Ice cubes For Glowing Skin : ತ್ವಚೆಯ ಸಮಸ್ಯೆಗಳಿಗೆ ಐಸ್‌ ಕ್ಯೂಬ್‌ ಉಪಯೋಗಿಸಿದ್ದೀರಾ ? ಐಸ್‌ ಕ್ಯೂಬ್‌ ಉಪಯೋಗಿಸಿ ಬೇಸಿಗೆಯಲ್ಲಿ ನಿಮ್ಮ ತ್ವಚೆ ಕಾಪಾಡಿಕೊಳ್ಳಿ

ಬೇಸಿಗೆ(Summer)ಯಲ್ಲಿ ಹೆಚ್ಚಿನ ಉಷ್ಣತೆಯಿಂದ ತ್ವಚೆ(Skin)ಯ ಮೇಲಾಗುವ ತೊಂದರೆಗಳಿಗಿಂತ ಅಧಿಕ ಹಾನಿ ಮತ್ಯಾವುದೂ ಉಂಟುಮಾಡುವುದಿಲ್ಲ. ಐಸ್‌ ಕೂಬ್‌ ಅಥವಾ ಐಸ್‌ ವಾಟರ್‌ ಅನ್ನು(Ice Cubes for Glowing Skin)ತ್ವಚೆಯ ಮೇಲೆ ಹಚ್ಚುವುದು ಒಂದು ಅತ್ಯುತ್ತಮ ಮನೆಮದ್ದಾಗಿದೆ. ಇದು ಚರ್ಮ ಅಥವಾ ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಐಸ್‌ ಕ್ಯೂಬ್‌ಗಳು ಚರ್ಮಕ್ಕೆ ವಿವಿಧ ಬಗೆಯಾಗಿ ಸಹಾಯಮಾಡುತ್ತವೆ. ಹಾಗಾದರೆ ತ್ವಚೆಯ ಆರೈಕೆಯಲ್ಲಿ ಐಸ್‌ ಕ್ಯೂಬ್‌ಗಳನ್ನು ಉಪಯೋಗಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಎಕ್ನಿ ಗುಣಪಡಿಸಲು:
ಆಂಟಿ ಇನ್‌ಫ್ಲಾಮೆಟರಿ ಗುಣ ಹೊಂದಿರುವ ಐಸ್‌ ಎಕ್ನಿ ಯನ್ನು ಗುಣಪಡಿಸಲು ಮತ್ತು ಬರದಂತೆ ತಡೆಯಲು ಬಹಳ ಪ್ರಯೋಜನಕಾರಿ. ಇದು ಊದಿಕೊಂಡ ನೋವುಂಟು ಮಾಡುವ ಚರ್ಮಕ್ಕೆ ಹಿತವಾದ ಅನುಭವ ನೀಡಿ ಗುಳ್ಳೆಗಳನ್ನು ಚಿಕ್ಕದಾಗಿಸುತ್ತದೆ.

ತ್ವಚೆಯನ್ನು ಹೊಳೆಯುವಂತೆ ಮಾಡಲು:
ಹೊಳೆಯುವ ತ್ವಚೆ ಪಡೆಯಲು ಐಸ್‌ ಉತ್ತಮ ಮದ್ದಾಗಿದೆ. ಮುಖದ ಮೇಲೆ ಐಸ್‌ ಹಚ್ಚುವುದರಿಂದ ರಕ್ತ ಪಡಿಚಲನೆಯು ಸುಧಾರಿಸಿ ಮುಖ ಬೆಳ್ಳಗಾಗುವಂತೆ ಮಾಡುತ್ತದೆ.

ಉಬ್ಬಿದ ಕಣ್ಣುಗಳಿಂದ ಮುಕ್ತಿ ಪಡೆಯಲು:
ಐಸ್‌ಗಳಿಗೆ ಊತವನ್ನು ಶಮನಗೊಳಿಸುವ ವಿಶೇಷ ಗುಣವಿದೆ. ಊದಿಕೊಂಡ ಕಣ್ಣಿನ ಜಾಗದಲ್ಲಿ ಐಸ್‌ ಹಚ್ಚುವುದರಿಂದ ಕಣ್ಣುಗಳು ಮೊದಲಿನಂತಾಗಲು ಸಹಾಯ ಮಾಡುತ್ತದೆ.

ಡಾರ್ಕ್‌ ಸರ್ಕಲ್‌ ಹೋಗಲಾಡಿಸಲು:
ಐಸ್‌ ಕ್ಯೂಬ್‌ಗಳನ್ನು ನಯವಾಗಿ ಕಣ್ಣಿನ ಕೆಳಗೆ ಉಜ್ಜುವುದರಿಂದ ಡಾರ್ಕ್‌ ಸರ್ಕಲ್‌ಗಳನ್ನು ಇಲ್ಲವಾಗುತ್ತದೆ.

