Hibiscus For Hair Fall : ಡಿಯರ್‌ ಲೇಡೀಸ್‌; ದಾಸವಾಳದ ಹೂವಿನಲ್ಲಿದೆ ಕೂದಲು ಉದುರುವ ಸಮಸ್ಯಗೆ ಪರಿಹಾರ

ಬೇಸಿಗೆ (Summer )ನಲ್ಲಿ ಕೂದಲಿನ ಸಮಸ್ಯೆ ಬಹಳ ಸಾಮಾನ್ಯವಾಗಿದೆ. ಮಾಲಿನ್ಯ,, ಧೂಳು, ಸೂರ್ಯನ ಹಾನಿಕಾರಕ ಕಿರಣಗಳು ಕೂದಲಿನ ಮೇಲೆ ಬಿದ್ದಾಗ ಕೂದಲಿನ ಬುಡಕ್ಕೆ ಹಾನಿಯಾಗುತ್ತದೆ. ಆಗ ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ. ಏನೆಲ್ಲಾ ಪ್ರಯೋಗಗಳನ್ನು ಮಾಡಿದರೂ ಕೂದಲು ಉದರುವುದು ಮಾತ್ರ ನಿಲ್ಲುವುದೇ ಇಲ್ಲ. ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು, ಇಲ್ಲಿ ಮನೆಮದ್ದು (Hibiscus For Hair Fall) ಹೇಳುತ್ತಿದ್ದೇವೆ. ಕೂದಲು ಉದುರುವುದನ್ನು ಕಡಿಮೆ ಮಾಡಲು ಮತ್ತು ಕೂದಲಿಗೆ ಪೋಷಣೆಯನ್ನು ನೀಡಲು ದಾಸವಾಳವು ಉತ್ತಮವಾಗಿದೆ. ಕೂದಲಿನ ಬೆಳವಣಿಗೆಗೂ ಇದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ದಾಸವಾಳದಲ್ಲಿರುವ ಕೂಲಿಂಗ್ ಗುಣಗಳು ಬೇಸಿಗೆಯಲ್ಲಿ ಕೂದಲ ಬುಡವನ್ನು ತಂಪಾಗಿರಿಸುತ್ತದೆ ಮತ್ತು ಕೂದಲು ಮತ್ತೆ ಬೆಳೆಯುವಂತೆ ಮಾಡುತ್ತದೆ.

ದಾಸವಾಳ ಹೂವಿನ ಪ್ರಯೋಜನಗಳು :

