SS Rajamouli : ತೆರೆಗೆ ಬರಲಿದೆ ಆರ್‌ಆರ್‌ಆರ್‌ – 2 : ಸಿನಿಮಾದ ಬಗ್ಗೆ ಸುಳಿವು ನೀಡಿದ ಎಸ್‌ ಎಸ್‌ ರಾಜಮೌಳಿ

ಬಾಹುಬಲಿ 1 ಮತ್ತು 2 ಮತ್ತು ಇತ್ತೀಚೆಗೆ ಆರ್‌ಆರ್‌ಆರ್‌ನಂತಹ ಸಿನಿಮಾಗಳಂತಹ ಹಿಟ್‌ ಸಿನಿಮಾಗಳನ್ನು ಎಸ್‌ಎಸ್ ರಾಜಮೌಳಿ (SS Rajamouli)ನೀಡಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ “ಆರ್‌ಆರ್‌ಆರ್‌” ಬ್ಲಾಕ್‌ಬಸ್ಟರ್ ಆಗಿತ್ತು. ಇದು ಭಾರತದಲ್ಲಿ ಮಾತ್ರವಲ್ಲದೆ ಜಪಾನ್‌ನಲ್ಲೂ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಸೃಷ್ಟಿಸಿತು. ಇತ್ತೀಚೆಗೆ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ “ಆರ್‌ಆರ್‌ಆರ್‌- 2” ಚಿತ್ರಕಥೆ ನಡೆಯತ್ತಿದೆ ಎಂದು ಖಚಿತಪಡಿಸಿದ್ದಾರೆ.

ಚಿಕಾಗೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ,ಎಸ್‌ ಎಸ್ ರಾಜಮೌಳಿ ಆರ್‌ಆರ್‌ಆರ್‌- 2 ಅನ್ನು ಖಚಿತಪಡಿಸಿದ್ದಾರೆ. “ನನ್ನ ಎಲ್ಲಾ ಚಿತ್ರಗಳಿಗೆ ನನ್ನ ತಂದೆ ವಿಜಯೇಂದ್ರ ಪ್ರಸಾದ್ ಕಥೆಯನ್ನು ಬರೆಯುತ್ತಾರೆ. ನಾವು ‘ಆರ್‌ಆರ್‌ಆರ್‌- 2’ ಬಗ್ಗೆ ಸ್ವಲ್ಪ ಚರ್ಚಿಸಿದ್ದೇವೆ. ಅವರು ಕಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇಲಿನಾಯ್ಸ್‌ನ ಚಿಕಾಗೋದಲ್ಲಿರುವ ಮ್ಯೂಸಿಕ್ ಬಾಕ್ಸ್ ಥಿಯೇಟರ್‌ನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ ಎಸ್‌ ಎಸ್‌ ರಾಜಮೌಳಿ ಮಾತನಾಡುತ್ತಾ, ಅಪಾರ ಸಂಖ್ಯೆಯ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಆರ್‌ಆರ್‌ಆರ್‌ ಸಿನಿಮಾವು ರೂ.1100 ಕೋಟಿ ಗಳಿಸುವ ಮೂಲಕ ದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾವಾಗಿದೆ. ಬಿಡುಗಡೆಯಾದ 20 ದಿನಗಳಲ್ಲಿ ಜಪಾನ್‌ನ ಚಿತ್ರಮಂದಿರಗಳಲ್ಲಿ 1.3 ಲಕ್ಷಕ್ಕೂ ಹೆಚ್ಚು ಜನರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ ಎಂದು ಸಿನಿಮಾದ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ. ಅಂದರೆ ಇದು ಹಿಂದೆ ಜಪಾನಿನ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಯಾದ ಎಲ್ಲಾ ಭಾರತೀಯ ಬ್ಲಾಕ್‌ಬಸ್ಟರ್‌ ಸಿನಿಮಾಗಳ ದಾಖಲೆಗಳನ್ನು ಮೀರಿಸಿರುತ್ತದೆ.

