KGF 2 U / A : ಕೆಜಿಎಫ್-2 ಗೆ ಸೆನ್ಸಾರ್ ಬೋರ್ಡ್ U/A ಗ್ರೀನ್ ಸಿಗ್ನಲ್ : ಪ್ರಮೋಶನ್ ಗೆ ಖಾಸಗಿ ವಿಮಾನ ಏರಿದ ಯಶ್

ಕಳೆದ ಎರಡು ಮೂರು ವರ್ಷದಿಂದ ಸಿನಿಪ್ರಿಯರು ಕಾತುರತೆಯಿಂದ ಕಾಯ್ತಿದ್ದ ಸಿನಿಮಾ ರಿಲೀಸ್ ಗೆ ಸಿದ್ಧತೆ ನಡೆದಿದೆ. ಮೊನ್ನೆ ಮೊನ್ನೆ ತೆರೆ ಕಂಡ ಕೆಜಿಎಫ್-2 ಟ್ರೇಲರ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಈ ಮಧ್ಯೆ ಸಿನಿಮಾಗೆ ಸೆನ್ಸಾರ್ ಬೋರ್ಡ್ ಸರ್ಟಿಫೀಕೇಟ್ (KGF 2 U / A) ಕೂಡ ಸಿಕ್ಕಿದ್ದು ಖಾಸಗಿ ವಿಮಾನದಲ್ಲಿ ಚಿತ್ರತಂಡ ಟ್ರಿಪ್ ಆರಂಭಿಸಿದೆ. ಹೌದು ಇನ್ನೇನು ಕೆಜಿಎಫ್-2 ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಸಾಲು ಸಾಲು ರಜಾದಿನಗಳನ್ನೇ ಗಮನದಲ್ಲಿಟ್ಟುಕೊಂಡು ಏಪ್ರಿಲ್ 14 ರಂದು ಕೆಜಿಎಫ್-2 ರಿಲೀಸ್ ಮಾಡಲು ಚಿತ್ರತಂಡ ಸಿದ್ಧವಾಗಿದೆ.

KGF 2 U / A Certificate censor board, Yash private plane Travel for promotion

ಈ ಮಧ್ಯೆ ಕೆಜಿಎಫ್-2 ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯು KGF U/A ಸರ್ಟಿಫಿಕೇಟ್ ನೀಡಿದೆ. ಹಾಗಾಗಿ ನೀವು ಫ್ಯಾಮಿಲಿ ಜೊತೆ ಆರಾಂವಾಗಿ ಕೆಜಿಎಫ್-2 ಸಿನಿಮಾ ನೋಡಬಹು ದಾಗಿದೆ. ಇನ್ನೂ ಸೆನ್ಸಾರ್ ಮಂಡಳಿ ದಾಖಲೆ ಪ್ರಕಾರ ಕೆಜಿಎಫ್ ಸಿನಿಮಾಗಿಂತ ಕೆಜಿಎಫ್-2 ಸಿನಿಮಾ 13 ನಿಮಿಷಗಳ ಕಾಲ ಹೆಚ್ಚುವರಿ ಅವಧಿಯನ್ನು ಹೊಂದಿದೆ.

KGF 2 U / A Certificate censor board, Yash private plane Travel for promotion

ಕೆಜಿಎಫ್ (KGF) ಸಿನಿಮಾ 2 ಗಂಟೆ 35 ನಿಮಿಷಗಳ ಅವಧಿಯನ್ನು ಹೊಂದಿತ್ತು. ಈಗ ತೆರೆಗೆ ಬರ್ತಿರೋ ಕೆಜಿಎಫ್-2 ಸಿನಿಮಾ 2 ಗಂಟೆ 48 ನಿಮಿಷಗಳ ಕಾಲಾವಧಿಯನ್ನು ಹೊಂದಿದೆ. ಇನ್ನು ಕೆಜಿಎಫ್-2 ಸಿನಿಮಾ ಒಂದೇ ಭಾರಿಗೆ ಹಲವು ಭಾಷೆಗಳಲ್ಲಿ ತೆರೆಗೆ ಬರಲಿದೆ. ಹೀಗಾಗಿ ಸಿನಿಮಾದ ಪ್ರಚಾರಕ್ಕಾಗಿ ಕೆಜಿಎಫ್-2 ಸಿನಿಮಾ ತಂಡ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ನಟ ಯಶ್, ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಪ್ರಶಾಂತ್ ನೀಲ್, ನಾಯಕಿ ಶ್ರೀನಿಧಿ ಶೆಟ್ಟಿ ಸೇರಿದಂತೆ ಹಲವರು ಖಾಸಗಿ ವಿಮಾನದಲ್ಲಿ ಪ್ರಚಾರಕ್ಕಾಗಿ ಮುಂಬೈ ಸೇರಿದಂತೆ ಹಲವು ಮಹಾನಗರಗಳಿಗೆ ತೆರಳಿದ್ದಾರೆ.

KGF 2 U / A Certificate censor board, Yash private plane Travel for promotion

ಹಲವು ಮಹಾನ ನಗರದಲ್ಲಿ ಕೆಜಿಎಫ್-2 ಚಿತ್ರತಂಡ ಸುದ್ದಿಗೋಷ್ಠಿ ನಡೆಸಲಿದೆಯಂತೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ನಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದ್ದು, ದೇಶದಲ್ಲಿ ಒಟ್ಟು 7 ಸಾವಿರ ಚಿತ್ರಮಂದಿರದಲ್ಲಿ ತೆರೆಗೆ ತರೋ ಸಿದ್ಧತೆಯಲ್ಲಿದೆ ಚಿತ್ರತಂಡ. ಈ ಪೈಕಿ ಕರ್ನಾಟಕದಲ್ಲಿ 450 ಚಿತ್ರಮಂದಿರದಲ್ಲಿ ಹಾಗೂ ತಮಿಳಿನಲ್ಲಿ 2 ಸಾವಿರ ಚಿತ್ರಮಂದಿರದಲ್ಲಿ ರಣಭೇಟೆಗಾರನ ಆರ್ಭಟ ನೋಡಲು ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲೂ ಕೆಜಿಎಫ್-2 ಚಿತ್ರತಂಡದ ಹವಾ ಜೋರಾಗಿದ್ದು, ಯೂಟ್ಯೂಬ್ ನಲ್ಲಿ ಕೆಜಿಎಫ್-2 ಟ್ರೇಲರ್ ದಾಖಲೆ ಬರೆಯುತ್ತ ಸಾಗಿದೆ.

ಇದನ್ನೂ ಓದಿ :  ಕೆಜಿಎಫ್-2 ಟ್ರೇಲರ್ ಲಾಂಚ್ ನಲ್ಲಿ ರಾಧಿಕಾ‌ ಮಾತು : ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಹೇಳಿದ್ದೇನು ಗೊತ್ತಾ ?

ಇದನ್ನೂ ಓದಿ : ದಾಖಲೆಗಳನ್ನು ಭೇಟೆಯಾಡಿದ ರಣಬೇಟೆಗಾರ : 17 ಮಿಲಿಯಮ್ಸ್ ವೀವ್ಸ್ ಪಡೆದ ಕೆಜಿಎಫ್-2 ಟ್ರೇಲರ್

(KGF 2 U / A Certificate censor board, Yash private plane Travel for promotion)

Comments are closed.