  1. ದಾಸವಾಳದ ಹೂವುಗಳಲ್ಲಿ ಫ್ಲೇವನಾಯ್ಡ್‌ಗಳು ಮತ್ತು ಅಮೈನೋ ಆಮ್ಲಗಳು ಕಂಡುಬರುತ್ತವೆ. ಫ್ಲೇವನಾಯ್ಡ್‌ಗಳು ತಲೆಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ಅಮಿನೋ ಆಮ್ಲಗಳು ಕೂದಲಿನಲ್ಲಿ ಕೆರಾಟಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಕೂದಲಿಗೆ ಹೊಳಪನ್ನು ನೀಡುತ್ತದೆ ಮತ್ತು ಕೂದಲು ಬೆಳೆಯಲು ಸಹಾಯಮಾಡುತ್ತದೆ.
  2. ತಲೆಹೊಟ್ಟು ಕಡಿಮೆ ಮಾಡಿಮೆಯಾಗಲು ದಾಸವಾಳ ಹೂವಿನ ಎಣ್ಣೆಯನ್ನು ಬಳಸಬಹುದು. ತಲೆಹೊಟ್ಟು ಕೂದಲಿನ ಕಿರು ರಂದ್ರಗಳನ್ನು ಮುಚ್ಚುತ್ತದೆ. ಇದರಿಂದಾಗಿ ಕೂದಲಿನ ಬೆಳವಣಿಗೆಗೆ ತಡೆಯಾಗುತ್ತದೆ. ಜೊತೆಗೆ ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಉದ್ಭವಿಸುತ್ತವೆ.
  3. ನೆತ್ತಿಯ ಮೇಲೆ ಸೋಂಕು ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದನ್ನು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳದಿದ್ದರೆ, ಕೂದಲು ಕ್ರಮೇಣ ತೆಳುವಾಗಲು ಪ್ರಾರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ, ದಾಸವಾಳದ ಎಣ್ಣೆ ಅಥವಾ ದಾಸವಾಳದ ಹೇರ್‌ ಮಾಸ್ಕ್‌ ಅನ್ನು ಬಳಸುವುದರಿಂದ ಈ ರೀತಿಯ ಸೋಂಕು ಹರಡುವುದನ್ನು ತಡೆಯಬಹುದು.
  4. ದಾಸವಾಳದ ಹೂವುಗಳಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿವೆ. ಇದು ಕೂದಲನ್ನು ಪೋಷಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿದೆ. ಇದು ಕೂದಲು ದಟ್ಟವಾಗಿಇ ಬೆಳೆಯಲು ಸಹಾಯ ಮಾಡುತ್ತದೆ. ಇದರ ಎಣ್ಣೆ ಮತ್ತು ಹೇರ್‌ ಮಾಸ್ಕ್‌ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದರ ಜೊತೆಗೆ ಕೂದಲನ್ನು ಬಲಪಡಿಸುತ್ತದೆ. ಇದರಿಂದಾಗಿ ಕೂದಲು ಉದ್ದ ಮತ್ತು ಆರೋಗ್ಯಕರವಾಗಿ ಕಾಣುತ್ತದೆ.
  5. ದಾಸವಾಳವು ನಿಮ್ಮ ನೆತ್ತಿಯನ್ನು ಸೂರ್ಯನ ಹಾನಿಯಿಂದ ರಕ್ಷಿಸುವ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಕೂದಲನ್ನು ಯುವಿ ಕಿರಣಗಳಿಂದ ರಕ್ಷಿಸಲು ಸನ್‌ಸ್ಕ್ರೀನ್‌ನಂತೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ : Spinach Kofta Curry : ಸುಲಭವಾಗಿ ಮನೆಯಲ್ಲಿಯೇ ತಯಾರಿಸಿ ಪಾಲಕ್‌ ಸೊಪ್ಪಿನ ಕೋಫ್ತಾ ಕರಿ

ಕೂದಲಿಗೆ ದಾಸವಾಳ ಮತ್ತು ಮೊಸರಿನ ಪೇಸ್ಟ್‌ ಹಚ್ಚಿ:

  • ಪೇಸ್ಟ್‌ ತಯಾರಿಸಲು ಮೂರರಿಂದ ನಾಲ್ಕು ದಾಸವಾಳದ ಎಲೆಗಳು ಮತ್ತು ಹೂವುಗಳನ್ನು ತೆಗೆದುಕೊಳ್ಳಿ. ಮತ್ತು ಪೇಸ್ಟ್‌ ತಯಾರಿಸಕೊಳ್ಳಿ.
  • ಪೇಸ್ಟ್‌ಗೆ 4 ಚಮಚ ಮೊಸರು ಸೇರಿಸಿ ಮತ್ತು ನಯವಾದ ಪೇಸ್ಟ್ ತಯಾರಿಸಲು ಚೆನ್ನಾಗಿ ಮಿಶ್ರಣ ಮಾಡಿ.
  • ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಚೆನ್ನಾಗಿ ಹಚ್ಚಿಕೊಳ್ಳಿ.
  • 1 ಗಂಟೆಯವರೆಗೆ ಹಾಗೆಯೇ ಬಿಡಿ.
  • ನಂತರ ಕೂದಲನ್ನು ನೀರು ಮತ್ತು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.

ಇದನ್ನೂ ಓದಿ : ಅತಿಯಾದ ಬೇಳೆಕಾಳುಗಳ ಸೇವನೆಯಿಂದ ದೇಹದ ಮೇಲಾಗುತ್ತದೆ ಈ ಪ್ರತಿಕೂಲ ಪರಿಣಾಮ

(Hibiscus For Hair Fall. Use this paste and solve the hair problems)

Comments are closed.