(Facial)ಹೆಂಗಳೆಯರು ಹಬ್ಬದ ವಿಶೇಷ ಸಂದರ್ಭದಲ್ಲಿ , ಮದುವೆ ಸಮಾರಂಭದ ಸಂದರ್ಭದಲ್ಲಿ ಮುಖದ ಸೌಂದರ್ಯ ಹೆಚ್ಚಿಸುವುದಕ್ಕೆ ಬ್ಯೂಟಿ ಪಾರ್ಲರ್ ಗೆ ಹೋಗಿ ಪೆಶಿಯಲ್ ಮಾಡಿಕೊಳ್ಳುತ್ತಾರೆ.ಫೇಶಿಯಲ್ ಮಾಡಲು ಬಳಸುವ ಕೆಮಿಕಲ್ ಯುಕ್ತ ಕ್ರೀಮ್ ತ್ವಚೆಗೆ ಹಾನಿಯನ್ನುಂಟು ಮಾಡುವುದರಿಂದ ಮನೆಯಲ್ಲಿಯೇ ಇರುವಂತಹ ವಸ್ತುವಿನಿಂದ ಬ್ಯೂಟಿ ಪಾರ್ಲರ್ ನಂತೆ ಫೇಶಿಯಲ್ಅನ್ನು ಮಾಡಿಕೊಳ್ಳಬಹುದು . ಇದರ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
(Facial)ಮೊದಲಿಗೆ ಮುಖವನ್ನು ಕ್ಲೀನ್ ಮಾಡುವ ವಿಧಾನ:
ಹಾಲು ಮತ್ತು ಜೇನುತುಪ್ಪವನ್ನು ಬಳಸಿ ಮುಖವನ್ನು ಕ್ಲಿನ್ ಮಾಡಲಾಗುತ್ತದೆ. ಒಂದು ಬೌಲ್ ನಲ್ಲಿ ಒಂದು ಚಮಚ ಹಾಲು ಮತ್ತು ಜೇನುತುಪ್ಪವನ್ನು ಹಾಕಿ ಮಿಶ್ರಣಮಾಡಿಕೊಳ್ಳಬೇಕು. ನಂತರ ಮಿಶ್ರಣ ಮಾಡಿಕೊಂಡ ಬಟ್ಟಲಿಗೆ ಹತ್ತಿಯನ್ನು ಅದ್ದಿಕೊಂಡು ಅದರಿಂದ ಮುಖವನ್ನು ಕ್ಲಿನ್ ಮಾಡಿಕೊಳ್ಳಬೇಕು.ನಂತರ ಮುಖವನ್ನು ತಣ್ಣಿರಿನಿಂದ ತೊಳೆದುಕೊಂಡು 2 ರಿಂದ 5 ನಿಮಿಷದವರೆಗೆ ಮುಖಕ್ಕೆ ಸ್ಟೀಮ್ ಹಿಡಿಯಬೇಕು.
ಎರಡನೆ ಹಂತದಲ್ಲಿ ಮುಖಕ್ಕೆ ಸ್ಕ್ರಬ್ ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಒಂದು ಚಮಚ ಚಂದನ ಪೌಡರ್ ಮತ್ತು ಜೇನುತುಪ್ಪವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿಕೊಂಡು 2 ರಿಂದ 3 ನಿಮಿಷಗಳ ಕಾಲ ಸ್ಕ್ರಬ್ ಮಾಡಬೇಕು. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಬೇಕು.
ಇದನ್ನೂ ಓದಿ:Tulsi leaves:”ತುಳಸಿ ಎಲೆ”ಯಿಂದ ಡ್ಯಾಂಡ್ರಫ್ ಸಮಸ್ಯೆ ನಿವಾರಣೆ
ಮೂರನೆ ಹಂತದಲ್ಲಿ ಮುಖಕ್ಕೆ ಫೇಸ್ ಮಾಸ್ಕ್ ಮಾಡಿಕೊಳ್ಳುವ ವಿಧಾನ:
ಕೊನೆಯಲ್ಲಿ ಫೇಸ್ ಮಾಸ್ಕ್ ಮಾಡಿಕೊಂಡು ಮುಖಕ್ಕೆ ಲೇಪನ ಮಾಡಿಕೊಳ್ಳಬೇಕು. ಒಂದು ಚಮಚ ಮುಲ್ತಾನಿ ಮಿಟ್ಟಿ ಮತ್ತು ಸ್ವಲ್ಪ ಹಾಲನ್ನು ಹಾಕಿ ಕಲಸಿಕೊಂಡು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ಮುಖವನ್ನು ತೊಳೆಯಬೇಕು. ಅನಂತರ ಮೊಶ್ಚುರೈಸರ್ ಹಚ್ಚಿಕೊಳ್ಳಬೇಕು.
Make a facial at home like a beauty parlour