ಬೆಂಡೆಕಾಯಿ (Ladies’ Finger) ಬಹಳಷ್ಟು ಜನರಿಗೆ ಪ್ರಿಯವಾದ ತರಕಾರಿ. ಬೆಂಡೆಕಾಯಿಯ ಪಲ್ಯ, ಗೊಜ್ಜು, ಸಾರು ಮುಂತಾದ ಅಡುಗೆ ಮಾಡಿ ಸವಿಯುತ್ತಾರೆ. ಬೆಂಡೆಕಾಯಿಯನ್ನು ಒಕ್ರಾ, ಲೇಡೀಸ್ ಫಿಂಗರ್ ಎಂದೆಲ್ಲಾ ಕರೆಯುತ್ತಾರೆ. ಮಲಬದ್ಧತೆಯ ಸಮಸ್ಯೆ ಇರುವವರು ಇದನ್ನು ಹೆಚ್ಚಾಗಿ ಸೇವಿಸುತ್ತಾರೆ. ಏಕೆಂದರೆ ಇದರಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಬೆಂಡೆಕಾಯಿ ಬರೀ ಅಡುಗೆಗಷ್ಟೇ ಅಲ್ಲ ಕೂದಲಿನ (Hair) ಪೋಷಣೆಗೂ ಪ್ರಯೋಜನಕಾರಿ. ಬೆಂಡೆಕಾಯಿಯಲ್ಲಿರುವ ಜೆಲ್‌ನಿಂದ ಕೂದಲಿಗೆ ಅನೇಕ ಪ್ರಯೋಜನಗಳಿದೆ. ಕೂದಲು ನಯವಾಗಿ ಹೊಳೆಯುವಂತೆ ಕಾಣಲು ನೈಸರ್ಗಿಕವಾಗಿ ಇದನ್ನು ಬಳಸುತ್ತಾರೆ.
ಬೆಂಡೆಕಾಯಿಯಲ್ಲಿರುವ ಜೆಲ್ ಅನ್ನು ಕೂದಲಿಗೆ ಉತ್ತಮ ಎಂದು ಪರಿಗಣಿಸಲಾಗಿದೆ. ಇದನ್ನು ಕಂಡೀಷನರ್‌ನ ಜೊತೆ ಉಪಯೋಗಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಬೆಂಡೆಕಾಯಿ ಜೆಲ್ ತಯಾರಿಸುವುದು ಹೇಗೆ?
ಜೆಲ್ ತಯಾರಿಸಲು ಬೆಂಡೆಕಾಯಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಸುಮಾರು ಎರಡು ಕಪ್ ನೀರಿರುವ ಪಾತ್ರೆಗೆ ಹಾಕಿ. ಅದನ್ನು 8 ರಿಂದ 10 ನಿಮಿಷಗಳವರೆಗೆ ಚೆನ್ನಾಗಿ ಕುದಿಸಿ. ನಂತರ ತಣ್ಣಗಾಗಲು ಬಿಡಿ. ಆಮೇಲೆ ಸೋಸಿಕೊಳ್ಳಿ. ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ಜೆಲ್ ಅನ್ನು ಕೂದಿಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಿರಿ.
ಇದನ್ನೂ ಓದಿ :Beauty Tips : ಐಸ್ ಕ್ಯೂಬ್ ನಿಂದ ಹೆಚ್ಚುತ್ತೆ ಚರ್ಮದ ಕಾಂತಿ
ಬೆಂಡೆಕಾಯಿ ಜೆಲ್‌ನ ಪ್ರಯೋಜನಗಳು :
ಕೂದಲು ಹೈಡ್ರೇಟ್ ಆಗಿರುವಂತೆ ಮಾಡುತ್ತದೆ :
ಪ್ರೋಟೀನ್ ಅಂಶವು ಬೆಂಡೆಕಾಯಿಯಲ್ಲಿ ಅಧಿಕವಾಗಿದೆ. ಇದು ಕೂದಲಿನ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಬೆಂಡೆಕಾಯಿ ಮೂಲತಃ 90% ನೀರಿನಿಂದ ಕೂಡಿರುತ್ತದೆ. ಇದು ಕೂದಲು ಮತ್ತು ನೆತ್ತಿ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ.
ನೆತ್ತಿಯ ಆರೋಗ್ಯ ಕಾಪಾಡುತ್ತದೆ:
ಬೆಂಡೆಕಾಯಿಯಲ್ಲಿ ಆಂಟಿಒಕ್ಸಿಡೆಂಟ್ ಮತ್ತು ವಿಟಮಿನ್‌ಗಳು ಹೇರಳವಾಗಿದ್ದು, ತಲೆಹೊಟ್ಟಿನಿಂದ ಉಂಟಾಗುವ ಶುಷ್ಕತೆಯನ್ನು ತಡೆಯುತ್ತದೆ. ಇದರಲ್ಲಿರುವ ಝಿಂಕ್(ಸತು) ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಕೂದಲಿಗೆ ಹೊಳಪನ್ನು ನೀಡುತ್ತದೆ:
ಬೆಂಡೆಕಾಯಿ ಜೆಲ್ಲ ಕೂಲಿಗೆ ಹೊಳಪನ್ನು ನೀಡುತ್ತದೆ. ನೆತ್ತಿಯನ್ನು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಕೂದಲು ಶುಷ್ಕವಾಗುವುದು ಮತ್ತು ಸುಕ್ಕುಗಟ್ಟುವುದು ದೂರವಾಗುತ್ತದೆ.
ಆಂಟಿಒಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ :
ಬೆಂಡೆಕಾಯಿಯಲ್ಲಿರುವ ಪಾಲಿಫಿನಾಲ್ ಎಂಬ ಆಂಟಿಒಕ್ಸಿಡೆಂಟ್, ಕೂದಲು ಮತ್ತು ನೆತ್ತಿಯನ್ನು ಫ್ರೀ–ರ್‍ಯಾಡಿಕಲ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
(Ladies’ Finger gel for hair growth and shine)