ ಹರಡುತ್ತದೆ. ಸಾಮಾನ್ಯವಾಗಿ ಶಾಲಾ ಮಕ್ಕಳಲ್ಲಿ ಕಾಣಿಸಿಕೊಂಡು ಬಳಿಕ ಹರಡಲು ಪ್ರಾರಂಭವಾಗುತ್ತದೆ. ಈಗಾಗಲೇ ಹೆಚ್ಚಿನ ಶಾಲಾ ಮಕ್ಕಳಲ್ಲಿ ಕಂಡು ಬಂದಿದ್ದು, ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಕೆಂಗಣ್ಣು ಬೇನೆ (Madras Eye)ಕಂಜಕ್ಟಿವಾ ಎಂಬ ಕಣ್ಣುಗಳ ಸುತ್ತ ಇರುವ ಸೂಕ್ಷ್ಮ ಪದರಕ್ಕೆ ತಗಲುವ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಈ ಕಾಯಿಲೆ ವೈರೆಸ್‌ ಅಥವಾ ಬ್ಯಾಕ್ಟೀರಿಯಾ ಸೊಂಕಿನಿಂದ ಹರಡುತ್ತದೆ. ಈ ಸಮಸ್ಯೆ ಕಾಣಿಸಿಕೊಂಡಾಗ ಸೂಕ್ತ ವೈದ್ಯರನ್ನು ಸಂಪರ್ಕಿಸಿ ಔಷಧಿ ಪಡೆದು, ಕಪ್ಪು ಕನ್ನಡ ಧರಿಸಿ ಇತರರಿಗೆ ಹರಡದಂತೆ ಎಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿದೆ.

ಕೆಂಗಣ್ಣು ಬೇನೆ (ಮದ್ರಾಸ್‌ ಐ) ಯ ಲಕ್ಷಣಗಳು :

  • ಕಣ್ಣಿನ ಸುತ್ತ ಬಿಳಿ ಅಥವಾ ಹಳದಿ ಬಣ್ಣದ ಲೋಳೆಗಳು ಆವರಿಸಿಕೊಳ್ಳುತ್ತದೆ.
  • ಕಣ್ಣುಗಳು ಕೆಂಪಾಗಿ ನೀರು ಸುರಿಯುತ್ತಿರುತ್ತದೆ.
  • ಒಂದು ಕಣ್ಣಿಗೆ ತಗುಲುವ ಸೋಂಕು ಇನ್ನೊಂದು ಕಣ್ಣಿಗೆ ಹರಡಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ.
  • ಕೆಂಗಣ್ಣು ಬೇನೆಯಿಂದ ಕಣ್ಣು ಊತಗೊಳ್ಳುತ್ತದೆ ಹಾಗೂ ಲಿಂಪ್‌ ಗ್ರಂಥಿಯ ಸೋಂಕಿನಿಂದಾಗಿ ಕಿವಿಯ ಮುಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
  • ಕೆಲವರಲ್ಲಿ ಈ ಬೇನೆಯಿಂದಾಗಿ ಜ್ವರ, ಗಂಟಲು ನೋವು ಮತ್ತು ಶೀತ ಸೇರಿದಂತೆ ಹಲವು ಲಕ್ಷಣಗಳು ಕಂಡು ಬರುತ್ತದೆ.

ಇದನ್ನೂ ಓದಿ : Winter Care : ಚಳಿಗಾಲದಲ್ಲಿ ನಿಮ್ಮ ಮಕ್ಕಳಿಗೆ ಇವುಗಳನ್ನು ಕೊಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಿ

ಇದನ್ನೂ ಓದಿ : Egg Yolk: ಮೊಟ್ಟೆಯಲ್ಲಿರುವ ಹಳದಿ ಭಾಗ ತಿನ್ನಬೇಕಾ ಅಥವಾ ಬೇಡವಾ?

ಇದನ್ನೂ ಓದಿ : Tomato Soup Benefits : ಟೊಮೆಟೊ ಸೂಪ್‌ ಕುಡಿಯಿರಿ, ತೂಕ ಇಳಿಸಿಕೊಳ್ಳಿ ಅಂದರೆ ನಿಮಗೆ ಆಶ್ಚರ್ಯವಾಗುತ್ತಿದೆಯಾ…

Eye infection : ಕಂಗೆಣ್ಣು ಬೇನೆ (ಮದ್ರಾಸ್‌ ಐ) ಉಂಟಾದಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು :

  • ಕಣ್ಣುಗಳನ್ನು ಮುಟ್ಟಿ ಉಜ್ಜಿಕೊಳ್ಳಬಾರದು. ಕಣ್ಣುಗಳಿಗೆ ಡ್ರಾಪ್ಸ್‌ ಹಾಕಿಕೊಂಡಾಗ, ಕಣ್ಣುಗಳನ್ನು ಮುಟ್ಟಿಕೊಂಡಾಗ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
  • ಕೆಂಗಣ್ಣು ಬೇನೆ ಇರುವವರು ಟವೆಲ್‌, ಬೆಡ್‌ಶೀಟ್‌ಗಳು, ಐ ಡ್ರಾಪ್ಸ್‌, ಸೌಂದರ್ಯವರ್ಧಕಗಳು, ಮೊಬೈಲ್‌ ಮುಂತಾದವುಗಳನ್ನು ಪ್ರತ್ಯೇಕವಾಗಿ ಬಳಸಬೇಕು.
  • ಕಣ್ಣಿನಲ್ಲಿ ಸುರಿಯುವ ನೀರನ್ನು ಒರೆಸಲು ಕರವಸ್ತ್ರಗಳ ಬದಲಿಗೆ ಟಿಶ್ಯೂ ಪೇಪರ್‌ ಬಳಸುವುದು ಹೆಚ್ಚು ಸೂಕ್ತವಾಗಿರುತ್ತದೆ.
  • ಸೋಂಕು ತಗಲಿರುವ ಸಂದರ್ಭ ಕಾಂಟ್ಯಾಕ್ಟ್‌ ಲೆನ್ಸ್‌ಗಳನ್ನು ಬಳಸದೇ ಇರುವುದು ಒಳ್ಳೆಯದು.
  • ಶುಚಿತ್ವ ಕಾಪಾಡಿಕೊಳ್ಳುವುದರಿಂದ ಇತರರಿಗೆ ಸೋಂಕು ಹರಡುವುದಂತೆ ತಪ್ಪಿಸಬಹುದಾಗಿದೆ.
  • ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸದೇ ಇರುವುದು ಉತ್ತಮ.

Eye infection : Spreading on the coast Red eye disease: Children are affected Madras Eye

Comments are closed.