Inhuman incident: ನವಜಾತ ಶಿಶುವನ್ನು ಬಾಕ್ಸ್‌ ನಲ್ಲಿ ಹಾಕಿ ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು

ಕಾರವಾರ: (Inhuman incident) ಆಗ ತಾನೇ ಹುಟ್ಟಿದ ಹಸುಗೂಸನ್ನು ಬಾಕ್ಸ್‌ ನಲ್ಲಿ ಹಾಕಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಅಮಾನುಷ ಘಟನೆ ಉತ್ತರ ಕನ್ನಡದ ಸಿದ್ದಾಪುರದ ಗುಡ್ಡೆಕೊಪ್ಪದಲ್ಲಿ ನಡೆದಿದೆ.

ಸಿದ್ದಾಪುರದಿಂದ ಗುಡ್ಡೆಕೊಪ್ಪಕ್ಕೆ ಹೋಗವ ಮಾರ್ಗದಲ್ಲಿ ಮಗುವನ್ನು ಬಾಕ್ಸ್‌ ನಲ್ಲಿ ಹಾಕಿ ಅಲ್ಲಿಯೇ ಬಿಟ್ಟು (Inhuman incident) ಹೋಗಿದ್ದಾರೆ. ಇದನ್ನು ಸ್ಥಳಿಯರು ಗಮನಿಸಿದ್ದು, ಕೂಡಲೇ ಬಾಕ್ಸ್‌ ತೆಗೆದು ನೋಡಿದ್ದಾರೆ. ಬಾಕ್ಸ್‌ ನಲ್ಲಿ ಹಸುಗೂಸನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನವಜಾತ ಮಗು ಸಿಕಿರುವ ಜಾಗಕ್ಕೆ ಪೊಲೀಸರು ಧಾವಿಸಿದ್ದು, ಅನಾಥವಾಗಿ ಬಿದ್ದಿದ್ದ ಮಗುವನ್ನು ಸ್ಥಳಿಯ ಸರಕಾರಿ ಆಸ್ಪತ್ರೆಗೆ ಕರೆದೋಯ್ದು ಹಾಲುಣಿಸಿ, ಆರೋಗ್ಯ ತಪಾಸಣೆ ನಡೆಸಿದ್ದಾರೆ. ಆರೋಗ್ಯ ತಪಾಸಣೆಯ ನಂತರ ಮಗುವನ್ನು ಶಿರಸಿಯ ದತ್ತು ಮಕ್ಕಳ ಕೇಂದ್ರಕ್ಕೆ ತಲುಪಿಸುವುದಾಗಿ ಶಿಶು ಅಭಿವೃದ್ದಿ ಅಧಿಕಾರಿ ಪೂರ್ಣಿಮಾ ಮಾಹಿತಿ ನೀಡಿದ್ದಾರೆ.

ಈ ಮಗು ಅಂಗವೈಕಲ್ಯ ಹೊಂದಿದ್ದು, ಇದೇ ಕಾರಣಕ್ಕೆ ಪೋಷಕರು ಮಗುವನ್ನು ಬಿಟ್ಟು ಹೋಗಿರುವ ಸಾಧ್ಯತೆಗಳು ಇವೆ ಎಂದು ಅಂದಾಜಿಸಲಾಗಿದೆ. ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಕ್ಸ್‌ ನಲ್ಲಿ ಬಿಟ್ಟು ಹೋಗಿರುವ ಮಗುವಿನ ಪೋಷಕರನ್ನು ಪೊಲೀಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಇದನ್ನೂ ಓದಿ : Karnataka Assembly Election : 2023ನೇ ಕರ್ನಾಟಕ ವಿಧಾನಸಭೆ ಚುನಾವಣೆಯ ಜೆಡಿಎಸ್‌ ಮೊದಲ ಪಟ್ಟಿ ಬಿಡುಗಡೆ : ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇಲ್ಲಿದೆ

ಇದನ್ನೂ ಓದಿ : Coffee Plantation Owner : ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರ ಮೇಲೆ ಅಸ್ಸಾಂ ಕಾರ್ಮಿಕರಿಂದ ಹಲ್ಲೆ

ಇದನ್ನೂ ಓದಿ : Cooperative Society of Udupi : ಉಡುಪಿಯ ಸಹಕಾರ ಸಂಘದಿಂದ ಗ್ರಾಹಕರಿಗೆ ನೂರಾರು ಕೋಟಿ ವಂಚನೆ : ಕಛೇರಿ ಮುಂದೆ ಜಮಾಯಿಸಿದ ಗ್ರಾಹಕರು

ಇದನ್ನೂ ಓದಿ : Ballari Road Accident : ಬಸ್‌ ಹರಿದು ಮೂವರು ಹಾಸ್ಟೇಲ್‌ ವಿದ್ಯಾರ್ಥಿಗಳ ಸಾವು

ಇದನ್ನೂ ಓದಿ : Karnataka Assembly : ಕರ್ನಾಟಕ ವಿಧಾನಸಭೆಯಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣ : ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು

(Inhuman incident) An inhuman incident where a newborn cow was put in a box and left on the side of the road took place in Guddekoppa, Siddapur, Uttara Kannada.

Comments are closed.