ವಯಸ್ಸಿನ ಚಿಹ್ನೆ ತಗ್ಗಿಸಲು:
ಮುಖದ ಮೇಲಿನ ನೆರಿಗೆಗಳನ್ನು ಯಾರೂ ಇಷ್ಟ ಪಡುವುದಿಲ್ಲ. ಐಸ್‌ ಕ್ಯೂಬ್‌ಗಳನ್ನು ನಿಯಮಿತವಾಗಿ ಮುಖದ ಮೇಲಿನ ಚರ್ಮಕ್ಕೆ ಲೇಪಿಸುವುದರಿಂದ ವಯಸ್ಸಿನ ಚಿಹ್ನೆ ತಡೆಯಬಲ್ಲದು.

ಇದನ್ನೂ ಓದಿ: Best fruit face packs : ಬೇಸಗೆಯಲ್ಲಿ ಈ ಹಣ್ಣಿನ ಫೇಸ್ ಪ್ಯಾಕ್ ಬಳಸಿ; ಚರ್ಮದ ಸಮಸ್ಯೆಗಳಿಗೆ ಗುಡ್ ಬೈ ಹೇಳಿ

ಉರಿಯೂತ ಕಡಿಮೆ ಮಾಡಲು:
ಅತಿಯಾಗಿ ಬಿಸಿಲಿನ ಸಂಪರ್ಕಕ್ಕೆ ಬಂದ ತ್ವಚೆ ತುರಿಕೆ ಅಥವಾ ಉರಿಯ ಅನುಭವ ನೀಡುತ್ತಿದ್ದರೆ, ಐಸ್‌ ಕ್ಯೂಬ್‌ ಅನ್ನು ಆ ಜಾಗದ ಮೇಲೆ ನಿಧಾನವಾಗಿ ರಬ್‌(ಉಜ್ಜಿ) ಮಾಡಿ. ಹೀಗೆ ಮಾಡುವುದರಿಂದ ಹಿತವಾದ ಅನುಭವವಾಗಿ ತೊಂದರೆ ದೂರವಾಗುವುದು.

ತ್ವಚೆ ಒಣಗಿ ಪದರುಗಳಾಗುವುದನ್ನು ತಡೆಯಲು :
ಐಸ್‌ ನೈಸರ್ಗಿಕ ಎಕ್ಸಫೋಲಿಯೇಟರ್‌ ಆಗಿದ್ದು ಉತ್ತಮ ಫಲಿತಾಂಶ ನೀಡುತ್ತದೆ. ಐಸ್‌ಕ್ಯೂಬ್‌ಗಳಿಗೆ ಹಾಲನ್ನು ಸೇರಿಸಿ ಹಚ್ಚುವುದರಿಂದ ನಿರ್ಜೀವ ಚರ್ಮಗಳು ದೂರವಾಗಿ ನೈಸರ್ಗಿಕವಾಗಿಯೇ ತ್ವಚೆಗೆ ಹೊಳಪನ್ನು ನೀಡಬಲ್ಲದು.

ಮೇಕೆಅಪ್‌ಗಳನ್ನು ಬಹಳ ಸಮಯದವರೆಗೆ ಹಾಳಾಗದಂತೆ ತಡೆಯಲು:
ಬೇಸಿಗೆಯಲ್ಲಿ ಮೆಕ್‌ಅಪ್‌ ಹಾಳಾಗದಂತೆ ಬಹಳ ಸಮಯ ತಡೆಯಲು ಐಸ್‌ ಕ್ಯೂಬ್‌ಗಳು ಬಹಳ ಸಹಾಯ ಮಾಡುತ್ತವೆ. ಮೇಕ್‌ಅಪ್‌ ಮಾಡುವ ಮೊದಲು ಐಸ್‌ಕ್ಯೂಬ್‌ಗಳನ್ನು ಹೆಚ್ಚಿದರೆ ತ್ವಚೆ ನಿರ್ಜಲೀಕರಣ ಗೊಳ್ಳುವುದನ್ನು ತಡೆಯಬಲ್ಲದು.

ಹೀಗೆ ಬೇಸಿಗೆಲ್ಲಿ ಐಸ್‌ಕ್ಯೂಬ್‌ಗಳನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: Face Mask: ಫೇಸ್ ಮಾಸ್ಕ್ ನಲ್ಲಿ ಈ ಸಾಮಗ್ರಿಗಳನ್ನು ಬಳಸಲೇಬೇಡಿ

(Ice cubes for glowing skin in summer and also help to prevent damaged skin)

Comments are closed.