5G service :ದೇಶದ ಏಳು ನಗರಗಳಲ್ಲಿ ಆರಂಭವಾಗಲಿದೆ 5ಜಿ ಸೇವೆ

5G service : ಟೆಲಿಕಾಂ ವಲಯದಲ್ಲಿ ವರ್ಷದಿಂದ ವರ್ಷಕ್ಕೆ ಅಮೂಲಾಗ್ರ ಬದಲಾವಣೆ ನಡೆಯುತ್ತಿದೆ.‌ ಇದೀಗ ಬಹು ನಿರೀಕ್ಷಿತ 5ಜಿ ಸೇವೆಗಳು ಅಕ್ಟೋಬರ್ ಒಂದರಿಂದ ಆರಂಭವಾಗಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಈ 5ಜಿ ಸೇವೆಗಳಿಗೆ ಚಾಲನೆ‌ ನೀಡಲಿದ್ದಾರೆ.‌ 4ಜಿ ಸ್ಪೀಡ್ ಗಳಿ ಗಿಂತಲೂ 5ಜಿ ವೇಗ ಹತ್ತು ಪಟ್ಟು ಹೆಚ್ಚಳವಾಗಿರಲಿದೆ. 2030ರ ವೇಳೆಗೆ ಭಾರತದ ಒಟ್ಟು ಸಂಪರ್ಕಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನವು 5ಜೀ ಸಂಪರ್ಕಗಳಾಗಿರಲಿವೆ.

ಭಾರತದ ಡಿಜಿಟಲ್ ರೂಪಾಂತರಕ್ಕೆ ಕಾರಣವಾಗುವ ಮತ್ತು ಹೊಸ ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ 5ಜಿ ಸದ್ಯ ಏಳು ನಗರಗಳಲ್ಲಿ ಆರಂಭವಾಗಲಿದೆ. ರಿಲಯನ್ಸ್ ಜಿಯೊ, ಎರ್ ಟೆಲ್ ಮತ್ತು ವೊಡಾಪೋನ್ ಐಡಿಯಾ ಕಂಪೆನಿಗಳು ದಿಲ್ಲಿ ಮುಂಬಯಿ ಸೇರಿದಂತೆ ದೇಶದ ಏಳು ನಗರಗಳಲ್ಲಿ ಸೇವೆ ಪ್ರಾರಂಭಿಸಲಿದೆ. ಆದ್ರೆ ಸದ್ಯಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಈ 5ಜಿ ಸೇವೆ ಲಭ್ಯವಿಲ್ಲ ಎಂಬ ಮಾಹಿತಿಯಿದೆ‌. ಮುಂದಿನ ಹಂತಗಳಲ್ಲಿ ಈ ಸೇವೆ ಲಭ್ಯವಾಗುವ ಮಾಹಿತಿಯಿದೆ.

ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನವಾದ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ 5ಜಿ ಸೇವೆಯನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಬ್ರಾಡ್ ಬ್ಯಾಂಡ್ ಮಿಷನ್ ಟ್ವೀಟ್ ಮಾಡಿದೆ. ಕಾರ್ಯಕ್ರಮದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಭಾರ್ತಿ ಏರ್ ಟೆಲ್ ನ ಸುನಿಲ್ ಮಿತ್ತಲ್ ಮತ್ತು ವೊಡಾಫೋನ್ ಐಡಿಯಾದ ಭಾರತೀಯ ವಿಭಾಗದ ಮುಖ್ಯಸ್ಥ ರವೀಂದರ್ ಟಕ್ಕರ್ ಪಾಲ್ಗೊಳ್ಳಲಿದ್ದಾರೆ‌. ಐಟಿ ಸಚಿವ ಅಶ್ವಿನಿ ವೈಷ್ಣವ್,ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

4ಜಿ ತಂತ್ರಜ್ಞಾನಕ್ಕಿಂತ 5ಜಿ ತಂತ್ರಜ್ಞಾನ ಭಾರತಕ್ಕೆ ಹೆಚ್ಚು ಪ್ರಯೋಜನಕಾರಿ ಆಗಲಿದೆ ಎಂದು ಈಗಾಗಲೇ ತಜ್ಞರು ಅಂದಾಜಿಸಿದ್ದಾರೆ‌. ಮೊಬೈಲ್ ನೆಟ್ ವರ್ಕ್ ಆಪರೇಟರ್ ಗಳನ್ನು ಪ್ರತಿನಿಧಿಸುವ ಜಾಗತಿಕ ಉದ್ಯಮ ಸಂಸ್ಥೆ 2023 ಮತ್ತು 2040 ರ ನಡುವೆ ಭಾರತೀಯ ಆರ್ಥಿಕತೆಗೆ 36.4 ಲಕ್ಷ ಕೋಟಿ ರೂ ಪ್ರಯೋಜನ ನೀಡುವ ಸಾಧ್ಯತೆಯಿದೆ ಎಂದು ತನ್ನ ಇತ್ತೀಚಿನ ವರದಿಯಲ್ಲಿ ಅಂದಾಜಿಸಿದೆ. ಮುಂದಿನ ಎಂಟು ವರ್ಷಗಳಲ್ಲಿ ಟೆಲಿಕಾಂ ವಲಯದಲ್ಲಿ 2ಜಿ ಮತ್ತು 3ಜಿ ಪಾಲು ಶೇ.10ಕ್ಕಿಂತ ಕಡಿಮೆಯಿರುತ್ತದೆ ಎಂದು ಅಂದಾಜಿಸಲಾಗಿದೆ. ಭಾರತದ ಹೆಚ್ಚಿನ ಪ್ರಮಾಣದ 4ಜಿ ಬಳಕೆದಾರರು 5ಜಿ ಗೆ ಪರಿವರ್ತನೆ ಹೊಂದಲು ಇಚ್ಚಿಸಿದ್ದಾರೆ ಎಂದು ಸಮೀಕ್ಷೆಗಳು ಹೇಳಿದೆ. ಒಟ್ಟಿನಲ್ಲಿ ಅತೀ ಹೆಚ್ಚಿನ ಬಳಕೆದಾರರು ಕಾಯುತ್ತಿರುವ 5ಜಿ ಸೇವೆ ಶೀಘ್ರ ದೇಶದೆಲ್ಲೆಡೆ ಲಭ್ಯವಾಗುವಂತಾಗಲಿ.

ಇದನ್ನು ಓದಿ : New Party: ಗುಲಾಂ ನಬಿ ಆಜಾದ್ ಇಂದು ಹೊಸ ರಾಜಕೀಯ ಪಕ್ಷ ಘೋಷಿಸ್ತಾರಾ?

ಇದನ್ನೂ ಓದಿ : Ajinkya Rahane: ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ನನ್ನು ಮೈದಾನದಿಂದ ಹೊರಗಟ್ಟಿದ ಅಜಿಂಕ್ಯ ರಹಾನೆ

5G service will start in seven cities of the country

Comments are closed.