ಬಾಹುಬಲಿ ಸಿನಿಮಾದ ನಂತರ ಎಸ್‌ ಎಸ್‌ ರಾಜಮೌಳಿ “ಆರ್‌ಆರ್‌ಆರ್‌” ಸಿನಿಮಾದ ಮೂಲಕ ತಾನೊಬ್ಬ ಸಾರ್ವಕಾಲಿಕ ಹಿಟ್‌ ನಿರ್ದೇಶಕ ಎಂದು ಸಾಬೀತು ಪಡಿಸಿದ್ದಾರೆ. ಈ ಸಿನಿಮಾವು ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್‌ ಅವರ ಜೀವನಾಧರಿಸಿದ ಕಾಲ್ಪನಿಕ ಕಥೆಯಾಗಿದೆ. ಈ ಸಿನಿಮಾದ ಎಲ್ಲಾ ಜನಪ್ರಿಯ ವಿಭಾಗಗಳ ಪ್ರಶಸ್ತಿಗಳಿಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : Shah Rukh Khan: ಮುಂಬೈ ಏರ್ ಪೋರ್ಟ್ ನಲ್ಲಿ ಶಾರುಖ್ ಖಾನ್ ವಶಕ್ಕೆ; ಕಿಂಗ್ ಖಾನ್ ಬಳಿ ಸಿಕ್ಕಿದ್ದೇನು ಗೊತ್ತಾ

ಇದನ್ನೂ ಓದಿ : Bipasha Basu :ಹೆಣ್ಣುಮಗುವಿಗೆ ಜನ್ಮ ನೀಡಿದ 43ರ ಹರೆಯದ ಬಾಲಿವುಡ್ ನಟಿ ಬಿಪಾಶಾ ಬಸು

ಎಸ್‌ಎಸ್ ರಾಜಮೌಳಿ ಅವರು ಪಾಶ್ಚಿಮಾತ್ಯ ದೇಶಗಳಲ್ಲಿ ಆರ್‌ಆರ್‌ಆರ್ ಏಕೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಎಂಪೈರ್ ಮ್ಯಾಗಜೀನ್‌ಗೆ ತಿಳಿಸಿದ್ದಾರೆ. ಅದರೊಂದಿಗೆ ಅವರು ಸ್ವತಃ ಆಶ್ಚರ್ಯಚಕಿತರಾದರು. “ಎಲ್ಲವೂ ಸ್ಥಗಿತಗೊಂಡಾಗ, ಇಡೀ ಪ್ರಪಂಚವು ವಿಭಿನ್ನ ಸಂಸ್ಕೃತಿಗಳನ್ನು ನೋಡಲಾರಂಭಿಸಿತು, ಬೇರೆ ಬೇರೆ ದೇಶಗಳಿಂದ, ಬೇರೆ ಬೇರೆ ಭಾಷೆಗಳಲ್ಲಿ ಕಂಟೆಂಟ್‌ಗಳನ್ನು ಹೀರಿಕೊಳ್ಳುತ್ತಾರೆ” ಎಂದು ರಾಜಮೌಳಿ ಹೇಳಿದ್ದಾರೆ. ಅವರು ಸಿನಿಮಾ ಯಶಸ್ಸಿಗೆ “RRR ನ ನಿಷ್ಪಕ್ಷಪಾತ ಆಕ್ಷನ್ ಸೀಕ್ವೆನ್ಸ್ ಪಾಶ್ಚಿಮಾತ್ಯ ದೇಶಗಳಲ್ಲಿ ಅದರ ಯಶಸ್ಸಿಗೆ ಒಂದು ಅಂಶವಾಗಿ ಅದರ ನಿಷ್ಪಕ್ಷಪಾತ ವೀರತ್ವ”.ಕಾರಣವಾಗಿದೆ ಎಂದು ಹೇಳಿದ್ದಾರೆ.

RRR-2 will be released: SS Rajamouli gave a hint about the movie

Comments are closed.